ಕುರಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{cn}}
[[ಕುರಾನ್]] ಎಂಬ ಅರಬಿ ಪದಕ್ಕೆ ಪಾರಾಯಣ, ಪಾರಾಯಣ ಮಾಡಲ್ಪಡುವ ಗ್ರಂಥ ಎಂಬಿತ್ಯಾದಿ ಅರ್ಥಗಳಿವೆ. ಅಲ್-ಕುರಾನ್ ಅಲ್ಲಾಹನ ವಚನವಾಗಿದೆ, ಇದನ್ನು ಅಲ್ಲಾಹು ಮಲಕ್'ಗಳ ನಾಯಕರಾದ ಜಿಬ್ರೀಲ್ [ಅ]ರವರ ಮುಖಾಂತರ ಪ್ರವಾದಿ ಮುಹಮ್ಮದ್ [ಸ]ರವರಿಗೆ ಅವತೀರ್ಣಗೊಳಿಸಿದರು. "ನಿಶ್ಚಯವಾಗಿಯೂ ಇದು (ಕುರಾನ್) ಸರ್ವಲೋಕದ ಪ್ರಭುವಿನಿಂದ ಅವತೀರ್ಣಗೊಳಿಸಲ್ಪಟ್ಟಿದೆ. ರೂಹುಲ್ ಅಮೀನ್ (ಜಿಬ್ರೀಲ್ [ಅ]) ಇದನ್ನು ನಿಮ್ಮ ಹೃದಯಕ್ಕೆ ನೀವು ಮುನ್ನೆಚ್ಚರಿಕೆ ಕೊಡುವವಾರಾಗಲೆಂದು ತಂದಿರಿಸಿದ್ದಾರೆ. ಇದು ಅರಬೀ ಭಾಷೆಯಲ್ಲಿದೆ. ಮತ್ತು ಇದರ (ಕುರಾನ್) ಕುರಿತು ಹಿಂದಿನ ದಿವ್ಯಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ [ಕುರಾನ್, 26: 192-196]". ಕುರಾನಿನಲ್ಲಿ 114 ಸೂರಗಳು ಇದೆ. ಮೊದಲ ಸೂರದ ಹೆಸರು ಸೂರ [[ಅಲ್ ಫಾತಿಹಾ]] ಮತ್ತು ಕೊನೆಯ ಸೂರದ ಹೆಸರು [[ಸೂರ ಅನ್ನಾಸ್]]. ಕುರಾನ್ ಮೊದಲ ಬಾರಿಗೆ [[ರಮಝಾನ್]] ತಿಂಗಳಲ್ಲಿ ಅವತೀರ್ಣವಾಗಿದೆ. "ಕುರಾನ್ ಅವತೀರ್ಣಗೊಂಡಿದ್ದು [[ರಮಝಾನ್]] ತಿಂಗಳಲ್ಲಾಗಿದೆ. ಅದರಲ್ಲಿ ಜನರಿಗೆ ಸನ್ಮಾರ್ಗವೂ ಸತ್ಯಾಸತ್ಯತೆಗಳನ್ನು ಬೇರ್ಪಡಿಸಿ ತಿಳಿಯುವ ಮಾಡದಂಡವೂ ಇದೆ
[ಕುರಾನ್, 2: 185]". ಕುರಾನ್ ಇನ್ನೊಂದು ಹೆಸರು [[ಪುರ್ಕಾನ್]] ಎಂದು ಆಗಿದೆ. [[ಪುರ್ಕಾನ್]] ಅಂದರೆ ಸತ್ಯ ಮತ್ತು ಅಸತ್ಯವನ್ನು ಬೇರ್ಪಡಿಸುವ ಸಾಧನವೆಂದು. ಇದಲ್ಲದೆ ಅಲ್-ಕಿತಾಬ್ ಮತ್ತು ಅಧ್-ಧಿಕ್ರ್ ಎಂಬ ಹೆಸರುಗಳೂ ಕೂಡಾ ಇದೆ.
 
"https://kn.wikipedia.org/wiki/ಕುರಾನ್" ಇಂದ ಪಡೆಯಲ್ಪಟ್ಟಿದೆ