ರಂಗಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಮುಂಬೈ → ಮುಂಬಯಿ using AWB
೧ ನೇ ಸಾಲು:
'''ರಂಗಭೂಮಿ''' (ಥಿಯೇಟರ್)ಎಂದರೆ, ಒಂದು ಪ್ರದೇಶದ, ಜನಸಮುದಾಯದ ಬದುಕಿನ ಸಾಂಸ್ಕೃತಿಕ, [[ರಾಜಕೀಯ]], ಇತಿಹಾಸದೊಂದಿಗೆ, [[ಸಾಹಿತ್ಯ]] ಕೃತಿಯಾಗಿ , ರಂಗಮಂಚದಲ್ಲಿ ನಾಟಕವಾಗಿ, ರೂಪಕವಾಗಿ ಜನಮನಕ್ಕೆ ಹತ್ತಿರವಾದ ಕಲಾಕ್ಷೇತ್ರ. ಜಗತ್ತಿನಾದ್ಯಂತ ಅಯಾ [[ಜನಾಂಗ]],[[ದೇಶ]],ಪ್ರದೇಶಗಳ ರಂಗಭೂಮಿ ರೂಪುಗೊಂಡುದುದನ್ನು ನಾವು ಕಾಣಬಹುದು.
== ವಿಶ್ವ ರಂಗಭೂಮಿ ದಿನ ==
[http://en.wikipedia.org/wiki/International_Theatre_Institute ಇಂಟರ್ ನ್ಯಾಷನಲ್ ಥಿಯೇಟರ್ ಇನ್ ಸ್ಟಿಟ್ಯೂಟ್] ೧೯೬೧ ರಲ್ಲಿ ವ್ಯವಸ್ಥೆಗೊಳಿಸಿದ ವಿಶ್ವ ರಂಗಭೂಮಿ ಸಮಾವೇಶದಲ್ಲಿ ಪ್ರತಿವರ್ಷ ಮಾರ್ಚ್ ೨೭ ರಂದು ವಿಶ್ವ ರಂಗಭೂಮಿ ದಿನ ಆಚರಿಸಲು ನಿರ್ಧರಿಸಲಾಯಿತು. ೧೯೬೨ ರಲ್ಲಿಪ್ಯಾರಿಸ್ಸಿನಲ್ಲಿ ಅಂತಾರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಯೊಂದಿಗೆ ಮೊದಲ [[ವಿಶ್ವ ರಂಗಭೂಮಿ ದಿನ]]ವನ್ನು ಆಚರಿಸಲಾಯಿತು.ಅಂದಿನಿಂದ ಪ್ರತಿವರ್ಷ ಮಾರ್ಚ್ ೨೭ ರಂದು ವಿಶ್ವ ರಂಗಭೂಮಿ ದಿನ ಆಚರಿಸಲಾಗುತ್ತದೆ."ನಮನ"
== ಕನ್ನಡ ರಂಗ ಭೂಮಿ ಮತ್ತು ವ್ರತ್ತಿ ನಾಟಕ ಕಂಪನಿಗಳು ==
 
ಕನ್ನಡದಲ್ಲಿ ಜನಪದ ರಂಗಭೂಮಿ, ವ್ರತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಗಳಾಗಿ ವಿಂಗಡಿಸಬಹುದು.ಕನ್ನಡ ಜನಪದ ರಂಗ ಭೂಮಿಯಿಂದ ಪ್ರೇರಣೆ ಪಡೆದ ಮರಾಠಿಯ "ಸೀತಾ ಸ್ವಯಂವರ" ನಾಟಕ ಮಹಾರಾಷ್ಟ್ರದ ಉದ್ದಗಲಕ್ಕೂ ಪ್ರದರ್ಶನ ಕಂಡು ಮುಂಬೈಮುಂಬಯಿ ಪ್ರಾಂತ್ಯ ಕ್ಕೊಳಪಟ್ಟ ಉತ್ತರ ಕರ್ನಾಟಕದ ಪಟ್ಟಣಗಳಿಗೂ ಲಗ್ಗೆ ಇಟ್ಟು ಕನ್ನಡ ನೆಲದಲ್ಲಿ ಮರಾಠಿ ಮತ್ತು ಪಾರ್ಸೀ ಕಂಪನಿಗಳದ್ದೆ ನಾಟಕದಾಟ,ನಾಟಕದೂಟ, ಕಾರುಬಾರುಗಳಾದಾಗ ಕನ್ನಡಿಗರ ಸ್ವಾಭಿಮಾನ ಕೆಣಕುವಂತಾಯಿತು.ಈ ವೇಳೆಗೆ "ಶಾಂತ ಕವಿ'ಗಳೆಂದು ಹೆಸರಾದ ಸಕ್ಕರಿ ಬಾಳಾಚಾರ್ಯರು ಮರಾಠಿ ನಾಟಕಕ್ಕೆ ಪ್ರತಿಯಾಗಿ ಕನ್ನಡ ನಾಟಕಗಳನ್ನು ರಚಿಸುವಲ್ಲಿ ಕಾರಣರಾದರು.ಸಮಗ್ರ ಕರ್ನಾಟಕ ವರ್ತ್ತಿ ರಂಗ ಭೂಮಿ ಇತಿಹಾಸದಲ್ಲಿ ಗದಗಿಗೆ ಪ್ರಥಮ ಕೀರ್ತಿ ಸಲ್ಲುವಂತಾಯಿತು.
 
೧೮೫೬ನೆ ಜನವರಿ ೧೫ ರಂದು ಹುಟ್ಟಿದ ಸಕ್ಕರಿ ಬಾಳಾಚಾರ್ಯರು ಗದಗಿನ ಶ್ರೀಮಂತ ಉಮಚಗಿ ಲಚಪ್ಪ ನಾಯಕ ಎಂಬವರ ಪ್ರೋತ್ಸಾಹದಿಂದ ಹಲವಾರು ರುವಕರ ನೆರವಿನಿಂದ ೧೮೭೨ ರಲ್ಲಿ 'ವೀರ ನಾರಾಯಣ ಪ್ರಸಾದಿತ ನಾಟಕ ಮಂಡಳಿ' ಸ್ತಾಪಿಸಿದರು.ಈ ಮಂಡಳಿ ಉತ್ತರ ಕರ್ನಾಟಕದ ಪ್ರಥಮ ವ್ರತ್ತಿ ನಾಟಕ ಸಂಸ್ಥೆ. ಮುಂದೆಯೂ ಪಾರಸಿ ಕಂಪನಿಗಳ ಪಾರಮ್ಯ ಮೈಸೂರು ಪ್ರಾಂತ್ಯದಲ್ಲಿ ಮುಂದುವರೆದಾಗ ಮೈಸೂರಿನ ಕೆಲವು ಮಂದಿ ಕಲಾವಿಲಾಸಿಗಳು ಸುಮಾರು ೧೮೭೯-೮೦ ರಲ್ಲಿ ಸಿ.ಆರ್.ರಘುನಾಥ ರಾಯರ ನೇತ್ರತ್ವದಲ್ಲಿ ಒಂದು ಕನ್ನಡ ನಾಟಕ ಸಂಘವನ್ನು ಆರಂಭಿಸಿ "ಶ್ರೀ ಶಾಕುಂತಲ ಕರ್ನಾಟಕ ನಾಟಕ ಸಬಾ"ಎಂದು ಹೆಸರಿಟ್ಟುಕಾರ್ಯ ನಿರತರಾದರು.ಮುಂದೆ ಮೈಸೂರು ಒಡೆಯರಾದ ಚಾಮರಾಜೇಂದ್ರ ರ ನೆರವಿನೊಂದಿಗೆ ೧೮೮೦ರಲ್ಲಿ " ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ" ಎಂಬ ಹೆಸರಿನಿಂದ ನಾಟಕ ಮಂಡಳಿಯೊಂದನ್ನು ಸ್ಥಾಪಿಸಿ ಕನ್ನಡ ರಂಗ ಭೂಮಿಗೆ ಭದ್ರ ಬುನಾದಿ ಹಾಕಿ ಸತ್ ಸಂಪ್ರ್ತದಾಯವೊಂದನ್ನು ನಿರ್ದಿಷ್ಟವಾಗಿ ರೂಪಿಸಿದರು."ನಮನ"
೭೧ ನೇ ಸಾಲು:
 
ಸಂಘ ಸಂಸ್ಥೆಗಳು, ಹವ್ಯಾಸಿ ರಂಗ ತಂಡಗಳು ನಾಟಕ ಮಾಡಲೆಂದು ಸಿದ್ದವಾಗುವ ಸಂದರ್ಭದಲ್ಲಿ ಎದುರಾಗುವ ಹಲವು ತೊಡಕುಗಳಲ್ಲಿ ಕಲಾವಿದೆಯರು ಸಿಗುವುದಿಲ್ಲ ಎಂಬ ಸಮಸ್ಯೆ ಇದ್ದ ಕಾಲದಲ್ಲಿ ಮಹಿಳೆಯರ ಪಾತ್ರವನ್ನು ಅದ್ಭುತವಾಗಿ ಅಭಿನಯಿಸಿದ ಪುರುಷರ ದೊಡ್ಡ ಪಟ್ಟಿಯೇ ಇದೆ, ಕೆಲವು ನಾಟಕಕಾರರು ಮಹಿಳೆಯರ ಪಾತ್ರವೇ ಇಲ್ಲದ ನಾಟಕಗಳನ್ನು ಬರೆದಿದ್ದಾರೆ. ೧೪೦ ವರ್ಷಗಳ ಇತಿಹಾಸವಿರುವ ವೃತ್ತಿ ರಂಗಭೂಮಿಯಲ್ಲಿ ಮಹಿಳೆಯರು ಆರಂಭದ ಒಂದೆರಡು ದಶಕಗಳಲ್ಲಿ ರಂಗ ಪ್ರವೆಶಿಸಿರಲಿಲ್ಲ. ಸ್ರೀಯರ ನಯ, ನಾಜೂಕಿನ ಹಾವ ಭಾವಗಳಿಗೆ ಸಹಜತೆ ಬರಬೇಕಾದರೆ ಸ್ರೀಯೇ ಅಭಿನಯಿಸಬೇಕು ಎಂಬ ತೀರ್ಮಾನಕ್ಕೆ ಬಂದ ಕೋಣ್ಣೂರು ನಾಟಕ ಕಂಪನಿಯ ಶಿವಮೂರ್ತಿ ಸ್ವಾಮಿಗಳು ೧೯೦೧ ರಲ್ಲಿಯೇ ಗುಳೇದಗುಡ್ಡದಿಂದ "ಯಲ್ಲೂ ಬಾಯಿ "ಎಂಬ ಮಹಿಳೆಯನ್ನು ಕರೆಸಿ ಆಕೆಯಿಂದ ಮಹಿಳೆಯ ಪಾತ್ರ ಮಾಡಿಸುತ್ತಾರೆ. ಗಾಯನ ಮತ್ತು ಅಭಿನಯದಲ್ಲಿ ತನ್ನ ಅದ್ವಿತೀಯ ಪಾತ್ರ ತೋರಿದ "ಯಲ್ಲೂಬಾಯಿ"ಯನ್ನೇ ವ್ರತ್ತಿ ರಂಗ ಭೂಮಿಯ ಮೊದಲ ನಟಿ ಎಂದು ವಿದ್ವಾಂಸರು ಹೇಳುತ್ತಾ ಬಂದಿದ್ದರೂ ೧೮೯೮ರಲ್ಲಿ ಪಾಪಸಾನಿ ಎಂಬಾಕೆ ಸ್ಥಾಪಿಸಿದ ಸ್ರೀ ನಾಟಕ ಮಂಡಳಿ "ಪ್ರಭಾವತಿ ದರ್ಬಾರು "ಹರಿಶ್ಚಂದ್ರ'ಮುಂತಾದ ನಾಟಕ ಪ್ರದರ್ಶಿಸುತ್ತಿತ್ತೆಂದೂ ಹಾಗಾಗಿ ಇದೇ ಮೊದಲ ನಾಟಕ ಮಂಡಳಿ ಎಂದೂ ಹೇಳಲಾಗುತ್ತದೆ, ೧೯೦೮ರಲ್ಲಿ ಲಕ್ಹ್ಷ್ಮಿಮೇಶ್ವರದ ಬಚ್ಚಸಾನಿ ಸ್ಥಾಪಿಸಿದ ಮಹಿಳಾ ನಾಟಕ ಮಂಡಳಿಯಲ್ಲಿ ಪುರುಷ ಪಾತ್ರ ಸೇರಿದಂತೆ ಎಲ್ಲಾ ಪಾತ್ರಗಳನ್ನೂ ಮಹಿಳೆಯರೇ ಅಭಿನಯಿಸುತ್ತಿದ್ದರು.ಇದು ಬರೀ ಮಹಿಳೆಯರೇ ಅಭಿನಯಿಸುವ ಇಂತಹ ಸಂಪ್ರದಾಯ ಹಾಕಿಕೊಟ್ಟ ಮೊದಲ ಮಹಿಳಾ ನಾಟಕ ತಂಡ.
 
[[ವರ್ಗ:ರಂಗಭೂಮಿ]]
"https://kn.wikipedia.org/wiki/ರಂಗಭೂಮಿ" ಇಂದ ಪಡೆಯಲ್ಪಟ್ಟಿದೆ