ಸತ್ಯಯುಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
೧ ನೇ ಸಾಲು:
[[ಹಿಂದೂ ಧರ್ಮ]]ದಲ್ಲಿ '''ಸತ್ಯಯುಗ''' ಅಥವಾ '''ಕೃತಯುಗ'''ವು ಸತ್ಯದ [[ಯುಗ (ಹಿಂದೂ ತತ್ವಶಾಸ್ತ್ರ)|ಯುಗ]], ಮತ್ತು ಆಗ ಮಾನವಕುಲವು [[ದೇವರು|ದೇವತೆಗಳ]] ಆಡಳಿತದಲ್ಲಿರುತ್ತದೆ, ಮತ್ತು ಪ್ರತಿ ಅಭಿವ್ಯಕ್ತಿ ಅಥವಾ ಕೃತಿಯು ಪರಿಶುದ್ಧ ಆದರ್ಶಕ್ಕೆ ನಿಕಟವಾಗಿರುತ್ತದೆ ಮತ್ತು ಮಾನವಕುಲವು ಆಂತರಿಕ ಒಳ್ಳೆಯತನಕ್ಕೆ ಪರಮಪ್ರಧಾನವಾಗಿ ಆಳಲು ಅನುಮತಿಸುತ್ತದೆ. ಇದನ್ನು ಕೆಲವೊಮ್ಮೆ "[[ಸುವರ್ಣಯುಗ]]" ಎಂದು ಕರೆಯಲಾಗುತ್ತದೆ. ಸತ್ಯಯುಗದ ಕಾಲಅವಧಿ ೧,೭೨೮,೦೦೦ ವರ್ಷಗಳು.
 
ಪ್ರಪಂಚದ ಕಾಲಮಾನಗಳಿಗನ್ವಯಿಸುವಂತೆ ನಿಯಮಿತವಾಗಿ ಯುಗಗಳೆಂದು ನಿರ್ದಿಷ್ಟವಾಗಿರುವ ಚತುರ್ಯುಗಗಳಲ್ಲಿ ಒಂದನೆಯದು. ಇದಕ್ಕೆ ಆದಿಯುಗ, ದೇವಯುಗ, ಸ್ವರ್ಣಯುಗ ಎಂಬ ಬೇರೆ ಬೇರೆ ಹೆಸರುಗಳಿವೆ. [[ರವಿ]], [[ಚಂದ್ರ]], [[ಬೃಹಸ್ಪತಿ]]- ಈ ಮೂರು ಗ್ರಹಗಳೂ ಪುಷ್ಯನಕ್ಷತ್ರದಲ್ಲಿ ಸೇರಿದಾಗ ಕೃತಯುಗದ ಆರಂಭವೆಂದು ಪ್ರತೀತಿ. ಈ ಯುಗದಲ್ಲಿ ಜನ್ಮ ತಾಳಿದ್ದರಿಂದಲೇ ಕೃತಕೃತ್ಯರಾಗುವುದರಿಂದ ಇದಕ್ಕೆ ಕೃತಯುಗವೆಂಬ ಹೆಸರು ಬಂತೆಂದು ಹೇಳಿದ್ದಾರೆ.
==ಪುರಾಣಗಳಲ್ಲಿ
ಯುಗವಿಚಾರಗಳನ್ನು ಪ್ರತಿಪಾದಿಸುವ ಹಲವಾರು ಪುರಾಣಾದಿ ಗ್ರಂಥಗಳ ಪ್ರಕಾರ ಕೃತಯುಗದ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ: ಕೃತಯುಗದಲ್ಲಿ ಬೆಳೆವ ಧಾನ್ಯ ಸರ್ವಶ್ರೇಷ್ಠವಾದುದು. [[ಬ್ರಹ್ಮ]] ಇದರ ಅಧಿದೇವತೆ. ಇಲ್ಲಿ ಧರ್ಮ ನಾಲ್ಕು ಪಾದಗಳನ್ನೂ ಹೊಂದಿ ಸ್ಥಿರವಾಗಿರುತ್ತದೆ. ಆದ್ದರಿಂದ ಈ ಯುಗದ ಜನರೆಲ್ಲರೂ ಧರ್ಮನಿಷ್ಠರೂ ತಪೋವ್ರತಪರಾಯಣರೂ ಆಗಿರುತ್ತಾರೆ. ಅವರೆಲ್ಲ ನಾರಾಯಣನ ಸೇವೆಯಲ್ಲಿ ನಿರತರು ಮತ್ತು ಶೋಕವ್ಯಾಧಿರಹಿತರು. ಇದು ಸತ್ಯವಂತರ, ದಯಾಶೀಲರ, ದೀರ್ಘಜೀವಿಗಳ, ಪರೋಪಕಾರಿಗಳ, ಸರ್ವಶಾಸ್ತ್ರಪಾರಂಗತರ ಯುಗ. ಅಲ್ಲದೆ ಈ ಯುಗದಲ್ಲಿ ರಾಜರು ಧರ್ಮಗ್ರಾಹಿಗಳೂ ಪ್ರಜಾಪಾಲಕರೂ ಆಗಿದ್ದು, ಭೂಮಿಧಾನ್ಯಾದಿ ಸಂಪತ್ತಿನಿಂದ ಕೂಡಿ ಜಗತ್ತೆಲ್ಲವೂ ಸುಭಿಕ್ಷವಾಗಿರುತ್ತದೆ. ಅಹೋ ಸತ್ಯಯುಗಸ್ಯಾಸ್ತಿ ಕಃ ಸಂಖ್ಯಾತುಂ ಗುಣಾನ್ ಕ್ಷಮಃ(ಈ ಸತ್ಯಯುಗದ ಗುಣಗಳನ್ನು ಎಣಿಕೆ ಮಾಡಲು ಯಾವನು ತಾನೆ ಶಕ್ತನಾಗಿದ್ದಾನೆ) ಎಂಬ ಮಾತುಗಳಲ್ಲಿ ಯುಗದ ಮಹಿಮೆಯನ್ನು [[ಪದ್ಮ ಪುರಾಣ]] ಕೊಂಡಾಡುತ್ತದೆ.
==ಬಾಹ್ಯ ಸಂಪರ್ಕಗಳು==
* [http://www.harekrishnatemple.com/bhakta/chapter19.html Hare Krishna Temple.com]
Line ೫ ⟶ ೯:
* [http://www.thelemapedia.org/index.php/Yuga Yugas on Themelapedia]
* [http://salvia.us/archive/10815.shtml Salvia.us Archives]
{{ಚುಟುಕು}}
 
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೃತಯುಗ}}
[[ವರ್ಗ:ನಾಲ್ಕು ಯುಗಗಳು]]
[[ವರ್ಗ:ಕಾಲ]]
"https://kn.wikipedia.org/wiki/ಸತ್ಯಯುಗ" ಇಂದ ಪಡೆಯಲ್ಪಟ್ಟಿದೆ