ಅಮರಕೋಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಅಮರಸಿಂಹ|ಅಮರಸಿಂಹನು]] [[ಸಂಸ್ಕೃತ]] [[ಭಾಷೆ|ಭಾಷೆಯಲ್ಲಿ]] ರಚಿಸಿದ ''ನಾಮಲಿಂಗಾನುಶಾಸನ'' ಎಂಬ ಸಮಾನಾರ್ಥಕ ಪದಕೋಶವೇ ಅಮರಕೋಶ. ''ನಾಮಲಿಂಗಾನುಶಾಸನ'' ಕೃತಿಯನ್ನು ಅವನ ಗೌರವಾರ್ಥ ''ಅಮರಕೋಶ'' ಎಂದು ಕರೆಯುತ್ತಾರೆ. ಈ ಕೃತಿಯು ಅಮರಾನಿರ್ಜರಾದೇವಾಃ ಎಂದು ಅರಂಭವಾಗುವುದರಿಂದ ''ಅಮರಕೋಶ'' ಎಂಬ ಹೆಸರು ಬಂದಿದೆ ಎಂದೂ ಹೇಳುತ್ತಾರೆ.
''ನಾಮಲಿಂಗಾನುಶಾಸನ'' ಎಂದರೆ ನಾಮ ಮತ್ತು ಲಿಂಗಗಳನ್ನು ಕುರಿತಾದ ವ್ಯವಸ್ಥೆ ಎಂದರ್ಥ.
ಅಮರಸಿಂಹನು ಕ್ರಿ.ಶ. ೪೦೦ ರ ಸುಮಾರಿಗೆ ಇದ್ದ ಗುಪ್ತವಂಶದ ಎರಡನೆಯ ಚಂದ್ರಗುಪ್ತ ಅರಸನ ಆಸ್ಥಾನದಲ್ಲಿದ್ದ [[ನವರತ್ನ|ನವರತ್ನಗಳಲ್ಲಿ]] ಒಬ್ಬನು. ಅವನು ಕ್ರಿ.ಶ. ಏಳನೇ ಶತಮಾನದಲ್ಲಿದ್ದ [[ವಿಕ್ರಮಾದಿತ್ಯ|ವಿಕ್ರಮಾದಿತ್ಯನ]] ಕಾಲಕ್ಕೆ ಸೇರಿದವನು ಎಂದೂ ಕೆಲವು ಮೂಲಗಳು ತಿಳಿಸುತ್ತವೆ. ಅಮರಸಿಂಹನು ಬೌದ್ಧ ಅಥವಾ ಜೈನ ಪಂಡಿತನು.
[[ಅದ್ವೈತ]] ಮತಪ್ರಚಾರಕ್ಕೆಂದು ಭಾರತದಾದ್ಯಂತ ಪ್ರವಾಸದಲ್ಲಿದ್ದ [[ಶಂಕರಾಚಾರ್ಯ|ಶಂಕರಾಚಾರ್ಯರು]] ಅಮರಸಿಂಹನನ್ನು ಭೇಟಿಯಾಗಬಯಸಿದಾಗ ಶಂಕರಾಚಾರ್ಯರೊಡನೆ ವಾದಕ್ಕಿಳಿಯಬಯಸದ ಅಮರಸಿಂಹನು ತನ್ನ ಎಲ್ಲ ಕೃತಿಗಳನ್ನು ಸುಟ್ಟು ಹಾಕಲು ಪ್ರಯತ್ನಿಸಿದನು. ಆಗ ಇದನ್ನು ತಿಳಿದ [[ಶಂಕರಾಚಾರ್ಯ|ಶಂಕರಾಚಾರ್ಯರು]] ಅವನ ಮನೆಗೆ ಧಾವಿಸಿದರು. ಅಷ್ಟು ಹೊತ್ತಿಗಾಗಲೇ ಅಮರಕೋಶವೊಂದನ್ನು ಬಿಟ್ಟು ಎಲ್ಲ ಕೃತಿಗಳು ಸುಟ್ಟು ಹೋಗಿದ್ದವು.
ಈ ಸಂಗತಿಯನ್ನು ''ಶಂಕರದಿಗ್ವಿಜಯ'' ದಲ್ಲಿ ಹೇಳಲಾಗಿದೆ.
ಅಮರಕೋಶವು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವಂತೆ ಪದ್ಯಗಳಿಂದ ಕೂಡಿದೆ. ಇದು ಮೂರು ಖಂಡ ಅಥವಾ ಅಧ್ಯಾಯಗಳಲ್ಲಿ ಇದೆ. ಮೊದಲನೆಯದು , ಸ್ವರ್ಗಾದಿಕಾಂಡ ದೇವರುಗಳ ಮತ್ತು ಸ್ವರ್ಗಕ್ಕೆ ಸಂಬಂಧಿಸಿದ ಪದಗಳನ್ನು ಹೊಂದಿದೆ. ಎರಡನೇ, ಭೂವರ್ಗಾದಿಕಾಂಡ ಭೂಮಿ, ಪಟ್ಟಣಗಳು​​, ಪ್ರಾಣಿಗಳು ಮತ್ತು ಮಾನವರಿಗೆ ಸಂಬಂಧಪಟ್ಟ ಪದಗಳನ್ನು ಹೊಂದಿದೆ. ಮೂರನೇ, ಸಾಮಾನ್ಯಾದಿಕಾಂಡವು ವ್ಯಾಕರಣ ಮತ್ತು ಇತರೆ ಪದಗಳಿಗೆ ಸಂಬಂಧಿಸಿದ ಪದಗಳನ್ನು ಹೊಂದಿದೆ.
"https://kn.wikipedia.org/wiki/ಅಮರಕೋಶ" ಇಂದ ಪಡೆಯಲ್ಪಟ್ಟಿದೆ