ಆಂಟಿನ್ ಲಾರೆಂಟ್ ಲವಾಸಿಯೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೨ ನೇ ಸಾಲು:
ತತ್ವಶಾಸ್ತ್ರದ ತರಗತಿಗಳಲ್ಲಿ ಬಹಳ ಉತ್ಸುಕನಾಗಿ ಪಾಲ್ಗೊಳ್ಳುತ್ತಿದ್ದ ಲವಾಸಿಯೇ ನನ್ನು ಕಂಡ ಪ್ರಾಧ್ಯಾಪಕ ಅಬ್ಬೆ ನಿಕೋಲಸ್ ಸ್ವತಹ ಒಬ್ಬ ಗಣಿತಜ್ಞ ಹಾಗು ಖಗೋಳ ಶಾಸ್ತ್ರಗಳಲ್ಲಿ ಆಸಕ್ತಿ ಇರಿಸಿಕೊಂಡಿದ್ದ ವ್ಯಕ್ತಿ, ಈತನೇ ಬಾಲಕ ಲವಾಸಿಯೇಗೆ ಪವನಶಾಸ್ತ್ರದ ಬಗ್ಗೆ ಆಸಕ್ತಿ ಕೆರಳಿಸಿದ. ಮುಂದೆ ಲವಾಸಿಯೇ ವೃತ್ತಿಗಾಗಿ ಕಾನೂನು ಅಧ್ಯಯನ ಮಾಡಿ ಪದವಿ ಪಡೆದರೂ ವಿಜ್ಞಾನದ ಕಡೆ ಅಪಾರ ಸೆಳೆತವಿದ್ದರಿಂದ ಕಾನೂನು ರಂಗದಲ್ಲಿ ಮುಂದುವರೆಯದೆ ವೈಜ್ಞಾನಿಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡ.
 
ನೈಸರ್ಗಿಕ ವಿಜ್ಞಾನಗಳ ಮೇಲೆ ಅಪಾರ ಒಲವು ಹೊಂದಿದ್ದ ಲವಾಸಿಯೇ ಅದಕ್ಕೆ ಸಂಬಂಧ ಪಟ್ಟ ಎಲ್ಲಾ ಉಪನ್ಯಾಸಗಳಿಗೂ ಹಾಜರಾಗಿ ಅಪಾರ ಜ್ಞಾನ ಸಂಪಾದಿಸಿದ. ಲವಾಸಿಯೇಯ ರಸಾಯನ ಶಾಸ್ತ್ರದ ಮೇಲಿನ ಒಲವನ್ನು ಮತ್ತು ಹೆಚ್ಚಿಸಿದ್ದು ಎಟಿನ್ ಕೊಂಡಿಲಕ್ ಎಂಬ ಒಬ್ಬ ಫ್ರೆಂಚ್ ವಿದ್ವಾಂಸ. ಲವಾಸಿಯೇ ಯ ಮೊದಲ ರಾಸಾಯನಿಕ ಸಂಭಂದಿತ ಲೇಖನ ಪ್ರಕಟವಾಗಿದ್ದು ೧೭೬೪ರಲ್ಲಿ. ೧೭೬೩-೬೭ ರವರೆಗೆ ಭೂಗರ್ಭಶಾಸ್ತ್ರ ದ ಬಗ್ಗೆ ಅಧ್ಯಯನ ಮಾಡಿ ಭೂಗರ್ಭ ಇಲಾಖೆಯ ಸರ್ವೇಕ್ಷಣಾ ಇಲಾಖೆಯಲ್ಲಿ ೧೭೬೭ರಲ್ಲಿ ಕೆಲಸವನ್ನೂ ಮಾಡಿದ. ೧೭೬೪ರಲ್ಲಿ ಫ್ರೆಂಚ್ ವಿಜ್ಞಾನ ಅಕಾಡೆಮಿಯಲ್ಲಿ ಜಿಪ್ಸಮ್ ನ ಭೌತಿಕ ಮತ್ತು ರಾಸಾಯನಿಕ ಗುಣಗಳ ಬಗ್ಗೆ ತಾನೇ ತಯಾರು ಮಾಡಿದ್ದ ಪ್ರಬಂಧವೊಂದನ್ನು ಮಂಡಿಸಿದ್ದ. ೧೭೬೬ ರಲ್ಲಿ 'ನಗರ ಪ್ರದೇಶಗಳ ಬೀದಿದೀಪಗಳ' ಬಗ್ಗೆ ಪ್ರಬಂಧವೊಂದನ್ನು ಮಂಡಿಸಿ ಭೇಶ್ ಎನಿಸಿಕೊಂಡು ಫ್ರಾನ್ಸ್ ರಾಜರಿಂದ ಚಿನ್ನದ ಪದಕವನ್ನು ಬಹುಮಾನವಾಗಿ ಪಡೆದಿದ್ದ. ೧೭೬೮ರಲ್ಲಿ ಫ್ರೆಂಚ್ ವಿಜ್ಞಾನ ಅಕಾಡೆಮಿಯಿಂದ ನೇಮಕಾತಿ ಪತ್ರ ಬಂದು ತಲುಪಿತು. ಲವಾಸಿಯೇನ ವೈಜ್ಞಾನಿಕ ಆಸಕ್ತಿಗಳನ್ನು ಕಂಡು ಆತನನ್ನು ವಿಜ್ಞಾನ ಅಕಾಡೆಮಿ ನೇಮಕ ಮಾಡಿಕೊಂಡಿತ್ತು. ೧೭೬೯ ರಲ್ಲಿ ಮೊತ್ತ ಮೊದಲ ಫ್ರಾನ್ಸ್ ಭೌಗೋಳಿಕ ನಕಾಶೆ ತಯಾರು ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ.
[[ವರ್ಗ:ರಸಾಯನಶಾಸ್ತ್ರ ತಜ್ಞ]]