ಅಗ್ನಿ(ಹಿಂದೂ ದೇವತೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೭ ನೇ ಸಾಲು:
ಇಂಥ ಅಸಾಧಾರಣ ಪ್ರಭಾವವುಳ್ಳ ಅಗ್ನಿಯನ್ನು ಭೃಗು, ಅಂಗೀರಸ, ಅಥರ್ವ, ಇತ್ಯಾದಿ ಮಹರ್ಷಿಗಳು ಯಜ್ಞಾರ್ಥವಾಗಿ ಪೃಥ್ವಿಗೆ ಕರೆತಂದರು, ದೇವಮಾನವಾದಿಗಳಿಂದೆಲ್ಲ ಪ್ರಾರ್ಥಿತನಾದ ಅಗ್ನಿ ಸಕಲ ಯಜ್ಞಕರ್ಮಗಳನ್ನೂ ಸಮಸ್ತ ಋತ್ವಿಕ್ಕುಗಳ ರೂಪದಲ್ಲಿ ನಿರ್ವಹಿಸಲು ಶಕ್ತ. ಅತ್ಯುತ್ತಮವಾದ ಜ್ಞಾನವುಳ್ಳವ. ಕವಿಗಳಿಗೆಲ್ಲ ದಿವ್ಯಸ್ವರೂಪಿ. ಯಜ್ಞಸಾಧಕ, ಯಜ್ಞರಕ್ಷಕ. ಪ್ರತಿಯೊಂದು ಗೃಹದಲ್ಲೂ ಪ್ರಭಾವಯುತನಾದ ಅತಿಥಿ. ಸಕಲರಿಗೂ ಕ್ಷೇಮಕಾರಿ.
 
ಸಕಲ [[ಮಾನವ|ಮಾನವರಿಗೂ]] ಪ್ರಭುವೂ ಪಾಲಕನೂ ಆದ ಎಲೈ ಅಗ್ನಿಯೇ, ನೀನು ಯಾಗಾರ್ಥವಾಗಿ ಉತ್ಪನ್ನನಾಗಿದ್ದೀಯೆ. ಸ್ವತಃ ತೇಜೋಮಯನಾಗಿದ್ದು ಸಕಲ ಜಗತ್ತಿಗೂ ಪ್ರಕಾಶವನ್ನು ಹರಡುತ್ತೀಯೆ. ನಿನ್ನ ಮಾಹಾತ್ಮ್ಯ ದ್ಯುಲೋಕಕ್ಕಿಂತಲೂ ಅಧಿಕವಾಗಿ ಬೆಳೆದಿದೆ. ಮಾನವರಿಗೆ ಪ್ರಭುವಾಗಿರುವಂತೆ ಸಕಲ ದೇವತೆಗಳಿಗೂ ನೀನು ಪ್ರಭು. ದ್ವಾವಾಪೃಥಿವಿಗಳು ವಿಸ್ತೃತವಾಗಿ ಪ್ರಸರಿಸಲು ನೀನೇ ಕಾರಣ. ಅವು ನಿನ್ನ ಶಕ್ತಿಯಿಂದಲೇ ಸ್ಥಿರವಾಗಿ ನಿಂತಿವೆ.
 
‘ಔಷನ್ಯೋಗ್ನಿ ದ್ಯಾವಾಪೃಥಿವಿಗಳೆರಡನ್ನೂ ತನ್ನ ತೇಜಸ್ಸುಗಳಿಂದ ಅಲಂಕರಿಸುತ್ತ ಉದಕಕ್ಕೆ ಮೂಲಸ್ಥಾನವಾದ ಅಂತರಿಕ್ಷವನ್ನೆಲ್ಲ ವ್ಯಾಪಿಸುತ್ತಾನೆ. ಅಂತರಿಕ್ಷದ ಜಲ ಸಂಘಾತವನ್ನು ಪ್ರವಾಹರೂಪದಿಂದ ಹರಿಯುವಂತೆ ಮಾಡುತ್ತಾನೆ. ವೃಷ್ಟಿಯ ಫಲವಾಗಿ ಉತ್ಪನ್ನವಾದ ಸಕಲ ಸಸ್ಯಗಳಲ್ಲೂ ವ್ಯಾಪಿಸುತ್ತಾನೆ.' ‘ಸಕಲ ಚರಾಚರಾತ್ಮಕವಾದ ಜಗತ್ತಿಗೂ ನಾಭಿಭೂತವಾದ ಅಗ್ನಿಯ ವೈಶ್ವಾನರ ಸಂಜ್ಞಕವಾದ ತತ್ತ್ವವನ್ನು ಮನಸ್ಸಿನಲ್ಲಿಯೇ ಧ್ಯಾನಿಸಿ ಪುಜಿಸೋಣ‘.
"https://kn.wikipedia.org/wiki/ಅಗ್ನಿ(ಹಿಂದೂ_ದೇವತೆ)" ಇಂದ ಪಡೆಯಲ್ಪಟ್ಟಿದೆ