ಅಸ್ಸಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೩೧ ನೇ ಸಾಲು:
 
ಪ್ರಮುಖ ಉಪಭಾಷಾವರ್ಗಗಳಾದ ಪೂರ್ವ ಮತ್ತು ಪಶ್ಚಿಮ ಅಸ್ಸಾಮಿಗಳೆರಡೂ ಬಲುಮಟ್ಟಿಗೆ ಧ್ವನ್ಯಾತ್ಮಕ ರೂಪಾತ್ಮಕ ಮತ್ತು ಪದಕೋಶಾತ್ಮಕ-ಈ ಎಲ್ಲ ಕ್ಷೇತ್ರಗಳಲ್ಲೂ ಖಚಿತವಾದ ವಿಭಿನ್ನತೆಯನ್ನು ತೋರಿಸುತ್ತದೆ. ಪರಿಣಾಮವಾಗಿ ಎರಡು ಭಾಷಾವರ್ಗಗಳ ಜನ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದೇ ಕಷ್ಟ. ಆದರೆ ಪಶ್ಚಿಮ ಅಸ್ಸಾಮಿನ ಉಪಭಾಷೆಗಳಲ್ಲಿಯ ವಿಭಿನ್ನತೆ ಮುಖ್ಯವಾಗಿ ಧ್ವನಿಮಾ ಶಾಸ್ತ್ರ(ನಿರ್ದಿಷ್ಟವಾಗಿ ಹೇಳುವುದಾದರೆ ಸ್ವರಲಹರಿ) ಮತ್ತು ವಿರಳವಾಗಿ ಪದಕೋಶ ಇವುಗಳಿಗೆ ಸಂಬಂಧಪಟ್ಟಿರುತ್ತದೆ.
==ಧ್ವನ್ಯಾತ್ಮಕ==
ಧ್ವನ್ಯಾತ್ಮಕ : (1) ಪೂರ್ವ ಅಸ್ಸಾಮೀಯಲ್ಲಿ ಮಧ್ಯ ಬಲಾಘಾತವಿರುತ್ತಿದ್ದರೆ, ಪಶ್ಚಿಮ ಅಸ್ಸಾಮೀಯಲ್ಲಿ ಪ್ರಬಲವಾದ ಆದ್ಯ ಬಲಾಘಾತ ಇರುತ್ತದೆ. ಇದರ ಪರಿಣಾಮವಾಗಿ ಎರಡನೆಯದರಲ್ಲಿ ಪದಗಳು ವಿರೂಪಗೊಳ್ಳುತ್ತವೆ. (ಅ) ಬಲಾಘಾತಯುಕ್ತ ವರ್ಣದ ಪರದಲ್ಲಿ ಬರುವ ಸ್ವರ ಹೋಗಿ ವ್ಯಂಜನಗುಚ್ಛಗಳು ರೂಪುಗೊಳ್ಳುತ್ತವೆ. ಉದಾ : ನೀನು (ಮರ್ಯಾದಾಪುರ) ಮಾಡುವೆ-ಕರಿಬ ಲ ಕ್ರಬ; ಕುಂಬಳ-ಕೊಮೊರಲಕುಮ್ರ, ಇತ್ಯಾದಿ; ಅಥವಾ ಸಂಯುಕ್ತ ಸ್ವರಗಳೊ ತ್ರಿಸಂಯುಕ್ತ ಸ್ವರಗಳೊ ಆಗಿ ಉಳಿದುಕೊಳ್ಳುತ್ತವೆ. ಉದಾ : ಉಳುವವನು-ಹಲೋವಲಹೌಲ; ಒಂದು ಅಂಕಿತನಾಮ-ರತಿಯ ಲರೈತ; ಸಾಧು-ಕೆವಲಿಯಲಕೆಉಇಲ, ಇತ್ಯಾದಿ. (ಆ) ಅಂತ್ಯ ಸಂಯುಕ್ತ ಸ್ವರಗಳು ಮೂಲಸ್ವರಗಳಾಗುತ್ತವೆ. ಉದಾ : ರಾಣಿ-ಮದೈಲಮದೆ; ಬೇಡಿಕೆ-ಕಬೌಲಕಬೆ, ಇತ್ಯಾದಿ.
 
(2) ಪೂರ್ವ ಅಸ್ಸಾಮೀಯಲ್ಲಿರುವ ಉಚ್ಚತರ ಮಧ್ಯಸ್ವರಗಳಿಗೆ ಪ್ರತಿಯಾಗಿ ಪಶ್ಚಿಮ ಅಸ್ಸಾಮಿಯಲ್ಲಿ ಉಚ್ಚಸ್ವರಗಳೇ ವಿಶೇಷ. ಹಾಗೆಯೇ ಅಲ್ಲಿಯ ನಿಮ್ನತರ-ಮಧ್ಯಸ್ವರಗಳಿಗೆ ಪ್ರತಿಯಾಗಿ ಇಲ್ಲಿ ನಿಮ್ನ ಸ್ವರಗಳಿರುತ್ತವೆ. ಉದಾ : ಬಟ್ಟೆ-ಕಪೊರ್‍ಲಕಪುರ್; ಬೆಲೆ-ಮೊಲ್‍ಲಮುಲ್; ನಿಂಬೆ -ನೆಮುಲನಿಮು; ಅವನು ಮಾಡಿದ್ದಾನೆ-ಕರಿಸೆ ಲಕರಿಸಿ.
Line ೪೩ ⟶ ೪೪:
(6) ಪೂರ್ವದ ಉಪಭಾಷೆಯ ಮಾತಿನ ವೇಗ ನಿಧಾನವಾದದ್ದು, ಪಶ್ಚಿಮದ ಉಪಭಾಷೆಗಳದು ತೀವ್ರ ಮತ್ತು ರಭಸವಾದದ್ದು.
==ಆಕೃತಿಮಾತ್ಮಕ : ==
(1) ನಾಮವಾಚಕಗಳ ವಿಭಕ್ತಿರೂಪದಲ್ಲಿ ದ್ವಿತೀಯ ಮತ್ತು ಚತುರ್ಥಿ ವಿಭಕ್ತಿಗಳು ಪಶ್ಚಿಮ ಅಸ್ಸಾಮಿಯಲ್ಲಿ ಒಂದಾಗಿರುತ್ತವೆ.
 
(2) ಕಾಲ ಮತ್ತು ಸ್ಥಾನಗಳ ಸರ್ವನಾಮ ಸಾಧಿತಗಳು ಎರಡು ಭಾಷಾವರ್ಗಗಳಲ್ಲೂ ಬೇರೆ ಬೇರೆಯೇ ಆಗಿವೆ. ಉದಾ : ಪೂರ್ವ ಅಸ್ಸಾಮಿ ಎಲ್ಲಿ-ಕತ್, ಎಲ್ಲಿ (ಸಂಬಂಧಸೂಚಕ)-ಜûತ್, ಅಲ್ಲಿ-ತತ್; ಇಲ್ಲಿ-ಅತ್ ಇವುಗಳಿಗೆ ಪಶ್ಚಿಮ ಅಸ್ಸಾಮಿಯಲ್ಲಿ ಕ್ರಮವಾಗಿ ಕಹೇಂ~ಕಹಾಂಯ್, ಜûಹೇಂ~ಜಹಾಂಯ್ ಇತ್ಯಾದಿ ಮಾತುಗಳಿವೆ.
Line ೫೫ ⟶ ೫೭:
ಪದಕೋಶ:
ಎರಡು ಭಾಷಾವರ್ಗಗಳ ಉಪಭಾಷೆಗಳೂ ಸಮಗ್ರ ನಾಮಪದಗಳ ರಾಶಿಯಲ್ಲಿ ಶೇಕಡ ಸ್ವಲ್ಪಭಾಗ ಹೊರತಾಗಿ, ಸಮಾನ ಸಂದರ್ಭಗಳಲ್ಲಿ ತೀರ ವಿಭಿನ್ನವಾದ ಪದಗಳನ್ನು ಬಳಸುತ್ತವೆ. ನಿದರ್ಶನಾರ್ಥವಾಗಿ ಕೆಲವು ಉದಾಹರಣೆಗಳನ್ನು ಹೇಳಬಹುದಾದರೆ, ಪೂರ್ವ ಅಸ್ಸಾಮೀಯ ಬಾವಿ - ಕುವ, ಟವೆಲ್ -ಗಮೊಸ, ಬಾರುಕೊಲು -ಅಸರಿ, ತಂಬಾಕು -ಧಪತ್ ಇವುಗಳಿಗೆ ಪಶ್ಚಿಮ ಅಸ್ಸಾಮೀಯಲ್ಲಿ ಕ್ರಮವಾಗಿ ಲಹಣ್ಣ, ಪಲಿ, ಲರು, ತಙ್ಖು ಎಂಬ ಶಬ್ಧಗಳು ಕಂಡುಬರುತ್ತವೆ.
 
 
==ವ್ಯಂಜನಗಳು==
"https://kn.wikipedia.org/wiki/ಅಸ್ಸಾಮಿ" ಇಂದ ಪಡೆಯಲ್ಪಟ್ಟಿದೆ