ಅಂಚೆ ವ್ಯವಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು clean up, replaced: ಮುಂಬೈ → ಮುಂಬಯಿ (2) using AWB
೧ ನೇ ಸಾಲು:
[[File:Pillarboxes.jpg|thumb|right|[[Pillar boxes]] on the island of [[Madeira]], [[Portugal]]. (1st class mail in blue and 2nd class in red)]]
ಪ್ರಪಂಚದ ವಿವಿಧ ಭಾಗಗಳ ಜನರೂ ಸಂಸ್ಥೆಗಳೂ ಸರ್ಕಾರಗಳೂ ಪರಸ್ಪರವಾಗಿ ಸಂಪರ್ಕವನ್ನು ವೃದ್ಧಿಪಡಿಸಿಕೊಳ್ಳುವುದಕ್ಕೂ ವ್ಯವಹಾರಗಳನ್ನು ಬೆಳೆಸುವುದಕ್ಕೂ ನೆರವಾಗಿರುವ ಸಾಧನಗಳಲ್ಲಿ '''ಅಂಚೆ ವ್ಯವಸ್ಥೆ''' (ಪೋಸ್ಟಲ್ ಸಿಸ್ಕಮ್) ಮುಖ್ಯವಾದದ್ದು. ಅಂಚೆ ಇತಿಹಾಸ ಬಹಳ ಪುರಾತನ ವಾದದ್ದು. ಬಹು ಹಿಂದೆ ಪೂರ್ವದೇಶಗಳಲ್ಲಿ ಪ್ರವರ್ಧಮಾನ ಸ್ಥಿತಿಯಲ್ಲಿದ್ದ ಚಕ್ರಾಧಿಪತ್ಯಗಳ ಕಾಲದಲ್ಲಿಯೂ ಅಂಚೆ ವ್ಯವಸ್ಥೆಯಿದ್ದುದು ತಿಳಿದು ಬಂದಿದೆ. ಆ ಕಾಲದ ಚಕ್ರಾಧಿಪತ್ಯಗಳಿಗೆ ಒಳಪಟ್ಟಿದ್ದ ವಿಶಾಲವಾದ ಭೂ ಪ್ರದೇಶಗಳನ್ನು ಹಿಡಿತದಲ್ಲಿಟ್ಟುಕೊಂಡು ಆಡಳಿತ ನಡೆಸಲು ಈ ವ್ಯವಸ್ಥೆ ಅಗತ್ಯವಾಗಿತ್ತು. ಬಹು ಪುರಾತನವಾದ [[ಪರ್ಷಿಯ]] ಚಕ್ರಾಧಿಪತ್ಯದಲ್ಲಿ ಅಂಚೆ ವ್ಯವಸ್ಥೆಯಿತ್ತೆಂಬುದಾಗಿ ಗೊತ್ತಾಗಿದೆ. ಅನಂತರ ಬಂದ [[ಮೆಸಿಡೋನಿಯ]]ನ್ನರೂ ಅಲ್ಪಪ್ರಮಾಣದಲ್ಲಿ ಈ ವ್ಯವಸ್ಥೆಯನ್ನಿಟ್ಟುಕೊಂಡಿದ್ದರು. [[ರೋಮನ್ ಚಕ್ರಾಧಿಪತ್ಯ]]ದ ಕಾಲದಲ್ಲಂತೂ ಈ ವ್ಯವಸ್ಥೆ ಬಹಳ ಸಮರ್ಪಕವಾಗಿತ್ತು. ಈ ಚಕ್ರಾಧಿಪತ್ಯಗಳು ಕ್ಷೀಣಿಸಿ, ಮತ್ತೆ ಅನಾಗರಿಕತೆಯ ಸ್ಥಿತಿ ಬಂದಾಗ ಅಂಚೆಯ ವ್ಯವಸ್ಥೆಯೂ ಅಳಿಸಿಹೋಯಿತು.
==ಇತಿವೃತ್ತ==
*ಆಗಿನ ಕಾಲದಲ್ಲಿ ಖಾಸಗಿ ಪತ್ರಗಳನ್ನು ಒಂದೆಡೆಯಿಂದ ಇನ್ನೊಂದು ಎಡೆಗೆ ಸಾಗಿಸುವ ಜವಾಬ್ದಾರಿ ಸರ್ಕಾರದ್ದಾಗಿರಲಿಲ್ಲ. ಮಧ್ಯಯುಗದಲ್ಲಿಯೂ ಕೂಡ ಸರ್ಕಾರ ಈ ಹೊಣೆ ಹೊತ್ತಿರಲಿಲ್ಲ. ಆ ಕಾಲದಲ್ಲಿ [[ವಿಶ್ವವಿದ್ಯಾನಿಲಯ]]ಗಳೂ ವರ್ತಕಶ್ರೇಣಿಗಳೂ ಈ ಕೆಲಸ ನಿರ್ವಹಿಸುತ್ತಿದ್ದವು. ಕ್ರಮೇಣ ಯುರೋಪಿನ ಸರ್ಕಾರಗಳಿಗೆ ಇದರ ಆವಶ್ಯಕತೆಯ ಅರಿವು ಹೆಚ್ಚಾಯಿತು. ಒಂದು ರಾಷ್ಟ್ರದ ಜನರು ಇನ್ನೊಂದು ರಾಷ್ಟ್ರದವರೊಂದಿಗೆ ನಡೆಸುತ್ತಿದ್ದ ಪತ್ರ ವ್ಯವಹಾರವನ್ನು ಪರಾಮರ್ಶಿಸಿ ದೇಶದ ಹಿತಕ್ಕೆ ವಿರೋಧವಾಗಿರದಂತೆ ಅದನ್ನು ನಿಯಂತ್ರಿಸುವುದು ಅಗತ್ಯವಾಯಿತು.
೨೨ ನೇ ಸಾಲು:
*ಬ್ರಿಟನ್ನೇ ಅಲ್ಲದೆ ವಿಶ್ವದ ಇತರ ರಾಷ್ಟ್ರಗಳಲ್ಲೂ ಈ ಕಾಲದಲ್ಲಿ ಅಂಚೆಯ ವ್ಯವಸ್ಥೆ ಬಹಳ ಸಮರ್ಪಕವಾಗಿ ಬೆಳೆದಿದೆ. ಬ್ರಿಟಿಷರ ಅಧೀನದಲ್ಲಿದ್ದ [[ಅಮೆರಿಕ ಸಂಯುಕ್ತ ಸಂಸ್ಥಾನ]]ಗಳಲ್ಲಿ 1639ರಲ್ಲಿ ಮೊಟ್ಟ ಮೊದಲನೆಯ ಅಂಚೆ ಕಚೇರಿಯ ಸ್ಥಾಪನೆಯಾಯಿತು. ಆ ವಸಾಹತಿನ ಒಳಭಾಗದಲ್ಲಿ ಒಂದು ಎಡೆಯಿಂದ ಇನ್ನೊಂದು ಎಡೆಗೆ ಅಂಚೆ ಪತ್ರವನ್ನು ಸಾಗಿಸುವ ಹಕ್ಕನ್ನು 1692ರಲ್ಲಿ ಥಾಮಸ್ ನೀಲ್ ಎಂಬುವನು ಪಡೆದ. 1707ರಲ್ಲಿ ಸರ್ಕಾರ ಈ ಹಕ್ಕನ್ನು ಕೊಂಡುಕೊಂಡಿತು. [[ಬೆಂಜಮಿನ್ ಫ್ರಾಂಕ್ಲಿನ್]] 1752ರಲ್ಲಿ ಅಂಚೆಯಮಹಾಪಾಲ (ಪೋಸ್ಟ್ ಮಾಸ್ಟರ್ ಜನರಲ್) ಆದ. *ಅಂಚೆಯ ವರಮಾನ ಹೆಚ್ಚಿತು. ಇಂಗ್ಲೆಂಡಿಗೂ [[ನ್ಯೂಯಾರ್ಕ್|ನ್ಯೂಯಾರ್ಕಿಗೂ]] ನಡುವೆ ನೇರವಾದ ಲಕೋಟೆ ವ್ಯವಸ್ಥೆ ಏರ್ಪಟ್ಟಿತು. ಇತರ ಕಡೆಗಳಿಗೂ ಇದು ವಿಸ್ತರಿಸಿತು. ಬ್ರಿಟನ್ನಿಗೂ ಈ ವಸಾಹತಿಗೂ ನಡುವಣ ಸಂಬಂಧ ಬಿಗಡಾಯಿಸಿದರ ಫಲವಾಗಿ ಫ್ರಾಂಕ್ಲಿನ್ 1774ರಲ್ಲಿ ವಜಾ ಮಾಡಲ್ಪಟ್ಟ. ಮುಂದೆ ಅನೇಕ ವರ್ಷಗಳ ಕಾಲ ಈ ವ್ಯವಸ್ಥೆಯಲ್ಲೇನೂ ಬದಲಾವಣೆಯಾಗಲಿಲ್ಲ. ಸಂಯುಕ್ತ ಸಂಸ್ಥಾನಗಳು ಸ್ವತಂತ್ರವಾದ ಮೇಲೆ ಈ ವ್ಯವಸ್ಥೆಯಲ್ಲಿ ಹೊಸ ಯುಗದ ಆರಂಭವಾಗಿ ಅಲ್ಲಿಂದ ಮುಂದೆ ಅದು ಶೀಘ್ರಗತಿಯಿಂದ ಬೆಳೆಯಿತು.
*ಕೆನಡ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ, ಭಾರತ - ಮುಂತಾದ ಅಂದಿನ ಬ್ರಿಟಿಷ್ ಚಕ್ರಾಧಿಪತ್ಯದ ಇತರ ದೇಶಗಳಲ್ಲಿಯೂ ಅಂಚೆ ವ್ಯವಸ್ಥೆ ಬೆಳೆಯಿತು. ಬ್ರಿಟನ್ನು ತನ್ನ ಅಧೀನ ರಾಜ್ಯಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಈ ವ್ಯವಸ್ಥೆ ಒಂದು ಮುಖ್ಯ ಸಾಧನವಾಗಿ ಪರಿಣಮಿಸಿತು. ಫ್ರಾನ್ಸಿನಲ್ಲಿ ಸರ್ಕಾರಿ ಅಂಚೆ ವ್ಯವಸ್ಥೆ 1464ರಷ್ಟು ಹಿಂದೆಯೇ ಸ್ಥಾಪಿತವಾಯಿತು. ಮುಂದೆ 1627ರಲ್ಲಿ ರಿಚಲೂ, 1643ರಲ್ಲಿ ಮಾಜಾ಼ರ ಎಂಬುವರು ಇದನ್ನು ಬಹುಮಟ್ಟಿಗೆ ಸುಧಾರಿಸಿದರು.
*ಅಂಚೆಯ ಸೇವೆ ಸಲ್ಲಿಸುವ ಹಕ್ಕನ್ನು ಗುತ್ತಿಗೆಗೆ ಕೊಡುವ ಪದ್ಧತಿ ಇಂಗ್ಲೆಂಡಿನಲ್ಲಿ 17ನೆಯ ಶತಮಾನದಲ್ಲಿ ಜಾರಿಗೆ ಬಂದು ಸ್ವಲ್ಪ ಕಾಲ ಮಾತ್ರವೇ ಜಾರಿಯಲ್ಲಿತ್ತಾದರೂ ಫ್ರಾನ್ಸಿನಲ್ಲಿ ಇದು ಬಹುಕಾಲ ಮುಂದುವರಿಯಿತು. [[ಫ್ರೆಂಚ್ ಮಹಾಕ್ರಾಂತಿ]]ಯ ಸಮಯದಲ್ಲಿ ಇದು ತೊಡೆದು ಹೋಯಿತು . ಅಂಚೆ ವ್ಯವಸ್ಥೆಯ ಆಡಳಿತ ನಡೆಸಲು ಒಂದು ಸಮಿತಿಯ ರಚನೆಯಾಯಿತು. 1804ರಲ್ಲಿ [[ನೆಪೋಲಿಯನ್ ಬೋನಾಪಾರ್ತ್| ನೆಪೋಲಿಯನ್ನನು]] ಈ ಸಮಿತಿಯನ್ನು ರದ್ದು ಮಾಡಿ, ಮಹಾನಿರ್ದೇಶಕ (ಡೈರೆಕ್ಟರ್ ಜನರಲ್) ನನ್ನು ನಿಯಮಿಸಿದ. ಆಗ ರಚಿಸಿದ ಆಡಳಿತದ ಚೌಕಟ್ಟು ಈಗಲೂ ಸ್ಥೂಲವಾಗಿ ಮುಂದುವರಿಯುತ್ತಿದೆ. ಈಗ ಸಾಮಾನ್ಯವಾಗಿ ಅಂಚೆಗಾಗಿಯೇ ಪ್ರತ್ಯೇಕವಾದ ಮಂತ್ರಿಯಿರುವುದಿಲ್ಲ. ಹಣಕಾಸು, ಲೋಕೋಪಯೋಗಿ ಕಾರ್ಯ, ವಾಣಿಜ್ಯ, ಕೈಗಾರಿಕೆ - ಹೀಗೆ ಬೇರೆ ಯಾವುದಾದರೂ ಸಚಿವಾಲಯದ ಆಡಳಿತಕ್ಕೆ ಈ ಖಾತೆಯನ್ನೂ ಸೇರಿಸಲಾಗುತ್ತಿದೆ.
=='''ಅಂತರಾಷ್ಟ್ರೀಯ ಅಂಚೆ ವ್ಯವಸ್ಥೆ'''==
[[File:Stamp China 1949 4c on 100 silver ovpt.jpg|thumb|[[China]] 4-cent on 100-dollar silver overprint of 1949]]
೪೦ ನೇ ಸಾಲು:
[[File:Watermark elephant head.jpg|left|framed|Early stamps of [[India]] were [[watermark]]ed with an elephant's head.]]
[[File:Red Scinde Dawk stamp.jpg|right|thumb|The use of the [[Scinde Dawk]] adhesive stamps to signify the prepayment of postage began on 1 July 1852 in the [[Scinde]]/[[Sindh]] district,<ref>[http://www.firstissues.org/ficc/details/scinde_1.shtml] First Issues Collectors Club (retrieved 25 September)</ref> as part of a comprehensive reform of the district's postal system.]]
*ಭಾರತದಲ್ಲಿ ಅಂಚೆಯ ಇತಿಹಾಸ ಬಹಳ ಹಳೆಯದು. ಹಿಂದಿನ ಚಕ್ರಾಧಿಪತ್ಯಗಳ ಅಧೀನದಲ್ಲಿ ದೂರ ದೂರದಲ್ಲಿ ಹಬ್ಬಿದ್ದ ನಾನಾ ಪ್ರಾಂತಗಳಿಗೆ ಕೇಂದ್ರದ ಆದೇಶಗಳನ್ನು ಮುಟ್ಟಿಸುವುದಕ್ಕೂ ಆ ಪ್ರಾಂತಗಳಲ್ಲಿನ ವಿದ್ಯಮಾನಗಳನ್ನು ಅರಿಯುವುದಕ್ಕೂ ಸಮರ್ಪಕವಾದ ಅಂಚೆ ವ್ಯವಸ್ಥೆಯ ಅಗತ್ಯವಿತ್ತು. ವ್ಯಾಪಾರಿಗಳಾಗಿ ಭಾರತಕ್ಕೆ ಬಂದು, ಆಡಳಿತಗಾರರಾಗಿ ಕಾಲೂರಿ ನಿಂತ ಬ್ರಿಟಿಷರಾದರೂ ಇಲ್ಲಿ ಅಂಚೆ ವ್ಯವಸ್ಥೆಯನ್ನೇರ್ಪಡಿಸಿದ್ದು ಈ ಉದ್ದೇಶದಿಂದಲೇ. ಬ್ರಿಟಿಷ್ ಭಾರತದ ಅಂಚೆ ವ್ಯವಸ್ಥೆಗೆ [[ಲಾರ್ಡ್ ಕ್ಲೈವ್| ಲಾರ್ಡ್ ಕ್ಲೈವನೇ]] ಜನಕ.
*1766ರಲ್ಲಿ ಈ ವ್ಯವಸ್ಥೆಯನ್ನು ಮುಖ್ಯವಾಗಿ ಆಡಳಿತದ ಉದ್ದೇಶಗಳಿಗಾಗಿಯೇ ಸ್ಥಾಪಿಸಲಾಯಿತು. ಸಾರ್ವಜನಿಕರೂ ಈ ವ್ಯವಸ್ಥೆಯ ಉಪಯೋಗವನ್ನು ಪಡೆದುಕೊಳ್ಳುವಂತೆ ಆದದ್ದು 1837ರಲ್ಲಿ. ಆ ವರ್ಷದಲ್ಲಿ ಇದಕ್ಕಾಗಿ ಒಂದು ಶಾಸನವಾಯಿತು. 1854ರಲ್ಲಿ ಈ ವ್ಯವಸ್ಥೆಯನ್ನು ಮಹಾನಿರ್ದೇಶಕನ (ಡೈರೆಕ್ಟರ್ ಜನರಲ್) ಅಧೀನಕ್ಕೆ ಒಳಪಡಿಸಲಾಯಿತು; ಇಡೀ ಭಾರತಕ್ಕೆ ಅನ್ವಯಿಸುವಂತೆ ಅಂಚೆಯ ದರಗಳ ನಿಷ್ಕರ್ಷೆಯಾಯಿತು.
*ಅಂಚೆಯ ಚೀಟಿಗಳನ್ನು ಭಾರತದಲ್ಲಿ ಪ್ರಥಮವಾಗಿ ನೀಡಿದ್ದು [[ಕರಾಚಿ]]ಯಲ್ಲಿ (1825). ಆಗ ಸಿಂಧ್ ಪ್ರಾಂತದಲ್ಲಿ ಮಾತ್ರ ಇವುಗಳ ವ್ಯಾಪ್ತಿಯಿತ್ತು. 1830ರಲ್ಲಿ ಇಂಗ್ಲೆಂಡಿಗೂ ಭಾರತಕ್ಕೂ ನಡುವೆ ಸೂಯೆಜ್ ಮೂಲಕವಾಗಿ ಅಂಚೆಯ ಸಾಗಾಟದ ಆರಂಭವಾಯಿತು. 1839ರಲ್ಲಿ ಭಾರತದಲ್ಲಿ ತಂತಿಯ ಉದಯವಾಯಿತು. ವಿಲಿಯಂ ಷಾಂಘ್ನೆಸ್ಸಿ ಎಂಬುವನು ಕಲ್ಕತ್ತೆಯಿಂದ ಡೈಮಂಡ್ ಹಾರ್ಬರಿಗೆ ಹಾಕಿದ ಪ್ರಾಯೋಗಿಕ ತಂತಿ ಮಾರ್ಗವೇ ಈ ನಿಟ್ಟಿನಲ್ಲಿ ಪ್ರಥಮಯತ್ನ. ಕಲ್ಕತ್ತೆಯ ವೈದ್ಯಕೀಯ ಕಾಲೇಜಿನಲ್ಲಿ ಆತ ಪ್ರಾಧ್ಯಾಪಕನಾಗಿದ್ದ.
*ಆಗಿನ ಕಾಲಕ್ಕೆ ಇದೇ ಪ್ರಪಂಚದಲ್ಲೆಲ್ಲಾ ಅತ್ಯಂತ ಉದ್ದವಾದ ತಂತಿಮಾರ್ಗವಾಗಿತ್ತು. ಅದರ ಉದ್ದ ಸು.33ಕಿಮೀ. ಇದು 2200ಮೀ. ದೂರ ನದಿಯನ್ನು ದಾಟಿ ಹೋಗುತ್ತಿದ್ದುದು ಇದರ ಒಂದು ವೈಶಿಷ್ಟ್ಯ. ಸರ್ಕಾರದವರು ತಂತಿ ಮಾರ್ಗವನ್ನೇರ್ಪಡಿಸಲು ತೊಡಗಿದ್ದು 1851ರಲ್ಲಿ, ಕಲ್ಕತ್ತೆಯಿಂದ ಡೈಮಂಡ್ ಹಾರ್ಬರಿಗೆ. ದೂರದ ತಂತಿಮಾರ್ಗದ ಕೆಲಸ 1853ರಲ್ಲಿ ಆರಂಭವಾಯಿತು. ಭಾರತದ ತಂತಿ ವ್ಯವಸ್ಥೆಯ ಉದಯವಾದದ್ದು ಈ ವರ್ಷದಲ್ಲೇ ಎಂದು ಹೇಳಬಹುದು.
*ಕಲ್ಕತ್ತೆಯಿಂದ ಆಗ್ರಕ್ಕೆ ಹಾಕಲಾಗಿದ್ದ ಈ ಮಾರ್ಗದ ಮೇಲೆ ಮೊಟ್ಟ ಮೊದಲಿಗೆ ಸುದ್ದಿಯನ್ನು ಕಳಿಸಿದ್ದು 1854ರ ಮಾರ್ಚ್ 24ರಂದು. ಮುಂದೆ ಈ ಮಾರ್ಗವನ್ನು ಒಂದು ಕಡೆಯಲ್ಲಿ ಮುಂಬೈವರೆಗೂಮುಂಬಯಿವರೆಗೂ ಇನ್ನೊಂದು ಕಡೆಯಲ್ಲಿ [[ಪೇಶಾವರ]]ದವರೆಗೂ ವಿಸ್ತರಿಸಲಾಯಿತು. 1865ರಲ್ಲಿ ಇಂಗ್ಲೆಂಡ್ ಭಾರತಗಳ ನಡುವೆ ತಂತಿಮಾರ್ಗವೇರ್ಪಟ್ಟಿತು. 1867ರ ವೇಳೆಗೆ ಭಾರತದ ಒಳನಾಡಿನಲ್ಲಿ 14,900 ಮೈಲಿಗಳಷ್ಟು ತಂತಿಮಾರ್ಗಗಳಿದ್ದುವು. ಅಖಿಲ ಭಾರತದ ಉಪಯೋಗಕ್ಕಾಗಿ [[ಅಂಚೆ ಚೀಟಿ]]ಗಳನ್ನು ಬಿಡುಗಡೆ ಮಾಡಿದ್ದು 1854ರ ಅಕ್ಟೋಬರಿನಲ್ಲಿ.
*ವಿ.ಪಿ. ಅಥವಾ ಮೌಲ್ಯ ದೇಯ ಅಂಚೆ ವ್ಯವಸ್ಥೆಯು 1877ರಲ್ಲೂ ಮನಿ ಆರ್ಡರ್ ಅಥವಾ ಧನ ಆದೇಶದ ಸೌಲಭ್ಯ 1880ರಲ್ಲೂ ಅಂಚೆಯ ಸಂಚಿತ ಠೇವಣಿ ವ್ಯವಸ್ಥೆ ಅಥವಾ ಪೋಸ್ಟಲ್ ಸೇವಿಂಗ್ಸ್ ಬ್ಯಾಂಕ್ 1885ರಲ್ಲೂ ಆರಂಭವಾದುವು. ವಿಮಾನ ಅಂಚೆ ಸೌಲಭ್ಯ ಆರಂಭವಾದದ್ದು 1911ರಲ್ಲಿ. ಭಾರತ ಬ್ರಿಟನ್ನುಗಳ ನಡುವೆ ವಿಮಾನ ಅಂಚೆಯ ಸೇವೆಯನ್ನು 1929ರಲ್ಲಿ ತೆರೆಯಲಾಯಿತು. ಇಲಾಖೆಯ ಆಡಳಿತ: ಭಾರತದ ಅಂಚೆ-ತಂತಿ ಇಲಾಖೆಯು ಭಾರತಸರ್ಕಾರದ ಸಂಪರ್ಕ ಇಲಾಖೆಯ ಆಡಳಿತಕ್ಕೊಳಪಟ್ಟಿದೆ.
*ಅಂಚೆ-ತಂತಿಯ ಮಹಾ ನಿರ್ದೇಶಕರು ಈ ಇಲಾಖೆಯ ಮುಖ್ಯಾಧಿಕಾರಿಗಳು. ಆಡಳಿತ ಹಾಗೂ ಆಂತರಿಕ ಹಣಕಾಸಿನ ನಿರ್ವಹಣೆಗಾಗಿ ಅಂಚೆ-ತಂತಿ ಮಂಡಳಿ 1959ರಲ್ಲಿ ಸ್ಥಾಪಿತವಾಯಿತು. ಈ ಮಂಡಳಿಯಲ್ಲಿ ಅಧ್ಯಕ್ಷರಲ್ಲದೆ ಆರು ಮಂದಿ ಸದಸ್ಯರಿದ್ದಾರೆ. ಹಣಕಾಸು, ಅಂಚೆ, ಆಡಳಿತ, ತಂತಿ, ಸಂಪರ್ಕವ್ಯವಹಾರ, ತಂತಿ ಸಂಪರ್ಕಾಭಿವೃದ್ಧಿ, ಬ್ಯಾಂಕಿಂಗ್ ಮತ್ತು ವಿಮೆ-ಇವುಗಳಲ್ಲಿ ಒಂದೊಂದಕ್ಕೂ ಒಬ್ಬೊಬ್ಬರಂತೆ ಸದಸ್ಯರಿದ್ದಾರೆ.
*ಆಡಳಿತ ಸೌಕರ್ಯಕ್ಕಾಗಿ ಹಾಗೂ ಕಾರ್ಯನಿರ್ವಹಣೆಗಾಗಿ ದೇಶವನ್ನು ಹಲವಾರು ವಿಭಾಗಗಳಾಗಿ ವಿಂಗಡಿಸಿದೆ. ಈಗ ಇಂಥ ಹದಿನೈದು ಪ್ರಾದೇಶಿಕ ಅಂಚೆ-ತಂತಿ ವಿಭಾಗಗಳಿವೆ. ಆಂಧ್ರ, [[ಅಸ್ಸಾಂ]], [[ಬಿಹಾರ]], [[ಗುಜರಾತ್]], ಜಮ್ಮು ಕಾಶ್ಮೀರ, [[ಕೇರಳ]], ಮಧ್ಯಪ್ರದೇಶ, [[ಮಹಾರಾಷ್ಟ್ರ]], [[ಕರ್ನಾಟಕ]], ಒರಿಸ್ಸ, ಪಂಜಾಬ್, [[ರಾಜಸ್ತಾನ]], ತಮಿಳುನಾಡು, ಉತ್ತರಪ್ರದೇಶ, ಪಶ್ಚಿಮಬಂಗಾಲ ಇವುಗಳು ಆ ವಿಭಾಗಗಳು. ಆಡಳಿತದೃಷ್ಟಿಯಿಂದ ದೆಹಲಿ ಒಂದು ಪ್ರತ್ಯೇಕ ವಿಭಾಗವಾಗಿದೆ. ದೂರವಾಣಿಯ ವ್ಯವಸ್ಥೆಗಾಗಿ ದೇಶವನ್ನು [[ಮುಂಬೈಮುಂಬಯಿ]], ಕಲ್ಕತ್ತ, [[ದೆಹಲಿ]], ಮದರಾಸು, [[ಹೈದರಾಬಾದ್]] ಮತ್ತು [[ಬೆಂಗಳೂರು]] ಎಂದು ಆರು ಜಿಲ್ಲೆಗಳಾಗಿ ವಿಂಗಡಿಸಿದೆ.
*ಅಂಚೆ-ತಂತಿ ಸೇವಾನಿರ್ವಹಣೆಯ ಸಿಬ್ಬಂದಿಯ ತರಬೇತಿಗಾಗಿ ದೇಶದ ಕೆಲವು ಸ್ಥಳಗಳಲ್ಲಿ ಪ್ರಶಿಕ್ಷಣ ಹಾಗೂ ಸಂಶೋಧನ ಕೇಂದ್ರಗಳನ್ನು ತೆರೆಯಲಾಗಿದೆ. ಕೆಲವು ಪ್ರಮುಖನಗರಗಳಲ್ಲಿ ಸಂಚಾರಿ ಅಂಚೆ ಕಚೇರಿಗಳು ಬಹಳ ಯಶಸ್ವಿಯಾಗಿ ಕೆಲಸ ಮಾಡುತ್ತಿವೆ. ರಾತ್ರಿಯ ವೇಳೆಯ ವಿಮಾನ ಅಂಚೆವ್ಯವಸ್ಥೆಯ ಮೂಲಕ ದೇಶದ ಮುಖ್ಯ ನಗರಗಳೊಂದಿಗೆ ಸಂಬಂಧ ಕಲ್ಪಿಸಲಾಗಿದೆ. ಎಲ್ಲೆಲ್ಲಿಗೆ ವಿಮಾನ ಸೌಲಭ್ಯವಿದೆಯೋ ಅಲ್ಲಿಗೆಲ್ಲಾ ಸಾಮಾನ್ಯವಾಗಿ ಅಂತರ್ದೇಶೀಯ ಪತ್ರಗಳೂ ಕಾರ್ಡುಗಳೂ ಮನಿಯಾರ್ಡರುಗಳೂ ವಿಮಾನದ ಮೂಲಕವೇ ಸಾಗುತ್ತವೆ.
*ಹೊರದೇಶಗಳಿಗೆ ವಿಮಾನದಲ್ಲಿ ಭಾಂಗಿಗಳನ್ನು ಕಳುಹಿಸುವ ಸೌಲಭ್ಯವಿದೆ. ಬಹುತೇಕ ಅಂಚೆ ಕಚೇರಿಗಳಲ್ಲಿ ಸೇವಿಂಗ್ಸ್ ಬ್ಯಾಂಕ್ ಅಥವಾ ಸಂಚಿತ ಠೇವಣಿ ಸೌಕರ್ಯವಿದೆ. ರಾತ್ರಿಯ ಅಂಚೆ ಕಚೇರಿಗಳೂ ಇವೆ. ಅಂಚೆ ಇಲಾಖೆ ತನ್ನ ದಿನ ನಿತ್ಯದ ವ್ಯವಹಾರಕ್ಕೆ ವಿದ್ಯುನ್ಮಾನ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಪ್ರಮುಖ ಅಂಚೆ ಕಛೇರಿಗಳಲ್ಲಿ ಧನಾದೇಶ, ನೋಂದಣಿ (ರಿಜಿಸ್ಟ್ರೇಷನ್), ಸ್ಪೀಡ್ಪೋಸ್ಂ ಭಾಂಗಿಗಳ ಸ್ವೀಕೃತಿ ಮತ್ತಿತರ ವ್ಯವಹಾರಕ್ಕೆ, ಗಣಕ ಯಂತ್ರಗಳನ್ನು ಬಳಕೆಗೆ ತಂದಿದೆ. ಇದರಿಂದ ಕಾರ್ಯಕ್ಷಮತೆ ಹೆಚ್ಚಿದೆ, ಸೇವಾ ಸೌಲಭ್ಯ ವಿಸ್ತರಿಸಿದೆ.
೮೩ ನೇ ಸಾಲು:
==ಇತ್ತೀಚಿನ ಬೆಳೆವಣಿಗೆ==
*ಸ್ವಾತಂತ್ರ್ಯಾನಂತರ ತಂತಿ ಮತ್ತು ದೂರವಾಣಿ-ದೂರಸಂಪರ್ಕ ಸೇವಾವಲಯದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಸರಕಾರಿ ಸ್ವಾಮ್ಯದಲ್ಲಿದ್ದ ಈ ವಲಯದಲ್ಲಿ ಅಕ್ಟೋಬರ್ 15, 2001ರಿಂದ ಸರ್ಕಾರ ಖಾಸಗಿ ಬಂಡವಾಳ ಹೂಡಿಕೆಗೆ ಆಹ್ವಾನ ನೀಡಿದೆ. ಸಾರ್ವಜನಿಕ ಉದ್ಯಮ ವಲಯದಲ್ಲಿ, [[ಭಾರತ ಸಂಚಾರ ನಿಗಮ ಲಿಮಿಟೆಡ್]] (ಬಿಎಸ್ಎನ್ಎಲ್) ಮತ್ತು ಮಹಾನಗರಗಳಿರುವ ಕಡೆ [[ಮಹಾನಗರ ಟೆಲಿಫೋನ್ ಲಿಮಿಟೆಡ್]] (ಎಂ.ಟಿ.ಎನ್.ಎಲ್) ಅಸ್ತಿತ್ವಕ್ಕೆ ಬಂದಿದೆ. ಸಂಚಾರಿ ದೂರವಾಣಿ ಸೇವೆ (ಮೊಬೈಲ್) ಅತ್ಯಂತ ತ್ವರಿತವಾಗಿ ವಿಕಾಸವಾಗುತ್ತಿರುವ ಸೇವೆ. *ದೇಶವನ್ನು 19 ವಲಯಗಳಾಗಿ ವಿಂಗಡಿಸಿ ಪ್ರತಿಯೊಂದು ವಲಯದಲ್ಲೂ ನಾಲ್ಕು ಸೇವಾ ಪ್ರಾಯೋಜಕರು. ಅದರಲ್ಲಿ ಒಂದು ಸಾರ್ವಜನಿಕ ವಲಯಕ್ಕೆ ಸೇರಿದ ಸಂಸ್ಥೆ ಭಾರತ ಸಂಚಾರ ನಿಗಮ ಲಿಮಿಟೆಡ್. ಉಳಿದ ಮೂರು ಖಾಸಗಿ ಸೇವಾ ಪ್ರಯೋಜಕರು ‘ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ’ದ ಸಮಗ್ರ ಮೇಲ್ವಿಚಾರಣೆ. ಅದರ ನಿರ್ಣಯಕ್ಕೆ ಎಲ್ಲರೂ ಬದ್ಧವಾಗಿರತಕ್ಕದ್ದು. ಭಾರತದಲ್ಲಿ 27 ದಶಲಕ್ಷಕ್ಕೂ ಹೆಚ್ಚು ಸಂಚಾರಿ ದೂರವಾಣಿ ಮೊಬೈಲ್ ಗ್ರಾಹಕರಿದ್ದಾರೆ. ಪ್ರತಿ ತಿಂಗಳೂ ಹತ್ತು ಲಕ್ಷ ಗ್ರಾಹಕರ ಸೇರ್ಪಡೆ ಆಗುತ್ತಿದೆ.
*ಅಂತರಜಾಲ (ಇಂಟರ್ನೆಟ್) ಈಗ ಖಾಸಗಿ ವಲಯಕ್ಕೆ ತೆರೆದಿದೆ. ಸೇವಾ ಪ್ರಾಯೋಜಕರಿಗೆ ಪ್ರೋತ್ಸಾಹಕರವಾದ ವಾತಾವರಣವಿದೆ. ಈಗ (2004)ರಲ್ಲಿ 42 ಲಕ್ಷ ಚಂದಾದಾರರಿದ್ದಾರೆ. ನೋಯ್ಡಾ, [[ಚೆನ್ನೈ]],[[ಕಲ್ಕತ್ತ| ಕೋಲ್ಕತ್ತ]] ಕೇಂದ್ರಗಳಲ್ಲಿ ಇಂಟರ್ನೆಟ್ ವಿನಿಮಯ ಕೇಂದ್ರಗಳು ಆರಂಭವಾಗಿವೆ. ಟೆಲಿಮೆಡಿಸಿನ್, ಟೆಲಿ ದೂರಶಿಕ್ಷಣ, ಟೆಲಿಬ್ಯಾಂಕಿಂಗ್, ಕರೆ ಕೇಂದ್ರಗಳು (ಕಾಲ್ಸೆಂಟರ್ಸ್) ಮೊದಲಾದವುಗಳ ಸ್ಥಾಪನೆಗೆ ಅಗತ್ಯವಾದ ತಾಂತ್ರಿಕ ನೆರವನ್ನು ನೀಡಲಾಗುತ್ತಿದೆ. ಕರೆ ಕೇಂದ್ರಗಳು ದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಿಸುವ ಸಾಧನವಾಗಿದೆ.
* ಕರೆ ಕೇಂದ್ರಗಳಿಂದ 1999-2000ರಲ್ಲಿ ರೂ 2,400 ಕೋಟಿ ರೂಪಾಯಿ ವರಮಾನ ಬಂದಿದ್ದು, ಅದು 2002-03ರಲ್ಲಿ 11,700 ಕೋಟಿ ರೂಗಳಿಗೂ ಮೀರಿದೆ. ದೂರಸಂಪರ್ಕ ಸೇವೆಯಲ್ಲಿ ಆಧುನಿಕ ತಂತ್ರಜ್ಞಾನ ರೂಪಿಸಲು ಮತ್ತು ಅದನ್ನು ಅನುಷ್ಠಾನಕ್ಕೆ ತರುವ ದೃಷ್ಟಿಯಿಂದ ಆರಂಭಿಸಲಾದ ಸಂಸ್ಥೆ ಸೆಂಟರ್ ಫಾರ್ ಡೆವಲೆಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ .
==ಉಲ್ಲೇಖಗಳು==
೯೭ ನೇ ಸಾಲು:
* [http://www.upu.int Universal Postal Union], a part of the United Nations
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಚೆ ಇತಿಹಾಸ|ಅಂಚೆ ಇತಿಹಾಸ}}
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಸಂಪರ್ಕ]]
"https://kn.wikipedia.org/wiki/ಅಂಚೆ_ವ್ಯವಸ್ಥೆ" ಇಂದ ಪಡೆಯಲ್ಪಟ್ಟಿದೆ