ಜೀವಕೋಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:

ಯೂಕ್ಯಾರಿಯೋ‍ಟ್‌‌‌ನ ಚಲನಶೀಲ ಜೀವಕೋಶಗಳು ಚಲನಶೀಲ ಸೀಲಿಯಂ ಅಥವಾ ಕಶಾಂಗಗಳನ್ನು ಬಳಸಿ ಚಲಿಸ ಬಹುದು. ಶಂಕು ಮರಗಳಲ್ಲಿ ಮತ್ತು ಹೂಬಿಡುವ ಸಸ್ಯಗಳಲ್ಲಿ ಚಲನಶೀಲ ಜೀವಕೋಶಗಳು ಇರುವುದಿಲ್ಲ<ref>PH Raven , Evert RF, Eichhorm SE (1999) Biology of Plants, 6th edition. WH Freeman, New York</ref>. ಯೂಕ್ಯಾರಿಯೋ‍ಟ್‌‌‌ ಕಶಾಂಗವು ಪ್ರೋಕ್ಯಾರಿಯೋಟ್‌ ಕಶಾಂಗಕ್ಕಿಂತ ಕಡಿಮೆ ಸಂಕೀರ್ಣವಾಗಿದೆ.

==ಜೀವಕೋಶದ ಒಳ ಘಟಕಗಳು==

ಪ್ರೋಕ್ಯಾರಿಯೋಟ್‌ಗಳಿರಲಿ ಅಥವಾ ಯೂಕ್ಯಾರಿಯೋ‍ಟ್‌‌‌ಗಳಿರಲಿ ಎಲ್ಲಾ ಜೀವಕೋಶಗಳಲ್ಲೂ ಅದನ್ನು ಸುತ್ತುವರೆದ ಪೊರೆ ಇರುತ್ತದೆ ಮತ್ತು ಅದು ಏನು ಒಳ ಬರುತ್ತದೆ ಮತ್ತು ಏನು ಹೊರ ಹೊಗುತ್ತದೆ ಎಂಬುದನ್ನು ನಿಯಂತ್ರಿಸುತ್ತದೆ ಮತ್ತು ಜೀವಕೋಶದ ವಿದ್ಯುತ್ ವಿಭವವನ್ನು (ಎಲೆಕ್ಟ್ರಿಕ್ ಪೊಟೆನ್ಶಿಯಲ್) ಕಾಪಾಡುತ್ತದೆ. ಪೊರೆಯೊಳಗೆ ಜೀವರಸ ಹೆಚ್ಚು ಸ್ಥಳವನ್ನು ಆಕ್ರಮಿಸುತ್ತದೆ. ಎಲ್ಲಾ ಜೀವಕೋಶಗಳಲ್ಲಿಯೂ (ಕೆಂಪು ರಕ್ತ ಜೀವಕೋಶಗಳು ಇದಕ್ಕೆ ಅಪವಾದ. ಅದರಲ್ಲಿ ಹಿಮೊಗ್ಲೋಬಿನ್‌ಗೆ ಹೆಚ್ಚು ಸ್ಥಳಾವಕಾಶ ಮಾಡಿಕೊಡಲು, [[ಬೀಜಕಣ (ಜೀವಶಾಸ್ತ್ರ)|ಬೀಜಕಣ]] ಮತ್ತು ಬಹುತೇಕ ಅಂಗಕಗಳು ಇರುವುದಿಲ್ಲ.) [[ವಂಶವಾಹಿ]]ಗಳ ಅನುವಂಶಿಕತೆಯ ಪದಾರ್ಥವಾದ [[ಡಿ.ಎನ್‌ಎನ್.ಎ|ಡಿಎನ್‌ಎ]] ಮತ್ತು [[ಆರ್‌ಆರ್.ಎನ್.ಎ|ಆರ್‌ಎನ್ಎ]] ಇರುತ್ತವೆ. ಆರ್.ಎನ್.ಎನಲ್ಲಿಆರ್‌ಎನ್ಎನಲ್ಲಿ ಜೀವಕೋಶದ ಪ್ರಾಥಮಿಕ ಯಂತ್ರಾಂಗವಾದ ಕಿಣ್ವಗಳಂತಹ (ಎಂಜೈಮ್‌) [[ಪ್ರೋಟೀನ್‌]]ಗಳನ್ನು ರಚಿಸಲು ಅಗತ್ಯವಾದ ಮಾಹಿತಿ ಇರುತ್ತದೆ. ಈ ಲೇಖನದಲ್ಲಿ ಜೀವಕೋಶದ ಪ್ರಾಥಮಿಕ ಘಟಕಗಳನ್ನು ಹೆಸರಿಸುತ್ತದೆ ಮತ್ತು ಅವು ಮಾಡುವ ಕೆಲಸಗಳನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ.

===ಕೋಶಪೊರೆ===
[[file: Blausen_0208_CellAnatomy_kn.png|thumb|||| ಯುಕ್ಯಾರಿಯಟ್ ಪ್ರಾಣಿ ಜೀವಕೋಶದ ಪ್ರಮುಖ ರಚನೆಗಳನ್ನು ತೋರಿಸುವ ಚಿತ್ರ]]
[[file: Biological_cell.svg |thumb|||| ಪ್ರಾಣಿಯ ಜೀವಕೋಶ: ಅಂಗಕಗಳು- ೧) [[ಕೇಂದ್ರ ಬೀಜಕಣ (ಜೀವಶಾಸ್ತ್ರ)|ಕೇಂದ್ರ ಬೀಜಕಣ]] ೨)[[ಬೀಜಕಣ (ಜೀವಶಾಸ್ತ್ರ)|ಬೀಜಕಣ]] ೩) [[ರೈಬೋಸೋಮ್]] ೪) ಕೋಶಕ ೫) ಒರಟು ಎಂಡೊಪ್ಲಾಸ್ಮ ಜಾಲತಂತಿ ೬) ಗಾಲ್ಜಿ ಪರಿಕರ ೭) ಸೈಟೋಸ್ಕೆಲೆಟನ್ ೮) ನಯವಾದ ಎಂಡೊಪ್ಲಾಸ್ಮ ಜಾಲತಂತಿ ೯) ಮೈಟೊಕಾಂಡ್ರಿಯಮೈಟೋಕಾಂಡ್ರಿಯ ೧೦) ಕುಹರ ೧೧) ಜೀವರಸ ೧೨) ಸೈಟೋಸೋಮ್ ೧೩) ಸೆಂಟ್ರಿಯೋಲ್‌ಗಳು]]

ಕೋಶಪೊರೆ ಅಥವಾ ಪ್ಲಾಸ್ಮ ಪೊರೆ (ಸೆಲ್‌ ಮೆಂಬರೇನ್) ಕೋಶದ ಜೀವರಸವನ್ನು ಸುತ್ತುವರೆದ ಒಂದು ಜೈವಿಕ ಪೊರೆ. ಪ್ರಾಣಿಗಳಲ್ಲಿ ಪ್ಲಾಸ್ಮ ಪೊರೆ ಜೀವಕೋಶದ ಹೊರ ಗಡಿರೇಖೆ ಆದರೆ ಸಸ್ಯಗಳಲ್ಲಿ ಮತ್ತು ಪ್ರೋಕ್ಯಾರಿಯೋಟ್‌ಗಳಲ್ಲಿ ಸಾಮಾನ್ಯವಾಗಿ ಇದರ ಸುತ್ತು ಕೋಶಭಿತ್ತಿ (ಸೆಲ್‌ ವಾಲ್) ಸಹ ಇರುತ್ತದೆ. ಈ ಪೊರೆಯು ಜೀವಕೋಶವನ್ನು ಪರಿಸರದಿಂದ ಬೇರ್ಪಡಿಸುತ್ತದೆ ಮತ್ತು ಕಾಪಾಡುತ್ತದೆ. ಇದು ಬಹುತೇಕ ಎರಡು ಪದರಗಳ ಫಾಸ್ಪೊಲಿಪಿಡ್‌ಗಳಿಂದ ರೂಪಗೊಂಡಿದೆ. ಈ ಪೊರೆಯೊಳಗೆ ಹಲವು ಬಗೆಯ ವಿಭಿನ್ನ ಅಣುಗಳನ್ನು ಜೀವಕೋಶದ ಒಳಗೆ ಮತ್ತು ಹೊರಗೆ ರವಾನಿಸುವ ಕಾಲುವೆಗಳು ಮತ್ತು ಪಂಪ್‌ಗಳಾಗಿ ಕೆಲಸ ಮಾಡುವ [[ಪ್ರೋಟೀನ್]] ಅಣುಗಳು ಸೇರಿಕೊಂಡಿವೆ. ಈ ಪೊರೆಯನ್ನು “ಸೆಮಿ-ಪರ್ಮಿಯಬಲ್‌” ಎಂದು ಕರೆಯಲಾಗಿದೆ ಏಕೆಂದರೆ ಇವು ಕೆಲವೊಂದು ಪದಾರ್ಥಗಳನ್ನು (ಅಣುಗಳು ಮತ್ತು ಐಯಾನ್‌ಗಳು) ಮುಕ್ತವಾಗಿ ಒಳ ಬರಲು ಅವಕಾಶ ಮಾಡಿಕೊಡುತ್ತವೆ, ಇನ್ನೂ ಕೆಲವು ಪದಾರ್ಥಗಳನ್ನು ಸೀಮೀತವಾಗಿ ಪ್ರವೇಶಿಸಲು ಅವಕಾಶ ಮಾಡಿಕೊಡುತ್ತವೆ ಮತ್ತು ಮತ್ತೆ ಕೆಲವು ಪದಾರ್ಥಗಳನ್ನು ಒಳಬರದಂತೆ ನಿರ್ಬಂಧಿಸುತ್ತವೆ. ಜೀವಕೋಶದ ಹೊರಮೈ ಪೊರೆಯಲ್ಲಿ ರಿಸೆಪ್ಟರ್ ಪ್ರೋಟೀನ್‌ಗಳು ಇರುತ್ತವೆ ಮತ್ತು ಇವು ಹಾರ್ಮೋನ್‌ನಂತಹ ಹೊರಗಿನಿಂದ ಸಂಕೇತಿಸುವ ಅಣುಗಳನ್ನು ಗುರುತಿಸುತ್ತವೆ.
===ಸೈಟೊಸ್ಕೆಲೆಟನ್===
೩೬ ನೇ ಸಾಲು:

ಸೈಟೊಸ್ಕೆಲೆಟನ್ ಜೀವಕೋಶದ ಆಕಾರ ಸಂಘಟಿಸಲು ಮತ್ತು ಉಳಿಸಿಕೊಳ್ಳಲು ಕ್ರಿಯಾಶೀಲವಾಗಿರುತ್ತದೆ, ಅಂಗಕಗಳು ತಮ್ಮ ಸ್ಥಾನದಲ್ಲಿರಿಸಲು ಕಾರಣವಾಗಿದೆ; ಹೊರಗಿನ ಪದಾರ್ಥಗಳನ್ನು ಜೀವಕೋಶದ ಒಳಗೆ ತೆಗೆದುಕೊಳ್ಳವ ಪ್ರಕ್ರಿಯೆಯಾದ ಎಂಡೊಸೈಟೋಸಿಸ್‌ನಲ್ಲಿ ಸಹಾಯ ಮಾಡುತ್ತದೆ; [[ಸೈಟೊಕೈನೆಸಿಸ್‌]]ನಲ್ಲಿ <ref group=ಟಿಪ್ಪಣಿ>ಮೈಟಾಸಿಸ್ ಜೀವಕೋಶ ವಿಭಜನೆಯ ವೇಳೆಯಲ್ಲಿ ಜೀವರಸವು ಎರಡು ಮರಿ ಜೀವಕೋಶಗಳ ಭಾಗವಾಗುವ ಪ್ರಕ್ರಿಯೆ (ಮಿಯಾಸಿಸ್‌ನಲ್ಲಿ ಒಟ್ಟು ನಾಕು ಮರಿ ಜೀವಕೋಶಗಳು)</ref> ಸಹಾಯ ಮಾಡುತ್ತದೆ ಮತ್ತು ಬೆಳವಣಿಗೆ ಹಾಗೂ ಚಲನೆಯ ಪ್ರಕ್ರಿಯೆಯಲ್ಲಿ ಜೀವಕೋಶದ ಭಾಗಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಕೊಂಡೊಯ್ಯುತ್ತದೆ. ಯೂಕ್ಯಾರಿಯೋ‍ಟ್‌ ಸೈಟೊಸ್ಕೆಲೆಟಿನ್‌ನಲ್ಲಿ ಮೈಕ್ರೊತಂತುಗಳು, ಮಧ್ಯಂತರ ತಂತುಗಳು ಮತ್ತು ಚಿಕ್ಕನಳಿಕೆಗಳು ಇರುತ್ತವೆ. ಇವುಗಳೊಂದಿಗೆ ದೊಡ್ಡ ಸಂಖ್ಯೆಯ [[ಪ್ರೋಟೀನ್‌]]ಗಳು ಸಂಗಾತಿಗಳಾಗಿವೆ ಮತ್ತು ಪ್ರತಿಯೊಂದು ಪ್ರೋಟೀನ್‌ ಆದೇಶಿಸುವ ಮೂಲಕ, ಒಟ್ಟಿಗೆ ಪೇರುವ ಮೂಲಕ ಮತ್ತು ತಂತುಗಳನ್ನು ಸರಿಹೊಂದಿಸುವ ಮೂಲಕ ಜೀವಕೋಶದ ರಚನೆಯನ್ನು ನಿಯಂತ್ರಿಸುತ್ತದೆ. ಪ್ರೋಕ್ಯಾರಿಯೋಟ್‌ ಸೈಟೊಸ್ಕೆಲೆಟನ್ ಬಗೆಗೆ ಕಡಿಮೆ ಅಧ್ಯಯನಗಳು ಆಗಿವೆ. ಆದರೆ ಜೀವಕೋಶದ ಆಕಾರ ಕಾಪಾಡಿಕೊಂಡು ಬರುವಲ್ಲಿ, ದ್ರುವೀಯತೆ ಮತ್ತು ಸೈಟೊಕೈನೆಸಿಸ್‌ನಲ್ಲಿ ಅದರ ಪಾತ್ರವಿದೆ.<ref>Michie K, Löwe J (2006). "Dynamic filaments of the bacterial cytoskeleton". Annu Rev Biochem 75: 467–92. doi:10.1146/annurev.biochem.75.103004.142452. PMID 16756499.</ref> ಯಾಕ್ಟಿನ್‌ ಎನ್ನುವ ಸಣ್ಣ, ಮೊನೊಮರ್ <ref group=ಟಿಪ್ಪಣಿ>ಇನ್ನೊಂದು ಅಣುವಿನೊಂದಿಗೆ ಬಂಧಿಸಲ್ಪಟ್ಟು ಪಾಲಿಮರ್ ಆಗಬಲ್ಲ ಅಣು</ref> ಪ್ರೋಟೀನ್ ಮೈಕ್ರೊತಂತುಗಳ ಉಪಘಟಕ. ಚಿಕ್ಕನಳಿಕೆಯ ಉಪಘಟಕ ಟ್ಯುಬುಲಿನ್ ಎನ್ನುವ ಡೈಮರ್ (ಎರಡು ಮೊನೊಮರ್‌ ಅಣುಗಳ ಸೇರಿ ಆದ ಅಣು) ಅಣು. ಮಧ್ಯಂತರ ತಂತುಗಳ ಉಪಘಟಕಗಳು ಹೆಟರೊಪಾಲಿಮರ್‌ಗಳು (ಉಪಘಟಕಗಳು ಒಂದೇ ರೀತಿಯಿಲ್ಲದ ಸಂಯುಕ್ತಗಳು). ಇವುಗಳ ಉಪಘಟಕಗಳು ಬೇರೆ ಬೇರೆ ಅಂಗಾಶಗಳ ಜೀವಕೋಶಗಳ ನಮೂನೆಯಲ್ಲಿ ಬೇರೆ ಬೇರೆ ಇರುತ್ತವೆ.
===ವಂಶವಾಹಿ ಪದಾರ್ಥ===

ಎರಡು ರೀತಿಯ ಅನುವಂಶಿಕ ಪದಾರ್ಥ ಆಸ್ತಿತ್ವದಲ್ಲಿದೆ: [[ಡಿ.ಎನ್‌ಎನ್.ಎ |ಡಿಆಕ್ಸಿರೈಬೊನ್ಯೂಕ್ಲಿಯಿಕ್ ಆಮ್ಲ]] (ಡಿ.ಎನ್‌.ಎಡಿಎನ್‌ಎ) ಮತ್ತು [[ಆರ್‌ಎನ್ಎ |ರೈಬೊನ್ಯೂಕ್ಲಿಯಿಕ್ ಆಮ್ಲ್]] (ಆರ್‌ಎನ್ಎ). ಜೀವಕೋಶವು ದೀರ್ಘಾವಧಿ ಮಾಹಿತಿ ದಾಸ್ತಾನಿಗೆ ಡಿ.ಎನ್‌.ಎಡಿಎನ್‌ಎ ಬಳಸುತ್ತದೆ. ಜೀವಿಯಲ್ಲಿರುವ ಜೈವಿಕ ಮಾಹಿತಿಯನ್ನು ಡಿ.ಎನ್‌.ಎಡಿಎನ್‌ಎ ಸರಣಿ ರೂಪದಲ್ಲಿ ,ಸಂಕೇತಿಸಲಾಗಿದೆ. ಆರ್‌ಎನ್ಎಯನ್ನು ಮಾಹಿತಿ ರವಾನೆ (ಉದಾ. ಎಂಆರ್‌ಎನ್ಎ) ಮತ್ತು ಕಿಣ್ವಗಳ ಕೆಲಸಮಾಡುವಿಕೆಯಲ್ಲಿ (ಉದಾ. ರೈಬೊಸೋಂ ಆರ್‌ಎನ್ಎ) ಬಳಸಲಾಗುತ್ತದೆ. ವರ್ಗಾವಣೆ ಆರ್‌ಎನ್ಎ (ಟಿಆರ್‌ಎನ್ಎ ಅಥವಾ ಟ್ರಾನ್ಸ್‌ಫರ್ ಆರ್‌ಎನ್ಎ) ಅಣುಗಳನ್ನು [[ಪ್ರೋಟೀನ್]] ಅನುವಾದದಲ್ಲಿ [[ಅಮಿನೊ ಆಮ್ಲ]]ಗಳನ್ನು ಸೇರಿಸಲು ಬಳಸಲಾಗುತ್ತದೆ.

ಪ್ರೋಕ್ಯಾರಿಯೋಟ್‌ ಅನುವಂಶಿಕ ಪದಾರ್ಥವು [[ಜೀವರಸ]]ದ ನ್ಯೂಕ್ಲಿಯಾಯ್ಡ್ ಪ್ರದೇಶದಲ್ಲಿ ಸರಳ ಚಕ್ರಾಕಾರದ ಡಿ.ಎನ್‌.ಎಡಿಎನ್‌ಎ ಅಣುವಾಗಿ ವ್ಯವಸ್ಥೆಗೊಂಡಿದೆ. ಯೂಕ್ಯಾರಿಯೋ‍ಟ್‌‌‌ ಅನುವಂಶಿಕ ಪದಾರ್ಥವು ಪ್ರತ್ಯೇಕ [[ಬೀಜಕಣ (ಜೀವಶಾಸ್ತ್ರ)|ಬೀಜಕಣ]]ದಲ್ಲಿ ಒಂದು ಅಥವಾ ಹೆಚ್ಚು [[ವರ್ಣತಂತು (ಕ್ರೋಮೋಸೋಮ್)|ವರ್ಣತಂತು]] ಎಂದು ಕರೆಯಲಾದ ರೇಖೆರೀತಿಯ ಅಣುಗಳಾಗಿ ವಿಭಜಿತ ಗೊಂಡಿದೆ. ಅಲ್ಲದೆ ಸಾಮಾನ್ಯವಾಗಿ ಸಣ್ಣ ಪ್ರಮಾಣದ ಹೆಚ್ಚುವರಿ ಅನುವಂಶಿಕ ಪದಾರ್ಥ [[ಮೈಟೊಕಾಂಡ್ರಿಯ]]ಗಳಲ್ಲಿ ಮತ್ತು [[ಹರಿದ್ರೇಣು]]ಗಳಲ್ಲಿ (ಕ್ಲೋರೊಪಾಸ್ಟ್‌) ಇರುತ್ತದೆ.

ಮಾನವನ ಜೀವಕೋಶದಲ್ಲಿ ಅನುವಂಶಿಕ ಪದಾರ್ಥ [[ಬೀಜಕಣ (ಜೀವಶಾಸ್ತ್ರ)|ಬೀಜಕಣ]]ದಲ್ಲಿ (ಬೀಜಕಣ ಜೀನೋಮ್) ಮತ್ತು [[ಮೈಟೊಕಾಂಡ್ರಿಯಮೈಟೋಕಾಂಡ್ರಿಯ]]ಗಳಲ್ಲಿ (ಮೈಟೊಕಾಂಡ್ರಿಯಮೈಟೋಕಾಂಡ್ರಿಯ [[ಡಿ.ಎನ್‌ಎನ್.ಎ|ಡಿಎನ್‌ಎ]]) ಇರುತ್ತದೆ. ಬೀಜಕಣದ ಜೀನೋಮ್‌ ಅನ್ನು [[ವರ್ಣತಂತು (ಕ್ರೋಮೋಸೋಮ್)|ವರ್ಣತಂತು]]ಗಳು ಎಂದು ಕರೆಯಲಾದ ೪೬ ರೇಖೆರೀತಿಯ ಡಿ.ಎನ್‌.ಎಡಿಎನ್‌ಎ ಅಣುಗಳಾಗಿ ವಿಭಜಿಸಲಾಗಿದೆ. ಈ ವರ್ಣತಂತುಗಳಲ್ಲಿ 22 ಸಮಾನರೂಪದ ವರ್ಣತಂತುಗಳ ಜೋಡಿಗಳು ಮತ್ತು ಒಂದು ಲಿಂಗ ವರ್ಣತಂತುಗಳ ಜೋಡಿ ಇವೆ. ಮೈಟೊಕಾಂಡ್ರಿಯ ಜೀನೋಮ್‌ ಬೀಜಕಣ ಜೀನೋಮ್‌ನಿಂದ ಪ್ರತ್ಯೇಕವಾಗಿದ್ದು ಚಕ್ರಾಕಾರವಾಗಿರುತ್ತದೆ. ಮೈಟೊಕಾಂಡ್ರಿಯಮೈಟೋಕಾಂಡ್ರಿಯ ಡಿ.ಎನ್‌.ಎಡಿಎನ್‌ಎ ಬೀಜಕಣ ಜೀನೋಮ್‌ ಹೊಲಿಸಿದಾಗ ತೀರ ಸಣ್ಣದಾದರೂ ಅದು ಮೈಟೊಕಾಂಡ್ರಿಯದಲ್ಲಿನ ಶಕ್ತಿ ಉತ್ಪಾದನೆಯಲ್ಲಿ ಪಾತ್ರವಹಿಸುವ ೧೩ [[ಪ್ರೋಟೀನ್‌]]ಗಳು ಮತ್ತು ನಿರ್ದಿಷ್ಟ ಟಿಆರ್‌ಎನ್‌ಎ ಸಂಕೇತಗಳನ್ನು ಹೊಂದಿದೆ.

ಅನ್ಯ ಅನುವಂಶಿಕ ಪದಾರ್ಥವನ್ನು (ಬಹಳಷ್ಟು ಸಲ [[ಡಿ.ಎನ್‌ಎನ್.ಎ|ಡಿಎನ್‌ಎ]]) ಕೃತ್ರಿಮವಾಗಿ ಜೀವಕೋಶದ ಒಳಗೆ ಸೇರಿಸ ಬಹುದು ಮತ್ತು ಈ ಪ್ರಕ್ರಿಯೆಯನ್ನು ಟ್ರಾನ್ಸ್‌ಫೆಕ್ಶನ್ ಎಂದು ಕರೆಯಲಾಗುತ್ತದೆ. ಇಂತಹ ಒಳಸೇರಿಸುವಿಕೆ ಜೀವಕೋಶದ ಜೀನೋಮ್‌ ಒಳಗಾದರೆ ಅದನ್ನು ಶಾಶ್ವತವೆಂತಲೂ ಮತ್ತು ಹಾಗಲ್ಲದಿದ್ದರೆ ಅದನ್ನು ಅಶಾಶ್ವತವೆಂತಲೂ ಕರೆಯಲಾಗಿದೆ. ಕೆಲವು ವೈರಸ್‌ಗಳು ಸಹ ಜೀನೋಮ್‌ನಲ್ಲಿ ಅನುವಂಶಿಕ ಪದಾರ್ಥವನ್ನು ಸೇರಿಸುತ್ತವೆ.
===ಅಂಗಕಗಳು===

(ಪ್ರೋಕ್ಯಾರಿಯೋಟ್‌ ಮತ್ತು ಯೂಕ್ಯಾರಿಯೋ‍ಟ್‌ ಜೀವಕೋಶಗಳಲ್ಲಿರುವ ಅಂಗಕಗಳು)

ಅಂಗಕಗಳು ಜೀವಕೋಶದ ಒಂದು ಅಥವಾ ಹೆಚ್ಚು ಕಾರ್ಯಗಳನ್ನು ನಡೆಸಲು ಹೊಂದಿಕೊಂಡಿವೆ ಅಥವಾ/ಮತ್ತು ಪರಿಣಿತಿ ಪಡೆದಿವೆ. ಇವುಗಳನ್ನು ಮಾನವನ ದೇಹದ ಅಂಗಗಳಿಗೆ ಹೋಲಿಸ ಬಹುದು (ಉದಾ. ಬೇರೆ ಬೇರೆ ಕಾರ್ಯ ನಿರ್ವಹಿಸುವ ಹೃದಯ, ಶ್ವಾಸಕೋಶ ಮತ್ತು ಮೂತ್ರಪಿಂಡಗಳು). ಯೂಕ್ಯಾರಿಯೋ‍ಟ್‌‌‌ ಮತ್ತು ಪ್ರೋಕ್ಯಾರಿಯೋಟ್‌ ಎರಡೂ ಜೀವಕೋಶಗಳಲ್ಲಿಯೂ ಅಂಗಕಗಳು ಇವೆ, ಆದರೆ ಪ್ರೋಕ್ಯಾರಿಯೋಟ್‌ ಅಂಗಕಗಳು ಸಾಮಾನ್ಯವಾಗಿ ಸರಳ ಮತ್ತು ಅವುಗಳ ಸುತ್ತ ಪೊರೆ ಇರುವುದಿಲ್ಲ.

ಜೀವಕೋಶದಲ್ಲಿ ಹಲವು ರೀತಿಯ ಅಂಗಕಗಳಿವೆ. ಕೆಲವು ಅಂಗಕಗಳು ಮಾದರಿ ಸ್ಥಿತಿಯಲ್ಲಿ ಒಂದೇ ಇದ್ದರೆ (ಉದಾ. [[ಬೀಜಕಣ (ಜೀವಶಾಸ್ತ್ರ)|ಬೀಜಕಣ]] ಮತ್ತು ಗೋಲ್ಜಿ ಪರಿಕರ) ಇನ್ನೂ ಕೆಲವು ಅಂಗಕಗಳು ಹಲವು (ನೂರರಿಂದ ಕೆಲವು ಸಾವಿರಗಳು) ಇರುತ್ತವೆ (ಉದಾ. [[ಮೈಟೊಕಾಂಡ್ರಿಯಮೈಟೋಕಾಂಡ್ರಿಯ]]ಗಳು, [[ಹರಿದ್ರೇಣು]]ಗಳು, ಪೆರೊಕ್ಸಿಸೋಮ್‌ಗಳು ಮತ್ತು ಲೈಸೊಸೋಮ್‌ಗಳು). ಸೈಟೊಸೋಲ್ ಜೆಲ್ಲಿಯಂತಹ ದ್ರವವಾಗಿದ್ದು ಜೀವಕೋಶವನ್ನು ತುಂಬಿಕೊಳ್ಳುತ್ತದೆ ಮತ್ತು ಅಂಗಕಗಳನ್ನು ಸುತ್ತುವರೆದಿರುತ್ತದೆ. ಕೆಳಗೆ ಪಟ್ಟಿಮಾಡಿದ ಅಂಗಕಗಳಲ್ಲಿ [[ರೈಬೋಸೋಮ್‌]] ಪ್ರೋಕ್ಯಾರಿಯೋಟ್‌ ಮತ್ತು ಯೂಕ್ಯಾರಿಯೋ‍ಟ್‌‌‌ ಜೀವಕೋಶಗಳೆರಡರಲ್ಲೂ ಇರುತ್ತದೆ ಮತ್ತು ಇತರ ಅಂಗಕಗಳು ಯೂಕ್ಯಾರಿಯೋ‍ಟ್‌‌‌ ಜೀವಕೋಶಗಳಲ್ಲಿರುತ್ತವೆ.

೫೧ ನೇ ಸಾಲು:
[[file: HeLa_cells_stained_with_Hoechst_33258.jpg|thumb|||| ಮಾನವ ಕ್ಯಾನ್ಸರ್ ಜೀವಕೋಶಗಳು ನೀಲಿ ಬಣ್ಣದಲ್ಲಿರುವ [[ಬೀಜಕಣ (ಜೀವಶಾಸ್ತ್ರ)|ಬೀಜಕಣ]]ದೊದಿಗೆ (ವಿಶೇಷವಾಗಿ [[ಡಿ.ಎನ್‌.ಎ]]). ನಡುವೆ ಮತ್ತು ಬಲಗಡೆ ಇರುವ ಜೀವಕೋಶಗಳು ಇಂಟರ್‌ಫೇಸ್‌ನಲ್ಲಿವೆ (ಮೆಟಾಬಾಲಿಕ್ ಹಂತ). ಎಡಗಡೆ ಇರುವ ಜೀವಕೋಶ [[ಮೈಟೋಸಿಸ್]] ವಿಭಜನೆಯ ಹಂತದಲ್ಲಿದ್ದು ಅದರ ಡಿ.ಎನ್‌.ಎ ಸಾಂದ್ರಗೊಂಡಿದೆ.]]

ಬೀಜಕಣ:ಜೀವಕೋಶದ ಮಾಹಿತಿ ಕೇಂದ್ರವಾದ [[ಬೀಜಕಣ (ಜೀವಶಾಸ್ತ್ರ)|ಬೀಜಕಣ]]ವು ಯೂಕ್ಯಾರಿಯೋ‍ಟ್‌‌‌ ಜೀವಕೋಶದ ಬಹಳ ಎದ್ದುಕಾಣುವ ಅಂಗಕ. ಇದರಲ್ಲಿ [[ವರ್ಣತಂತು]]ಗಳಿರುತ್ತವೆ ಮತ್ತು ಇದು ಬಹಳಷ್ಟು [[ಡಿ.ಎನ್‌.ಎ]] ನಕಲು ಮತ್ತು [[ಆರ್‌ಎನ್ಎ]] ಸಂಯೋಜನೆ ([[ಲಿಪ್ಯಂತರ (ಜೀವಶಾಸ್ತ್ರ)|ಲಿಪ್ಯಂತರ]]) ನಡೆಯುವ ಸ್ಥಳ. [[ಬೀಜಕಣ (ಜೀವಶಾಸ್ತ್ರ)|ಬೀಜಕಣ]] ಗೋಲಾಕಾರವಾಗಿರುತ್ತದೆ ಮತ್ತು ಜೀವರಸದಿಂದ ಬೀಜಕಣ ಪೊರೆ ಎಂದು ಕರೆಯಲಾದ ಎರಡು ಪದರಗಳ ಹೊದಿಕೆಯಿಂದ ಬೇರ್ಪಟ್ಟಿರುತ್ತದೆ. ಈ ಹೊದಿಕೆಯು ಜೀವಕೋಶದ ಡಿ.ಎನ್‌.ಎಯನ್ನು ಪ್ರತ್ಯೇಕಿಸುತ್ತದೆ ಮತ್ತು ಬೇರೆ ಅಣುಗಳು ಅಕಸ್ಮಿಕವಾಗಿ ಅದರ ರಚನೆಯನ್ನು ಹಾಳುಮಾಡದಂತೆ ಕಾಪಾಡುತ್ತದೆ ಅಥವಾ ಅದರ ಸಂಸ್ಕರಣದಲ್ಲಿ ಅಡ್ಡ ಬರುವುದನ್ನು ತಪ್ಪಿಸುತ್ತದೆ. ಈ ಸಂಸ್ಕರಣದಲ್ಲಿ ಡಿ.ಎನ್‌.ಎ ಲಿಪ್ಯಂತರವಾಗುತ್ತದೆ ಅಥವಾ ಮೆಸೆಂಜರ್ ಆರ್‌ಎನ್ಎ (ಎಂಆರ್‌ಎನ್ಎ) ಎಂದು ಕರೆಯಲ್ಪಡುವ ವಿಶೇಷ ಆರ್.ಎನ್.ಎಯಾಗಿಆರ್‌ಎನ್ಎಯಾಗಿ ನಕಲಾಗುತ್ತದೆ. ಈ ಎಂಆರ್‌ಎನ್ಎ ಬೀಜಕಣದ ಹೊರಬಂದ ಮೇಲೆ ನಿರ್ದಿಷ್ಟ [[ಪ್ರೋಟೀನ್]] ಅಣುವಾಗಿ [[ಅನುವಾದಿಸು (ಜೀವಶಾಸ್ತ್ರ)|ಅನುವಾದಿಸಲ್ಪಡುತ್ತದೆ]]. ಕೇಂದ್ರ ಬೀಜಕಣ ಬೀಜಕಣದೊಳಗಿನ ವಿಶೇಷ ಪ್ರದೇಶವಾಗಿದ್ದು ಇಲ್ಲಿ [[ರೈಬೋಸೋಮ್‌]] ಉಪಘಟಕಗಳು ಒಗ್ಗೂಡಿಸಲ್ಪಡುತ್ತವೆ. ಪ್ರೋಕ್ಯಾರಿಯೋಟ್‌ಗಳಲ್ಲಿ ಡಿ.ಎನ್‌.ಎ ಸಂಸ್ಕರಣ ಜೀವರಸದಲ್ಲಿ ನಡೆಯುತ್ತದೆ.

ಮೈಟೊಕಾಂಡ್ರಿಯಗಳು ಮತ್ತು ಹರಿದ್ರೇಣುಗಳು:ಇವು ಜೀವಕೋಶದ ಶಕ್ತಿಯನ್ನು ಉತ್ಪಾದಿಸುತ್ತವೆ. [[ಮೈಟೊಕಾಂಡ್ರಿಯ]]ಗಳು ಸ್ವತಹ ತಮ್ಮನ್ನು ತಾವು ನಕಲು ಮಾಡಿಕೊಳ್ಳುವ ಅಂಗಕಗಳು ಮತ್ತು ಯೂಕ್ಯಾರಿಯೋ‍ಟ್‌‌‌ ಜೀವಕೋಶದ ಜೀವರಸದಲ್ಲಿ ಹಲವು ಸಂಖ್ಯೆಗಳಲ್ಲಿ, ಆಕಾರಗಳಲ್ಲಿ ಮತ್ತು ಗಾತ್ರಗಳಲ್ಲಿ ಇರುತ್ತವೆ. ಉಸಿರಾಟವು ಜೀವಕೋಶದ ಮೈಟೊಕಾಂಡ್ರಿಯಗಳಲ್ಲಿ ನಡೆಯುತ್ತದೆ, ಇದು ಆಮ್ಲಜನಕ ಬಳಸಿ ಜೀವಕೋಶದ ಪೌಷ್ಟಿಕಾಂಶಗಳಲ್ಲಿನ (ಉದಾ. ಸಕ್ಕರೆ ಅಥವಾ ಗ್ಲುಕೊಸ್) ಶಕ್ತಿಯನ್ನು [[ಆಕ್ಸಿಡೇಟಿವ್ ಫಾಸ್ಪೊರೈಲೇಶನ್]] ಮೂಲಕ ಬಿಡುಗಡೆ ಮಾಡಿ [[ಅಡೆನೊಸಿನ್‌ ಟ್ರೈಪಾಸ್ಪೇಟ್ |ಎಟಿಪಿ]] (ಅಡೆನೊಸಿನ್‌ ಟ್ರೈಪಾಸ್ಪೇಟ್) ಉತ್ಪಾದಿಸುತ್ತದೆ. ಮೈಟೊಕಾಂಡ್ರಿಯಗಳು [[ದ್ವಿವಿದಲನ]]ದ ಮೂಲಕ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ. [[ಹರಿದ್ರೇಣು]] ಸಸ್ಯ ಮತ್ತು [[ಪಾಚಿ]]ಯಲ್ಲಿ ಮಾತ್ರ ಕಂಡುಬರುತ್ತದೆ ಮತ್ತು ಇದು ಸೂರ್ಯನ ಶಕ್ತಿಯನ್ನು ಹಿಡಿದಿರಿಸಿ [[ದ್ಯುತಿಸಂಶ್ಲೇಷಣೆ]] ಅಥವಾ ಪೊಟೋಸಿಂಥೆಸಿಸ್ ಮೂಲಕ [[ಕಾರ್ಬೊಹೈಡ್ರೇಟ್‌]]ಗಳನ್ನು (ಶರ್ಕರಪಿಷ್ಟ) ತಯಾರಿಸುತ್ತದೆ.li

ಎಂಡೊಪ್ಲಾಸ್ಮ ಜಾಲರಚನೆ:ಇದು ಜೀವರಸದಲ್ಲಿ ಮುಕ್ತವಾಗಿ ತೇಲುವ ಅಣುಗಳಿಗೆ ಹೋಲಿಸಿದಲ್ಲಿ ನಿರ್ದಿಷ್ಟ ಬದಲಾವಣೆಗೆ ಗುರಿಮಾಡಲಾದ ಮತ್ತು ನಿರ್ದಿಷ್ಟ ಸ್ಥಳಕ್ಕೆ ತಲುಪಬೇಕಾದ ಅಣುಗಳ ಸಾಗಣೆಯ ಜಾಲ. ಇದು ಎರಡು ರೂಪದಲ್ಲಿದೆ: ಹೊರಮೈ ಮೇಲೆ [[ರೈಬೋಸೋಮ್‌]]ಗಳು ಇರುವ (ಇವು ಜಾಲರಚನೆ ಒಳಗೆ [[ಪ್ರೋಟೀನ್‌]]ಗಳನ್ನು ಸ್ರವಿಸುವಿಸುತ್ತವೆ) ಒರಟು ಎಂಡೊಪ್ಲಾಸ್ಮ ಜಾಲರಚನೆ ಮತ್ತು ಕ್ಯಾಲ್ಸಿಯಂನ್ನು (ಸುಣ್ಣ) ವಶಪಡಿಸಿಕೊಳ್ಳುವಲ್ಲಿ ಮತ್ತು ಬಿಡುಗಡೆ ಮಾಡುವಲ್ಲಿ ಪಾತ್ರ ವಹಿಸುವ ನಯವಾದ ಎಂಡೊಪ್ಲಾಸ್ಮ ಜಾಲರಚನೆ.

೫೮ ನೇ ಸಾಲು:

ಸೆಂಟ್ರೋಸೋಮ್: ಇದು ಸೈಟೊಸ್ಕೆಲೆಟನ್‌ನನ್ನು ವ್ಯವಸ್ಥೆಗೊಳಿಸುತ್ತದೆ. ಸೆಂಟ್ರಿಸೋಮ್‌ ಸೈಟೊಸ್ಕೆಲೆಟನ್‌ನ ಮುಖ್ಯ ಭಾಗವಾದ ಚಿಕ್ಕನಳಿಕೆಗಳನ್ನು ಉತ್ಪಾದಿಸುತ್ತದೆ. ಇದು ಎಂಡೊಪ್ಲಾಸ್ಮ ಜಾಲರಚನೆ ಮತ್ತು ಗಾಲ್ಜಿ ಪರಿಕರದ ಮೂಲಕ ಸಾಗಣೆಯನ್ನು ನಿರ್ದೇಶಿಸುತ್ತದೆ. ಸೆಂಟ್ರೊಸೋಮ್‌ಗಳಲ್ಲಿ ಎರಡು ಸೆಂಟ್ರಿಯೋಲ್‌ಗಳು ಇದ್ದು ಅವು ಕೋಶ ವಿಭಜನೆಯಲ್ಲಿ ಬೆರ್ಪಡುತ್ತವೆ ಮತ್ತು ಮೈಟಾಸಿಸ್ ಆಧಾರ ತಂತಿ ([[ಮೈಟಾಸಿಸ್]] ಮತ್ತು [[ಮಿಯಾಸಿಸ್]] ಎರಡರಲ್ಲಿಯೂ [[ಕೋಶ ವಿಭಜನೆ]]ಯಾಗುವಾಗ [[ವರ್ಣತಂತು]]ಗಳು ಇಬ್ಭಾಗವಾಗಲು ಸಹಾಯ ಮಾಡುವ ಆಧಾರ ತಂತಿ) ರೂಪಗೊಳ್ಳಲು ಸಹಾಯ ಮಾಡುತ್ತದೆ. ಪ್ರಾಣಿ ಜೀವಕೋಶಗಳಲ್ಲಿ ಒಂದೇ ಸೆಂಟ್ರೊಸೋಮ್ ಇರುತ್ತದೆ. ಇದು ಕೆಲವು [[ಶಿಲೀಂಧ್ರ]] ಮತ್ತು [[ಪಾಚಿ]]ಗಳಲ್ಲಿಯೂ ಕಂಡುಬರುತ್ತದೆ.

ಕುಹರಗಳು: ಕುಹರಗಳು ಪೋಲು ಪದಾರ್ಥಗಳನ್ನು ಪ್ರತ್ಯೇಕಿಸುತ್ತವೆ ಮತ್ತು ಸಸ್ಯ ಜೀವಕೋಶಗಳಲ್ಲಿ ನೀರು ದಾಸ್ತಾನು ಮಾಡುತ್ತವೆ. ಅವುಗಳನ್ನು ಕೆಲವೊಮ್ಮೆ ಪೊರೆ ಸುತ್ತುವರೆದ ದ್ರವ ತುಂಬಿದ ಸ್ಥಳಗಳಾಗಿ ಬಣ್ಣಿಸಲಾಗಿದೆ. ಕೆಲವು ಜೀವಕೋಶಗಳಲ್ಲಿ, ವಿಶೇಷವಾಗಿ ಅಮೀಬಗಳಲ್ಲಿ ಸಂಕೋಚಕ ಕುಹರಗಳು ಇದ್ದು, ಜೀವಕೋಶದಲ್ಲಿ ತೀರ ಹೆಚ್ಚು ನೀರಿದ್ದರೆ ಅವು ನೀರನ್ನು ಹೊರತಳ್ಳುತ್ತವೆ. ಸಾಮಾನ್ಯವಾಗಿ ಸಸ್ಯ ಮತ್ತು [[ಶಿಲೀಂಧ್ರ]]ಗಳ ಜೀವಕೋಶಗಳಲ್ಲಿನ ಕುಹರಗಳು ಪ್ರಾಣಿ ಜೀವಕೋಶಗಳ ಕುಹರಗಳಿಗಿಂತ ದೊಡ್ಡವಿರುತ್ತವೆ.

ರೈಬೋಸೋಮ್‌ಗಳು: [[ರೈಬೋಸೋಮ್‌]]ಗಳು ದೊಡ್ಡ ಸಂಕೀರ್ಣ [[ಆರ್‌.ಎನ್.ಎ]] ಮತ್ತು [[ಪ್ರೋಟೀನ್]] ಅಣುಗಳು. ಪ್ರತಿಯೊಂದರಲ್ಲಿಯೂ ಎರಡು ಉಪಘಟಕಗಳಿರುತ್ತವೆ ಮತ್ತು ಇವು [[ಬೀಜಕಣ (ಜೀವಶಾಸ್ತ್ರ)|ಬೀಜಕಣ]]ದ ಆರ್.ಎನ್.ಎಆರ್‌ಎನ್ಎ ಬಳಸಿ [[ಅಮಿನೊ ಆಮ್ಲ]]ಗಳಿಂದ [[ಪ್ರೋಟೀನ್]] ಸಂಯೋಜಿಸುವ ತಯಾರಿ ಘಟಕಗಳಾಗಿ ವರ್ತಿಸುತ್ತವೆ. ರೈಬೊಸೋಮ್‌ಗಳು ಮುಕ್ತವಾಗಿ ತೇಲುತ್ತಿರ ಬಹುದು ಅಥವಾ ಪೊರೆಗೆ ಹತ್ತಿಕೊಂಡಿರಲೂ ಬಹುದು (ಯೂಕ್ಯಾರಿಯೋ‍ಟ್‌‌‌ಗಳಲ್ಲಿ ಒರಟು ಎಂಡೊಪ್ಲಾಸ್ಮ ಜಾಲರಚನೆ ಅಥವಾ ಪ್ರೋಕ್ಯಾರಿಯೋಟ್‌ಗಳಲ್ಲಿ ಕೋಶಭಿತ್ತಿಗೆ ಅಂಟಿಕೊಂಡಿರುತ್ತವೆ).<ref>Ménétret JF, Schaletzky J, Clemons WM, CW; Akey; et al. (December 2007). "Ribosome binding of a single copy of the SecY complex: implications for protein translocation". Mol. Cell 28 (6): 1083–92. doi:10.1016/j.molcel.2007.10.034. PMID 18158904.</ref>

==ಕೋಶಪೊರೆ ಹೊರಗಿನ ರಚನೆಗಳು==

(ಪ್ರೋಕ್ಯಾರಿಯೋಟ್‌ ಮತ್ತು ಯೂಕ್ಯಾರಿಯೋ‍ಟ್‌ ಜೀವಕೊಶಗಳಲ್ಲಿನ ಹೊರ ರಚನೆಗಳು)
"https://kn.wikipedia.org/wiki/ಜೀವಕೋಶ" ಇಂದ ಪಡೆಯಲ್ಪಟ್ಟಿದೆ