ನೇರಳಾತೀತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[File:Ozone altitude UV graph.svg|Thumb|250pxl|Right|Ozone altitude UV graph]]
'''ಅತಿನೇರಳೆ''' ಕಿರಣಗಳು ದೃಷ್ಟಿಗೆ ಗೋಚರಿಸುವ [[ಬೆಳಕು|ಬೆಳಕಿಗಿಂತ]] ಹೆಚ್ಚಿನ [[ಆವೃತ್ತಿ]]ಯನ್ನು ಹೊಂದಿರುತ್ತವೆ. ಈ ಕಿರಣಗಳ ತರಂಗಾಂತರವು ದೃಶ್ಯ ತರಂಗಗಳಿಗಿಂತ ಕಡಿಮೆಯಿದ್ದು ಕ್ಷ-ಕಿರಣಗಳಿಗಿಂತ ಹೆಚ್ಚಿದ್ದು 400nmರಿಂದ 10nmರ ವ್ಯಾಪ್ತಿಯಲ್ಲಿರುತ್ತದೆ. ಇವುಗಳ ಆವೃತ್ತಿಯು ಮನುಷ್ಯರು ನೇರಳೆ ಎಂದು ಗುರುತಿಸುವ ತರಂಗಗಳಿಗಿಂತ ಹೆಚ್ಚಿರುವುದರಿಂದ ಇವುಗಳಿಗೆ ಅತಿನೇರಳೆ ಎಂಬ ಹೆಸರು ಬಂದಿದೆ. ಇವು ಸಾಮಾನ್ಯ ಮನುಷ್ಯರ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಹಲವು ಕೀಟಗಳು ಮತ್ತು ಪಕ್ಷಿಗಳಿಗೆ ಈ ಕಿರಣಗಳನ್ನು ಗ್ರಹಿಸುವ ಶಕ್ತಿಯಿರುತ್ತದೆ.
[[ಸೂರ್ಯನ ವರ್ಣಪಟಲ]]ದಲ್ಲಿ ಇವುಗಳ ಇರುವಿಕೆಯನ್ನು ಗುರುತಿಸಲಾಗಿದೆ. [[ವಿದ್ಯುತ್ ಕಂಸ]]ಗಳು, [[ಪಾದರಸದ ದೀಪ]]ಗಳು ಹಾಗೂ [[ಅತಿನೇರಳೆ ದೀಪ]]ಗಳು ಅತಿನೇರಳೆ ಕಿರಣಗಳನ್ನು ಹೊರಸೂಸುತ್ತವೆ.ಈ ವಿಕಿರಣಗಳನ್ನು ಹಲವಾರು [[ರಾಸಾಯನ ಕ್ರಿಯೆ]]ಗಳಲ್ಲಿ ಬಳಸಿಕೊಳ್ಳುತ್ತಾರೆ. ಇವು ಕೆಲವು ವಸ್ತುಗಳನ್ನು ಬೆಳಗುವಂತೆ ಮಾಡುತ್ತವೆ. ಸೂರ್ಯನಿಂದ ಭೂಮಿಯನ್ನು ತಲುಪುವ ಹೆಚ್ಚಿನ ಅತಿನೇರಳೆ ಕಿರಣಗಳು [[ಅಯಾನೀಕರಣ]] ಮಾಡದಂತಹ ಕಿರಣಗಳು. ಅಯಾನೀಕರಣ ಮಾಡುವ ಕಿರಣಗಳು 120nmರಿಂದ 10nmರವರೆಗೆ ತರಂಗಾಂತರವನ್ನು ಹೊಂದಿದ್ದು [[ಉತ್ಕಟ ಅತಿನೇರಳೆ ಕಿರಣ]]ಗಳೆಂದು ಕರೆಯಲ್ಪಡುತ್ತವೆ. ಈ ರೀತಿಯ ಕಿರಣಗಳು ಭೂಮಿಯ ವಾತಾವರಣದ ಮೂಲಕ ಹಾದುಹೋಗುವಾಗ [[ಸಾರಜನಕ]] ಮತ್ತು [[ಆಮ್ಲಜನಕ]]ದಿಂದ ಹೀರಿಕೊಳ್ಳಲ್ಪಡುತ್ತವೆ. ಆದ್ದರಿಂದ ಇವು ಭೂಮಿಯನ್ನು ತಲುಪುವ ಸಾಧ್ಯತೆ ಕಡಿಮೆ.
"https://kn.wikipedia.org/wiki/ನೇರಳಾತೀತ" ಇಂದ ಪಡೆಯಲ್ಪಟ್ಟಿದೆ