ಕಲ್ಕತ್ತ ವಿಶ್ವವಿದ್ಯಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು clean up, replaced: ಹಿಂದೀ → ಹಿಂದಿ using AWB
೩೭ ನೇ ಸಾಲು:
*೧೮೫೬ರ ಆಗಸ್ಟ್‌ ತಿಂಗಳಿನಲ್ಲಿ ಈ ಸಮಿತಿ ತನ್ನ ಪೂರ್ವಭಾವಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಕಲ್ಕತ್ತ ವಿಶ್ವವಿದ್ಯಾನಿಲಯದ ಸೂಕ್ತ ತಿದ್ದುಪಡಿಗಳೊಂದಿಗೆ ಬೊಂಬಾಯಿ ಮತ್ತು ಮದರಾಸು ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಅವಕಾಶ ಮಾಡಿಕೊಡುವ ಕರಡು ಮಸೂದೆ ಗವರ್ನರ್-ಜನರಲನ ಅಧ್ಯಕ್ಷತೆಯಲ್ಲಿದ್ದ ಸಮಿತಿಯ ಅನುಮೋದನೆ ಪಡೆದುಕೊಂಡಿತು. ಶಾಸನಸಭೆಯಲ್ಲಿ ಮಸೂದೆಯ ಅನುಮೋದನೆಯನ್ನು ಕಾಯ್ದು, ಭಾರತದ ಗವರ್ನರ್-ಜನರಲ್ ವಿಶ್ವವಿದ್ಯಾನಿಲಯದ ಕುಲಾಧಿಪತಿಯಾಗಿರುತ್ತಾನೆಂದು ಘೋಷಿಸಲಾಯಿತು. ಸರ್ ಜೇಮ್ಸ್‌ ವಿಲಿಯಂ ಕೋಲ್ವಿಲ್ಲನನ್ನು ಮೊಟ್ಟಮೊದಲ ಕುಲಪತಿಯಾಗಿ ನೇಮಿಸಲಾಯಿತು. ೧೮೫೭ರ ವಿಶ್ವವಿದ್ಯಾನಿಲಯದ ಮಸೂದೆಗೆ ಶಾಸನ ಸಭೆಯ ಒಪ್ಪಿಗೆ ಪಡೆಯಲಾಯಿತು. ೧೮೫೭ರ ಜನವರಿ ೨೪ರಂದು ಅದಕ್ಕೆ ಗವರ್ನರ್-ಜನರಲರ ಒಪ್ಪಿಗೆಯೂ ಸಿಕ್ಕಿತು.
* ಈ ಮೊದಲೇ ಹೇಳಿದಂತೆ, ವಿಶ್ವವಿದ್ಯಾನಿಲಯ ಕಾಯಿದೆ ಅನುಮೋದಿತವಾಗು ವುದಕ್ಕಿಂತ ಮುಂಚಿತವಾಗಿಯೇ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬಂದಿತ್ತು. ಮೊದಲ ಸೆನೆಟ್ ಸಭೆ ನಡೆದದ್ದು ೧೮೫೭ರ ಜನವರಿ ೩ರಂದು. ಕರ್ನಲ್ ಡಬ್ಲ್ಯು. ಗ್ರಾಪೆಲನನ್ನು ರಿಜಿಸ್ಟ್ರಾರ್ ಆಗಿ ಎರಡು ವರ್ಷ ಗಳ ಅವಧಿಯವರೆಗೆ ಸೆನೆಟ್ ನೇಮಕ ಮಾಡಿತು. ಸೆನೆಟನ್ನು ಮಾನವಿಕ, ನ್ಯಾಯಶಾಸ್ತ್ರ, ವೈದ್ಯಶಾಸ್ತ್ರ ಮತ್ತು ಸಿವಿಲ್ ಎಂಜಿನಿಯರಿಂಗ್ - ಎಂದು ನಾಲ್ಕು ಶಿಕ್ಷಣ ನಿಕಾಯಗಳಾಗಿ ವಿಭಾಗಿಸಲಾಯಿತು. ೧೮೫೮ಕ್ಕೆ ಮೊದಲು ಸಿಂಡಿಕೇಟ್ ಸಭೆ ರೂಪುಗೊಳ್ಳಲಿಲ್ಲ. ಅಲ್ಲಿಯವರೆಗೆ ತಾತ್ಕಾಲಿಕ ಸಮಿತಿಯೊಂದು ಅದರ ಕಾರ್ಯಗಳನ್ನು ನಿರ್ವಹಿಸಿದಂತೆ ಕಾಣುತ್ತದೆ. ೧೮೫೭ರಲ್ಲಿ ಈ ಸಮಿತಿ ಹನ್ನೆರಡು ಬಾರಿ ಸಭೇ ಸೇರಿ ಈ ಮೊದಲು ಉಪಸಮಿತಿಗಳು ರೂಪಿಸಿದ್ದ ನಿಯಮಾವಳಿಯನ್ನು ಪರಿಶೀಲಿಸಿತು.
*ವಿಶ್ವವಿದ್ಯಾಲಯದ ಸ್ಥಾಪನೆ ಅನುಮೋದಿತವಾದ ಕೂಡಲೇ ಮಾನ್ಯತೆಗಾಗಿ ಕಾಲೇಜುಗಳು ಅರ್ಜಿಗಳನ್ನು ಸಲ್ಲಿಸತೊಡಗಿದವು. ಶಿಕ್ಷಣೇತರ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದ ಲಕ್ನೋದ ವೀಕ್ಷಣಾಲಯವೂ ಮಾನ್ಯತೆಗಾಗಿ ಅರ್ಜಿ ಸಲ್ಲಿಸಿತೆಂಬ ಸಂಗತಿ ಕುತೂಹಲಕಾರಿಯಾಗಿದೆ. ಆದರೆ ನಿಯಮಾವಳಿಯಲ್ಲಿ ಅವಕಾಶವಿಲ್ಲದೆ ಇದ್ದುದರಿಂದ ಅದಕ್ಕೆ ಮಾನ್ಯತೆ ನೀಡಲು ಸಾಧ್ಯವಾಗದೆ ಹೋದುದಕ್ಕಾಗಿ ವಿಶ್ವವಿದ್ಯಾನಿಲಯ ವಿಷಾದ ವ್ಯಕ್ತಪಡಿಸಿತು. ವಿಶ್ವವಿದ್ಯಾನಿಲಯ ಸ್ಥಾಪನೆಯೇನೋ ಆಗಿದ್ದರೂ ಅದಕ್ಕೆ ತನ್ನದೇ ಆದ ನೆಲೆಯಿರಲಿಲ್ಲ. ಆಡಳಿತ ಕಾರ್ಯಾಲಯವಾಗಲಿ ಪರೀಕ್ಷೆ ಗಳನ್ನು ಮತ್ತು ಘಟಿಕೋತ್ಸವಗಳನ್ನು ಏರ್ಪಡಿಸಲು ಅಗತ್ಯವಾದ ಸಭಾಭವನವಾಗಲೀ ಇರಲಿಲ್ಲ. ತಾತ್ಕಾಲಿಕವಾಗಿ ನಿರ್ಮಿಸಿದ ಡೇರೆಗಳಲ್ಲಿ, ನಗರದ ಬೇರೆ ಬೇರೆ ಮೂಲೆಗಳಲ್ಲಿ ಚದುರಿದ್ದ ಚಿಕ್ಕಪುಟ್ಟ ಭವನಗಳಲ್ಲಿ ಪರೀಕ್ಷೆಗಳನ್ನು ನಡೆಸುವಂಥ ಸ್ಥಿತಿ ಏರ್ಪಟ್ಟಿತು. ಸ್ಥಳದ ಈ ತೊಂದರೆಯ ಜೊತೆಗೆ ಸೇರಿಕೊಂಡ ಇತರ ಸಮಸ್ಯೆಗಳೆಂದರೆ ಧಾರ್ಮಿಕ ಶಿಕ್ಷಣ ಮತ್ತು ಶಿಕ್ಷಣ ಮಾಧ್ಯಮ. ಶಿಕ್ಷಣ ಕ್ರಮದಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಅವಕಾಶ ಕೊಡದೆ ಇದ್ದುದು ಹಲವು ಧರ್ಮೀಯರ ಅದರಲ್ಲೂ ಕ್ರೈಸ್ತರ ಅಸಹನೆಗೆ ಕಾರಣವಾಯಿತು.
 
== ಕ್ರೈಸ್ತರ ಅಸಹನೆ==
*ಶಿಕ್ಷಣ ಮಾಧ್ಯಮವನ್ನು ಕುರಿತು ತೀವ್ರ ಹೋರಾಟವೇ ನಡೆದು ಇಂಗ್ಲೀಷ್ ಮಾಧ್ಯಮದ ಪರವಾಗಿಯೇ ಬಹುಮತ ಬಿದ್ದಿತಾದರೂ ಮಾತೃಭಾಷಾ ಮಾಧ್ಯಮಕ್ಕೆ ಸಾಧ್ಯವಾದಷ್ಟು ಬೇಗ ಅವಕಾಶಗಳನ್ನೊದಗಿಸಿಕೊಡಬೇಕೆಂಬ ಸಂಗತಿ ವಿವೇಕಿಗಳಾದ, ಸುದೂರದೃಷ್ಟಿಯನ್ನುಳ್ಳ ಕೆಲವಾದರೂ ಶಿಕ್ಷಣತಜ್ಞರ ಮನಸ್ಸಿಗೆ ಮುಟ್ಟಿತು. ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ ಆರು ತಿಂಗಳು ಕಳೆಯುವುದರ ಒಳಗಾಗಿಯೇ ಭಾರತದ, ಅದರಲ್ಲಿಯೂ ಉತ್ತರ ಭಾರತದ ಬಹುಭಾಗವನ್ನು ಅಲ್ಲೋಲಕಲ್ಲೋಲಗೊಳಿಸಿದ ಬಂಡಾಯ ನಡೆಯಿತು.
* ಬಂಡಾಯದ ಕೇಂದ್ರಗಳಿಂದ ಕಲ್ಕತ್ತ ಭೌಗೋಳಿಕವಾಗಿ ದೂರವಿದ್ದಿತೆಂಬುದು ನಿಜವಾದರೂ ಅದರ ಪರೋಕ್ಷ ಪರಿಣಾಮ ಇಲ್ಲಿಯೂ ಕಂಡುಬಂತು. ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯದವರೆಗೆ ಇರುವ ನಿಮ್ಮ ಜನರಿಗೆ ಶಿಕ್ಷಣ ಕೊಡಿ. ೧೮೫೭ರ ದಂಗೆ ಮತ್ತೆಂದೂ ತಲೆಯೆತ್ತ ಲಾರದು ಎಂದು ವಿಶ್ವವಿದ್ಯಾಲಯ ಕುಲಪತಿ ೧೮೬೦ರ ಘಟಿಕೋತ್ಸವದಲ್ಲಿ ಘೋಷಿಸಿದ್ದು ಈ ಬಗೆಯ ಪರೋಕ್ಷ ಪರಿಣಾಮಕ್ಕೆ ಉದಾಹರಣೆಯಾಗಿದೆ. ಮುಂದೆ ಬಂದ ಕುಲಾಧಿಪತಿಗಳೂ ಕುಲಪತಿಗಳೂ ಇದೇ ಧಾಟಿಯನ್ನು ಮುಂದುವರಿಸಿದರು. ಆದರೆ, ಈ ಶಿಕ್ಷಣ ಪಡೆದ ಒಂದೆರಡು ತಲೆಮಾರುಗಳ ಯುವಜನಾಂಗವೇ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಗೋರಿಯನ್ನು ತೋಡುವ ಕಾರ್ಯಕ್ಕೆ ಮೊದಲಿಟ್ಟಿತು ಎಂಬುದು ಅವರ ಅರಿವಿಗೆ ಆಗ ಗೋಚರಿಸಲಿಲ್ಲ.
 
==ಮೊಟ್ಟಮೊದಲ ಘಟಿಕೋತ್ಸವ==
೬೭ ನೇ ಸಾಲು:
*ಮುಂದೆ ದಾನ ರೂಪದಲ್ಲಿಯೂ ಗ್ರಂಥಗಳು ದೊರತುವು. ಇಂದು ಇದು ಕೇಂದ್ರ ಗ್ರಂಥ ಭಂಡಾರ ಮತ್ತು ಇತರ ವಿಭಾಗ ಗ್ರಂಥ ಭಂಡಾರಗಳನ್ನೊಳಗೊಂಡ ಸಮೃದ್ಧಸ್ಥಿತಿ ತಲಪಿದೆ. ೧೮೬೩ರ ಘಟಿಕೋತ್ಸವದಲ್ಲಿ ಕುಲಪತಿ ಮಾಡಿಕೊಂಡ ಮನವಿಯ ಮೇರೆಗೆ ದತ್ತಿಗಳ ಹೊಳೆ ಹರಿಯತೊಡಗಿತು. ಮುಂಬಯಿಯ ಪಾರ್ಸಿ ಶ್ರೀಮಂತ ಪ್ರೇಮಚಂದ ರಾಯಚಂದ ಯಾವುದೇ ನಿರ್ಬಂಧ ವಿಧಿಸದೆ ಎರಡು ಲಕ್ಷ ರೂಪಾಯಿಗಳನ್ನು ದಾನವಾಗಿ ಕೊಟ್ಟರು. ೧೮೬೯ರಲ್ಲಿ ಠಾಕೂರ್ ನ್ಯಾಯಶಾಸ್ತ್ರ ಪೀಠದ ಸ್ಥಾಪನೆಗಾಗಿ ಪ್ರಸನ್ನ ಕುಮಾರ ಠಾಕೂರ್ ಮಾಹೆಯಾನ ಒಂದು ಸಾವಿರ ರೂಪಾಯಿಗಳ ನಿರಂತರ ಕೊಡುಗೆಯ ವ್ಯವಸ್ಥೆಯನ್ನುಳ್ಳ ಉಯಿಲನ್ನು ವಿಶ್ವವಿದ್ಯಾನಿಲಯಕ್ಕೆ ಒಪ್ಪಿಸಿದರು.
*ಮುಂದೆ ವಿಜಯನಗರಂ ಮಹಾರಾಜ, [[ಈಶ್ವರ ಚಂದ್ರ ಬೋಸ್]], ಅಲೆಕ್ಸಾಂಡರ್ ಡಫ್ ಸ್ಮಾರಕನಿಧಿ, ಹರಿಶ್ಚಂದ್ರ ಚೌಧುರಿ, ಮಹಾರಾಜ ನೀಲ ಮಣಿಸಿಂಗದೇವ ಬಹಾದುರ್ ಮತ್ತಿತರ ವ್ಯಕ್ತಿಗಳು, ಸಂಸ್ಥೆಗಳು ನೀಡಿದ ಕೊಡುಗೆಗಳು ವಿದ್ಯಾರ್ಥಿವೇತನಗಳನ್ನು, ಬಹುಮಾನಗಳನ್ನು, ಪದಕಗಳನ್ನು, ಪ್ರಾಧ್ಯಾಪಕ ಪೀಠಗಳನ್ನು ಸ್ಥಾಪಿಸಲು ನೆರವಾದುವು. ಇಂಥ ಅಸಂಖ್ಯಾತ ಉದಾರ ಕೊಡುಗೆಗಳಿಂದಾಗಿ ಇಂದು ಕಲ್ಕತ್ತ ವಿಶ್ವವಿದ್ಯಾಲಯ ಭಾರತದಲ್ಲಿಯೇ ಅತ್ಯಂತ ಸಮೃದ್ಧ ದತ್ತಿನಿಧಿಯನ್ನುಳ್ಳ ವಿಶ್ವವಿದ್ಯಾನಿಲಯವಾಗಿದೆ. ಕಲ್ಕತ್ತ ವಿಶ್ವವಿದ್ಯಾಲಯ ಇಂದು ಬಹುಪಾಲು ಎಲ್ಲ ವಿಜ್ಞಾನ ಶಾಖೆಗಳಲ್ಲೂ ಅಧ್ಯಯನ ಸೌಲಭ್ಯ ಕಲ್ಪಿಸಿದೆ. ಸೈನಿಕ ವಿಜ್ಞಾನಕ್ಕೂ ಪದವಿ ಶಿಕ್ಷಣದ ಹಂತದಲ್ಲಿ ಸ್ಥಾನ ದೊರೆಯಿತು. ಆನ್ವಯಿಕ ವಿಜ್ಞಾನ ಶಾಖೆಗಳ ಆಶ್ರಯದಲ್ಲಿ ಸೋಪ್ ಟೆಕ್ನಾಲಜಿಯಂಥ ವಿಭಾಗಗಳನ್ನು ಸ್ಥಾಪಿಸಲಾಯಿತು.
*ಗ್ರಂಥಾಲಯ ಶಾಸ್ತ್ರ, ಪತ್ರಿಕೋದ್ಯಮ, ನಗರ ಯೋಜನೆ, ಪ್ರಾದೇಶಿಕ ಯೋಜನೆ, ಪಥ್ಯಶಾಸ್ತ್ರದಂಥ ವಿಷಯಗಳಲ್ಲೂ ಡಿಪ್ಲೊಮಾ ತರಗತಿಗಳನ್ನು ತೆರೆಯಲಾಯಿತು. ಸಂಸ್ಕೃತ, ಪಾಳಿ, [[ಅಸ್ಸಾಮಿ]], [[ಒರಿಯಾ]], ಹಿಂದೀಹಿಂದಿ, ಉರ್ದೂ, [[ಬಂಗಾಳಿ]], [[ಅರಾಬಿಕ್]], [[ಪರ್ಷಿಯನ್]], ಇಂಗ್ಲಿಷ್, ಫ್ರೆಂಚ್, ಜರ್ಮನ್, ಗ್ರೀಕ್, ಲ್ಯಾಟಿನ್, ಹಿಬ್ರೂ, ಸಿರಿಯಾಕ್, ತೌಲನಿಕ ಭಾಷಾವಿಜ್ಞಾನ, ತತ್ತ್ವಶಾಸ್ತ್ರ, ಇತಿಹಾಸ, ಪ್ರಾಚೀನ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ, ಇಸ್ಲಾಮಿನ [[ಇತಿಹಾಸ]] ಮತ್ತು ಚರಿತ್ರೆ, [[ಅರ್ಥಶಾಸ್ತ್ರ]], [[ರಾಜ್ಯಶಾಸ್ತ್ರ]], ಶಿಕ್ಷಣಶಾಸ್ತ್ರ, ವಾಣಿಜ್ಯಶಾಸ್ತ್ರ_ಇವೇ ಮೊದಲಾದ ವಿಷಯಗಳಲ್ಲಿ ಸ್ನಾತಕೋತ್ತರ ಅಧ್ಯಯನ ಸೌಲಭ್ಯವಿದೆ. ಶುದ್ಧ ಮತ್ತು ಆನ್ವಯಿಕ ವಿಜ್ಞಾನ ವಿಭಾಗಗಳು ವಿಜ್ಞಾನಗಳಲ್ಲಿ ಸ್ನಾತಕೋತ್ತರ ಶಿಕ್ಷಣ ನೀಡುತ್ತವೆ.
*ರೇಡಿಯೋ_ಫಿಸಿಕ್ಸ್‌, ಎಲೆಕ್ಟ್ರಾನಿಕ್ಸ್‌ನಂಥ ವಿಜ್ಞಾನಶಾಖೆಗಳು ಸ್ವತಂತ್ರ ವಿಭಾಗಗಳಾಗಿ ಕಾರ್ಯೋನ್ಮುಖವಾಗುವ ಹಂತ ತಲಪುತ್ತಿವೆ. ಈ ವಿಶ್ವವಿದ್ಯಾನಿಲಯ ಹೇಗೆ ಪ್ರಗತಿಪಥದಲ್ಲಿ ಮುನ್ನುಗ್ಗುತ್ತಿದೆ ಎಂಬುದಕ್ಕೆ ಇವೆಲ್ಲ ದಿಕ್ಸೂಚಿಗಳಾಗಿವೆ. ಈ ವಿಶ್ವವಿದ್ಯಾನಿಲಯದ ಇತಿಹಾಸ ಕುತೂಹಲ ಕರವಾಗಿದೆ, ಸಾಹಸಯಾತ್ರೆ ಪ್ರಶಂಸನೀಯವಾಗಿದೆ ಎಂದೆನಿಸದೆ ಇರದು. ಬಂಗಾಳದ ಇತಿಹಾಸದ ಪುಟಗಳನ್ನು ಅಲಂಕರಿಸಿರುವ [[ಬಂಕಿಮಚಂದ್ರ ಚಟರ್ಜಿ]], ಹೇಮಚಂದ್ರ ಬಂದ್ಯೋಪಾಧ್ಯಾಯ, [[ಗುರುದಾಸ ಬ್ಯಾನರ್ಜಿ]], ಚಂದರ್ ಕುಮಾರ್ ಡೇ, [[ಸುರೇಂದ್ರನಾಥ ಬ್ಯಾನ ರ್ಜಿ]], ಆನಂದಮೋಹನ ಬೋಸ್, ಕಾಲೀಚರಣ ಬ್ಯಾನರ್ಜಿ_ಮುಂತಾದವರು ಈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಎಂಬುದು ಅದಕ್ಕೆ ಹೆಮ್ಮೆಯ ವಿಷಯ.
*ಇವರಲ್ಲಿ ಕೆಲವರಾದರೂ ಭಾರತೀಯ ಇತಿಹಾಸ ಮತ್ತು ಸಾಹಿತ್ಯೇತಿಹಾಸಗಳಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಾಚ್ಯ ಮತ್ತು ಪಾಶ್ಚಾತ್ಯ ಶಿಕ್ಷಣಗಳ ಸಂಗಮವೆಂದು ವಿಮರ್ಶಕರು ಈ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಹಿರಿಮೆಯನ್ನು ಹೊಗಳಿದ್ದಾರೆ. ಕರ್ಜ಼ನನ ಕ್ರಮಗಳಿಗೆ ಜನತೆ ತೋರಿದ ವಿರೋಧ ವಂತೂ ವಿಶ್ವವಿದ್ಯಾಲಯದ ವಿಚಾರದಲ್ಲಿ ಜನತೆ ಹೇಗೆ ಆಸಕ್ತಿ ತಳೆಯತೊಡಗಿತು ಎಂಬುದಕ್ಕೆ ಉದಾಹರಣೆಯಾಗಿದೆ. ಈ ಪ್ರಸಂಗದಲ್ಲಿ, ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅದರ ಭವಿಷ್ಯ ರಾಷ್ಟ್ರೀಯ ಮಹತ್ತ್ವದ ಪ್ರಶ್ನೆಯಾಗಿ ಪರಿಣಮಿಸಿತು. ಉಚ್ಚ ಶಿಕ್ಷಣವನ್ನು ಶ್ರೀ ಸಾಮಾನ್ಯನ ಮನೆಯ ಬಾಗಿಲ ಬಳಿಗೆ ತಂದು ಕೊಡುವ, ಅದನ್ನು ರಾಷ್ಟ್ರೀಯ ಸಂಸ್ಕೃತಿಯ ಜೀವಂತ ಮಾಧ್ಯಮವಾಗಿಸುವ ಮಹಾಪ್ರಯತ್ನದಲ್ಲಿ ಅಶುತೋಷ್ ಮುಖರ್ಜಿ ಬಹುಮಟ್ಟಿಗೆ ಯಶಸ್ವಿಯಾದದ್ದೂ ವಿಶ್ವವಿದ್ಯಾಲಯದ ಸಾಫಲ್ಯಕ್ಕೆ ಸಾಕ್ಷಿಯಾಗಿದೆ.
೭೬ ನೇ ಸಾಲು:
==ಸ್ಥಾನಮಾನ==
*ಸಾಮಾಜಿಕ ಕ್ಷೇತ್ರವನ್ನು ವ್ಯಾಪಿಸಿರುವ ಕೆಲವು ಪಿಡುಗುಗಳು ಶೈಕ್ಷಣಿಕ ಕ್ಷೇತ್ರವನ್ನೂ ಪ್ರವೇಶಿಸಿರುವುದರಿಂದ ಈಚೆಗೆ ಇಲ್ಲಿಯ ಶಿಕ್ಷಣಕ್ಷೇತ್ರದ ನೈತಿಕ ಅಡಿಪಾಯ ಕಂಪಿಸತೊಡಗಿದೆ; ಅಭದ್ರತೆಯ ಭಾವನೆ ಬೆಳೆಯತೊಡಗಿದೆ. ಈಚಿನ ಕೆಲವು ಬೆಳೆವಣಿಗೆಗಳು ವಿಶ್ವವಿದ್ಯಾಲಯದ ಕೀರ್ತಿಗೆ ಎರವಾಗತೊಡಗಿವೆ. ಇದು ಸಮಾಜ ವಿಜ್ಞಾನಿಗಳನ್ನೂ ಶಿಕ್ಷಣತಜ್ಞರನ್ನೂ ಕಳವಳಕ್ಕೀಡು ಮಾಡಿರುವ ಸಂಗತಿ.
*ಇಷ್ಟಾದರೂ ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ಅಗ್ರಮಾನ್ಯವಾಗಿಯೇ ಉಳಿದುಕೊಂಡು ಬರುತ್ತಿರುವುದು ಇದರ ಅಂತಃಸತ್ವದ, ಚೈತನ್ಯದ ದ್ಯೋತಕವಾಗಿದೆ. ಇತ್ತೀಚಿಗಿನ ಸಮೀಕ್ಷೆಯಂತೆ ಜಗತ್ತಿನ ವಿಶ್ವವಿದ್ಯಾಲಯಗಳಲ್ಲಿ ಈ ವಿಶ್ವವಿದ್ಯಾಲಯ ೬೦೦+ ಗುಂಪಿನಲ್ಲಿದೆ.ಏಷಿಯಾ ಖಂಡದ ವಿಶ್ವವಿದ್ಯಾಲಯಗಳಲ್ಲಿ ೧೪೩ನೆಯ ಸ್ಥಾನದಲ್ಲಿದೆ. ಭಾರತದ ವಿಶ್ವವಿದ್ಯಾಲಯಗಳಲ್ಲಿ ಮೂರನೆಯ ಸ್ಥಾನದಲ್ಲಿದೆ. .<ref>[http://indiatoday.intoday.in/story/india-best-universities-ranking-private-sector-survey/1/272876.html India Today ranks India's Best Universities for 2013 : EDUCATION - India Today]. Indiatoday.intoday.in (2013-05-24). Retrieved on 2013-07-16.</ref>
 
==ಬಾಹ್ಯ ಸಂಪರ್ಕಗಳು==