ಅಕಶೇರುಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
[[File:FMIB 42156 Anclote grass sponge.jpeg|thumb|ಅಕಶೇರುಕಕ್ಕೆ ಒಂದು ಉದಾಹರಣೆ]]
'''ಅಕಶೇರುಕ''' ಕಶೇರು (ಬೆನ್ನೆಲುಬು) ಇಲ್ಲದ ಪ್ರಾಣಿಗಳು (ಇನ್ವರ್ಟಿಬ್ರೇಟ್ಸ್). ಅಕಶೇರುಕವೆಂಬ ಪದದ ಪರಿಮಿತಿಯಲ್ಲಿ ಪ್ರಪಂಚದಲ್ಲಿರುವ ಪ್ರಾಣಿ ಸಾಮ್ರಾಜ್ಯದ ಶೇ.95ರಷ್ಟು೯೭ರಷ್ಟು ಪ್ರಾಣಿಗಳು ಸೇರುತ್ತವೆ.<ref>{{cite book|last1=May|first1=Robert|title="How Many Species Are There on Earth?|date=16 September 1988|isbn=0-412-61390-5.}}</ref> ಇವುಗಳಲ್ಲಿ ಹೆಚ್ಚಿನವು ಭೂವಾಸಿಗಳು. ಜಲವಾಸಿಗಳು ಭೂವಾಸಿಗಳಿಗಿಂತ ಕಡಿಮೆಯೆನ್ನಬಹುದಾದರೂ ವೈವಿಧ್ಯದಲ್ಲಿ ಮಾತ್ರ ಭೂವಾಸಿಗಳಿಗಿಂತ ಜಲವಾಸಿಗಳದೇ ಮೇಲುಗೈ.
ಒಂದು ದಶಲಕ್ಷಕ್ಕಿಂತ ಹೆಚ್ಚಾಗಿರುವ ಈ ಪ್ರಾಣಿ ಪ್ರಭೇದಗಳನ್ನು ವಿಂಗಡಿಸುವುದು ಬಹಳ ಕಷ್ಟ. ಏಕೆಂದರೆ ವೈಜ್ಞಾನಿಕ ವರ್ಗೀಕರಣಕ್ಕೆ ವೈಜ್ಞಾನಿಕ ತತ್ವಗಳ ಆಧಾರವಿರಬೇಕು. ಪ್ರಪ್ರಥಮವಾಗಿ [[ಅರಿಸ್ಟಾಟಲ್ ]]ಈ ಪ್ರಾಣಿವರ್ಗ ವನ್ನು ಎರಡು ಭಾಗಗಳಾಗಿ ವಿಂಗಡಿಸಿದ. ಆತನ ವರ್ಗೀಕರಣ ದಂತೆ, ಅಕಶೇರುಕ ಗಳು ರಕ್ತರಹಿತ ಜೀವಿಗಳು. ರಕ್ತರಹಿತ ಹಾಗೂ ರಕ್ತವುಳ್ಳ ಜೀವಿಗಳನ್ನು ಪುನಃ ನಾನಾ ಶಾಖೆಗಳನ್ನಾಗಿ ವಿಭಾಗಿಸಲಾಗಿದೆ. ಲಿನೀಯಸ್ ಎಂಬುವನು ಜೀವಪ್ರಭೇದಗಳನ್ನು ಅಕಶೇರುಕಗಳು ಮತ್ತು ಕಶೇರುಕಗಳು ಎಂದು ವಿಭಾಗಿಸಿ ಅಕಶೇರುಕ ಜೀವಿಗಳನ್ನು ಜಂತುಹುಳುಗಳ ವರ್ಗ, ಕೀಟಗಳ ವರ್ಗ ಎಂದು ಎರಡು ಭಾಗಗ ಳಾಗಿ ವಿಂಗಡಿಸಿದ. ಹತ್ತೊಂಬತ್ತ ನೆಯ ಶತಮಾನದಲ್ಲಿ ಲೆಮಾರ್ಕ್ ಅಕಶೇರುಕ ಜೀವಿಗಳನ್ನು ಅವುಗಳ ಬಾಹ್ಯರಚನಾಧಾರಗಳ ಮೇಲೆ ಹತ್ತು ವರ್ಗಗಳಾಗಿ ವಿಂಗಡಿಸಿದ್ದಾನೆ. ಈ ಹತ್ತು ವರ್ಗಗಳೆಂದರೆ 1. ಇನ್ ಫ್ಯೂಜೋರಿಯ 2. ಪಾಲಿಪ್ಸ್ 3. ರೇಡಿಯೇಟ್ಸ್ 4. ವರ್ಮಿಸ್ 5. ವಲಯವಂತಗಳು 6. ಅರಾಕ್ನಿಡ 7. ಕ್ರಸ್ಟೇಷಿಯ 8. ಕೀಟಗಳು 9. ಸಿರಿಪೀಡಿಯ 10. ಮೃದ್ವಂಗಿಗಳು (ಮಾಲಸ್ಕ). ಲೆಮಾರ್ಕ್ನ ಸಮಕಾಲೀನನಾದ ಕೂವಿಯೋ ಪ್ರಾಣಿ ಪ್ರಪಂಚವನ್ನು ಕಶೇರುಕಗಳು, ಆರ್ಟಿಕ್ಯುಲೇಟ, [[ಮೃದ್ವಂಗಿ]]ಗಳು, ರೇಡಿಯೇಟ ಎಂಬ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದ. ಆದರೆ ಇವನ ಮೊದಲ ಮೂರು ಭಾಗಗಳು ಬಳಕೆಯಲ್ಲುಳಿದರೂ ನಾಲ್ಕನೆಯ ಭಾಗ ಬದಲಾಗಲೇ ಬೇಕಾಯಿತು. ಕೂವಿಯೋ ಆದಮೇಲೆ ಬಂದ ವಿಜ್ಞಾನಿಗಳು ಅಕಶೇರುಕ ಗಳ ವರ್ಗೀಕರಣಕ್ಕೆ ಯತ್ನಿಸಿ ದರು. ಜರ್ಮನಿ ದೇಶದ ಜೀವವಿಜ್ಞಾನಿಗಳಾದ ಶೀಬಾಲ್್ಡ ಮತ್ತು ಲ್ಯೂಕರ್ಟ್ ಅವರಲ್ಲಿ ಮುಖ್ಯರು. ಶೀಬಾಲ್ಡ್ ಏಕ ಕೋಶಿಕ ಜೀವಿಗಳನ್ನು ಕಂಡು ಹಿಡಿದು ಅವುಗಳಿಗಾಗಿಯೇ ಪ್ರೋಟೋಜೊóೕವ ಎಂಬ ವಂಶವನ್ನು ಹೆಸರಿಸುತ್ತಾನೆ. ಜೊತೆಗೆ ಸಂಧಿಪದಿಗಳವರ್ಗವನ್ನು ಊರ್ಜಿತಗೊಳಿಸುತ್ತಾನೆ. ಲ್ಯೂಕರ್ಟ್ ರೇಡಿಯೇಟ ವಿಭಾಗವನ್ನು ಸೀಲೆಂಟರೇಟ ಮತ್ತು ಎಕೈನೊಡರ್ಮೆಟ ಎಂಬ ಎರಡು ಭಾಗಗಳಾಗಿ ವಿಭಾಗಿಸಿದ. ಮುಂದೆ ಬಂದ ವಿಜ್ಞಾನಿಗಳು ಬ್ರಾಕಿಯೊಪೋಡ, ಬ್ರಯೋಜೋóವ ಹಾಗು ಟ್ಯೂನಿಕೇಟ್ ವರ್ಗಗಳನ್ನು ಮೃದ್ವಂಗಿಗಳ ಗುಂಪಿನಿಂದ ಬೇರ್ಪಡಿಸಿದರು. ಮಿಲ್ನೇ ಎಡ್ವರ್ಡ್ ಎಂಬವನು ಟ್ಯೂನಿಕೇಟ ಜೀವಿಗಳಿಗೆ ಟ್ಯೂನಿಕೇಟ್ ಎಂಬ ಪ್ರತ್ಯೇಕ ವಂಶದ ಅರ್ಹತೆಯನ್ನು ಕೊಟ್ಟ. ಕ್ಲಾಸ್ ಎಂಬ ಜರ್ಮನ್ ವಿಜ್ಞಾನಿ ಇಡೀ ಪ್ರಾಣಿ ಪ್ರಪಂಚವನ್ನು 1. ಪ್ರೋಟೋ ಜೊóೕವ 2. ಸೀಲೆಂಟರೇಟ 3. ಎಕೈನೊಡರ್ಮೆಟಾ 4. ವರ್ಮಿಸ್ 5. ಆತಾರ್್ರಪೊಡ 6. ಮೃದ್ವಂಗಿಗಳು (ಮಾಲಸ್ಕ) 7. ಮೆಲಸ್ಕಾಯಿಡಿಯ 8. ಟ್ಯೂನಿಕೇಟ್ 9. ಕಶೇರುಕ ಎಂಬ ಒಂಬತ್ತು ವರ್ಗಗಳನ್ನಾಗಿ ವಿಂಗಡಿಸಿದನು. ಮುಂದೆ ಬಂದ ವಿಜ್ಞಾನಿಗಳು ಪೋರಿಪೆóರ ಮತ್ತು ಹೆಮಿಕಾರ್ಡೇಟ ವಂಶಗಳನ್ನು ಕ್ಲಾಸ್‍ನ ವಿಭಜನೆಗೆ ಸೇರಿದರು. ಮುಂದೆ ವರ್ಮಿಸ್ ಗುಂಪನ್ನು, ಪ್ಲಾಟಿಹೆಲ್ಮೆನ್ಥೀಸ್, ನ್ಯಾಮರಟೈನ, ಆಸ್ಕಿಹೆಲ ಮೆನ್ಥೀಸ್ ಹಾಗೂ ಖಂಡಗಳುಳ್ಳ ಪ್ರಾಣಿಗಳಾದ ಆನೆಲಿಡ ಎಂಬ ವಂಶಗಳನ್ನು ಪ್ರತಿಪಾದಿಸುತ್ತಾರೆ. ಅತ್ಯಂತ ಆಧುನಿಕ ಅಭಿಪ್ರಾಯದಂತೆ ಇಂದು ಪ್ರಾಣಿ ಪ್ರಪಂಚದಲ್ಲಿ 20 ರಿಂದ 30 ವಂಶಗಳನ್ನು ಗುರುತಿಸಬಹುದು. ಆದುದರಿಂದ ಈ ವರ್ಗೀಕರಣದಲ್ಲಿ ಎಲ್ಲದರಲ್ಲಿಯೂ ಒಂದೇ ರೀತಿಯ ಸಾಮ್ಯವನ್ನು ಹುಡುಕುವುದು ಕಷ್ಟ. ಇಂದು ಹೈಮನ್ ಎಂಬಾಕೆಯ ವರ್ಗೀಕರಣ ಪ್ರಚಲಿತವಾಗಿದೆ.
1. ಪ್ರೋಟೋಜೋóವ 2. ಮೀಸೋಜೋóವ 3. ಪೋರಿಫೆರ 4. ನೈಡೇರಿಯ 5. ಟಿನೊಫೊರ 6. ಪ್ಲಾಟಿಹೆಲ್ಮನ್ಥಿಸ್ 7. ರಿಂಕೊಸೀಲ್ 8. ಎಂಟೊಪ್ರಾಕ್ಟ 9. ಆಕ್ಯಾಂತೊ ಕಿಫಾಲಾ 10. ಆಸ್ಕಿಹೆಲ್ಮೆನ್ಥೀಸ್ 11. ಮೃದ್ವಂಗಿಗಳು (ಮಾಲಸ್ಕ) 12. ಸೈಫನ್ಕುಲಿಡ 13. ಎಕಿಯುರಾಯ್ಡಿಯ 14. ಆನೆಲಿಡ 15. ಆಥೊರ್್ರಪೋಡ 16. ಎಕ್ಟೊಪ್ರಾಕ್ಟ 17. ಪೋರೋನಿಡ 18. ಬ್ರಾಕಿಯೊಪೊಡ 19. ಎಕೈನೋಡರ್ಮ್ಯೇಟ 20. ಪೋಗೊನೊ ಫೋರ 21. ಕೀಟೋಗ್ನಾಥ ಎಂಬ 21 ವಂಶಗಳಾಗಿ ಆಕೆ ವರ್ಗೀಕರಿಸಿರುವಳು. ಅಕಶೇರುಕ ಪ್ರಾಣಿಗಳಿಗೆ ಸಂಬಂಧಿಸಿದ ಈ ವರ್ಗೀಕರಣವನ್ನು ಸಾಮಾನ್ಯವಾಗಿ ಇಂದು ಬಹಳಷ್ಟು ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ.
೩೨ ನೇ ಸಾಲು:
[[ವರ್ಗ:ಜೀವಶಾಸ್ತ್ರ]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
 
==ಉಲ್ಲೇಖಗಳು==
<ref/>
"https://kn.wikipedia.org/wiki/ಅಕಶೇರುಕ" ಇಂದ ಪಡೆಯಲ್ಪಟ್ಟಿದೆ