ಮಂಜುಳಾ ಗುರುರಾಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{ Infobox person | name = ಮಂಜುಳಾ ಗುರುರಾಜ್ | birth_date = ಜೂನ್ ೧೦ | occupation = ಗಾಯಕಿ }} '''ಮಂಜುಳಾ ಗುರ...
 
ಚು clean up, replaced: ಚಲನ ಚಿತ್ರ → ಚಲನಚಿತ್ರ using AWB
೧೪ ನೇ ಸಾಲು:
 
==ಸಿನಿಮಾ ಲೋಕದಲ್ಲಿ==
ಅಂದಿನ ದಿನಗಳಲ್ಲಿ ಇಷ್ಟೊಂದು ಸಂಖ್ಯೆಯ ಸಿನಿಮಾಗಳಿರಲಿಲ್ಲ. ಸಿನಿಮಾ ಧ್ವನಿ ಮುದ್ರಣವೆಂದರೆ ಮದರಾಸಿನಲ್ಲಿ ಹಲವು ದಿನಗಳವರೆಗೆ ಕಾಯಬೇಕಿತ್ತು. ಧ್ವನಿಮುದ್ರಣಕ್ಕೆ ಇರುವ ಸೀಮಿತ ಸಮಯ ಮತ್ತು ನಿಯಮಿತ ಸೀಮಿತ ವ್ಯವಸ್ಥೆಗಳಲ್ಲಿ ಯಾರಿಗೂ ಹೊಸ ಪ್ರತಿಭೆಗಳನ್ನು ಹುಡುಕುವ ಹೆಚ್ಚು ವ್ಯವಧಾನಗಳಿರಲಿಲ್ಲ. ಇಂತಹ ಸಮಯದಲ್ಲಿ ಎಲ್ಲೆಲ್ಲೂ ಪ್ರಸಿದ್ಧಿ ಕಾಣುತ್ತಿದ್ದ ಆರ್ಕೆಸ್ಟ್ರಾ ತಂಡದ ಗಾಯನದಿಂದ ಚಿತ್ರಸಂಗೀತಗಾರರನ್ನು ಸೆಳೆದ ಮಂಜುಳಾ ಸುತ್ತ ಮುತ್ತಲೂ, ಒಳಗೆ ಸೇರಿದರೆ ಗುಂಡು, ಹೃದಯದಲಿ ಇದೇನಿದು ನದಿಯೊಂದು ಓಡಿದೆ, ಮ್ಯಾಲೆ ಕವ್ಕೊಂಡ ಮುಂಗಾರು ಮೋಡ ಅಂತಹ ಹಾಡುಗಳಿಗೆ, ಇದನ್ನು ನಮ್ಮ ಕರ್ನಾಟಕದ ಗಾಯಕಿಯೇ ಹಾಡಿದ್ದಾರೆಯೇ ಎಂದು ಅಚ್ಚರಿ ಮೂಡಿಸುವಷ್ಟು ಪ್ರಖ್ಯಾತರಾದರು.
 
==ವೈವಿಧ್ಯಪೂರ್ಣ ಪ್ರತಿಭೆ==
ವ್ಯವಸ್ಥಿತ ವ್ಯಾಪಾರೀ ಸಿನಿಮಾ ಮಾಧ್ಯಮದಲ್ಲಿ ಎಲ್ಲವೂ ತಾನೇ ತಾನಾಗಿ ಬರುವುದಿಲ್ಲ. ಇದನ್ನು ಸಶಕ್ತವಾಗಿ ಗಮನಿಸಿದ ಮಂಜುಳಾ ತಮ್ಮ ಧ್ವನಿಯನ್ನು ಕನ್ನಡ ಬಾರದ ಹೇರಳವಾದ ಚಲನ ಚಿತ್ರಚಲನಚಿತ್ರ ನಟಿಯರಿಗೆ ಡಬ್ಬಿಂಗ್ ಮಾಡುವುದರಲ್ಲಿ, ಅಯ್ಯೋ ಕನ್ನಡದಲ್ಲಿ ಸರಿಯಾಗಿ ವಾರ್ತೆಗಳನ್ನು ಓದುವವರು ಕೂಡಾ ಯಾರೂ ಇಲ್ಲವೇ ಎಂದು ದೂರದರ್ಶನದಲ್ಲಿ ಜಿಗುಪ್ಸೆ ಮೂಡಿದ ಸಂದರ್ಭಗಳಲ್ಲಿ ವಾರ್ತೆಗಳನ್ನು ಓದುವವರಾಗಿ, ಹಲವು ರೀತಿಯ ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆಗಳ ಕ್ಯಾಸೆಟ್ಟುಗಳ ಅಂತರ್ಧ್ವನಿಯಾಗಿ ಹೀಗೆ ಹತ್ತು ಹಲವು ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಈ ಎಲ್ಲಾ ಕ್ಷೇತ್ರಗಳಲ್ಲೂ ಸಮರ್ಥನೀಯ ಸಾಧನೆಗಳನ್ನು ಮಾಡಿದರು. ಕುಹೂ ಕುಹೂ ಎಂಬಂತಹ ದೂರದರ್ಶನದ ಸಂಗೀತ ಕಾರ್ಯಕ್ರಮಗಳ ಮೂಲಕ ಸಂಗೀತ ಪ್ರಚಾರಕ್ಕೆ ವಿಸ್ತಾರ ತರುವುದರ ಜೊತೆಗೆ ಎಲ್ಲಾ ಪ್ರಮುಖ ಗಾಯಕ ಗಾಯಕಿಯರನ್ನೂ ಪ್ರೇಕ್ಷಕನ ಸಮೀಪಕ್ಕೆ ಕರೆತಂದು ಗೌರವ ತೋರಿದರು.
 
ಮಂಜುಳಾ ಅವರು ಬೆಳದಿಂಗಳ ಬಾಲೆ ಚಿತ್ರದಲ್ಲಿ ಅಘೋಚರ ಸ್ತ್ರೀ ಪಾತ್ರಕ್ಕೆ ಧ್ವನಿಯಾಗಿ ಇಡೀ ಚಿತ್ರಕ್ಕೆ ಶೋಭೆ ತಂದ ರೀತಿ ಅವಿಸ್ಮರಣೀಯವಾದದ್ದು. ಎಂಭತ್ತರ ದಶಕದಿಂದ ಮೊದಲ್ಗೊಂಡು ಹತ್ತು ಹಲವು ಸಾಧನೆಗಳ ಮಧ್ಯದಲ್ಲಿ ಸುಮಾರು ೨೦೦೦ಕ್ಕೂ ಹೆಚ್ಚು ಸಿನಿಮಾ ಗೀತೆಗಳಿಗೂ ೧೨೦೦೦ಕ್ಕೂ ಹೆಚ್ಚು ವಿವಿಧ ರೀತಿಯ ಗೀತೆಗಳ ಕ್ಯಾಸೆಟ್ಟುಗಳಿಗೆ ಧ್ವನಿಯಾಗಿರುವುದು ಮಹತ್ಸಾಧನೆಯಾಗಿದೆ. ಇವೆಲ್ಲವನ್ನೂ ಮೀರಿದಂತದ್ದು ಸಂಗೀತ ಕಲಿಯಲು ಆಸಕ್ತರಿಗಾಗಿ ಅವರು ಎಲ್ಲೆಲ್ಲೂ ನಿರ್ಮಿಸಿದ ಸಾಧನಾ ಸಂಗೀತ ಶಾಲೆಗಳು. ಅವರ ಹಲವು ಗೀತೆಗಳ ಗಾಯನಕ್ಕೆ ರಾಜ್ಯಪ್ರಶಸ್ತಿಗಳು, ಅಗಾಧ ಸಾಧನೆಗೆ ಹಲವಾರು ಗೌರವಗಳೂ ಸಂದಿವೆ.
 
[[ವರ್ಗ: ಹಿನ್ನೆಲೆಗಾಯಕಿಯರು]]
[[ವರ್ಗ: ಗಾಯಕಿಯರು]]
"https://kn.wikipedia.org/wiki/ಮಂಜುಳಾ_ಗುರುರಾಜ್" ಇಂದ ಪಡೆಯಲ್ಪಟ್ಟಿದೆ