ಅಲೆಕ್ಸಾಂಡರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: → (11) using AWB
ಚು clean up, replaced: ಅಥವ → ಅಥವಾ using AWB
೧೭ ನೇ ಸಾಲು:
|date of birth =೨೦ ಜುಲೈ ೩೫೬ ಕ್ರಿಪೂ
|place of birth =[[ಪೆಲ್ಲ]], [[ಮೆಸಿಡೊನ್]] [[ಗ್ರೀಸ್]]
|date of death =೧೦ ಜೂನ್ ಅಥವಅಥವಾ ೧೧ ಜೂನ್ ೩೨೩ ಕ್ರಿಪೂ (ವಯಸ್ಸು ೩೨)<!--32 years, 10 months and 20 days (approx)-->
|place of death =[[ಬೆಬಿಲಾನ್]]
|place of burial=
೪೧ ನೇ ಸಾಲು:
ದಂಗೆಯನ್ನಡಗಿಸಲು ಅಲೆಕ್ಸಾಂಡರ್ ಸಮರ್ಖಂಡ್‍ನಲ್ಲಿದ್ದಾಗ ಒಂದು ದುರಂತ ನಡೆಯಿತು. ಅಲೆಕ್ಸಾಂಡರನ ನಡತೆ, ಪೌರ್ವಾತ್ಯ ನಡೆನುಡಿ ಬ್ಯಾಕ್ಟ್ರಿಯ ರಾಜಕುಮಾರಿ ರಾಕ್ಸಾನಳನ್ನು ಮದುವೆಯಾದದ್ದು, ಏಷ್ಯದವರನ್ನು ತನ್ನ ಸೈನ್ಯದಲ್ಲಿ ಸೇರಿಸಿದ್ದುದು ಅವನ ಸೈನಿಕರಿಗೆ ಸರಿಬೀಳಲಿಲ್ಲ. ಒಂದು ರಾತ್ರಿ ನಾಯಕ ಕುಡಿತದ ಅಮಲಿನಲ್ಲಿದ್ದಾಗ ಭಟ್ಟಂಗಿಗಳು ಇವನನ್ನು ಹೊಗಳುತ್ತಿದ್ದರು. ಇವನ ಪ್ರಿಯ ಮಿತ್ರನಾದ ಕ್ಲೀಟಸ್‍ಗೆ ಈ ಹೊಗಳಿಕೆ ಹಿಡಿಸಲಿಲ್ಲ. ದಿಗ್ವಿಜಯಕ್ಕೆ ಫಿಲಿಪ್‍ನ ಸೈನ್ಯವೇ ಕಾರಣವೆಂದೂ ಗ್ರಾನಿಕಸ್ ಕದನದಲ್ಲಿ ತಾನು ಅಲೆಕ್ಸಾಂಡರನನ್ನು ಬದುಕಿಸಿದುದಾಗಿಯೂ ಬಹಿರಂಗವಾಗಿ ಘೋಷಿಸಿದ. ಹೀಗೆ ಹಂಗಿಸಿದ್ದರಿಂದ ಅಲೆಕ್ಸಾಂಡರನಿಗೆ ನಾಚಿಕೆಯಾಗಿ, ರೋಷದಿಂದ ಕ್ಲೀಟಸ್ನನ್ನು ತತ್ಕ್ಷಣವೇ ತನ್ನ ಭಲ್ಲೆಯಿಂದ ತಿವಿದು ಕೊಂದುಹಾಕಿದ. ಕುಡಿತದ ಅಮಲು ಕಳೆದ ಮೇಲೆ ಪಶ್ಚಾತ್ತಾಪಪಟ್ಟು, ಮೂರು ದಿನಗಳವರೆಗೂ ಊಟ ನಿದ್ರೆ ಇಲ್ಲದೆ ದುಃಖಿಸಿದ.
==ಹಿಂದೂಸ್ಠಾನದ ದಂಡಯಾತ್ರೆ==
[[File:AlexanderConquestsInIndia.jpg|thumb| ಅಲೆಕ್ಸಾಂಡರ್‍ನ ಹಿಂದೂಸ್ಠಾನದ ದಂಡಯಾತ್ರೆ]]
ಅಲೆಕ್ಸಾಂಡರ್ ಪ್ರ.ಶ.ಪೂ. 327ರಲ್ಲಿ ಹಿಂದೂಸ್ಥಾನದ ಮೇಲೆ ದಂಡಯಾತ್ರೆ ಪ್ರಾರಂಭಿಸಿದ. [[ಹಿಂದೂಕುಷ್]] ಪರ್ವತವನ್ನು ದಾಟಿ, ಕಾಬೂಲಿಗೆ ಬಂದ. ತಕ್ಕ ಸೈನ್ಯ ವ್ಯವಸ್ಥೆಯನ್ನು ಮಾಡಿ, ಕಾಬೂಲಿನಿಂದ ಖೈಬರ್ ಕಣಿವೆಗೆ ಬಂದು, ವಾಯವ್ಯದಲ್ಲಿ ಗುಡ್ಡಗಾಡಿನ ಜನರ ಮೇಲೆ ನುಗ್ಗಿದ. [[ಸಿಂಧೂನದಿ]]ಯನ್ನು ದಾಟಿದಾಗ ಸಮರ್ಥನಾದ ಪುರೂರವಸ್‍ನ ಮೇಲೆ ಯುದ್ಧ ಮಾಡಬೇಕಾಯಿತು. ಜೀಲಂ ನದಿಯ ತೀರದಲ್ಲಿ ಪುರೂರವಸ್ ಪ್ರಬಲವಾದ ಸೈನ್ಯವನ್ನೂ ಆನೆಗಳನ್ನೂ ಸಿದ್ಧಪಡಿಸಿದ್ದ. ಅಲೆಕ್ಸಾಂಡರನ ಕುದುರೆಗಳು ಆನೆಗಳನ್ನು ನೋಡಿ ಬೆದರಿದವು. ಹಿಂದೂಸ್ಥಾನವನ್ನು ಜಯಿಸುವುದು ಕಷ್ಟವೆಂದು ಮನದಟ್ಟಾಯಿತು. ಸೈನಿಕರಿಗೆ ಆನೆಗಳ ಹೊಡೆತವನ್ನು ತಪ್ಪಿಸಿಕೊಳ್ಳುವುದೇ ಬಹಳ ಕಷ್ಟವಾಯಿತು. ಚತುರನಾದ ಅಲೆಕ್ಸಾಂಡರ್ ಪಕ್ಕದಿಂದ ಆನೆಗಳ ಮೇಲೆ ದಾಳಿ ಮಾಡಿ ಅವುಗಳನ್ನು ಗಾಬರಿ ಪಡಿಸಿದ. ಇದರಿಂದ ಅವು ಚೆಲ್ಲಾಪಿಲ್ಲಿಯಾಗಿ ಓಡಿಹೋದವು. ಪುರೂರವಸ್ ಶತ್ರುಗಳ ವಶನಾದ. ತನ್ನನ್ನು ರಾಜನನ್ನಾಗಿ ಕಾಣು ಎಂದು ಪುರೂರವಸ್ ಕೇಳಿಕೊಂಡ. ಆತ ತೋರಿಸಿದ ಧೈರ್ಯ ಸಾಹಸಗಳನ್ನು ಕಂಡು ಮೆಚ್ಚಿ ಅಲೆಕ್ಸಾಂಡರ್ ಅವನ ದೇಶವನ್ನು ಮತ್ತೆ ಅವನಿಗೇ ಕೊಟ್ಟ. ಅನಂತರ ಪೂರ್ವಾಭಿಮುಖವಾಗಿ ನಂದರ ರಾಜ್ಯವನ್ನು ಗೆಲ್ಲಬೇಕೆಂದು ಹೊರಟ. ಆದರೆ ಸಟ್ಲೆಜ್ ನದಿಯ ತೀರದಲ್ಲಿ ಅವನ ಸೈನಿಕರು ಮುಂದಕ್ಕೆ ಹೋಗಲು ಅವಕಾಶ ಕೊಡದೆ ದಂಗೆಯೆದ್ದರು. ಅವರು ಜೈತ್ರಯಾತ್ರೆಗಳಿಂದ ದಣಿದಿದ್ದರು. ಅದರಲ್ಲೂ ನಂದರ ಸೈನ್ಯಶಕ್ತಿ ಅದ್ಭುತವಾದುದೆಂದು ತಿಳಿದಮೇಲೆ, ಏನು ಮಾಡಿದರೂ ಮಗಧ ರಾಜ್ಯದ ಮೇಲೆ ಯುದ್ಧ ಮಾಡುವುದಿಲ್ಲವೆಂದು ಸಂಕಲ್ಪಿಸಿ ಹಿಂದಕ್ಕೆ ಹೋಗಬೇಕೆಂದು ಹಟಮಾಡಿದರು. ಕೊನೆಗೆ ಅಲೆಕ್ಸಾಂಡರ್ ಅವರ ಕೋರಿಕೆಗೆ ಒಪ್ಪಬೇಕಾಯಿತು. ಸಿಂಧೂನದಿಯನ್ನು ದಾಟಿ ಪ್ರ.ಶ.ಪೂ. 325ರಲ್ಲಿ ಸೂಸ ಪಟ್ಟಣವನ್ನು ಸೇರಿದ. ಅಲ್ಲಿಂದ ಬ್ಯಾಬಿಲಾನ್ ನಗರಕ್ಕೆ ಹೋದಾಗ ಅಕಸ್ಮಾತ್ತಾಗಿ ಜ್ವರ ಬಂದು ಕೇವಲ 32ನೆಯ ವಯಸ್ಸಿನಲ್ಲಿ (ಪ್ರ.ಶ.ಪು. 323) ನಿಧನನಾದ.
[[File:MacedonEmpire.jpg|thumb|ಅಲೆಕ್ಸಾಂಡರನ ಸಾಮ್ರಾಜ್ಯ ಮತ್ತು ದಂಡಯಾತ್ರೆಯ ಹಾದಿ.]]
೫೩ ನೇ ಸಾಲು:
* {{Citation | url = http://www.sherlockian-sherlock.com/alexander-the-great-and-sherlock-holmes.php | title = Alexander the Great and Sherlock Holmes | publisher = Sherlockian Sherlock}}.
* [http://maps.google.com/maps/ms?msid=202977755949863934429.0004a72b6cf49b92e1ac9&msa=0&ll=34.957995,46.40625&spn=43.278305,71.455078 Google Map of the Wars of Alexander the Great]
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲೆಕ್ಸಾಂಡರ್|ಅಲೆಕ್ಸಾಂಡರ್}}
 
[[ವರ್ಗ:ಯುರೋಪ್‌ನ ಇತಿಹಾಸ]]
[[ವರ್ಗ:ಗ್ರೀಸ್]]
[[ವರ್ಗ:ಗ್ರೀಕ್ ಇತಿಹಾಸ]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
 
 
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಲೆಕ್ಸಾಂಡರ್|ಅಲೆಕ್ಸಾಂಡರ್}}
"https://kn.wikipedia.org/wiki/ಅಲೆಕ್ಸಾಂಡರ್" ಇಂದ ಪಡೆಯಲ್ಪಟ್ಟಿದೆ