ಕರಡು:ಕೆ.ಮಂಜುನಾಥಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು not much a line or so
(~~~~) small changes
೧೭ ನೇ ಸಾಲು:
| website = {{URL|//}}
}}
'''ಕೆ.ಮಂಜುನಾಥಯ್ಯನವರು''', ಮುಂಬೈನ, '[[ಬಿ.ಎ.ಆರ್.ಸಿ]]'(BARC) ಯಲ್ಲಿ ಒಬ್ಬ ಇಂಜಿನಿಯರ್ ಆಗಿ, ಹಲವು ವರ್ಷ ದುಡಿದು ಸ್ವಇಚ್ಛೆಯಿಂದ ನಿವೃತ್ತರಾದರು. ಬೆಂಗಳೂರಿನಲ್ಲಿ ತಮ್ಮದೇ ಆದ ಸ್ವಂತ ಉದ್ಯೋಗವನ್ನು ಸ್ಥಾಪಿಸಿಕೊಂಡು ಕೆಲಸಮಾಡುತ್ತಿದ್ದಾರೆ. ಮಂಜುನಾಥ್ ಭಾರತೀಯ ಸಂಸ್ಕೃತಿ, ಕಲೆ, ನೃತ್ಯ ಮುಂತಾದವುಗಳಲ್ಲಿ ಅತೀವ ಆಸಕ್ತಿ ಹೊಂದಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಒಬ್ಬ ನಟನಾಗಿ ಪಾಲ್ಗೊಂಡು ಅತ್ಯುತ್ತಮ ಹಾಗೂ ಅತಿ ಮಹತ್ವದ ಯೋಗದಾನಮಾಡಿದ್ದಾರೆ.
=='ಮುಂಬೈ ನಾಟಕಗಳು, ಬೆಂಗಳೂರಿನಲ್ಲಿ ಪ್ರದರ್ಶನ ಕಂಡವು'==
[[File:G. T. Felicitation.jpg|thumb|right|300px|'ಗುಮ್ಮನೆಲ್ಲಿಹ ನೋಡಮ್ಮ ನಾಟಕ ಪ್ರದರ್ಶನ ಮೈಸೂರ್ ಅಸೋ.ಸಭಾಂಗಣದಲ್ಲಿ ಏಪ್ರಿಲ್,೨೦೧೪ ರಲ್ಲಿ ಜರುಗಿತು']]
೨೬ ನೇ ಸಾಲು:
’ಬೆಂಗಳೂರು ಕಲಾಪ್ರೇಮಿ ಫೌಂಡೇಶನ್’ ಹಾಗೂ ’ಮುಂಬೈನ ಮೈಸೂರ್ ಅಸೋಸಿಯೇಷನ್’ ಹಮ್ಮಿಕೊಂಡ ’೩ ದಿನಗಳ ಕನ್ನಡ ನಾಟಕೋತ್ಸವ ಕಾರ್ಯಕ್ರಮ’ ಬೆಂಗಳೂರಿನ ರಸಿಕರನ್ನು ರಂಜಿಸಿತು. (ಜೂನ್,೧,೨,೩) ಜೂನ್ ೧ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ’ಬೆಳ್ಳಿಬೈಲು ನಾಟಕ ಪ್ರದರ್ಶನ ನಡೆಯಿತು.' ಹಣವಂತವ್ಯಕ್ತಿಯೊಬ್ಬ ತಾನೊಬ್ಬ ಪ್ರತಿಷ್ಠಿತವ್ಯಕ್ತಿಯೆಂದು ಸೋಗುಹಾಕಿಕೊಂಡು ಸಮಾಜದಲ್ಲಿ ತನ್ನ ಪ್ರಯೋಜನಕ್ಕಾಗಿ ಬಡಜನರ ಪ್ರಾಣತೆಗೆಯಲೂ ಹೇಸದ ವ್ಯಕ್ತಿಯೊಬ್ಬ ಜೀವನಚಿತ್ರಣವಾಗಿತ್ತು. ಜೂನ್ ೨ ರಂದು, 'ಮಲ್ಲೇಶ್ವರದ ಸೇವಾಸದನ ಸಭಾಂಗಣ'ದಲ್ಲಿ ’ಸಾಕಾರ’ ವೆಂಬ ಸಂಗೀತ ನಾಟಕ ಪ್ರದರ್ಶನ ನಡೆಯಿತು. ಇಬ್ಬರು ಗೆಳೆಯರು; ಒಬ್ಬ ಬಡವ, ಮತ್ತೊಬ್ಬ ಶ್ರೀಮಂತ. ಪಂಢರಾಪುರಕ್ಕೆ ವಿಠಲನ ದರ್ಶಕಾಂಕ್ಷಿಗಳಾಗಿ ಹೋಗುತ್ತಾರೆ. ದೇವರು ಎಲ್ಲರ ಹೃದಯದಲ್ಲಿ ನೆಲೆಸಿದ್ದಾನೆ. ನಮ್ಮೊಳಗೆ ಕೆದಕಿ ನೋಡಿದಾಗ ಅದು ಅರಿವಾಗುವುದು; ಬೇರೆಲ್ಲಿಯೂ ಅರಸುತ್ತಾ ಹೋಗುವ ಅವಶ್ಯಕತೆ ಇಲ್ಲ.ಎನ್ನುವ ಸಂದೇಶ ಸಿಗುವ ನಾಟಕಕ್ಕೆ ಸಮಯೋಚಿತವಾಗಿ ಅಳವಡಿಸಿದ್ದ ದಾಸರ ಕೀರ್ತನೆಗಳು ನಾಟಕಕ್ಕೆ ಮೆರುಗನ್ನು ಕೊಟ್ಟಿತ್ತು.ನಾಟಕದ ಬಳಿಕ, ಹೆಸರಾಂತ ನಾಟಕ ವಿಮರ್ಶಕ, ವೈ.ವಿ. ಗುಂಡೂರಾವ್ ರವರಿಂದ ನವಿರಾದ ಹಾಸ್ಯ ಕಾರ್ಯಕ್ರಮವಿತ್ತು. ಜೂನ್ ೩ ರಂದು 'ಎಚ್.ಎನ್.ಕಲಾಕ್ಷೇತ್ರ'ದಲ್ಲಿ 'ಅಂತರಂಗ ಏರ್ಪಡಿಸಿದ್ದ ವ್ಯವಸ್ಥೆಯಲ್ಲಿ 'ಬೆಳ್ಳಿಬೈಲು ನಾಟಕವನ್ನು ಮತ್ತೊಮ್ಮೆ ಪ್ರದರ್ಶಿಸಲಾಯಿತು. ಈಗ ತಿಳಿಸಿದ ೩ ಪ್ರಾಯೋಗಿಕ ನಾಟಕಗಳನ್ನು 'ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ' ಪ್ರಾಯೋಜಿಸಿತ್ತು. ಈ ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ರಂಗಸಜ್ಜಿಕೆ, ಬೆಳಕು,ನೇಪಥ್ಯದ ನೆರವುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವರು,ಡಾ.ಬಿ.ಆರ್.ಮಂಜುನಾಥ್. ಶ್ರೀ.ಕೆ.ಮಂಜುನಾಥಯ್ಯ ಹಾಗೂ ಮತ್ತಿತರ ಸಹ-ಕಲಾವಿದರು ಈ ನಾಟಕಗಳಲ್ಲಿ ಪಾತ್ರವಹಿಸಿ ಅವುಗಳ ಯಶಸ್ಸಿಗೆ ಕಾರಣರಾದರು. ಮಂಜುನಾಥಯ್ಯನವರು ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ಎಲ್ಲ ಸ್ಥರಗಳಲ್ಲೂ ತಮ್ಮಯೋಗದಾನ ಮಾಡುತ್ತಿದ್ದಾರೆ.
 
* [[ವರ್ಗ:ರಂಗಭೂಮಿ ಕಲಾವಿದರು]]
* [[ವರ್ಗ:ಮುಂಬೈನ ಕನ್ನಡ ಸಂಘಟಕರು]]
* [[ವರ್ಗ:ಮುಂಬಯಿ ಕನ್ನಡಿಗರು]]
* [[ವರ್ಗ:ಮುಂಬೈ ರಂಗಭೂಮಿ ಕಲಾವಿದರು]]