ಇರಾಕಿನ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಇರಾಕ್ ದೇಶ ಪಶ್ಚಿಮ ಏಷ್ಯದ ಒಂದು ಪುರಾತನ ಪ್ರದೇಶ. ಇದಕ್ಕೆ ಮೆಸೊಪೊಟೇಮಿಯ (ನದ...
 
No edit summary
೧ ನೇ ಸಾಲು:
ಇರಾಕ್ ದೇಶ ಪಶ್ಚಿಮ ಏಷ್ಯದ ಒಂದು ಪುರಾತನ ಪ್ರದೇಶ. ಇದಕ್ಕೆ ಮೆಸೊಪೊಟೇಮಿಯ (ನದಿಗಳ ನಡುವಣ ನಾಡು) ಎಂಬುದು ಪುರಾತನವಿಟ್ಟ ಅನ್ವರ್ಥನಾಮ. ಸುಮಾರು ನೂರು ವರ್ಷಗಳಿಂದ ಇಲ್ಲಿ ನಡೆದ ಭೂಶೋಧನೆಗಳಿಂದ ಈ ಪ್ರದೇಶ ಅತ್ಯಂತ ಪ್ರಾಚೀನ ನಾಗರಿಕತೆಗಳ ತೌರು ಮಾತ್ರವಲ್ಲದೆ ಇತಿಹಾಸಪೂರ್ವ ಯುಗದಲ್ಲೂ ಆದಿಮಾನವನ ಕಾರ್ಯರಂಗವಾಗಿದ್ದು ನಾಗರಿಕತೆಯ ತೊಟ್ಟಿಲು ಎಂಬ ಬಿರುದನ್ನು ಸಾರ್ಥಕಗೊಳಿಸಿಕೊಂಡಿದೆ.
 
[[ಇರಾಕ್|ಇರಾಕ್ ದೇಶದಲ್ಲಿ]] ನಡೆದಿರುವ 6,400 ಕ್ಕಿಂತಲೂ ಹೆಚ್ಚಿನ ಭೂಶೋಧನೆಗಳಿಂದ ದೇಶದ ಪುರಾತನ ಚರಿತ್ರೆ ತಿಳಿದುಬರುತ್ತದೆ. ನವಶಿಲಾಯುಗದಲ್ಲಿ ಕೊರೆದ ಮತ್ತು ಬಣ್ಣಗಳಿಂದ ಚಿತ್ರಿತವಾದ ಮಣ್ಣಿನ ಪಾತ್ರೆಗಳನ್ನು ಉಪಯೋಗಿಸುತ್ತ ಒಂದೇ ಸ್ಥಳದಲ್ಲಿ ಸ್ಥಿರಜೀವನ ನಡೆಸುತ್ತಿದ್ದ ಜನರ ಸಂಸ್ಕøತಿಯ ಚಿತ್ರ ಟೆಲ್ ಹಸೂನಾದ ಭೂಶೋಧನೆಗಳಿಂದ ಕಂಡು ಬರತ್ತದೆ. ಟೆಲ್ ಹಲಾಫೆ ಭೂಶೋಧನೆಗಳು ವಿವಿಧ ಬಣ್ಣಬಳಿದ ರಮ್ಯವಾಗಿ ಅಲಂಕೃತವಾದ ಮಣ್ಣಿನ ಪಾತ್ರೆಗಳನ್ನೂ ಕಲ್ಲಿನ ಆಯುಧಗಳನ್ನೂ ಬಳಸುತ್ತಿದ್ದ ಜನರ ಜೀವನವನ್ನು ನಿರೂಪಿಸುತ್ತದೆ.
 
ತಾಮ್ರ ಶಿಲಾಯುಗದವರಿಗೆ ಅಂದವಾದ ಬಣ್ಣದ ಮಡಕೆಗಳು, ತಾಮ್ರ, ಇತರ ಮೊದಲಾದ ಲೋಹಗಳ ಉಪಯೋಗ ತಿಳಿದಿತ್ತು. ಮೊತ್ತ ಮೊದಲನೆಯ ದೇವಸ್ಥಾನ ಕಟ್ಟಿದ್ದ ಆ ಜನರ ಜೀವನಚಿತ್ರ ಅಲ್ ಉಬೈದ್ ಭೂಶೋಧನೆಗಳಿಂದ ದೊರಕುತ್ತದೆ. ದಕ್ಷಿಣ ಇರಾಕಿನಲ್ಲಿ ಉರುಕ್ ಸಂಸ್ಕøತಿ ಕಾಲದಲ್ಲಿ ದೊಡ್ಡ ದೊಡ್ಡ ದೇವಾಲಯಗಳೂ ಹೊಸನಗರಗಳೂ ಉರುಳೆಯಾಕಾರದ ಮುದ್ರೆಗಳೂ ಚಿತ್ರಲಿಪಿಯೂ ಇದ್ದುದಕ್ಕೆ ಉತ್ಪನ್ನಗಳು ಸಾಕ್ಷಿ ಒದಗಿಸಿವೆ. ಖಫಾಜೆ ಮತ್ತು ಟೆಲ್ ಅಸಮಾರ್ ಭೂಶೋಧನೆಗಳಿಂದ ತಿಳಿದುಬರುವಂತೆ ಪ್ರಾಚೀನರಾಜ್ಯವಂಶದ ಕಾಲದಲ್ಲಿ ದೇಶ ನೀರಾವರಿ ವ್ಯವಸಾಯದಿಂದ ಸಂಪದ್ಯುಕ್ತವಾಗಿದ್ದು, ಇರಾಕ್ ಅಂದಿನ ಜಗತ್ತಿನ ಧಾನ್ಯ ಕಣಜದಂತಿತ್ತು. ಅರ್ ನಗರದ ಆಳರಸರ ಶ್ಮಶಾನ ಶೋಧನೆಗಳಿಂದ ಆ ಕಾಲದ ಐಶ್ವರ್ಯ ಮತ್ತು ಸಂಸ್ಕøತಿಯ ಮಟ್ಟ ತಳಿದು ಬರುತ್ತದೆ (ನೋಡಿ- ಅರ್). ಮಾರಿ, ನೂಜಿ, ದುರ್ ಕುರಿಕಾಲ್ಜುಗಳ ಭೂಶೋಧನೆಗಳಲ್ಲಿ ದೊರೆತ ಜೇಡಿಮಣ್ಣಿನ ಲಿಖಿತ ಫಲಕಗಳಿಂದ ಕ್ರಿ. ಪೂ. 3ನೆಯ ಸಹಸ್ರಾಬ್ಧದ ಇತಿಹಾಸ ತಿಳಿದುಬರುತ್ತದೆ. ಅಸ್ಸೂರ್, ನಿನೆವೆ, ನಿಮ್ರುಸ್, ನಿಪ್ಪೂರ್ ಮುಂತಾದ ಸ್ಥಳಗಳ ಭೂಶೋಧನೆಗಳಿಂದ ಕ್ರಿ.ಪೂ 3 ರಿಂದ 1ನೆಯ ಸಹಸ್ರಾಬ್ದಗಳ ಇರಾಕಿ ಸಂಸ್ಕøತಿಯ ಅನೇಕ ವಿಷಯಗಳು ಗೊತ್ತಾಗಿವೆ. ಇವುಗಳ ಕೆಲವು ವಿವರಗಳನ್ನಿಲ್ಲಿ ಸಂಗ್ರಹಿಸಲಾಗಿದೆ.
"https://kn.wikipedia.org/wiki/ಇರಾಕಿನ_ಇತಿಹಾಸ" ಇಂದ ಪಡೆಯಲ್ಪಟ್ಟಿದೆ