ಮುಹಮ್ಮದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೧ ನೇ ಸಾಲು:
==ಪ್ರವಾದಿ [ಸ]ರವರ ಕೊನೆಯ ವಚನ ಅರಫಾ ಮೈದಾನದಲ್ಲಿ: ==
ಪ್ರವಾದಿ ಮುಹಮ್ಮದ್ [ಸ]ರು ಹೇಳಿದರು: ಓ ಜನರೇ ನಿಮ್ಮ ದೇವನು ಒಬ್ಬನು ಮತ್ತು ನಿಮ್ಮ ತಂದೆಯೂ ಒಬ್ಬನು. ಅರಬನಿಗೆ ಅರಬೇತರ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ ಮತ್ತು ಅರಬೇತರನಿಗೆ ಅರಬರ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. ಕೆಂಪು ಬಣ್ಣದವನಿಗೆ (ಅಂದರೆ ಕೆಂಪು ಮಿಶ್ರಿತ ಬಿಳಿಬಣ್ಣದವನು) ಕರಿಯನ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ ಮತ್ತು ಕರಿಯನಿಗೆ ಕೆಂಪು ಬಣ್ಣದವನ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. ಭಯಭಕ್ತಿಯ ಮಾನದಂಡದಲ್ಲೇ ಹೊರತು. [ಮುಸ್ನಾದ್ ಅಹ್ಮದ್ # 22978]
 
 
==ಪ್ರವಾದಿ [ಸ]ರವರ ಸರಳ ಜೀವನ: ==
 
"ಮುಹಮ್ಮದ್ [ಸ]ರ ಅನುಯಾಯಿಗಳಲ್ಲಿ ಒಬ್ಬರಾದ ಸಹ್ಲ್ ಇಬ್ನ್ ಸಹ್'ದ್ ಹೇಳುತ್ತಾರೆ: ಅಲ್ಲಾಹನ ಪ್ರವಾದಿಯವರು ಪ್ರವಾದಿಯಾದ ಬಳಿಕ ಮರಣದ ತನಕ ಜರಡಿಯಲ್ಲಿ ಸೋಸಿದ ಹಿಟ್ಟನ್ನು ಕಂಡೇ ಇಲ್ಲ [ಸಹೀಹುಲ್ ಬುಖಾರಿ, #5413, ತಿರ್ಮಿದಿ, #2364]". "ಮುಹಮ್ಮದ್ [ಸ]ರ ಪತ್ನಿ ಆಯಿಶಾ ಹೇಳುತ್ತಾರೆ "ಪ್ರವಾದಿಯವರು ಮಲಗುತ್ತಿದ್ದ ಚಾಪೆಯು ಕರ್ಜೂರದ ನಾರುಗಳನ್ನು ತುಂಬಿದ ಚರ್ಮದಿಂದ ನಿರ್ಮಿಸಿದ್ದಾಗಿತ್ತು [ಸಹೀಹ್ ಮುಸ್ಲಿಮ್, #2082, ಸಹೀಹುಲ್ ಬುಖಾರಿ, # 6456]". "ಒಬ್ಬ ಪ್ರವಾದಿ, ಶಿಕ್ಷಕ, ಆಡಳಿತಗಾರ, ನ್ಯಾಯಾಧೀಶ ಮೊದಲಾದ ಜಾವಾಬ್ದಾರಿಗಳನ್ನು ನಿಭಾಯಿಸುವುದರೊಂದಿಗೆ ಅವರು ಸ್ವತಃ ಆಡಿನ ಹಾಲು ಹಿಂಡುತ್ತಿದ್ದರು [ಮುಸ್ನಾದ್ ಅಹ್ಮದ್, #25662]".
""ಮುಹಮ್ಮದ್ [ಸ] ತಮ್ಮ ಬಟ್ಟೆಗಳನ್ನು ಮತ್ತು ಚಪ್ಪಲಿಯನ್ನು ಸ್ವತಃ ದುರಸ್ತಿ ಮಾಡುತ್ತಿದ್ದರು [ಮುಸ್ನಾದ್ ಅಹ್ಮದ್, #676, ಮುಸ್ನಾದ್ ಅಹ್ಮದ್, #25517]". "ಮುಹಮ್ಮದ್ [ಸ] ಮನೆಗೆಳಸಗಳಲ್ಲಿ ನೆರವಾಗುತ್ತಿದ್ದರು [ಮುಸ್ನಾದ್ ಅಹ್ಮದ್, #676, ಮುಸ್ನಾದ್ ಅಹ್ಮದ್, #23706]". "ಮುಹಮ್ಮದ್ [ಸ] ರೋಗಿಗಳನ್ನು ಸಂದರ್ಶಿಸುತ್ತಿದ್ದರು [ಮೊವತ್ತ ಮೊವತ್ತ ಮಾಲಿಕ್, #531]". "ಮುಹಮ್ಮದ್ [ಸ] ಹೊಂಡ ತೋಡುವಾಗಲೂ ಅವರು ತಮ್ಮ ಅನುಯಾಯಿಗಳಿಗೆ ನೆರವಾಗುತ್ತಿದ್ದರು [ಮುಸ್ನಾದ್ ಅಹ್ಮದ್, #3034, and ಸಹೀಹ್ ಮುಸ್ಲಿಮ್, #1803, ಮುಸ್ನಾದ್ ಅಹ್ಮದ್, #18017]". "ಮುಹಮ್ಮದ್ {ಸ}ರ ಅನುಯಾಯಿಗಳಲ್ಲಿ ಒಬ್ಬರಾದ ಅನಸ್ ಕೇಳುವಂತೆ ಮುಹಮ್ಮದ್ [ಸ]ರಿಗಿಂತಲೂ ಹೆಚ್ಚಾಗಿ ಅವರ ಅನುಯಾಯಿಗಳು ಯಾರನ್ನೂ ಪ್ರೀತಿಸುತ್ತಿರಲಿಲ್ಲ, ಆದರೂ ಮುಹಮ್ಮದ್ [ಸ]ರು ಅವರ ಬಳಿಗೆ ಬಂದಾಗ ಅವರು ಎದ್ದು ನಿಲ್ಲುತ್ತಿರಲಿಲ್ಲ, ಯಾಕೆಂದರೆ ದೊಡ್ಡ ದೊಡ್ಡ ಜನರಿಗಾಗಿ ಎದ್ದು ನಿಲ್ಲುವಂತೆ ತನಗೆ ಕೂಡಾ ಎದ್ದು ನಿಲ್ಲುವುದನ್ನು ಮುಹಮ್ಮದ್ [ಸ]ರು ಅಸಹ್ಯಪಡುತ್ತಿದ್ದರು [ಮುಸ್ನಾದ್ ಅಹ್ಮದ್, #12117, ಸಹೀಹ್ ಮುಸ್ಲಿಮ್, #2754]".
 
 
"https://kn.wikipedia.org/wiki/ಮುಹಮ್ಮದ್" ಇಂದ ಪಡೆಯಲ್ಪಟ್ಟಿದೆ