ಆನಂದವರ್ಧನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
 
೧೩ ನೇ ಸಾಲು:
 
ಗ್ರಂಥದ ಎರಡನೆಯ ಅಧ್ಯಾಯದಲ್ಲೆಲ್ಲ ವ್ಯಂಗ್ಯಮುಖೇನ ಧ್ವನಿಯ ವಿವರಣೆ ಬಂದರೆ ವ್ಯಂಜಕಗಳ ವಿವರಣೆ ಮೂರನೆಯದರಲ್ಲಿ ತುಂಬಿದೆ. ಶಬ್ದಭಾಗಗಳು ಕೂಡ ರಸಕ್ಕೆ ವ್ಯಂಜಕವಾಗುವುದನ್ನೂ ಇಡೀಪ್ರಬಂಧವೇ ರಸಪರವಾಗಿರುವ ಸೂಕ್ಷ್ಮತತ್ತ್ವವನ್ನೂ ಮಾರ್ಮಿಕವಾಗಿ ಇಲ್ಲಿ ವಿವರಿಸಲಾಗಿದೆ. ಹೀಗೆ ರಸದೃಷ್ಟಿಯಿಂದ ಕವಿಗಳ ಮಾರ್ಗದರ್ಶನಕ್ಕೆ ಹೊರಟ ಆನಂದವರ್ಧನ ಕಥಾವಸ್ತುವಿನ ಯೋಜನೆ, ಪಾತ್ರಚಿತ್ರಣ, ಶೈಲಿ ಎಲ್ಲವನ್ನೂ - [[ನಾಟಕ]], [[ಮಹಾಕಾವ್ಯ]], [[ಭಾವಗೀತೆ]], [[ಗದ್ಯ]] ಇತ್ಯಾದಿ ವಿವಿಧ ಕಾವ್ಯಪ್ರಕಾರಗಳಲ್ಲಿ ಹೇಗೆ ರಸೌಚಿತ್ಯ ನಿಯಮ ನಿಯೋಜಿಸುತ್ತದೆಂಬುದನ್ನು ಸುಂದರ ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿದ್ದಾನೆ. ಕಡೆಯ ಅಧ್ಯಾಯದಲ್ಲಿ ಈ ತತ್ತ್ವದ ಅನುಸರಣೆಯಿಂದ ಹೇಗೆ ಪ್ರತಿಭಾವಂತ ಕವಿಗೆ ಸಿದ್ಧಿಸುವುದೆಂದು ತೋರಿಸಿದ್ದಾನೆ. [[ರಾಮಾಯಣ]] [[ಮಹಾಭಾರತ]] ಮುಂತಾದ ಮಹಾಕಾವ್ಯಗಳಲ್ಲಿ ಕೂಡ ಹೇಗೆ ಪ್ರಧಾನವಾಗಿ ಕರುಣ ಹಾಗೂ ಶಾಂತರಸಗಳು ಬಂದಿವೆಯೆಂದು ವಿವರಿಸಿದ್ದಾನೆ. ಹೀಗೆ ಧ್ವನ್ಯಾಲೋಕದಲ್ಲಿ ಶಾಸ್ತ್ರೀಯವಾದ ಕಾವ್ಯತತ್ತ್ವ ಪ್ರತಿಪಾದನೆಯ ಜೊತೆಗೆ ಸಾರಗ್ರಾಹಿಯಾದ ಸಾಹಿತ್ಯವಿಮರ್ಶೆ ಕೂಡ ಮೂಡಿ ಬಂದಿದೆ. ನಾಟಕಾದಿಗಳಿಗೆ ಸೀಮಿತವಾಗಿದ್ದ ರಸಸೂತ್ರವನ್ನು ಯಥೋಚಿತವಾಗಿ ಕಾವ್ಯಕ್ಷೇತ್ರಕ್ಕೂ ಸಮನ್ವಯ ಮಾಡಿದ್ದರಿಂದ ಸಂಸ್ಕೃತ ಅಲಂಕಾರಶಾಸ್ತ್ರದ ಇತಿಹಾಸದಲ್ಲಿ ಆನಂದವರ್ಧನನ ಕೀರ್ತಿ ಅಜರಾಮರವಾಗಿದೆ.
 
[[ವರ್ಗ:ಸಾಹಿತ್ಯ]]
"https://kn.wikipedia.org/wiki/ಆನಂದವರ್ಧನ" ಇಂದ ಪಡೆಯಲ್ಪಟ್ಟಿದೆ