ಇಂಗ್ಲಿಷ್ ಕಡಲ್ಗಾಲುವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚುNo edit summary
೧ ನೇ ಸಾಲು:
[[File:Strait of dover STS106-718-28.jpg|thumb|ಇಂಗ್ಲಿಷ್ ಕಡಲ್ಗಾಲುವೆ]]
[[File:EnglishChannel.jpg|thumb]]
ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ನಡುವೆ ಹಬ್ಬಿ ಎರಡು ದೇಶಗಳನ್ನೂ ಬೇರ್ಪಡಿಸುತ್ತ, ಅಟ್ಲಾಂಟಿಕ್ ಸಾಗರ ಮತ್ತು ಉತ್ತರ ಸಮುದ್ರಗಳನ್ನು ಸೇರಿಸುತ್ತ ಯುರೋಪಿನ ಮೇಲುಭಾಗದ ನೌಕಾಯಾನಕ್ಕೆ ಅತ್ಯುಪಯುಕ್ತವಾಗಿರುವ ಕಡಲ್ಗಾಲುವೆ. ಸು. 562ಕಿಮೀ. ಉದ್ದವಾಗಿದ್ದು 25-160ಕಿಮೀ ಅಗಲವಿದೆ. ಇದರ ಅತ್ಯಂತ ಕಿರಿದಾದ ಭಾಗ ಇಂಗ್ಲೆಂಡಿನ ಡೋವರ್ನಿಂದ ಫ್ರಾನ್ಸ್ ದೇಶದ ಗ್ರಿಸ್ ನೆಜ್ ಭೂಶಿರದವರೆಗಿನದು. ಬಹುಭಾಗ 46ಮೀ. ಗಳಿಗಿಂತ ಹೆಚ್ಚು ಆಳವಿದೆ. ಅತ್ಯಂತ ಆಳವಾದ ಭಾಗ 175 ಮೀ ಆಳವಿರುವ ಹರ್ಡ್ಸ್ ಎಂಬ ಕೂಪ. ಕಡಲ್ಗಾಲುವೆ ಚಾನಲ್ ದ್ವೀಪಗಳ ವಾಯವ್ಯಕ್ಕಿದೆ. ಆದಿಭೂಯುಗದ (ಪ್ರಿಕೇಂಬ್ರಿಯನ್) ಕಾಲದಲ್ಲಿ ಇಂಗ್ಲೆಂಡ್ ಮತ್ತು ಯುರೋಪ್ ಖಂಡಗಳಿಗೆ ಭೂಸಂಬಂಧವಿತ್ತೆಂದೂ ಆದರೆ ಪ್ಲೀಸ್ಟೊಸೀನ್ ಅಥವಾ ಮೂರನೆಯ ಭೂಯುಗದ ಮುಂದಿನ ಕಾಲದಲ್ಲಿ ಭೂಸವೆತದ ಪರಿಣಾಮವಾಗಿ ಕಾಲುವೆ ನಿರ್ಮಿತವಾಯಿತೆಂದೂ ತಿಳಿದುಬಂದಿದೆ. ಇಂದಿಗೂ ಈ ಕಾಲುವೆಯ ತೀರ ಪ್ರದೇಶಗಳಲ್ಲಿ ಭೂಸವೆತವಾಗುತ್ತಿದೆ.
ಇಂಗ್ಲಿಷ್ ಕಡಲ್ಗಾಲುವೆಗೆ ಫ್ರಾನ್ಸ್ ದೇಶದ ಸುಮಾರು 106,190 ಚ.ಕಿಮೀ ಜಲಾನಯನ ಪ್ರದೇಶ ಮತ್ತು ಇಂಗ್ಲೆಂಡಿನ ಸು. 20,720 ಚ.ಕಿಮೀ. ಜಲಾನಯನ ಪ್ರದೇಶಗಳು ಅನೇಕ ನದಿಗಳ ಮೂಲಕ ನೀರಿನ್ನೊದಗಿಸುತ್ತವೆ. ಆದ್ದರಿಂದ ಈ ಕಡಲ್ಗಾಲುವೆಯ ನೀರಿನ ಲವಣಾಂಶ (34.8%); ಅಟ್ಲಾಂಟಿಕ್ ಸಾಗರದ ನೀರಿನ ಲವಣಾಂಶಕ್ಕಿಂತ (35.4%) ಕಡಿಮೆ. ಈ ಕಡಲ್ಗಾಲುವೆಗೆ ಸೇರುವ ಮುಖ್ಯ ನದಿಗಳು ಸೀನ್, ಟಮರ್, ಸ್ಟೂರ್, ಟೆಸ್್ಟ, ಅರುಣ್. ಈ ಭಾಗದ ಮೇಲೆ ಪಶ್ಚಿಮಮಾರುತಗಳು ಬೀಸುತ್ತವೆ. ಆಗಾಗ್ಗೆ ಇಲ್ಲಿ ವಾಯುಭಾರದಲ್ಲಿ ಇಳಿತಗಳುಂಟಾಗುವುದರಿಂದ ಮಳೆ ಕಡಿಮೆ. ಹವಾಮಾನ ಹಿತಕರವಲ್ಲ. ಇಲ್ಲಿ ಹೆಚ್ಚಾಗಿ ಮಂಜು ಸುರಿಯುವುದು. ಬೇಸಿಗೆಯಲ್ಲಿ ಉಷ್ಣಾಂಶ 60°. ಫ್ಯಾ (15.5°ಸೆಂ) ಚಳಿಗಾಲದಲ್ಲಿ 45° ಫ್ಯಾ (7.2°ಸೆಂ).