ಲೇಸರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೮ ನೇ ಸಾಲು:
 
 
ರಾಮನ್ ಪರಿಣಾಮವನ್ನು ಕಂಡುಹಿಡಿದ ಬಳಿಕ ಕೆಲವು ಅಣುಗಳ ರಚನೆಯನ್ನು ಅಧ್ಯಯನಕ್ಕೆ ಒಳಪಡಿಸಲು ಸಾಧ್ಯವಾದದ್ದು, ಅದಕ್ಕಾಗಿಯೇ [[ಸಿ.ವಿ.ರಾಮನ್]] ಇವರಿಗೆ ನೋಬೆಲ್ ಪಾರಿತೋಷಕ ದೊರೆತದ್ದು ಸಂಗತಿ ನಮಗೆಲ್ಲರಿಗೂ ಚಿರಪರಿಚಿತ. ಆದರೆ ಲೇಸರ್ ಕಂಡುಹಿಡಿದ ಬಳಿಕ ರಾಮನ್ ಪರಿಣಾಮದ ಅನ್ವಯ ಇನ್ನಷ್ಟು ವಿಸ್ತಾರಗೊಂಡಿತು. ಬಹಳಷ್ಟು ಅಣುಗಳ ರಚನೆಯ ವಿನ್ಯಾಸವನ್ನು ಅಧ್ಯಯನಕ್ಕೆ ಒಳಪಡಿಸಲು ಸಾಧ್ಯವಾಯಿತು. ಇದರರ್ಥ ಲೇಸರ್ ಬೆಳಕಿನ ಉಪಯೋಗ ಕೇವಲ ರಾಸಾಯನಿಕ ವಿಜ್ಞಾನದಲ್ಲಿ ಇದೆ ಎಂದಲ್ಲ. ಲೇಸರ್ ಬೆಳಕಿನ ಉಪಯೋಗಗಳನ್ನು ಆಧುನಿಕ ಸಾಮಾಜಿಕ ಹಿನ್ನೆಲೆಯಲ್ಲಿ ಹೀಗೆ ಪಟ್ಟಿ ಮಾಡಬಹುದು. ಸಂಪರ್ಕ ಸಾಧನವಾಗಿ, ವೈದ್ಯಕೀಯ ಕ್ಷೇತ್ರದಲ್ಲಿ, ಕೈಗಾರಿಕೆಗಳಲ್ಲಿ, ಕಾನೂನು ಸುವ್ಯವಸ್ಥೆ ಏರ್ಪಡಿಸುವಲ್ಲಿ, ಮನೋರಂಜನೆ, ರಕ್ಷಣಾ ಕ್ಷೇತ್ರ, ಇಂಟರ್ ನೆಟ್ ಬಳಕೆಯನ್ನು ಇಷ್ಟೊಂದು ವ್ಯಾಪಕವಾಗಿ ಬಳಸುವಲ್ಲಿ ಲೇಸರ್ ಬೆಳಕಿನ ಕೊಡುಗೆ ಅಪಾರವಾಗಿದೆ.
ದೈನಂದಿನ ಜೀವನದಲ್ಲಿ ಮಾಲ್ ಗಳಲ್ಲಿ ಸೂಪರ್ ಮಾರ್ಕೆಟ್ಟುಗಳಲ್ಲಿ ವಸ್ತುಗಳನ್ನು ಕೊಳ್ಳುವಾಗ ಬಾರ್ ಕೋಡ್ ಗಳ ಮೂಲಕ ದರವನ್ನು ತಿಳಿದು ಬಿಲ್ ಸಿದ್ಧಪಡಿಸುವಲ್ಲಿ ಲೇಸರ್ ಬೆಳಕಿನ ಉಪಯೋಗವನ್ನು ಜನಸಾಮಾನ್ಯರು ಗುರುತಿಸಿರುತ್ತಾರೆ. ಕಂಪ್ಯೂಟರ್ ಗಳಲ್ಲಿ ಲೇಸರ್ ಡಿಸ್ಕ್ ಗಳ ಉಪಯೋಗವನ್ನು ೧೯೭೮ ರಿಂದ ನಡೆಸಿಕೊಂಡು ಬರಲಾಗುತ್ತಿದೆ. ೧೯೮೨ ರಿಂದ ಲೇಸರ್ ಪ್ರಿಂಟರ್ ಗಳ ಬಳಕೆ ಪ್ರಾರಂಭಗೊಂಡು ಈಗ ಅದು ಅತ್ಯಂತ ಜನಪ್ರಿಯವಾಗಿ ಬಳಕೆಗೊಳ್ಳುತ್ತಿದೆ.
# ವೈದ್ಯಕೀಯ ಕ್ಷೇತ್ರದಲ್ಲಿ: ರಕ್ತ ರಹಿತ ಶಸ್ತ್ರಕ್ರಿಯೆಗಳಲ್ಲಿ (ಎಂಡೋಸ್ಕೋಪ್ ಗಳನ್ನು ಬಳಸಿ ಜಠರದಲ್ಲಿ ಬೆಳೆದ ಗಡ್ಡೆಗಳನ್ನು ನಿರ್ನಾಮಗೊಳಿಸುವುದು) ಮೂತ್ರಕೋಶದ ಕಲ್ಲುಗಳನ್ನು ಕರಗಿಸುವುದು, ಕಣ್ಣಿನ ಪೊರೆಯನ್ನು ಸ್ವಚ್ಛಗೊಳಿಸುವುದು, ಹಲ್ಲುಗಳ ಸ್ವಚ್ಛತೆ ಮತ್ತಿತರ ಸಂದರ್ಭದಲ್ಲಿ, ತೀರಾ ಇತ್ತೀಚೆಗೆ ಶವವಿಲ್ಲದೇ ಶವದ ಭಾಗಗಳ ಕುರಿತು ಪಾಠವನ್ನು ಮಾಡಲು ಲೇಸರ್ ಬಳಕೆ ಆರಂಭಗೊಂಡಿದೆ.
"https://kn.wikipedia.org/wiki/ಲೇಸರ್" ಇಂದ ಪಡೆಯಲ್ಪಟ್ಟಿದೆ