"ಅಮೇರಿಕ ಸಂಯುಕ್ತ ಸಂಸ್ಥಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಗೆರಿಲ್ಲಾ ಯುದ್ಧದ ಮೂಲಕ ತಾಲಿಬಾನ್ ಪ್ರತಿಭಟನೆಗಾರರು ಪ್ರತಿಭಟನೆಯನ್ನು ಮುಂದುವರಿಸಿದರು. 2002ರಲ್ಲಿ ಬುಷ್ ಆಡಳಿತವು [[ಇರಾಕ್ ಸಮರದ ಸಕಾರಣತೆ|ವಿವಾದದ ಕಾರಣಗಳನ್ನು]] ಮುಂದೊಡ್ಡಿ ಇರಾಕಿನಲ್ಲಿ [[ಅಳ್ವಿಕೆ ಬದಲಾವಣೆ|ಆಡಳಿತ ಬದಲಾವಣೆ]]ಗೆ ಒತ್ತಾಯಿಸಿತು.<ref>{{cite web|title=Many Europeans Oppose War in Iraq|work=USA Today|url=http://www.usatoday.com/news/world/2003-02-14-eu-survey.htm|date=2003-02-14|accessdate=2008-09-01}}{{cite web|author=Springford, John|title='Old’ and ‘New’ Europeans United: Public Attitudes Towards the Iraq War and US Foreign Policy|publisher=Centre for European Reform|url=http://www.cer.org.uk/pdf/back_brief_springford_dec03.pdf|month=December|year=2003|accessdate=2008-09-01}}</ref> ನ್ಯಾಟೋ ಮತ್ತು ಸಂಯುಕ್ತ ರಾಷ್ಟ್ರಗಳ ಬೆಂಬಲ ಇರದ ಕಾರಣದಿಂದಾಗಿ ಬುಷ್ ಆಡಳಿತವು ಸೈನಿಕ ಹಸ್ತಕ್ಷೇಪಕ್ಕೆ [[ನಂಬಿಕೆಯ ಒಕ್ಕೂಟ|ಸಂಯೋಜಿತ ಸಮ್ಮತಿ]]ಯನ್ನು ಏರ್ಪಡಿಸಿತು. ಸಂಯೋಜಿತ ಪಡೆಗಳು [[ಸಮರ ಪೂರ್ವ ಸಿದ್ಧತೆ|ಪೂರ್ವಭಾವಿ]]ಯಾಗಿ, 2003ರಲ್ಲಿ [[2003 ಇರಾಕ್ ಅನ್ವೇಷಣೆ|ಇರಾಕ್‌ನ ಮೇಲೆ ದಾಳಿ]] ಮಾಡಿದವು. ನಿರಂಕುಶಾಧಿಕಾರಿ ಮತ್ತು ಅಮೆರಿಕದ ಮಾಜಿ ಸ್ನೇಹಿತ [[ಸದ್ದಾಂ ಹುಸೇನ್|ಸದ್ದಾಮ್ ಹುಸೇನ್‌‌‌]]ನನ್ನು ಪದಚ್ಯುತಗೊಳಿಸಲಾಯಿತು. 2005ರಲ್ಲಿ [[ಕತ್ರಿನಾ ಚಂಡಮಾರುತ]]ವು [[ಸಂಯುಕ್ತ ಸಂಸ್ಥಾನದ ಗಲ್ಫ್ ಕರಾವಳಿ|ಗಲ್ಫ್‌ನ ಕರಾವಳಿ]]ಯುದ್ಧಕ್ಕೂ, ನಂತರ ಗಂಭೀರ ಹಾನಿಗೂ ಕಾರಣವಾಯಿತು ಮತ್ತು [[ನ್ಯೂ ಓರ್ಲಿಯಾನ್ಸ್|ನ್ಯೂ ಓರ್ಲಿಯನ್ಸ್‌]] ವಿಧ್ವಂಸಗೊಂಡಿತು. ನವೆಂಬರ್ 4, 2008ರಲ್ಲಿ [[2000ರ ಆರ್ಥಿಕ ಹಿಂಜರಿಕೆ#ಸಂಯುಕ್ತ ಸಂಸ್ಥಾನ|ಜಾಗತಿಕ ಆರ್ಥಿಕ ಹಿನ್ನಡೆ]]ಯ ಮಧ್ಯೆ [[ಬರಾಕ್ ಓಬಾಮ|ಬರಾಕ್ ಒಬಾಮಾ]]ರವರು ಅಧ್ಯಕ್ಷರಾಗಿ ಆಯ್ಕೆಯಾದರು. ಇವರು ಮೊಟ್ಟ ಮೊದಲ ಆಫ್ರಿಕನ್ ಅಮೆರಿಕನ್ ಅಧ್ಯಕ್ಷ.
== ಸರ್ಕಾರ ಮತ್ತು ಚುನಾವಣೆಗಳು ==
{{Main|[[:en:Federal government of the United States]]|[[:en:Elections in the United States]]}}
[[ಚಿತ್ರ:Capitol Building Full View.jpg|thumb|right| ಸಂಯುಕ್ತ ಸಂಸ್ಥಾನದ ಸಮ್ಮೇಳನದ ಮನೆಯಾಗಿರುವ, ಸಂಯುಕ್ತ ಸಂಸ್ಥಾನ ಸರಕಾರದ ಕಾರ್ಯಾಲಯದ ಪಶ್ಚಿಮ ದ್ವಾರ]]
ಸಂಯುಕ್ತ ಸಂಸ್ಥಾನವು ಜಗತಿನ ಅತೀ ಹಳೆಯ ಉಳಿದಿರುವ [[ಫೆಡರೇಶನ್|ಒಕ್ಕೂಟರಾಷ್ಟ್ರ]]ವಾಗಿದೆ. ಇದು [[ಸಾಂವಿಧಾನಿಕ ಗಣರಾಜ್ಯ|ಸಾಂವಿಧಾನಿಕ ಪ್ರಜಾಪ್ರಭುತ್ವ]]ವಾಗಿದ್ದು ಇದರಲ್ಲಿ [[ಸಂಯುಕ್ತ ಸಂಸ್ಥಾನದ ಕಾನೂನು|ಕಾನೂನಿಂ]]ದ ರಕ್ಷಿಸಿಲ್ಪಟ್ಟ [[ಅಲ್ಪಸಂಖ್ಯಾತ ಹಕ್ಕುಗಳು|ಅಲ್ಪಸಂಖ್ಯಾತರ ಹಕ್ಕು]]ಗಳು [[ಬಹುಮತ ಕಾಯ್ದೆ|ಬಹುಸಂಖ್ಯಾತರ ಆಡಳಿತ]]ವನ್ನು ಮೃದುಗೊಳಿಸುತ್ತವೆ.<ref> ಶೆಬ್, ಜಾನ್ ಎಮ್., ಅಂಡ್ ಜಾನ್ ಎಮ್. ಶೆಬ್ II (2002). ''ಎನ್ ಇಂಟ್ರಡಕ್ಷನ್ ಟು ದಿ ಅಮೆರಿಕನ್ ಲೀಗಲ್ ಸಿಸ್ಟಮ್'' ಫ್ಲಾರೆನ್ಸ್, ಕೆವೈ: ಡೆಲ್ಮರ್, p. 6. ISBN 0-7668-2759-3.</ref> ಇದು ಮೂಲಭೂತವಾಗಿ [[ಮಾದರಿ ಪ್ರಜಾಪ್ರಭುತ್ವ|ಪ್ರತಿನಿಧಿ ಪ್ರಜಾಪ್ರಭುತ್ವದ]] ರಚನೆಯನ್ನು ಹೊಂದಿದೆ. ಆದರೂ ಸಂಯುಕ್ತ ಸಂಸ್ಥಾನದ ಭೂಪ್ರದೇಶದಲ್ಲಿ ನೆಲೆಸಿದ ನಾಗರಿಕರು ಫೆಡರಲ್ ಅಧಿಕಾರಿಗಳ ಮತದಾನದಲ್ಲಿ ಭಾಗವಹಿಸುವಂತಿಲ್ಲ.<ref>ರಸ್ಕಿನ್, ಜೇಮ್ಸ್ ಬಿ. (2003 ''ಓವರ್‌ರೂಲಿಂಗ್ ಡೆಮಾಕ್ರಸಿ: ದಿ ಸುಪ್ರೀಮ್ ಕೋರ್ಟ್ ವರ್ಸಸ್ ದಿ ಅಮೆರಿಕನ್ ಪೀಪಲ್'' ಲಂಡನ್ ಅಂಡ್ ನ್ಯೂಯಾರ್ಕ್ ರೂಟ್‌ಲೆಡ್ಜ್, pp. 36–38. ISBN 0-415-93439-7.</ref> ಸಂಯುಕ್ತ ಸಂಸ್ಥಾನ ಸಂವಿಧಾನದ ವ್ಯಾಖ್ಯಾನದಂತೆ, ಸರ್ಕಾರವು [[ಶಕ್ತಿಗಳ ವಿಭಜನೆ|ಚೆಕ್ಸ್ ಮತ್ತು ಬ್ಯಾಲೆನ್ಸ್]] ವ್ಯವಸ್ಥೆಯಿಂದ ನಿಯಂತ್ರಿಸಲ್ಪಟ್ಟಿದ್ದು, ಇದು ದೇಶದ ಸರ್ವೋಚ್ಛ ಕಾನೂನುಬದ್ಧ ದಾಖಲೆಯಾಗಿದೆ. [[ಫೆಡರಲಿಸಂ#ಸಂಯುಕ್ತ ಸಂಸ್ಥಾನ|ಅಮೆರಿಕದ ಫೆಡರಲಿಸ್ಟ್ ವ್ಯವಸ್ಥೆ]]ಯಲ್ಲಿ ನಾಗರಿಕರು ಫೆಡರಲ್, ರಾಜ್ಯ ಮತ್ತು ಸ್ಥಳೀಯ ಎಂಬ [[ಸಂಯುಕ್ತ ಸಂಸ್ಥಾನದ ರಾಜಕೀಯ ವಿಭಾಗಗಳು|ಮೂರು ಹಂತದ ಸರ್ಕಾರದ]] ಆಡಳಿತಕ್ಕೆ ಒಳಪಡುತ್ತಾರೆ. [[ಸಂಯುಕ್ತ ಸಂಸ್ಥಾನದ ಸ್ಥಳೀಯ ಸರ್ಕಾರ|ಸ್ಥಳೀಯ ಸರ್ಕಾರ]]ದ ಕೆಲಸವು ಸಾಮಾನ್ಯವಾಗಿ [[ಕೌಂಟಿ(ಸಂಯುಕ್ತ ಸಂಸ್ಥಾನ)|ಕೌಂಟಿ]] ಮತ್ತು ಪೌರಸಂಸ್ಥೆಯ ಆಡಳಿತದ ಮಧ್ಯೆ ಹಂಚಲ್ಪಟ್ಟಿರುತ್ತದೆ. ಸಾಮಾನ್ಯವಾಗಿ ಎಲ್ಲ ಸಂದರ್ಭಗಳಲ್ಲಿಯೂ ಕಾರ್ಯಾಂಗ ಮತ್ತು ಶಾಸಕಾಂಗದ ಅಧಿಕಾರಿಗಳು ಚುನಾವಣೆಯಲ್ಲಿ ಡಿಸ್ಟ್ರಿಕ್ಟ್‌ಯ ನಾಗರಿಕರ [[ಬಹುಮತ ಪದ್ಧತಿ|ಬಹುಮತ]]ದಿಂದ ಆರಿಸಿ ಬಂದವರಾಗಿರುತ್ತಾರೆ. ಫೆಡರಲ್ ಹಂತದಲ್ಲಿ [[ಅನುಪಾತಾಧಾರಿತ ಪ್ರತಿನಿಧಿತ್ವ|ಅನುಪಾತದ ಪ್ರಾತಿನಿಧಿತ್ವ]] ಇರುವುದಿಲ್ಲ ಹಾಗೂ ಕೆಳ ಹಂತದಲ್ಲಿ ತುಂಬ ಕಡಿಮೆ ಸಂದರ್ಭಗಳಲ್ಲಿ ಇರುತ್ತದೆ. ಫೆಡರಲ್ ಮತ್ತು ರಾಜ್ಯ ನ್ಯಾಯಾಂಗ ಹಾಗೂ [[ಕ್ಯಾಬಿನೆಟ್ (ಸರ್ಕಾರ)|ಮಂತ್ರಿಮಂಡಲ]]ದ ಅಧಿಕಾರಿಗಳು ಕಾರ್ಯಾಂಗದಿಂದ ನಾಮಾಂಕಿತರಾಗಿರುತ್ತಾರೆ ಮತ್ತು ಶಾಸಕಾಂಗದಿಂದ ಅನುಮೋದಿಸಲ್ಪಟ್ಟವರಾಗಿರುತ್ತಾರೆ. ಹಾಗಿದ್ದರೂ ಕೆಲವು ರಾಜ್ಯ ನ್ಯಾಯಾಧೀಶರು ಮತ್ತು ಅಧಿಕಾರಿಗಳು ಜನರಿಂದ ಚುನಾಯಿಸಲ್ಪಟ್ಟವರಾಗಿರುತ್ತಾರೆ.
೪೧,೧೬೪

edits

"https://kn.wikipedia.org/wiki/ವಿಶೇಷ:MobileDiff/681510" ಇಂದ ಪಡೆಯಲ್ಪಟ್ಟಿದೆ