ಅ.ನಾ.ಪ್ರಹ್ಲಾದರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಮುಂಬೈ → ಮುಂಬಯಿ (2) using AWB
೧೩ ನೇ ಸಾಲು:
ಪ್ರತಿನಿತ್ಯ `ವಿಜಯಕರ್ನಾಟಕ`, `ಕನ್ನಡಪ್ರಭ`, `ಸಂಯುಕ್ತಕರ್ನಾಟಕ` ಪತ್ರಿಕೆಗಳಲ್ಲಿ ಇವರು ನಿತ್ಯ ಪದಬಂಧ ರಚಿಸಿದ್ದಾರೆ. ಪ್ರತಿ ನಿತ್ಯ ಪದಬಂಧ ಪ್ರಕಟಿಸಲಾರಂಭಿಸಿದ ಹೆಗ್ಗಳಿಕೆ ವೈ.ಎನ್.ಕೆ ಸಾರಥ್ಯದ `ಕನ್ನಡಪ್ರಭ` ಪತ್ರಿಕೆಯದಾದರೆ, ಈ ಪತ್ರಿಕೆಗಾಗಿ ಮೊದಲು ಪದಬಂಧ ಬರಯಲಾರಂಭಿಸಿದವರು ಅ.ನಾ.ಪ್ರಹ್ಲಾದರಾವ್. `ಪ್ರಜಾವಾಣಿ` ಸಿನಿಮಾರಂಜನೆ ಪುರವಣಿಯಲ್ಲಿ ಸುಮಾರು 15 ವರ್ಷಗಳ ಕಾಲ ಪ್ರತಿ ಶುಕ್ರವಾರ ಇವರ ಸಿನಿಮಾ ಪದಬಂಧ ಪ್ರಕಟಗೊಂಡಿದೆ. `ಮಂಗಳ` ವಾರ ಪತ್ರಿಕೆಯಲ್ಲಿ ಕಳೆದ 25 ವರ್ಷಗಳಿಂದ ಪ್ರತಿವಾರ ಪದಬಂಧ ಹಾಗೂ ಪದಾನ್ವೇಷಣೆ ಕ್ವಿಜ್ ಪ್ರಕಟವಾಗುತ್ತಿವೆ. `ಬಾಲಮಂಗಳ` ಪಾಕ್ಷಿಕ ಪತ್ರಿಕೆಯಲ್ಲಿ ಕನ್ನಡ ಸುಳಿವುಗಳ ಮೂಲಕ ಇಂಗ್ಲಿಷ್ ಪದಗಳನ್ನು ತುಂಬಿಸುವ ವಿಶಿಷ್ಟ ಪದಬಂಧ ಹಾಗೂ ಸಾಮಾನ್ ಜ್ಞಾನ ಕ್ವಿಜ್ ಪ್ರಕಟಗೊಂಡಿದೆ. `ಪ್ರಿಯಾಂಕ` ಮಾಸ ಪತ್ರಿಕೆಗಾಗಿ ಸುಮಾರು 12 ವರ್ಷಗಳಿಂದ ಪದಬಂಧ ಸಿದ್ಧಪಡಿಸಿಕೊಡುತ್ತಿದ್ದಾರೆ. ರವಿ ಬೆಳಗೆರೆ ಸಂಪಾದಕತ್ವದಲ್ಲಿ ಪುನರಾರಂಭಗೊಂಡ `ಕರ್ಮವೀರ` ವಾರಪತ್ರಿಕೆಗಾಗಿ ಮೊದಲ ಸಂಚಿಕೆಯಿಂದ ಪದಸಂಪದ ಬರೆದುಕೊಟ್ಟ ಖ್ಯಾತಿಯೂ ಪ್ರಹ್ಲಾದ್ ಅವರದೆ. `ಕರ್ಮವೀರ` ಸಾಪ್ತಾಹಿಕಕ್ಕಾಗಿ ಚರ್ವಿತಚರ್ವಣ ಹಾಗೂ ಒಳಗುಟ್ಟು ಹೆಸರಿನ ವಿಶೇಷ ಫಜಲ್ ರಚಿಸಿದ್ದಾರೆ. ಕರ್ನಾಟಕ ಸರ್ಕಾರ ಪ್ರಕಟಿಸುತ್ತಿರುವ `ಕಂದಾಯ ವಾರ್ತೆ` ಮಾಸ ಪತ್ರಿಕೆಗಾಗಿ ಕಂದಾಯ ಇಲಾಖೆಗೆ ಪ್ರಸ್ತುತವೆನಿಸುವ ಪದಬಂಧ ರಚಿಸುತ್ತಿದ್ದಾರೆ. ಚಲನಚಿತ್ರ ಮಾಸಿಕ `ಚಿತ್ರ` ಪತ್ರಿಕೆಗಾಗಿ ಪದಬಂಧ ಹಾಗೂ ಸಿನಿಮಾ ಕ್ವಿಜ್ ಬರೆದುಕೊಡುತ್ತಿದ್ದಾರೆ. `ಈಸಂಜೆ` ಪತ್ರಿಕೆಗಾಗಿ ಪ್ರತಿವಾರ ಚಲನಚಿತ್ರ ಪದಬಂಧಗಳನ್ನು ರಚಿಸಿದ್ದಾರೆ. ಕನ್ನಡದ ಏಕಮೇವ ಸಿನಿಮಾ ಸಾಪ್ತಾಹಿಕ `ಅರಗಿಣಿ` ಮೊದಲ ಸಂಚಿಕೆಯಿಂದ ಇವರ ಗಿಣಿಬಂಧ ಪ್ರಕಟಿಸುತ್ತಾ ಬಂದಿದೆ.
`ಸಿಲ್ಲಿಲಲ್ಲಿ` ಹಾಗೂ `ಪಾಪಪಾಂಡು` ಧಾರಾವಾಹಿಗಳನ್ನು ಆಧರಿಸಿದ ಪದಬಂಧ ಪ್ರತಿ ಭಾನುವಾರ `ವಿಜಯಕರ್ನಾಟಕ` ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. `ಜನವಾಹಿನಿ` ದಿನ ಪತ್ರಿಕೆ ಪ್ರತಿ ಭಾನುವಾರ ಇವರ ಪದವಾಹಿನಿ ಪ್ರಕಟಿಸಿದೆ. ಸಂಯುಕ್ತಕರ್ನಾಟಕ ಪ್ರತಿ ಭಾನುವಾರ ಇವರ ಪೋಣಿಸುಪದವ ಬಂಧವನ್ನು 15 ವರ್ಷಗಳ ಕಾಲ ಪ್ರಕಟಿಸಿದೆ. `ಮಂಗಳ` ವಾರಪತ್ರಿಕೆಗಾಗಿ ಒಂದು ವರ್ಷ ಕಾಲ ಕನ್ನಡದ ಖ್ಯಾತ ಬರಹಗಾರರ ಕಾದಂಬರಿಗಳನ್ನು ಆಧರಿಸಿ ಸಾಹಿತ್ಯ ಪದಬಂಧ ರಚಿಸಿದ್ದಾರೆ. ಹಂಪೆಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸುತ್ತಿದ್ದ ಜನಪ್ರಿಯ ವಿಜ್ಞಾನ ಪತ್ರಿಕೆ `ವಿಜ್ಞಾನಸಂಗಾತಿ`ಗಾಗಿ ಮೂರು ವರ್ಷ ಕಾಲ ವಿಜ್ಞಾನ ಪದಬಂಧ ಹಾಗೂ ವಿಜ್ಞಾನಕ್ಕೆ ಸಬಂಧಿಸಿದಂತೆ ಕ್ವಿಜ್ ಸಿದ್ಧಪಡಿಸಿಕೊಟ್ಟಿದ್ದಾರೆ. ಸಕಾಂರದ ಪ್ರಕಟಣೆಗಳಾದ `ಜನಪದ`, `ಯುವಕರ್ನಾಟಕ`, `ಮಾರ್ಚ್ಆಫ್ ಕರ್ನಾಟಕ` ಪತ್ರಿಕೆಗಳಿಗೂ ಇವರು ಪದಬಂಧ ರಚಿಸಿದ್ದಾರೆ. `ಸಂಚು`, `ಪಲೀಸ್ಫೈಲ್`, `ಪೊಲೀಸ್ ನ್ಯೂಸ್` ಪತ್ರಿಕೆಗಳಿಗಾಗಿ ಅಪರಾಧ ಪದಬಂಧಗಳನ್ನು ರಚಿಸಿದ್ದಾರೆ. `ಹೋಟೆಲ್ಪತ್ರಿಕೆ`ಗಾಗಿ ತಿಂಡಿ ತಿನಿಸು ಪದಬಂಧ ಇವರಿಂದ ಸಿದ್ದಗೊಂಡಿದೆ. ಮುಂಬೈನಿಂದಮುಂಬಯಿನಿಂದ ಪ್ರಕಟಗೊಳ್ಳುತ್ತಿದ್ದ `ಉದಯರಾಗ` ಹಾಗೂ ನವದೆಹಲಿಯಿಂದ ಪ್ರಕಟಗೊಳ್ಳುತ್ತಿರುವ `ದೆಹಲಿ ವಾರ್ತೆ` ದಿನ ಪತ್ರಿಕೆಗಳಿಗಾಗಿ ನಿತ್ಯ ಪದಬಂಧ ರಚಿಸಿದ್ದಾರೆ. ಮದರಾಸಿನಿಂದ ಪ್ರಕಟಗೊಳ್ಳುತ್ತಿದ್ದ ಚಂದಮಾಮ ಅವರ ಜನಪ್ರಿಯ ಮಾಸಿಕಗಳಾದ `ವಿಜಯಚಿತ್ರ` ಹಾಗು `ವನಿತಾ` ಪತ್ರಿಕೆಗಳಿಗಾಗಿ ಹಲವಾರು ವರ್ಷ ಪದಬಂಧಗಳನ್ನು ರಚಿಸಿದ್ದಾರೆ. ಕನ್ನಡದ ಮೊದಲ ಕನ್ನಡ ಸುದ್ದಿಜಾಲ `ಕರ್ನಾಟಕ ನ್ಯೂಸ್ ನೆಟ್`ಗಾಗಿ ಇವರು ಸಿದ್ದಪಡಿಸಿಕೊಡುತ್ತಿದ್ದ ಪದಬಂಧ ರಾಜ್ಯದ ಹಲವಾರು ಜಿಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅಭಿಮಾನಿ ಪ್ರಕಾಶನ ಹೊರ ತರುತ್ತಿದ್ದ `ಅಭಿಮಾನಿ`, `ಅಭಿಮಾನ` ದಿನ ಪತ್ರಿಕೆ, `ತಾಯಿ`, `ಕ್ರೀಡಾಭಿಮಾನಿ` ಪತ್ರಿಕೆಗಳಿಗೆ ಹಲವು ವರ್ಷ ಕಾಲ ಪದಬಂಧಗಳನ್ನು ಬರೆದುಕೊಟ್ಟಿದ್ದಾರೆ. ಕನ್ನಡದ ಮೊದಲ ಪದಬಂಧಗಳಿಗೇ ಮೀಸಲಾಗಿ ಹೊರ ಬಂದ `ಶೃತಿ` ಪತ್ರಿಕೆಗಾಗಿ ಹಲವು ತಿಂಗಳು ಪ್ರತಿ ಬಾರಿಗೆ 50ರ0ತೆ ಪದಬಂಧಗಳನ್ನು ರಚಿಸಿದ್ದಾರೆ. ಚಲನಚಿತ್ರ ಪತ್ರಿಕೆಗಳಾದ `ರಂಗವಲ್ಲಿ`, `ಸ್ಟಾರ್`, `ಸಿನಿಮಾ ಮಕರಂದ` ಪತ್ರಿಕೆಗಳಿಗಾಗಿ ಚಲನಚಿತ್ರ ಪದಬಂಧಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿ ಪ್ರಯೋಗಗೊಂಡ ಹಲವು ಪತ್ರಿಕೆಗಳ ಮೊದಲ ಸಂಚಿಕೆಗಳಲ್ಲ್ಲೇ ಇವರ ಪದಬಂಧ ಅಂಕಣ ಇತ್ತೆಂಬುದು ಗಮನಾರ್ಹ.
ಪದಬಂಧಗಳಷ್ಟೇ ಅಲ್ಲದೇ ಚಲನಚಿತ್ರ ಲೇಖನಗಳನ್ನು ಬರೆದಿದ್ದಾರೆ. `ಅರಗಿಣಿ` ಪತ್ರಿಕೆಗಾಗಿ ಸ್ಮರಣೀಯ ಚಿತ್ರಗಳು, ಕರ್ಮವೀರಕ್ಕಾಗಿ ಗತವೈಭವ, ಮಂಗಳ ಪತ್ರಿಕೆಗಾಗಿ ಚಲನಚಿತ್ರ ಇತಿಹಾಸ ಲೇಖನ ಮಾಲೆ ಹಲವಾರು ವರ್ಷ ಕಾಲ ನಿರಂತರವಾಗಿ ಪ್ರಕಟಗೊಂಡಿದೆ. ಕರ್ನಾಟಕ ವಿಶ್ವವಿದ್ಯಾಲಯ ಹೊರ ತಂದಿರುವ ಕಿರಿಯರ ಕರ್ನಾಟಕ ಹಾಗೂ ಚಲನಚಿತ್ರ ಇತಿಹಾಸ ಗ್ರಂಥಗಳಿಗೆ ಮತ್ತು ಉದಯಬಾನು ಕಲಾಸಂಘ ಹೊರ ತಂದಿರುವ ಬೃಹತ್ ಕೃತಿ ಬೆಂಗಳೂರುದರ್ಶನಕ್ಕಾಗಿ ಮಾಹಿತಿ ಲೇಖನಗಳನ್ನು ಬರೆದಿದ್ದಾರೆ. ಮಂಗಳ, ಬಾಲಮಂಗಳ, ಕರ್ಮವೀರ, ಅರಗಿಣಿ, ಸ್ಟಾರ್, ಸಂಯುಕ್ತಕರ್ನಾಟಕ, ಸಿನಿಮಾಮಕರಂದ, ಬೆಳ್ಳಿತೆರೆ ವಿಡಿಯೋ ಮ್ಯಾಗ್ಜೆನ್ಗಾಗಿ ಕ್ವಿಜ್ ರಚಿಸಿದ್ದಾರೆ. ವಾರ್ತ ಇಲಾಖೆ ಸಾದರ ಪಡಿಸುತ್ತಿದ್ದ ಕರ್ನಾಟಕ ವಾರ್ತಾಚಿತ್ರ, ಅವಲೋಕನಕ್ಕಾಗಿ ನಿರೂಪಣಾ ಸಾಹಿತ್ಯ ರಚಿಸಿದ್ದಾರೆ. ಸರ್ಕಾರ ಪ್ರಕಟಿಸುತ್ತಿರುವ ಜನಪದ, ಕರ್ನಾಟಕವಿಕಾಸ, ಸಹಕಾರ ಪತ್ರಿಕೆಗಳಿಗಾಗಿ ಅಭಿವೃದ್ದಿ ಲೇಖನಗಳನ್ನು ಬರೆದಿದ್ದಾರೆ. 1996ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳ ಸಂದರ್ಭದಲ್ಲಿ ಹೊರತಂದ `ನಂದೂಸ್ಪೀಕ್ಸ್` ಪತ್ರಿಕೆ ಒಂದು ತಿಂಗಳ ಕಾಲ ಪ್ರಕಟಗೊಳ್ಳಲು ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಹಲವಾರು ಲೇಖನಗಳು, ಕಥೆ, ಕವನಗಳು ಮಲ್ಲಿಗೆ, ವಾರಪತ್ರಿಕೆ, ತರಂಗ, [[ರೂಪತಾರ]], [[ಸುಧಾ]], ಚಿತ್ರ, ಪ್ರಿಯಾಂಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕವಿ ದೊಡ್ಡರಂಗೇಗೌಡರ ಅಭಿನಂದನ ಗ್ರಂಥ `ಜಾನಪದಜಂಗಮ`ಕ್ಕಾಗಿ ಜಾನಪದ ಸೊಗಡಿನ ಜೋಪಾನಕಾರ ಲೇಖನ ಬರೆದಿದ್ದಾರೆ.ಡಿ.ಎಸ್.ವೀರಯ್ಯನವರ ಅಭಿನಂದನ ಗ್ರಂಥ ಹೋರಾಟದ ಹೆಜ್ಜೆಗಳು ಕೃತಿಗಾಗಿ `ಕನ್ನಡ ಚಲನಚಿತ್ರ: ದಲಿತ ಸಂವೇದನೆ` ಲೇಖನ ರಚಿಸಿದ್ದಾರೆ. ಕರ್ನಾಟಕ ಸರ್ಕಾರ ಪ್ರಕಟಿಸಿರುವ ಕೋಲಾರ ಜಿಲ್ಲೆ ಗೆಜೆಟಿಯರ್‍ನಲ್ಲಿ ಮೂರು ಕಡೆ ಇವರ ಹೆಸರು ಉಲ್ಲೇಖಗೊಂಡಿದೆ. ಕರ್ನಾಟಕ ಗೆಜೆಟಿಯರ್ನಲ್ಲಿ ಇವರ ಹೆಸರನ್ನು ಉಲ್ಲೇಖಿಸಲಾಗಿದೆ. ಸಿ.ಎಸ್.ನಂಜುಂಡಯ್ಯ ಅವರ `ಅಮ್ಮ ಪಂಡರಿಬಾಯಿ` ಹಾಗೂ `ಅಭಿನಯ ಸವ್ಯಸಾಚಿ ಹೆಚ್.ಎಲ್.ಎನ್.ಸಿಂಹ ಕೃತಿಗಳಲ್ಲಿ ಇವರ ಹೆಸರನ್ನು ಉಲ್ಲ್ಲೇಖಿಸಲಾಗಿದೆ. ಕವಿ [[ಕೆ.ಎಸ್.ನಿಸಾರ್ ಅಹಮದ್]] ಅವರ ಅಭಿನಂದನಗ್ರಂಥ `ನಿಸಾರ್ ನಿಮಗಿದೋ ನಮನ` ಹೆಬ್ಬೊತ್ತಿಗೆಯಲ್ಲಿ ಡಾ.ರಾಜಕುಮಾರ್ ಹಾಗೂ ನಿಸಾರ್ ಕುರಿತ ಲೇಖನ ಬರೆದಿದ್ದಾರೆ. ಚಿಂತಾಮಣಿಯ ವೆ.ಎಸ್.ಗುಂಡಪ್ಪನವರ ಸ್ಮರಣಸಂಚಿಕೆ ಸೇರಿದಂತೆ ಹಲವಾರು ಸ್ಮರಣಸಂಚಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.
ಅ.ನಾ.ಪ್ರಹ್ಲಾದರಾವ್ ಅವರ ಪದಬಂಧ ಪ್ರಕಟಗೊಳ್ಳುತ್ತಿರುವ ಪತ್ರಿಕೆಗಳು: ವಿಜಯ ಕರ್ನಾಟಕ (ಪ್ರತಿನಿತ್ಯ), ಸಂಯುಕ್ತ ಕರ್ನಾಟಕ (ಪ್ರತಿ ನಿತ್ಯ), ಮಂಗಳ (ಪ್ರತಿವಾರ), ಅರಗಿಣಿ (ಚಲನಚಿತ್ರ), ಪ್ರಿಯಾಂಕ (ಮಾಸಿಕ), ಚಿತ್ರ (ಚಲನಚಿತ್ರ ಮಾಸಿಕ). ಆನ್‍ಲೈನ್ ಮೂಲಕ `ಇಂಡಿಕ್ರಾಸ್` ಜಾಲದಲ್ಲಿ ಪ್ರತಿನಿತ್ಯ ಅ.ನಾ.ಪ್ರಹ್ಲಾದರಾವ್ ಅವರ ಪದಬಂದಗಳು ಪ್ರಕಟಗೊಳ್ಳುತ್ತಿದ್ದು, ವಿಶ್ವದಾದ್ಯಂತ ಕನ್ನಡಿಗರು ನಿತ್ಯ ಪದಬಂಧ ತುಂಬಿಸುವಲ್ಲಿ ಸಹಕಾರಿಯಾಗಿದೆ.
ಅ.ನಾ.ಪ್ರಹ್ಲಾದರಾವ್ ಅವರ ಪದಬಂಧ ಪ್ರಕಟಗೊಂಡ ಪತ್ರಿಕೆಗಳು: ಕನ್ನಡಪ್ರಭ (ಪ್ರತಿನಿತ್ಯ), ಈಸಂಜೆ (ಪ್ರತಿನಿತ್ಯ), ಪ್ರಜಾವಾಣಿ (ಚಲನಚಿತ್ರ-ಪ್ರತಿವಾರ), ಬಾಲಮಂಗಳ (ಪಾಕ್ಷಿಕ), ದೆಹಲಿವಾರ್ತೆ (ನವದೆಹಲಿ-ಪ್ರತಿನಿತ್ಯ), ಉದಯರಾಗ (ಮುಂಬೈಮುಂಬಯಿ-ಪ್ರತಿನಿತ್ಯ), ರಂಗವಲ್ಲಿ (ವಾಪ), ಚೆಲುವೆ (ವಾರ ಪತ್ರಿಕೆÀ), ಹೋಟೆಲ್ ಪತ್ರಿಕೆ (ಪಾಕ್ಷಿಕ ತಿಂಡಿ ತಿನಿಸು), ರಾಜಕೀಯಸುದ್ದಿ (ವಾರ ಪತ್ರಿಕೆÀ), ಮಾರ್ಚ್ ಆಫ್ ಕರ್ನಾಟಕ (ಮಾಸಿಕ-ವಾರ್ತಾ ಇಲಾಖೆ), ಜನಪದ (ಮಾಸಿಕ-ವಾರ್ತಾಇಲಾಖೆ), ಯುವ ಕರ್ನಾಟಕ (ಮಾಸಿಕ-ಯುವಜನಸೇವಾ ಇಲಾಖೆ), ವಿಜ್ಞಾನ ಸಂಗಾತಿ (ಮಾಸಿಕ-ಕನ್ನಡ ವಿ.ವಿ, ಹಂಪೆ), ವಿಜಯಚಿತ್ರ (ಮಾಸಿಕ-ಚಲನಚಿತ್ರ, ಚಂದಮಾಮ ಪ್ರಕಟಣೆ), ವನಿತಾ (ಮಾಸಿಕ-ಚಂದಮಾಮ ಪ್ರಕಟಣೆ), ಪೆÇಲೀಸ್ ನ್ಯೂಸ್ (ವಾರ ಪತ್ರಿಕೆ-ಅಪರಾಧ), ಪೆÇಲಿಸ್ ಫೈಲ್ (ವಾರ ಪತ್ರಿಕೆ-ಅಪರಾಧ), ಸಂಚು (ಮಾಸಿಕ-ಅಪರಾಧ), ತಾಯಿ (ಮಾಸಿಕ-ಗೃಹ), ಕ್ರಿಡಾಭಿಮಾನಿ (ಮಾಸಿಕ-ಕ್ರೀಡೆ), ಅಭಿಮಾನಿ-(ವಾರ ಪತ್ರಿಕೆ), ಅಭಿಮಾನ (ಪ್ರತಿನಿತ್ಯ), ತರಂಗ (ಮಕ್ಕಳಿಗಾಗಿ), ಕನ್ನಡಮ್ಮ (ವಾರಕ್ಕೊಮ್ಮೆ), ಕೆ.ಎನ್.ಎನ್ ನ್ಯೂಸ್‍ನೆಟ್ ಮೂಲಕ ಹಲವಾರು ಜಿಲ್ಲಾಪತ್ರಿಕೆಗಳು, ಶೃತಿ (ಪದಬಂಧ ಮಾಸಿಕ), ಜನವಾಹಿನಿ (ಪ್ರತಿ ವಾರ), ಕರ್ಮವೀರ (ವಾರ ಪತ್ರಿಕೆÀ), ಈಸಂಜೆ (ಪ್ರತಿ ವಾರ-ಸಿನಿಮಾ), ಕಂದಾಯ ವಾರ್ತೆ (ಕಂದಾಯ ಇಲಾಖೆ ಮಾಸಿಕ), ಸಂಯುಕ್ತ ಕರ್ನಾಟಕ (ಪ್ರತಿ ವಾರ), ಕೃಷ್ಣವೇದಾಂತ ದರ್ಶನ (ಮಾಸಿಕ-ಇಸ್ಕಾನ್), ಇಂಡಿಕ್ರಾಸ್ ಆನ್‍ಲೈನ್ ಪದಬಂಧಗಳು ಮತ್ತು ಒಂಬತ್ತು ಪದಬಂಧ ಪುಸ್ತಕಗಳು.
===ಕೃತಿಗಳು===
2005ರ ಜುಲೆನಲ್ಲಿ ಡಾ.ರಾಜಕುಮಾರ್ ಅಭಿನಯದ ಐವತ್ತು ವರ್ಷಗಳ ಚಿನ್ನದ ಹಬ್ಬದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಬೆಂಗಳೂರಿನಲಿ ಏರ್ಪಡಿಸಿದ್ದ `ಸಾರ್ಥಕಸುವರ್ಣ` ಸಮಾರಂಭದಲ್ಲಿ ಡಾ.ರಾಜಕುಮಾರ್ ಜೀವನ ಸಾಧನೆ ಕುರಿತು ಇವರು ಬರೆದ `ಬಂಗಾರದಮನುಷ್ಯ` ಕೃತಿ ಬಿಡುಗಡೆ ಆಯಿತು. ಈ ಕೃತಿ ಅಮೆರಿಕಾದ ವಾಷಿಂಗ್ಟನ್ ಡಿಸಿ ನಗರದಲ್ಲಿ ನಡೆದ ಅಕ್ಕ ಸಮ್ಮೇಳನ, ಕುವೈತ್ ಕನ್ನಡ ಸಂಘ, ಲಂಡನ್ ಕನ್ನಡ ಸಂಘ ಹಾಗೂ ನ್ಯೂಜರ್ಸಿ ಕನ್ನಡ ಸಂಘಗಳಲ್ಲಿ ಬಿಡುಗಡೆಗೊಂಡಿದೆ. ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ 115 ಮಂದಿ ಮಹಾನುಭಾವರ ಪರಿಚಯ ಲೇಖನಗಳನ್ನೊಳಗೊಂಡ `ಬೆಳ್ಳಿತೆರೆ ಬೆಳಗಿದವರು` ಕೃತಿ 2007ರ ಮೇ ತಿಂಗಳಿನಲ್ಲಿ ಲೋಕಾರ್ಪಣೆಗೊಂಡಿತು. ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಇವರು ರಚಿಸಿದ ಪದಬಂಧಗಳ 5 ಪುಸ್ತಕಗಳು 2008ರಲ್ಲಿ ಬಿಡುಗಡೆಗೊಂಡಿತು. 2008ರ ಮೆ ತಿಂಗಳಿನಲ್ಲಿ `ಬಂಗಾರದಮನುಷ್ಯ` ಕೃತಿಯ ಇಂಗ್ಲಿಷ್ ಭಾಷಾಂತರ 'ದಿ ಇನ್ಮಿಟಬಲ್ ಆಕ್ಟರ್ ವಿತ್ ಗೋಲ್ಡನ್ ವಾಯ್ಸ್' ಅಮೆರಿಕದ ನ್ಯೂಜರ್ಸಿ ಕನ್ನಡ ಸಂಘ `ಬೃಂದಾವನ` ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅ.ನಾ.ಪ್ರಹ್ಲಾದರಾವ್ ಮತ್ತು ಅವರ ಪತ್ನಿ ಶ್ರೀಮತಿ ಎಂ.ಬಿ.ಮಲ್ಲಿಕಾ ಪಾಲ್ಗೊಂಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ವಜ್ರಮಹೋತ್ಸವ ಅಂಗವಾಗಿ ಡಾ.ಬರಗೂರು ರಾಮಚಂದ್ರಪ್ಪ ಻ವರ ಸಂಪಾದಕತ್ವದಲ್ಲಿ ಹೊರ ತಂದ 75 ಪುಸ್ತಕಗಳಲ್ಲಿ ಡಾ.ರಾಜಕುಮಾರ್ ಹಾಗೂ ಕರಿಬಸಯ್ಯನವರ ಬಗ್ಗೆ 2 ಪುಸ್ತಕಗಳನ್ನು ರಚಿಸಿದ್ದಾರೆ. ಅ.ನಾ.ಪ್ರಹ್ಲಾದರಾವ್ ರಚಿಸಿದ ಭಾವಗೀತೆಗಳ ಸಾಂದ್ರಿಕೆ ವಸಂತ ಮಲ್ಲಿಕಾ 2009ರಲ್ಲಿ ಬಿಡುಗಡೆಗೊಂಡಿತು. ಪುತ್ತೂರು ನರಸಿಂಹ ನಾಯಕ್ ಸಂಗೀತ ನೀಡಿರುವ ಈ ಗೀತೆಗಳನ್ನು ಅಮೆರಿಕದಲ್ಲಿ ನೆಲೆಸಿರುವ ಗಾಯಕಿ ಶ್ರೀಮತಿ ವಸಂತ ಶಶಿ ಹಾಡಿದ್ದಾರೆ. 2008ರ ಮೆ ತಿಂಗಳಿನಲ್ಲಿ ಇವರು ರಚಿಸಿದ ಬಂಗಾರದಮನುಷ್ಯ ಕೃತಿಯ ಇಂಗ್ಲಿಷ್ ಭಾಷಾಂತರ 'ದಿ ಇನ್ಮಿಟಬಲ್ ಆಕ್ಟರ್ ವಿತ್ ಗೋಲ್ಡನ್ ವಾಯ್ಸ್' ಅಮೆರಿಕದ ನ್ಯೂಜರ್ಸಿ ನಗರದಲ್ಲಿ ಬಿಡುಗಡೆಗೊಂಡ ಸಂದರ್ಭದಲ್ಲಿ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಿಂಗಪುರ, ಮಲೇಷಿಯಾ, ಫಿಲಿಫೈನ್ಸ್ ದೇಶಗಳಲ್ಲಿ ಅಧ್ಯಯನ ಪ್ರವಾಸ ಮಾಡಿದ್ದಾರೆ.
೩೫ ನೇ ಸಾಲು:
ಬೆಂಗಳೂರು, ಮಂಡ್ಯ ಹಾಗೂ ಕೋಲಾರದಲ್ಲಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ `ಪ್ರಜಾರತ್ನ`, `ಪದಬಂಧಬ್ರಹ್ಮ`, `ಪದಬಂಧಸಾಮ್ರಾಟ್` ಮುಂತಾದ ಬಿರುದುಗಳನ್ನು ನೀಡಿವೆ. `ವಿಶ್ವೇಶ್ವರಯ್ಯಪ್ರಶಸ್ತಿ`, `ಕರುನಾಭೂಷಣ` `ಕರ್ನಾಟಕ ವಿಭೂಷಣ` ಮಂಡ್ಯ ಕರ್ನಾಟಕ ಸಂಘ ಪ್ರಶಸ್ತಿಗಳೇ ಅಲ್ಲದೆ ಪ್ರತಿಷ್ಠಿತ `ಆರ್ಯಭಟ`, ಬೆಂಗಳೂರು ಮಹಾನಗರಪಾಲಿಕೆ ಕೊಡಮಾಡುವ `ಕೆಂಪೇಗೌಡ ಪ್ರಶಸ್ತಿ` `ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಸದ್ಬಾವನ ಪ್ರಶಸ್ತಿ, `ಶ್ರೀಕಾಣ್ವಶ್ರೀ`, `ಶಿಂಷಾಶ್ರೀ` `ಬೆಂಗಳೂರು ರತ್ನ`, `ಹಂಸರತ್ನ` ಮುಂತಾದ ಪ್ರಶಸ್ತಿಗಳು ಸಂದಿವೆ.
*'''ಅನಾಪ್ರ ಅರವತ್ತು''': ವಿಶ್ವ ಇಂದು `ಪದಬಂಧ ಶತಮಾನೊತ್ಸವ` ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಕನ್ನಡದ ಪದಬಂಧ ರಚನೆಕಾರ ಅ.ನಾ.ಪ್ರಹ್ಲಾದರಾವ್ 60 ವಸಂತಗಳನ್ನು ದಾಟಿ ಮುನ್ನಡಿ ಇಟ್ಟಿದ್ದಾರೆ. ಕನ್ನಡ ಪತ್ರಿಕೆಗಳಿಗೆ ಕಳೆದ 30 ವರ್ಷಗಳಿಂದ ಪದಬಂಧ ಸಿದ್ಧಪಡಿಸುತ್ತಾ ಬಂದಿರುವ ಅ.ನಾ.ಪ್ರಹ್ಲಾದರಾವ್ ಇಲ್ಲಿಯವರೆವಿಗೂ 40,000 ಪದಬಂಧಗಳನ್ನು ರಚಿಸಿದ್ದು, ಇವುಗಳಿಗಾಗಿ ಸುಮಾರು 12 ಲಕ್ಷ ಸುಳುಹುಗಳನ್ನು ನೀಡಿದ್ದ್ದಾರೆ. ಈ ಸಂಬಂಧ 2013ರ ಅಕ್ಟೋಬರ್ 7 ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಡೀ ದಿನದ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಪದಬಂಧ ಕಮ್ಮಟ, ಸಂಜೆ ಅನಾಪ್ರ ರಚಿಸಿದ ಗೀತೆಗಳ ಗಾಯನ, ಅ.ನಾ.ಪ್ರಹ್ಲಾದರಾವ್ ಅವರ ನಾಲ್ಕು ಪುಸ್ತಕಗಳ ಲೋಕಾರ್ಪಣೆ, ಸಂಭಾವನಾಗ್ರಂಥ ಬಿಡುಗಡೆ ಹಾಗೂ ಅಭಿನಂದನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಪಂಚದಲ್ಲಿ ಮೊದಲ `ಪದಬಂಧ ಶತಮಾನೋತ್ಸವ` ಆಚರಿಸುತ್ತಿರುವ ಹೆಗ್ಗಳಿಕೆ ಕನ್ನಡಿಗರದು. ಕವಿ, ವಿಧಾನ ಪರಿಷತ್ ಸದಸ್ಯರಾದ ಪ್ರೊ.ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ನಿವೃತ್ತ ಐ.ಎ.ಎಸ್ ಅಧಿಕಾರಿ ಕೆ.ಜೈರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಚಲನಚಿತ್ರ ನಿರ್ದೇಶಕ ನಾಗಣ್ಣ, ಚಲನಚಿತ್ರ ಸಾಹಿತಿಗಳಾದ ವಿ.ಮನೋಹರ್ ಮುಖ್ಯ ಅತಿಥಿಗಳಾಗಿದ್ದರು. ಸಂಜೆ 5 ಗಂಟೆಗೆ ಅನಾಪ್ರ ವಿರಚಿತ ಗೀತೆಗಳನ್ನು ಎಲ್.ಎನ್.ಶಾಸ್ತ್ರಿ, ಚಂದ್ರಿಕಾ ಗುರುರಾಜ್, ಆಕಾಂಕ್ಷ ಬಾದಾಮಿ, ಹೇಮಾಪ್ರಸಾದ್, ಅನುಪಮಾರಾವ್, ರಮ್ಯ ಹಾಡಿದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ `ಅನಾಪ್ರ ಅರವತ್ತು` ಸಂಭಾವನಾಗ್ರಂಥ `ಪದಬಂಧು` ಬಿಡುಗಡೆ ಮಾಡಿದರು. ಲೋಕಸಭಾ ಸದಸ್ಯರಾದ ಅನಂತಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಪ್ರೊ.ಎಂ.ಎಚ್.ಕೃಷ್ಣಯ್ಯ ಅಭಿನಂದನಾ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅ.ನಾ.ಪ್ರಹ್ಲಾದರಾವ್ ಅವರ ನಾಲ್ಕು ಪುಸ್ತಕಗಳು ಬಿಡುಗಡೆಗೊಂಡವು. `ಪದಕ್ರೀಡೆ` `ಪದಲೋಕ` `ಪ್ರಾಣಪದಕ` ಮತ್ತು `ನನ್ನ ದಾರಿ ವಿಭಿನ್ನ ದಾರಿ-ರಜನಿಕಾಂತ್` ಪುಸ್ತಕಗಳನ್ನು ಚಲನಚಿತ್ರ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ವಿಜಯಕುಮಾರ್, ನಿರ್ಮಾಪಕ-ನಟ ಎಸ್.ಶಿವರಾಂ ಮತ್ತು ಚಲನಚಿತ್ರ ನಿರ್ದೇಶಕ ನಾಗಾಭರಣ ಲೋಕಾರ್ಪಣೆ ಮಾಡಿದರು.
* ಕನ್ನಡದಲ್ಲಿ ೩೦ ಸಾವಿರ ಪದಬಂಧ ರಚಿಸಿ ದಾಖಲೆ ಮಾಡಿರುವ ಅ.ನ.ಪ್ರಹ್ಲಾದ್‌ರಾವ್‌ ಅವರ ಹೆಸರನ್ನು ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ಗೆ ಸೇರಿಸಲಾಗಿದೆ. ಈವರೆಗೆ ಅತಿಹೆಚ್ಚು ಪದಬಂಧ ರಚಿಸಿರುವ ಹಿನ್ನೆಲೆಯಲ್ಲಿ ಅ.ನ.ಪ್ರಹ್ಲಾದ್‌ರಾವ್‌ ಅವರಿಗೆ ಈ ಗೌರವ ಸಂದಿದೆ. <ref>[http://www.udayavani.com/kannada/news/23685/%E0%B2%B2%E0%B2%BF%E0%B2%AE%E0%B3%8D%E0%B2%95%E0%B2%BE-%E0%B2%AC%E0%B3%81%E0%B2%95%E0%B3%8D%E2%80%8C-%E0%B2%86%E0%B2%AB%E0%B3%8D-%E0%B2%B0%E0%B3%86%E0%B2%95%E0%B2%BE%E0%B2%B0%E0%B3%8D%E0%B2%A1%E0%B3%8D%E2%80%8C%E0%B2%97%E0%B3%86-%E0%B2%AA%E0%B3%8D%E0%B2%B0%E0%B2%B9%E0%B3%8D%E0%B2%B2%E0%B2%BE%E0%B2%A6%E0%B2%B0%E0%B2%BE%E0%B2%B5%E0%B3%8D%E2%80%8C#rGqGE1BA0zsv0I1l.99 ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ಗೆ ಪ್ರಹ್ಲಾದರಾವ್‌ - ಉದಯವಾಣಿ,೨೩ಜನವರಿ೨೦೧೫]</ref> ಮತ್ತು <[(http://www.limcabookofrecords.in/record-detail.aspx?rid=1027]>
==ಹೊರಸಂಪರ್ಕಗಳು==
*http://www.thehindubusinessline.com/2001/05/14/stories/101444g3.htm
೪೭ ನೇ ಸಾಲು:
*http://www.silobreaker.com/DocumentClusterReader.aspx?Item=16_852455189
*http://beta.hindustantimes.com/Redir.aspx?ID=3dab8699-c964-40f0-af59-
 
[[ವರ್ಗ:೧೯೫೩ ಜನನ]]
"https://kn.wikipedia.org/wiki/ಅ.ನಾ.ಪ್ರಹ್ಲಾದರಾವ್" ಇಂದ ಪಡೆಯಲ್ಪಟ್ಟಿದೆ