ಮೆಣಸಿನಕಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಪಟ್ಟಿ ಸೇರಿಸಲಾಗಿದೆ |
|||
೧ ನೇ ಸಾಲು:
[[ಚಿತ್ರ:Madame Jeanette and other chillies.jpg|thumb]]
'''ಮೆಣಸಿನಕಾಯಿ''' [[ಸೊಲ್ಯಾನೇಸಿಯಿ]]ಯ ಸದಸ್ಯರಾದ ''[[ಕ್ಯಾಪ್ಸಿಕಮ್]]'' [[ಜಾತಿ]]ಯ ಸಸ್ಯಗಳ ಹಣ್ಣು. [[ಕ್ಯಾಪ್ಸೇಯಸಿನ್]] ಮತ್ತು ಹಲವು ಸಂಬಂಧಿತ ರಾಸಾಯನಿಕಗಳು, ಒಟ್ಟಾಗಿ ಕ್ಯಾಪ್ಸೇಯಸಿನಾಯ್ಡ್ಗಳು ಎಂದು ಕರೆಯಲಾದ ವಸ್ತುಗಳು, ಮೆಣಸಿನಕಾಯಿಗಳನ್ನು ಸೇವಿಸಿದಾಗ ಅಥವಾ ಬಾಹ್ಯವಾಗಿ ಲೇಪಿಸಿದಾಗ ಮೆಣಸಿನಕಾಯಿಗಳಿಗೆ ಅವುಗಳ ತೀಕ್ಷ್ಣತೆ ನೀಡುವ ವಸ್ತುಗಳು. ಮೆಣಸಿನಕಾಯಿಗಳು ಅಮೇರಿಕಾಗಳಲ್ಲಿ ಹುಟ್ಟಿಕೊಂಡವು.
ಭಾರತದ ಸಾಂಬರ ಉತ್ಪನ್ನಗಳಲ್ಲಿ ಮೆಣಸಿನಕಾಯಿ ಅತ್ಯಂತ ಪ್ರಮುಖವಾಗಿದೆ. ಇದು ಮೂಲತಃ ಬ್ರೆಜಿಲ್ ದೇಶದ ಸಸ್ಯವಾಗಿದ್ದು,ಪೋರ್ಚುಗೀಸರು ಭಾರತಕ್ಕೆ 17ನೇ ಶತಮಾನದಲ್ಲಿ ಪರಿಚಯಿಸಿದರು. ಸಾಮಾನ್ಯವಾಗಿ ದೇಶದ ಎಲ್ಲಾ ರಾಜ್ಯಗಳಲ್ಲೂ ಬೆಳೆಯಲಾಗುತ್ತದೆ. ಸದ್ಯ ೮ ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆಯಲಾಗುತಿದ್ದು, ಮೆಣಸಿನಕಾಯಿ ಉತ್ಪಾದನೆಯಲ್ಲಿ ವಿಶ್ವದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.
==ಪೋಷಕಾಂಶಗಳು==
೧೦೦ ಗ್ರಾಂ ಹಸಿಮೆಣಸಿನಕಾಯಿಯಲ್ಲಿ ದೊರೆಯುವ ಪೋಷಕಾಂಶಗಳು==
{| class="wikitable"
|-
| ತೇವಾಂಶ|| ೮.೮|| ಗ್ರಾಂ
|-
| ಮೇದಸ್ಸು|| ೦.೪|| ಗ್ರಾಂ
|-
| ನಾರಿನಾಂಶ|| ೧.೫|| ಗ್ರಾಂ
|-
| ಕಾರ್ಬೋಹೈಡ್ರೇಟ್|| ೮.೮|| ಗ್ರಾಂ
|-
| ಮೆಗ್ನೀಷಿಯಂ|| ೩|| ಮಿಲಿಗ್ರಾಂ
|-
| ಪೊಟ್ಯಾಷಿಯಂ|| ೩೨೨|| ಮಿಲಿಗ್ರಾಂ
|-
| ಕಬ್ಬಿಣ|| ೧|| ಮಿಲಿಗ್ರಾಂ
|-
| ಸಕ್ಕರೆ|| ೫.೩|| ಗ್ರಾಂ
|-
| ಪ್ರೋಟೀನ್|| ೧.೯|| ಗ್ರಾಂ
|}
[[File:Kashmiri Green Chilli.JPG|thumb|ಮೆಣಸಿನಕಾಯಿ]]
==ಭೌಗೋಳಿಕ ಅಂಶಗಳು==
ಮೆಣಸಿನಕಾಯಿ ಬೆಳೆಗೆ ಸುಮಾರು ೧೦ರಿಂದ ೩೦ ಸೆ.ಉಷ್ಣಾಂಶ ಅಗತ್ಯವಿದೆ. ಇದರ ಬೆಳವಣಿಗೆಗೆ ಸರಾಸರಿ ೬೦ರಿಂದ ೧೨೫ ಸೆ.ಮೀ ಮಳೆ ಸಾಕಾಗುತ್ತದೆ.ಈ ಬೆಳೆಗೆ ಅತಿ ಶುಷ್ಕ ಮತ್ತು ಅತಿ ತೇವ ಪರಿಸ್ಥಿಗಳೆರಡೂ ಮಾರಕ. ಕಪ್ಪು,ಮೆಕ್ಕಲು ಹಾಗೂ ಮರಳು ಮಿಶ್ರಿತ ಮೆಕ್ಕಲು ಮಣ್ಣು ಮೆಣಸಿನಕಾಯಿ ಬೆಳೆಗೆ ಹೆಚ್ಚು ಸೂಕ್ತ. ಇದು ಚಳಿಗಾಲದ ಬೆಳೆಯಾಗಿದ್ದು, ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಬಿತ್ತನೆ ಮಾಡಿ ಜೂನ್-ಜುಲೈನಲ್ಲಿ ಫಸಲು ಪಡೆಯಲಾಗುತ್ತದೆ. ಹಸಿರು ಮೆಣಸಿನಕಾಯಿಯನ್ನೇ ಬಳಸಲಾಗುತ್ತದಾದರೂ,ಬಲಿತ ಕೆಂಪು ಕಾಯಿಗಳನ್ನು ಒಣಗಿಸಲಾಗುತ್ತದೆ. ನಂತರ ಪುಡಿ ಮಾಡಿ ಬಳಸಲಾಗುತ್ತದೆ.
|