ಆಂಟಿನ್ ಲಾರೆಂಟ್ ಲವಾಸಿಯೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೭ ನೇ ಸಾಲು:
 
ಲವಾಸಿಯೇ ನ ಬಹಳ ಮುಖ್ಯ ಒಂದು ಅಧ್ಯಯನವೆಂದರೆ ಅದು ದಹನ ಕ್ರಿಯೆಯಲ್ಲಿ ಆಮ್ಲಜನಕದ ಪಾತ್ರವನ್ನು ಕುರಿತಾಗಿದ್ದು. ೧೭೭೮ ರಲ್ಲಿ ಆಮ್ಲಜನಕವನ್ನು ಹಾಗು ೧೭೮೩ರಲ್ಲಿ ಜಲಜನಕವನ್ನು ಪತ್ತೆ ಹಚ್ಚಿದ ಲವಾಸಿಯೇ ದಹನಕ್ರಿಯೆಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿ , ಅಲ್ಲಿಯವರೆಗೂ ಪ್ರಚಲಿತದಲ್ಲಿದ್ದ ಫ್ಲೋಜಿಸ್ಟಾನ್ ಪ್ರಮೇಯ<ref>[https://en.wikipedia.org/wiki/Phlogiston_theory ಫ್ಲೋಜಿಸ್ಟಾನ್ ಪ್ರಮೇಯ ವಿಕಿಪೀಡಿಯ ಇಂಗ್ಲೀಷ್ ಆವೃತ್ತಿಯ ಪುಟ]</ref> ತಪ್ಪೆಂದು ಸಾರಿ ಹೇಳಿದ. ಫ್ಲೋಜಿಸ್ಟಾನ್ ಪ್ರಮೇಯ ದಹನ ಕ್ರಿಯೆಯ ರಹಸ್ಯವನ್ನು ಹೀಗೆ ಬಣ್ಣಿಸುತ್ತದೆ "ದಹನವಾಗಬಲ್ಲ ವಸ್ತುಗಳಲ್ಲಿ ಬೆಂಕಿಯಂತಹ 'ಫ್ಲೋಜಿಸ್ಟಾನ್' ಎಂಬ ವಸ್ತುವೊಂದು ಅಡಗಿರುತ್ತದೆ, ಹೊತ್ತಿ ಉರಿಯಲು ಇದೇ ಕಾರಣ". ಲವಾಸಿಯೇ ಮೆಟ್ರಿಕ್ ಪದ್ಧತಿಯನ್ನು ಅಭಿವೃದ್ಧಿ ಪಡಿಸಲು ಸಹಾಯ ಮಾಡಿದ್ದಾನೆ ಹಾಗು ರಾಸಾಯನಿಕಗಳ ವರ್ಗೀಕರಣ ನವೀಕರಣ ಕಾರ್ಯದಲ್ಲೂ ಕೈ ಜೋಡಿಸಿದ್ದಾನೆ.ಫ್ರೆಂಚ್ ಕ್ರಾಂತಿಯು ಉತ್ತುಂಗದಲ್ಲಿದ್ದ ಕಾಲದಲ್ಲಿ ಲವಾಸಿಯೇ ತಂಬಾಕು ಸರಬರಾಜುಗಳಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದನ್ನು ಜೀನ್-ಪೌಲ್-ಮ್ಯಾರತ್ ಬಹಿರಂಗ ಮಾಡುತ್ತಾನೆ. ಇದಾಗಿ ಮ್ಯಾರತ್ ಸಾವಿನ ಒಂದು ವರ್ಷದ ನಂತರ ಲವಾಸಿಯೇ ಶಿರಚ್ಚೇಧನ ಶಿಕ್ಷೆಗೆ ಒಳಗಾಗುತ್ತಾನೆ.
 
==ಲವಾಸಿಯೆ ಜೀವನ ಚರಿತ್ರೆ==
ಲವಾಸಿಯೆ ೨೬ ಆಗಸ್ಟ್ ೧೭೪೩ರಲ್ಲಿ ಪ್ಯಾರಿಸ್ ನ ಸ್ಥಿತಿವಂತ ಕುಟುಂಬವೊಂದರಲ್ಲಿ ಜನಿಸುತ್ತಾನೆ. ಆತನ ತಂದೆ ಪ್ಯಾರಿಸ್ ಸಂಸತ್ತಿನ ವಕಾಲತ್ತು ವೃತ್ತಿಯಲ್ಲಿದ್ದವರು. ತಾಯಿಯು ಲವಾಸಿಯೆ ಐದು ವರ್ಷದ ಬಾಲಕನಾಗಿದ್ದಾಗಲೆ ಮರಣವನ್ನಪ್ಪಿದ್ದಳು. ಲವಾಸಿಯೆ ಹನ್ನೊಂದು ವರ್ಷದ ಪ್ರಾಯದವನಾಗಿದ್ದಾಗ ಶಾಲಾ ಶಿಕ್ಷಣ ಪಡೆಯಲು ಆರಂಭಿಸಿದ. ಪ್ಯಾರಿಸ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಕಾಲೇಜ್ ಡೆಸ್ ಕ್ವಾಟ್ರ್-ನೇಶಸ್ ಎಂಬ ಶಿಕ್ಷಣ ಸಂಸ್ಥೆಯಲ್ಲಿ ೧೭೫೪ ರಲ್ಲಿ ಆರಂಭಿಸಿ ೧೭೬೦ -೬೧ ರಷ್ಟರಲ್ಲಿ ರಸಾಯನ ಶಾಸ್ತ್ರ, ಸಸ್ಯ ಶಾಸ್ತ್ರ, ಖಗೋಳ ಶಾಸ್ತ್ರ ಮತ್ತು ಗಣಿತ ಶಾಸ್ತ್ರ ಗಳಲ್ಲಿ ಅಪಾರ ಪರಿಣತಿಯನ್ನು ಪಡೆದುಕೊಂಡು ಆ ವಿಷಯಗಳ ಮೇಲೆ ಸಂಶೋಧನೆಗಳಿಗೂ ಮೊದಲಾದ.
ತತ್ವಶಾಸ್ತ್ರದ ತರಗತಿಗಳಲ್ಲಿ ಬಹಳ ಉತ್ಸುಕನಾಗಿ ಪಾಲ್ಗೊಳ್ಳುತ್ತಿದ್ದ ಲವಾಸಿಯೇ ನನ್ನು ಕಂಡ ಪ್ರಾಧ್ಯಾಪಕ ಅಬ್ಬೆ ನಿಕೋಲಸ್ ಸ್ವತಹ ಒಬ್ಬ ಗಣಿತಜ್ಞ ಹಾಗು ಖಗೋಳ ಶಾಸ್ತ್ರಗಳಲ್ಲಿ ಆಸಕ್ತಿ ಇರಿಸಿಕೊಂಡಿದ್ದ ವ್ಯಕ್ತಿ, ಈತನೇ ಬಾಲಕ ಲವಾಸಿಯೇಗೆ ಪವನಶಾಸ್ತ್ರದ ಬಗ್ಗೆ ಆಸಕ್ತಿ ಕೆರಳಿಸಿದ. ಮುಂದೆ ಲವಾಸಿಯೇ ವೃತ್ತಿಗಾಗಿ ಕಾನೂನು ಅಧ್ಯಯನ ಮಾಡಿ ಪದವಿ ಪಡೆದರೂ ವಿಜ್ಞಾನದ ಕಡೆ ಅಪಾರ ಸೆಳೆತವಿದ್ದರಿಂದ ಕಾನೂನು ರಂಗದಲ್ಲಿ ಮುಂದುವರೆಯದೆ ವೈಜ್ಞಾನಿಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡ.
 
[[ವರ್ಗ:ರಸಾಯನಶಾಸ್ತ್ರ ತಜ್ಞ]]