ಒರಿಯಾ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು clean up, replaced: ಹಿಂದೀ → ಹಿಂದಿ using AWB
೪೭ ನೇ ಸಾಲು:
ಆ ಕಾಲದ ಬೃಂದಾವತಿದಾಸಿ ಎಂಬ ಕವಿಯಿತ್ರಿ ಗೋಕುಲದಲ್ಲಿ ಕೃಷ್ಣನ ಜೀವಿತವನ್ನು ಕುರಿತ ಪುರ್ಣತಮ ಚಂದ್ರೋದಯ ಎಂಬ ಕಾವ್ಯವನ್ನು ಬರೆದಿದ್ದಾಳೆ.
 
ಉಪೇಂದ್ರಭಂಜನ ಕಾಲದಲ್ಲಿ ಏಕಪ್ರಕಾರವಾಗಿರುವ ಕಾವ್ಯಶೈಲಿ ಸಾಹಿತ್ಯದಲ್ಲೆಲ್ಲ ವ್ಯಾಪಿಸಿತ್ತು ಎಂಬುದು ಸ್ಪಷ್ಟ. ಕವಿಗಳು ಅಂಥ ಶೈಲಿಯಲ್ಲೇ ಬರೆದು ತಮ್ಮ ಕವಿತಾಪ್ರೌಢಿಮೆಯನ್ನು ಮೆರೆಸಲು ಕಾತರರಾಗಿದ್ದರು. ಉಪೇಂದ್ರಭಂಜನ ತರುವಾಯ ಕೆಲವು ಕವಿಗಳು ಒರಿಯ ಸಾಹಿತ್ಯಕ್ಕೆ ಗಮನಾರ್ಹವಾದ ಕಾಣಿಕೆಯನ್ನು ಸಲ್ಲಿಸಿ ಖ್ಯಾತರಾಗಿದ್ದಾರೆ.
 
18ನೆಯ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ್ದ ಸದಾನಂದ ಕವಿ ಸೂರ್ಯಬ್ರಹ್ಮ ವೈಷ್ಣವಧರ್ಮವನ್ನು ಸ್ವೀಕರಿಸಿದ ಮೇಲೆ ತನ್ನ ಹೆಸರನ್ನು ಸಾಧು ಚರಣದಾಸನೆಂದು ಮಾರ್ಪಡಿಸಿಕೊಂಡ. ಆತ ಪ್ರೇಮತರಂಗಿಣಿಯನ್ನೂ ಪ್ರೇಮ ಲಹರಿ, ಲಳಿತಲೋಚನಾ ಛೌರಚಿಂತಾಮಣಿ ಮತ್ತು ಜುಗಳರಸಾಮೃತಲಹರಿ ಎಂಬ ಮಧುರ ಮಂಜುಳ ಕೃತಿಗಳನ್ನೂ ಬರೆದಿದ್ದಾನೆ. ಅವಕ್ಕೆಲ್ಲ ಉಪೇಂದ್ರಭಂಜನೇ ಮೇಲುಪಂಕ್ತಿ.
18ನೆಯ ಶತಮಾನದ ಮಧ್ಯಭಾಗದಲ್ಲಿದ್ದ ಜನಾರ್ಧನದಾಸನಿಗೆ ದನಾಯಿದಾಸನೆಂದೂ ಹೆಸರಿತ್ತು. ಆತ ಗೋಪೀಭಾಸವನ್ನು ಬರೆದ. ಇದರಲ್ಲಿ ಗೋಪ ಗ್ರಾಮದಲ್ಲಿನ ಸ್ತ್ರೀಯರು ಕೃಷ್ಣ ತಮ್ಮನ್ನು ಬಿಟ್ಟು ಮಧುರೆಗೆ ಹೊರಟಾಗ ಗೋಳಾಡಿದ ಬಗೆ ವರ್ಣಿತವಾಗಿದೆ.
 
ಆ ಕಾಲದ ರಾಮದಾಸ ಎಂಬ ಕವಿ ರಾಮರಸಾಮೃತ ಮತ್ತು ದಾಢರ್ಯ್‌ತಾ ಭಕ್ತಿ ಎಂಬವನ್ನು ಬರೆದಿದ್ದಾನೆ. ಮೊದಲನೆಯದು ರಾಮಚಂದ್ರನ ಚರಿತ್ರೆಯನ್ನೂ ಎರಡನೆಯದು ಒರಿಸ್ಸ ದೇಶದ ಸಾಧುಸಂತರ ಚರಿತ್ರೆಯನ್ನೂ ವರ್ಣಿಸುತ್ತವೆ.
 
ಬಿಸ್ವನಾಥ್ ಕುಂಟಿಯಾ ಎಂಬ ಕವಿ 18ನೆಯ ಶತಮಾನದ ಉತ್ತರಾರ್ಧದಲ್ಲಿ ಜೀವಿಸಿದ್ದು ರಾಮಚಂದ್ರನ ಮಾಹಾತ್ಮ್ಯವನ್ನು ವರ್ಣಿಸುವ ವಿಚಿತ್ರ ರಾಮಾಯಣ ಎಂಬ ಗ್ರಂಥವನ್ನು ಬರೆದಿದ್ದಾನೆ.
 
ಬ್ರಜನಾಥ ಬಡಜೆನಾ ಎಂಬಾತ 18ನೆಯ ಶತಮಾನದ ಉತ್ತರಾರ್ಧದಲ್ಲಿ ಜೀವಿಸಿದ್ದು ದೇಶಾಭಿಮಾನವನ್ನು ಉಕ್ಕಿಸುವಂಥ ಸಾಹಿತ್ಯ ನಿರ್ಮಿತಿಗಾಗಿ ಖ್ಯಾತನಾಗಿದ್ದಾನೆ. ಧೆಂಕನಾಳ್ ರಾಜ ಮರಾಠಿಗರೊಂದಿಗೆ ಯುದ್ಧಮಾಡಿದ ಪ್ರಸಂಗ ಈತನ ಸಮರತರಂಗದಲ್ಲಿ ವರ್ಣಿತವಾಗಿದೆ. ಈತನ ಶ್ಯಾಮರಾಸೋತ್ಸವ ಮತ್ತು ಅಂಬಿಕಾವಿಲಾಸ ಎಂಬುವು ಪೌರಾಣಿಕ ವಸ್ತುವನ್ನು ಅವಲಂಬಿಸಿ ಬರೆದ ಕೃತಿಗಳು; ಗುಂಡಿಛಾಬಿಜೆ ಎಂಬ ಹಿಂದೀಹಿಂದಿ ಕೃತಿಯಲ್ಲಿ ಈತ ಪ್ರಭುಜಗನ್ನಾಥನ ರಥೋತ್ಸವವನ್ನು ವರ್ಣಿಸಿದ್ದಾನೆ.
 
12ನೆಯ ಶತಮಾನದ ಅಂತ್ಯಭಾಗದಲ್ಲಿ ಜೀವಿಸಿದ್ದ ಭಕ್ತಚರಣದಾಸನೆಂಬ ಕವಿ ಶ್ರೀಕೃಷ್ಣಚರಿತ್ರವನ್ನೂ ಆತನ ಪ್ರೇಮಪ್ರಸಂಗಗಳನ್ನೂ ವರ್ಣಿಸುವ ಮಥುರಾ ಮಂಗಳ ಎಂಬ ಕಾವ್ಯವನ್ನು ರಚಿಸಿದ್ದಾನೆ. ಮನಬೋಧ ಚೌತಿಸಾ ಎಂಬ ಇನ್ನೊಂದು ಕೃತಿ ಒರಿಸ್ಸದಲ್ಲೆಲ್ಲ ಬಹಳವಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕಳಾಕಳೆವರ ಚೌತಿಸಾ ಮತ್ತು ಮನಸಿಖ್ಯಾ ಎಂಬುವೂ ಮತ್ತೆರಡು ಜನಪ್ರಿಯ ಕೃತಿಗಳು.
೧೪೪ ನೇ ಸಾಲು:
 
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಒರಿಯ ಸಾಹಿತ್ಯ |ಒರಿಯ ಸಾಹಿತ್ಯ }}
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಒರಿಯಾ_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ