ಎಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
ಎಲೆಗಳು ಕಾಂಡ ಅಥವಾ ಅದರ ಕವಲುಗಳ ಮೇಲೆ ತೆಳುವಾಗಿ, ಅಗಲವಾಗಿ ಇದ್ದು ಗಿಣ್ಣುಗಳಿರುವ [[ಜಾಗ]]ದಲ್ಲಿ ಉದ್ಭವಿಸುವುವು. ಕಾಂಡಕ್ಕೂ ಎಲೆಗಳಿಗೂ ಇರುವ ಮೇಲುಗಡೆಯ ಕಂಕುಳಲ್ಲಿ (ಆಕ್ಸಿಲ್) ಒಂದೊಂದು ಎಲೆ [[ಮೊಗ್ಗು]] ಇರುತ್ತದೆ. ಇದರ ಬೆಳೆವಣಿಗೆಯಿಂದ ಕಾಂಡದ ಹೊಸಕೊನೆಗಳು ಉತ್ಪತ್ತಿಯಾಗುವುವು. ಕೊನೆ ಬೆಳೆದಂತೆ ಎಳೆಯ ಎಲೆಗಳು ಮೇಲಾಗಿ ಹಳೆಯ ಎಲೆಗಳು ಕೆಳಗಾಗುತ್ತವೆ. ಕಾಂಡಗಳ ಮೇಲೆ ಈ ರೀತಿ ಎಲೆಗಳು ಇರುವುದನ್ನು ಊಧರ್ವ್‌ ವೃದ್ಧಿ (ಆಕ್ರೊಪೆಟಲ್ ಸಕ್ಸೆಷನ್) ಎನ್ನುತ್ತಾರೆ. ಎಲೆ ಉತ್ಪತ್ತಿಯಾಗುತ್ತಿರುವಾಗ, ಅದು ತನ್ನ ತುದಿಯಲ್ಲಿ ಮೊದಲು ಸ್ವಲ್ಪ ಬೆಳೆಯುತ್ತದೆ. ಕೆಲವು ಜರಿಗಿಡಗಳಲ್ಲಿ ಬಹು ಕಾಲ ಈ ರೀತಿಯ ಬೆಳೆವಣಿಗೆಯನ್ನು ಕಾಣಬಹುದು. ಉದಾ: ಲೈಗೋಡಿಯಂ. ಅನಂತರ ಅದು ತನ್ನ ಬುಡದಲ್ಲಿಯೂ ಸಾಧಾರಣವಾಗಿ ಮಧ್ಯ ಪ್ರದೇಶದಲ್ಲಿಯೂ ವೃದ್ಧಿಯಾಗುತ್ತದೆ. ಏಕದಳ ಸಸ್ಯಗಳಲ್ಲಿ, ಎಲೆ ಬುಡದಲ್ಲಿ ಬಹುಕಾಲ ಬೆಳೆಯುತ್ತದೆ. ಆಮೇಲೆ, ಎಲೆಗಳು ತಮ್ಮೊಳಗೆ ಹೊಸ ಜೀವಕೋಶಗಳನ್ನು ನಿರ್ಮಿಸದೆ ಕೇವಲ ಗಾತ್ರದಲ್ಲಿ ದೊಡ್ಡವಾಗುತ್ತವೆ.
 
ಸರಳವಾದ ವಿಕಾಸವನ್ನು ಹೊಂದಿರುವ ಥ್ಯಾಲೋಫೈಟ ಎನ್ನುವ ಒಂದು ದೊಡ್ಡ ಗುಂಪಿನ ಸಸ್ಯಗಳಲ್ಲಿ ಎಲೆಗಳಾಗಲಿ, ಕಾಂಡವಾಗಲಿ, ಸಾಧಾರಣವಾಗಿ ಕಂಡುಬರುವುದಿಲ್ಲ. ಈ ಗುಂಪಿಗಿಂತ ಹೆಚ್ಚು ವಿಕಾಸವನ್ನು ತೋರಿಸುವ ಬ್ರಯೊಫೈಟ್ ಗುಂಪಿನ ಹಾವಸೆಗಳಲ್ಲಿ ಕಾಣಬರುವ ಎಲೆಗಳೇ ಅತ್ಯಂತ ಸರಳವೂ ಸೂಕ್ಷ್ಮವೂ ಆದ ಎಲೆಗಳು. ಇವು ಒಂದು ಜೀವಕೋಶದಷ್ಟು ಮಾತ್ರ ದಪ್ಪನಾಗಿರುವುವು. ಆದರೆ ಒಂದು ವಿಶೇಷ ಜಾತಿಯ ತಾವರೆಯಾದ ವಿಕ್ಟೋರಿಯ ರೀಜಿಯ ಎಂಬ ಅಮೆರಿಕದ ಗಿಡದ ಎಲೆ ಎರಡು ಮೀಟರಿನಷ್ಟು ಅಗಲವಾಗಿರಬಹುದು.[[File:Leaf anatomy.svg|thumb500px|ಎಲೆಯ ಅಂಗರಚನೆ]]
 
== ಎಲೆಗಳ ರಚನೆ ==
"https://kn.wikipedia.org/wiki/ಎಲೆ" ಇಂದ ಪಡೆಯಲ್ಪಟ್ಟಿದೆ