ಶಿಕಾರಿಪುರ ರಂಗನಾಥರಾವ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: → (2), added orphan, deadend tags using AWB
ಚು →‎top: clean up, replaced: ಅಥವ → ಅಥವಾ using AWB
 
೯ ನೇ ಸಾಲು:
ಅವರ ಮಹಾನ್‌ ಸಂಶೋಧನೆಯಾದದ್ದು ೧೯೭೨ ರಲ್ಲಿ . ಸಿಂಧೂ ಕಣಿವೆ ನಾಗರೀಕತೆಯು ಕೊನೆಯಾದದ್ದು ಆರ್ಯರ ದಾಳಿಯಿಂದಲ್ಲ, ಅಭೂತಪೂರ್ವ ಪ್ರವಾಹದಿಂದ ಎಂದು ಪುರಾವೆ ಒದಗಿಸಿದರು. ಅವರ “ ಲೋಥಲ್‌ ಮತ್ತು ಸಿಂಧೂ ಕಣಿವೆ ನಾಗರೀಕತೆ” ಎಂಬ ಸಂಪ್ರಬಂಧಕ್ಕೆ ನಾಗಪುರ ವಿಶ್ವವಿದ್ಯಾಲಯವು ಡಿಲಿಟ್‌ ಪ್ರಶಸ್ತಿ ಪ್ರದಾನ ಮಾಡಿತು. ಅವರಿಗೆ ಮೈಸೂರು, ಕುವೆಂಪು, ಮತ್ತು ಕನ್ನಡ ವಿಶ್ವವಿದ್ಯಾಲಯಗಳೂ ಗೌರವ ಡಿಲಿಟ್‌ಪ್ರಶಸ್ತಿ ನೀಡಿ ತಮ್ಮ ಗೌರವ ಹೆಚ್ಚಿಸಿಕೊಂಡವು.
ಅವರ ಕೆಲಸ ಮತ್ತು ಕಲಿಕೆ ಜೊತಜೊತೆಯಲ್ಲಿಯೇ ಸಾಗಿದವು. ಪ್ರಮುಖ ಪುರಾತತ್ವತಜ್ಞರಾದ ವೀಲರ್‌ ಅವರಿಂದ ವೈಜ್ಞಾನಿಕ ಉತ್ಖನನ ಕಲಿತರು.ಪ್ಯಾರಿಸ್‌ಮತ್ತು ಇಂಗ್ಲೆಂಡಿನ ಹೆಸರಾಂತ ಪುರಾತತ್ವ ತಜ್ಞರ ಜೊತೆ ಕ್ಷೇತ್ರಾನುಭವ ಮಾರ್ಗದರ್ಶನ ಪಡೆದರು. ಅಮರೇಲಿ, ರಂಗಾಪುರ್‌( ಗುಜರಾತ್,ಕನ್ಹೇರಿ ( ಮಹಾರಾಷ್ಟ್ರ)ಚಂದ್ರಪುರ್(ಗೋವಾ) ಮೊದಲಾದ ಸಿಂಧೂ ಕಣಿವೆಯ ಪುರಾತ್ತತ್ವ ತಾಣಗಳನ್ನು ಬೆಳಕಿಗೆ ತಂದರು. ಕಂಚಿನ ಯುಗದ ತಾಣಗಳಾದ ತೇವೋರ್( ಮಹಾರಾಷ್ಟ್ರ)ಭಾಗಟ್ರಾವ್‌( ಗುಜರಾತ್), ನವಶಿಲಾಯುಗದ ತಾಣ ಪೈಯಾಂಪಲ್ಲಿ,ಮತ್ತು ಐಹೊಳೆ, ಕಾವೇರಿಪಟ್ಣಂ ಗಳ ಪುರಾತತತ್ವ ತಾಣಗಳು ದೊರೆಯಲು ಅವರೇ ಕಾರಣರು.
ಅವರದು ಇಚ್ಛೆಯರಿತು ನಡೆವ ಸತಿ ಮತ್ತು ಮುಚ್ಚಟೆಯ ಮೂರು ಮಕ್ಕಳ ಸಂಸಾರ (ಗೋಪಾಲ್, ಶಕುಂತಲಾ ಮತ್ತು ನಳಿನಿ ) ಅವರು ತಮ್ಮ ಜೀವನದ ಬಹುಭಾಗವನ್ನು ಪ್ರವಾಸ ಮತ್ತು ಕ್ಷೇತ್ರಕಾರ್ಯದಲ್ಲೇ ಕಳೆದರೂ ಹೊಂದಿಕೊಂಡು ಹೋಗುವ ಹೆಂಡತಿ ಶ್ರೀಮತಿ ಕಮಲ. ಅವರ ಮಗಳು ಹೇಳುವ ಹಾಗೆ “ನಮ್ಮ ತಂದೆ ವಿಶ್ವ ಸಂಚಾರಿ,ಲಂಡನ್, ರೋಮ್, ಪ್ಯಾರಿಸ್‌, ನ್ಯೂಯಾರ್ಕ್, ವಾಷಿಂಗ್‌ಟನ್‌, ಈಜಿಪ್ಟ್, ಇರಾಕ್‌, ಮಾಸ್ಕೋ ಟೊಕಿಯೋ, ಪೀಕಿಂಗ್‌ ಮೊದಲಾದ ನಗರಗಳ ವಿಶ್ವವಿದ್ಯಾಲಯಗಳಲ್ಲಿ, ಮ್ಯೂಜಿಯಂಗಳಲ್ಲಿ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಭಾಷಣ ನೀಡುವಾಗ ಮನೆಯ ನೆನಪೇ ಇರುತ್ತಿರಲಿಲ್ಲ.ಅನೇಕ ಸಲ ಅಮ್ಮನಿಗೆ ಅವರು ಎಲ್ಲಿರುವರು ಎಂದೇ ಗೊತ್ತಾಗುತ್ತಿರಲಿಲ್ಲ. ಆದರೆ ಮನೆಯಲ್ಲಿದ್ದಾಗ ಮಾತ್ರ ಬರಹದ ನಡುವೆ ಬಿಡುವು ಮಾಡಿಕೊಂಡು, ನಮಗೆ ಸಂಸ್ಕೃತ ಕಲಿಸುವರು. ಅಥವಅಥವಾ ತಮ್ಮ ಕ್ಷೇತ್ರಕಾರ್ಯದ ಅನುಭವ ಹಂಚಿಕೊಳ್ಳುವರು” ಅದರ ಫಲ ಮೂವರೂ ಮಕ್ಕಳೂ ಸುಶಿಕ್ಷಿತರಾದರು. . ಒಬ್ಬ ಮಗಳು ತಂದೆಯ ಹಾದಿಯಲ್ಲಿಯೇ ಮುನ್ನೆಡೆದಿದ್ದಾಳೆ.ಹೀಗೆ ಬಿಡುವಿಲ್ಲದ ಕೆಲಸದ ನಡುವೆಯೂ ನೆಮ್ಮದಿಯಿಂದ ಜೀವನ ನಡೆಸಿದರು. ಅವರು ದೇಶಾದ್ಯಂತ ಭೂಗರ್ಭದಲ್ಲಿ ಅಡಗಿದ ಐತಿಹಾಸಿಕ ಸತ್ಯಗಳ ಶೋಧನೆಗೆ,ಜಗತ್ತಿನಾದ್ಯಂತ ಹೊಸ ವಿಷಯ ಕಲಿಯಲು, ಕಲಿಸಲು ತಾವು ಶೋಧಿಸಿರುವುದನ್ನು ತಜ್ಞರ ಗಮನಕ್ಕೆ ತರಲು ಸಂಚರಿಸಿದರು.ವಿಶೇಷವಾಗಿ ಸಮುದ್ರ ಪುರಾತತ್ವ ಭಾರತದಲ್ಲಿ ಅವರ ನನಸಾದ ಕನಸಾಗಿತ್ತು..
ಅವರ ಮತ್ತೊಂದು ಮಹತ್ವದ ಸಂಶೋಧನೆ ಸಿಂದೂ ಲಿಪಿಯ ನಿಗೂಢತೆ ಬಿಡಿಸಿದ್ದು. ಸಿಂಧೂ ಕಣಿವೆಯ ಪುರಾತತ್ವ ತಾಣಗಳಾದ ಹರಪ್ಪಾ ಮೊಹಂಜದಾರೋಗಳಲ್ಲಿ ದೊರೆತ ಭಾಷೆಯ ಲಿಪಿಗಳು ಇಂಡೋ ಯುರೋಪಿಯನ್‌ ಅಲ್ಲ , ಅವು ಖಚಿತವಾಗಿ ಇಂಡೋ ಆರ್ಯನ್‌ ಎಂದು ಸಿದ್ಧ ಮಾಡಿದರು. ಕ್ರಿ.. ಪೂ. ೧೭೦೦ರಲ್ಲಿ ಚಿತ್ರಲಿಪಿಯಾಗಿದ್ದುದು ಕ್ರಮೇಣ ವರ್ಣಲಿಪಿಯಾಗಿ ವಿಕಾಸ ವಾದುದನ್ನು ತಮ್ಮ ಹೊಸ ಹೊಸ ಉತ್ಖನನದ ತಾಣಗಳಲ್ಲಿ ದೊರೆತ ವಸ್ತುಗಳ ಪುರಾವೆ ಒದಗಿಸಿದರು.ಈ ಕಾರ್ಯಕ್ಕಾಗಿ ಅವರಿಗೆ ಇಂದಿರಾಗಾಂಧಿ ಫೆಲೋಷಿಪ್‌ ದೊರೆಯಿತು. ಸುಮಾರು ಮೂವತ್ತುವರ್ಷದ ಶ್ರಮದಿಂದ ಸಿಂಧೂ ಕಣಿವೆಯಲ್ಲಿ ದೊರೆತ ೯೦೦ಮುದ್ರೆಗಳನ್ನು ಓದಲು ಸಫಲರಾದರು .
ರಾವ್‌ ಅವರು 1992 ರಲ್ಲಿ ಸಿಂಧೂ ಕಣಿವೆ ನಾಗರೀಕತೆಯ ಕಾಲದ ಲಿಪಿಗಳ ರಹಸ್ಯವನ್ನು ಬಯಲು ಮಾಡುವ ಪ್ರಯತ್ನದಲ್ಲಿ ಯಶಗಳಿಸಿದರು ಎನ್ನಲಾಗಿದೆ. ಹರಪ್ಪ ಲಿಪಿಗಳು ಚಿಕ್ಕದಾದ ಸಂಕೇತಗಳ ಸರಪಣಿಗಳಾಗಿವೆ. ಈ ವಿವರಣೆಯು ಇನ್ನೂ ವಿವಾದದಿಂದ ಹೊರತಾಗಿಲ್ಲ.ಇವು ಅಕ್ಷರಗಳ ಸಂಕೇತಗಳಾಗಿವೆ ವಿನಃ, ಅವುಗಳ ಭಾಷೆಯ ಸ್ವರೂಪ ಕುರಿತ ಮಾಹಿತಿ ಇಲ್ಲ ಎನ್ನಲಾಗಿದೆ.. ಹರಪ್ಪದಲ್ಲಿ ೧೮೭೩ ರಲ್ಲಿ ಮೊದಲಬಾರಿಗೆ ಮುದ್ರೆಗಳು ದೊರೆತವು.ಈವರೆಗೆ ಬೇರೆ ಬೇರೆ ತಾಣಗಳಲ್ಲಿ ಸಿಕ್ಕಸುಮಾರು ೪೦೦೦ ಮುದ್ರೆಗಳ ಪಟ್ಟಿ ಮಾಡಲಾಗಿದೆ. ಅದರಲ್ಲಿ ೩೭೦೦ ಮುದ್ರೆಗಳು ಮತ್ತು ೪೧೭ವಿಶಿಷ್ಟ ಸಂಕೇತಗಳು ಇವೆ.ಬರಹದಲ್ಲಿ ಸರಾಸರಿ ೫ ಸಂಕೇತಗಳು ಇವೆ. ಅತಿ ಉದ್ದವಾದುದು ೧೭ಸಂಕೇತಗಳನ್ನು ಹೊಂದಿದೆ. ಭಾಷೆ ಅಪರಿಚಿತವಾದರೂ ಭಾಗಶಃ ಓದಬಹುದು ಎನ್ನಲಾಗಿದೆ.