ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಅಕ್ಟೋಬರ್ ಬಿಕ್ಕಟ್ಟು ಅಥವಾ ಕೆರಿಬಿಯನ್ ಬಿಕ್ಕಟ್ಟು ಅಥವಾ ಕ್ಷಿಪಣಿ ಆತಂಕವ...
 
ಚುNo edit summary
೧ ನೇ ಸಾಲು:
{{wikify}}
ಅಕ್ಟೋಬರ್ ಬಿಕ್ಕಟ್ಟು ಅಥವಾ ಕೆರಿಬಿಯನ್ ಬಿಕ್ಕಟ್ಟು ಅಥವಾ ಕ್ಷಿಪಣಿ ಆತಂಕವಾದ ಎಂದು ವಿವಿಧ ರೀತಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಉಲ್ಲೇಖಿಸಲ್ಪಡುತ್ತಿರುವ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು ಅಮೇರಿಕಾ ಸಂಯುಕ್ತ ಸಂಸ್ಥಾನಗಳಿಗೂ ಹಾಗು ಸೋವಿಯತ್ ಒಕ್ಕೂಟಕ್ಕೂ ನಡೆದ ಬಹು ಮುಖ್ಯವಾದ ಶೀತಲ ಸಮರ. ಸೋವಿಯತ್ ಒಕ್ಕೂಟವು ಉತ್ತರ ಅಮೇರಿಕ ಭೂ ಖಂಡಕ್ಕೆ ಸನಿಹದಲ್ಲಿರುವ ಕ್ಯೂಬಾ ದೇಶದಲ್ಲಿ ತಾನು ತಯಾರು ಮಾಡಿದ ಖಂಡಾಂತರ ಕ್ಷಿಪಣಿಗಳನ್ನು ಅನುಸ್ಥಾಪಿಸಿದ್ದು ಈ ಬಿಕ್ಕಟ್ಟಿಗೆ ಮುಖ್ಯ ಕಾರಣ.
೧೯೬೧ರಲ್ಲಿ ಅಮೇರಿಕಾವು ಕ್ಯೂಬಾ ದೇಶದ ಭೂಖಂಡಕ್ಕೆ ಹೊಂದಿಕೊಂಡಿರುವ ಪಿಗ್ಸ್ ಕೊಲ್ಲಿಯನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತದೆ.ಕ್ಯೂಬಾದ ತಕ್ಕ ಪ್ರತ್ಯುತ್ತರದಿಂದ ಅದು ಸಾಧ್ಯವಾಗದೆ ಅಮೇರಿಕಾದ ಪಾಲಿಗೆ ಕನಸಾಗಿ ಉಳಿಯುತ್ತದೆ. ಈ ಆಕ್ರಮಣ ಅಮೇರಿಕಾದ ಸೆಂಟ್ರಲ್ ಇಂಟೆಲಿಜೆನ್ಸ್ ಏಜನ್ಸಿ(CIA) ಪ್ರಾಯೋಜಿತ ಅರೆಸೇನಾ ಪಡೆಯಿಂದ ನಡೆದಿರುತ್ತದೆ. ದಾಳಿಯನ್ನು ಸಮರ್ಥವಾಗಿ ಎದುರಿಸಲು ಕ್ಯೂಬಾ ದೇಶ ಸೋವಿಯತ್ ಒಕ್ಕೂಟಕ್ಕೆ ಮೊರೆ ಹೋಗುತ್ತದೆ. ಮೊರೆಯನ್ನು ಮನ್ನಿಸಿದ ಸೋವಿಯತ್ ನಾಯಕ ‘ನಿಖಿಟ ಖ್ರುಶ್ಚೆವ್‘, ಅಮೇರಿಕಾ ದೇಶ ತನ್ನ ಜುಪಿಟರ್ ಖಂಡಾಂತರ ಕ್ಷಿಪಣಿಗಳನ್ನು ಇಟಲಿ ಮತ್ತು ಟರ್ಕಿ ಗಳಲ್ಲಿ ಅನುಸ್ಥಾಪಿಸಿ ಸೋವಿಯತ್ ಒಕ್ಕೂಟಗಳಿಗೂ ಹಾಗು ಸೋವಿಯತ್ ಕೇಂದ್ರ ಸ್ಥಾನ ಮಾಸ್ಕೊ ನಗರಕ್ಕೂ ಗಂಡಾಂತರವಾಗಿದ್ದನ್ನು ಇನ್ನೂ ಮರೆತಿರುವುದಿಲ್ಲ. ಇವೆಲ್ಲಕ್ಕೂ ಪ್ರತೀಕಾರವೋ ಎಂಬಂತೆ ಕ್ಯೂಬಾ ಕೇಳಿದ ತಕ್ಷಣವೇ ಸೋವಿಯತ್ ಪ್ರಾಯೋಜಿತ ಖಂಡಾಂತರ ಕ್ಷಿಪಣಿಯನ್ನು ಕ್ಯೂಬಾದಲ್ಲಿ ತಂದು ನಿಲ್ಲಿಸಿ ಅಕ್ಷರಶಃ ಆಗಿನ ಪ್ರಬಲ ದೇಶ ಅಮೇರಿಕಾಕ್ಕೆ ಸೆಡ್ಡು ಹೊಡೆಯಿತು.