ಅಗ್ನಿ(ಹಿಂದೂ ದೇವತೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧೮ ನೇ ಸಾಲು:
|Planet =
}}
'''ಅಗ್ನಿ''' ಒಬ್ಬ [[ಋಗ್ವೇದದ ದೇವತೆಗಳು|ಹಿಂದೂ ದೇವತೆ]], [[ವೈದಿಕ ನಾಗರಿಕತೆ|ವೈದಿಕ]] [[ದೇವರು|ದೇವತೆಗಳ]] ಅತ್ಯಂತ ಪ್ರಮುಖರ ಪೈಕಿ ಒಬ್ಬನು. ಅವನು ಬೆಂಕಿಯ ದೇವರು ಮತ್ತು ಬಲಿಗಳ ಸ್ವೀಕಾರಕ. ಅಗ್ನಿಗೆ ಅರ್ಪಿಸಲಾದ ಬಲಿಗಳು [[ದೇವರು|ದೇವತೆಗಳಿಗೆ]] ಹೋಗುತ್ತವೆ ಏಕೆಂದರೆ ಅಗ್ನಿಯು ಇತರ ದೇವತೆಗಳಿಂದ ಮತ್ತು ಇತರ ದೇವತೆಗಳಿಗೆ ಸಂದೇಶವಾಹಕ.
 
ಅಗ್ನಿಯು ಪೃಥ್ವಿಗೆ ಅಧಿಪತಿಯಾದ ದೇವತೆ ಎಂದು ಪ್ರಸಿದ್ಧನಾಗಿದ್ದು ದ್ಯಾವಾಪೃಥಿವ್ಯಾದಿ ಸಕಲ ಲೋಕಗಳಲ್ಲೂ ವ್ಯಾಪಿಸಿರುವ ದಿವ್ಯಜ್ಯೋತಿ, ದಿವ್ಯಶಕ್ತಿ. ಸಕಲ ದೇವಮಾನವಾದಿಗಳೆಲ್ಲರ ವ್ಯವಹಾರಕ್ಕೂ ಮಾರ್ಗದರ್ಶಕನಾದ್ದರಿಂದ ಅಗ್ನಿ ಎಂಬ ಹೆಸರು ಅನ್ವರ್ಥವಾಗಿದೆ (ನಿರುಕ್ತ 7.14). ವಿಶ್ವವ್ಯಾಪಕನೂ ವಿಶ್ವಧಾರಕನೂ ಸಕಲದೇವತಾತ್ಮನೂ ಅಮರನೂ ಆದ ಅಗ್ನಿಯ ರೂಪಾಂತರಗಳು ವೈಶ್ವಾನರಾದಿ ಸಂಜ್ಞೆಗಳಿಂದ ಪ್ರಶಂಸಿತವಾಗಿದೆ. ಸಕಲ ಭೂತಗಳಲ್ಲೂ ಪ್ರವೇಶಿಸಿ ನೇತೃವಾಗಿರುವುದರಿಂದ ವೈಶ್ವಾನರ, ಧನ ಮತ್ತು ಶಕ್ತಿದಾತನಾದ್ದರಿಂದ ಪ್ರವಿಣೋದಾಃ, ಉತ್ಪನ್ನವಾದ ಸಕಲವನ್ನೂ ಅರಿತಿರುವುದರಿಂದ ಜಾತವೇದಸ್, ನರರಿಂದ ಪ್ರಶಂಸಿತನಾಗಿರುವುದರಿಂದ ನರಾಶಂಸ, ಉದಕಗಳಿಂದ ಓಷಧಿಗಳೂ ಓಷಧಿಗಳಿಂದ ಅಗ್ನಿಯೂ ಉತ್ಪನ್ನವಾಗುವುದರಿಂದ ಅಪಾಂನಪಾತ್, ತನ್ನಿಂದ ತಾನೇ ಉತ್ಪನ್ನವಾಗುವುದ ರಿಂದ ತನೂನಪಾತ್, ಅಂಗಾರದಿಂದ (ಕೆಂಡ) ಉತ್ಪನ್ನವಾಗುವುದರಿಂದ ಅಂಗಿರಾ-ಹೀಗೆ ನಾನಾವಿಧವಾಗಿ ಅಗ್ನಿಯ ರೂಪಾಂತರಗಳನ್ನು ಸ್ತುತಿಸಿದೆ.
೨೪ ನೇ ಸಾಲು:
ಅಗ್ನಿಯ ಸ್ವರೂಪವೆರಡು ವಿಧ. ಒಂದು ನಿತ್ಯ-ನಿಣ್ಯ ಗುಹ್ಯ ಇತ್ಯಾದಿ ವಿಶೇಷಣಗಳಿಂದ ವರ್ಣಿತವಾದ ಮತ್ತು ಸಾಧಾರಣ ದೃಷ್ಟಿಗೆ ಗೋಚರವಾಗದ ದಿವ್ಯ ಸ್ವರೂಪವುಳ್ಳದ್ದು. ಇನ್ನೊಂದು ಉತ್ಪನ್ನ-ಲೌಕಿಕಸ್ವರೂಪವುಳ್ಳದ್ದಾದರೂ ಅಸಾಧಾರಣಶಕ್ತಿಯಿಂದ ಕೂಡಿದ್ದು. ಈ ಎರಡು ರೂಪಗಳಿಂದಲೂ ಅಗ್ನಿಯ ಪ್ರಸಾರ ಮತ್ತು ಆಧಿಪತ್ಯ ಮೂರು ಲೋಕಗಳಿಗೂ ಸಂಬಂಧಿಸಿದೆ. ಅಗ್ನಿ ಪ್ರಥಮತಃ ದ್ಯುಲೋಕದಲ್ಲಿ ಆದಿತ್ಯಾತ್ಮನಾಗಿ ಉತ್ಪನ್ನನಾದ. ಎರಡನೆಯದಾಗಿ ಪೃಥ್ವಿಯಲ್ಲಿ ಜಾತವೇದರೂಪವನ್ನು ಹೊಂದಿದ. ಮೂರನೆಯದಾಗಿ ಅಂತರಿಕ್ಷದಲ್ಲಿ ಮಿಂಚಿನ ರೂಪದಲ್ಲಿ ಜನಿಸಿದ. ಈತ ದ್ಯುಲೋಕಕ್ಕೆ ಶಿರಸ್ಸಿನಂತೆ ಪ್ರಧಾನ. ಪೃಥಿವಿಗೆ ನಾಭಿ ರೂಪದ ಸಂರಕ್ಷಕ. ದ್ಯಾವಾಪೃಥಿವಿಗಳೆರಡಕ್ಕೂ ಅಧಿಪತಿ. ದಿವ್ಯಾಗ್ನಿ ರಾತ್ರಿಕಾಲದಲ್ಲಿ ಅಗ್ನಿ ರೂಪದಿಂದಲೂ ಪ್ರಾತಃಕಾಲ ಸೂರ್ಯರೂಪದಿಂದಲೂ ಪ್ರಕಾಶಿಸುತ್ತ ತನ್ನ ಲೋಕರಕ್ಷಣಾಕಾರ್ಯವನ್ನು ನಿರ್ವಹಿಸುತ್ತಾನೆ. ಸಕಲರೂಪಗಳನ್ನು ಹೊಂದಿರುವದರಿಂದ ವಿಶ್ವಾಪ್ಸು. ಇವನೇ ಚಂದ್ರ, ಇವನೇ ವರುಣ, ಮಿತ್ರಾದಿ ಸಕಲದೇವತೆಗಳೂ ಇವನೇ. ಮೂರು ಲೋಕಗಳಲ್ಲೂ ವ್ಯಾಪಿಸುವುದರಿಂದ ತ್ರಿತ. ಆದಿತ್ಯಾದಿ ಮೂರು ರೂಪಗಳಿಂದ ಪ್ರಕಾಶಿಸುವುದರಿಂದ ತ್ರಯಃಕೇಶಿನಃ ಎಂದು ಪ್ರಶಂಸಿತನಾಗಿದ್ದಾನೆ. ತ್ರಿಮೂರ್ಥಾ ತ್ರಿಧಾತು ತ್ರಿಪಾಜಸ್ಯ ತ್ರ್ಯನೀಕ ಇತ್ಯಾದಿ ವಿಶೇಷಣಗಳು ಮೂರುಲೋಕಗಳಲ್ಲೂ ಅಗ್ನಿಯ ಪ್ರಸಾರಕ್ರಮವನ್ನು ಕ್ರಿಯಾಪ್ರಭೇದಗಳನ್ನು ತಿಳಿಸುತ್ತವೆ.
 
ಇವನು [[ಯಜ್ಞ|ಯಜ್ಞದಲ್ಲಿ]] ಅರ್ಪಿಸಿದ ಹವಿಸ್ಸನ್ನು ಎಲ್ಲ ದೇವತೆಗಳಿಗೂ ಮುಟ್ಟಿಸುವನು; ಆದ್ದರಿಂದ ಎಲ್ಲ ದೇವತೆಗಳೂ ಬೇಕಾದವನು. ಅಗ್ನಿಯನ್ನು ಕುರಿತು ಋಗ್ವೇದದಲ್ಲಿ ಅನೇಕ ಸೂಕ್ತಿಗಳಿವೆ. ಪಾರ್ಥಿವಾಗ್ನಿಯ ಉತ್ಪತ್ತಿ ಅನೇಕ ವಿಧ. ಎಲೈ ಅಗ್ನಿಯೇ, ಶುಷ್ಕವೂ ರಸರಹಿತವೂ, ನಿರ್ಜೀವಿಯೂ ಆದ ಅರಣಿಗಳಿಂದ ಚೈತನ್ಯಾತ್ಮಕವಾದ ನೀನು ಉತ್ಪನ್ನನಾದೊಡನೆ ಯಜಮಾನರು ಭಕ್ತಿಯಿಂದ ನಿನ್ನನ್ನು ಪುಜಿಸಿದರು. ಈ ಶಿಶು ಉತ್ಪನ್ನನಾದೊಡನೆ ತನ್ನ ಅಲೌಕಿಕವಾದ ಪ್ರಭಾವದಿಂದ ತನ್ನ ಪಿತೃಗಳನ್ನೆ ನುಂಗುವ ಪ್ರಯತ್ನಮಾಡುತ್ತದೆ. ಅಗ್ನಿ ಉತ್ಪನ್ನನಾದೊಡನೆ ನುಲುಚಿಕೊಂಡು ಏದುವ ಸರ್ಪದಂತೆ ತೀವ್ರ ಗಮನವುಳ್ಳವನಾಗಿ ಮಾನವನ ಹಿಡಿತಕ್ಕೆ ಸಿಲುಕದೆ ತಪ್ಪಿಸಿಕೊಳ್ಳುತ್ತಾನೆ. ‘ಸ್ವರೂಪತಃ ಅಗ್ನಿ ಸುವರ್ಣಾತ್ಮಕ ಮತ್ತು ಪ್ರಭಾಪುರಿತ. ಆದರೆ, ಅವನ ಸಂಚಾರಮಾರ್ಗ ಕೃಷ್ಣವರ್ಣವುಳ್ಳದ್ದು. ವನವನ್ನೆಲ್ಲ ಆಕ್ರಮಿಸಿ ದಹಿಸಿ ಎಲ್ಲವನ್ನೂ ಕೃಷ್ಣವರ್ಣವುಳ್ಳದ್ದನ್ನಾಗಿ ಮಾಡುತ್ತಾನೆ.' ಅವನ ಜ್ವಾಲೆಗಳು ಸಮುದ್ರದ ಅಲೆಗಳಂತೆ ಭೋರ್ಗರೆಯುತ್ತದೆ. ಗುಡುಗಿನಂತೆಯೂ ಸಿಂಹದಂತೆಯೂ ಗರ್ಜಿಸುತ್ತಾನೆ. ಅವನ ರಥ ಪ್ರಭಾಯುತವೂ ಸುವರ್ಣನಿರ್ಮಿತವೂ ಆಕರ್ಷಕವೂ ಆಗಿದೆ. ರಥದ ಅಶ್ವಗಳು ಇನ್ನೂ ಆಕರ್ಷಕವಾಗಿವೆ. ಅವು ಘೃತಪೃಷ್ಠವುಳ್ಳವಾಗಿಯೂ ವಾಯುಪ್ರೇರಿತವಾಗಿಯೂ ಹೊಂಬಣ್ಣದಿಂದ ಕೂಡಿಯೂ ಕ್ರಿಯಾಶಕ್ತಿಯುತವಾಗಿಯೂ ನಾನಾ ರೂಪವಾಗಿಯೂ ಸಂಕಲ್ಪ ಮಾತ್ರದಿಂದಲೆ ರಥಕ್ಕೆ ಯೋಜಿತವಾಗಿಯೂ ಇವೆ. ದ್ಯುಲೋಕದ ಶ್ಯೇನ (ಗಿಡುಗ) ಪಕ್ಷಿಯಾದ ಅಗ್ನಿ ದಿವ್ಯರಥದಲ್ಲಿ ಕುಳಿತು ಯಜ್ಞಾರ್ಥವಾಗಿ ಇಳಿಯುತ್ತಾನೆ.
ಇಂಥ ಅಸಾಧಾರಣ ಪ್ರಭಾವವುಳ್ಳ ಅಗ್ನಿಯನ್ನು ಭೃಗು, ಅಂಗೀರಸ, ಅಥರ್ವ, ಇತ್ಯಾದಿ ಮಹರ್ಷಿಗಳು ಯಜ್ಞಾರ್ಥವಾಗಿ ಪೃಥ್ವಿಗೆ ಕರೆತಂದರು, ದೇವಮಾನವಾದಿಗಳಿಂದೆಲ್ಲ ಪ್ರಾರ್ಥಿತನಾದ ಅಗ್ನಿ ಸಕಲ ಯಜ್ಞಕರ್ಮಗಳನ್ನೂ ಸಮಸ್ತ ಋತ್ವಿಕ್ಕುಗಳ ರೂಪದಲ್ಲಿ ನಿರ್ವಹಿಸಲು ಶಕ್ತ. ಅತ್ಯುತ್ತಮವಾದ ಜ್ಞಾನವುಳ್ಳವ. ಕವಿಗಳಿಗೆಲ್ಲ ದಿವ್ಯಸ್ವರೂಪಿ. ಯಜ್ಞಸಾಧಕ, ಯಜ್ಞರಕ್ಷಕ. ಪ್ರತಿಯೊಂದು ಗೃಹದಲ್ಲೂ ಪ್ರಭಾವಯುತನಾದ ಅತಿಥಿ. ಸಕಲರಿಗೂ ಕ್ಷೇಮಕಾರಿ.
 
"https://kn.wikipedia.org/wiki/ಅಗ್ನಿ(ಹಿಂದೂ_ದೇವತೆ)" ಇಂದ ಪಡೆಯಲ್ಪಟ್ಟಿದೆ