"ಕಂಪ್ಯೂಟರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಕಾರ್ಯಾಚರಣೆಯ ಸಾಮರ್ಥ್ಯ ಹಾಗೂ ಉಪಯೋಗಗಳ ಆಧಾರದ ಮೇಲೆ ಕಂಪ್ಯೂಟರುಗಳಲ್ಲಿ ಹಲವು ವಿಧ. ಅವುಗಳಲ್ಲಿ ಕೆಲವನ್ನು ಹೀಗೆ ಪಟ್ಟಿಮಾಡುವುದು ಸಾಧ್ಯ:
 
=== ವೈಯಕ್ತಿಕ (ಪರ್ಸನಲ್) ಕಂಪ್ಯೂಟರ್, ಅಥವಾ 'ಪಿಸಿ' ===
'''ವೈಯಕ್ತಿಕ (ಪರ್ಸನಲ್) ಕಂಪ್ಯೂಟರ್, ಅಥವಾ 'ಪಿಸಿ':''' ಸಾಮಾನ್ಯವಾಗಿ ಬಳಕೆಯಲ್ಲಿರುವ ಬಹಳಷ್ಟು ಕಂಪ್ಯೂಟರುಗಳು ಈ ವಿಧದವು. ಡೆಸ್ಕ್‌ಟಾಪ್, ಲ್ಯಾಪ್‌ಟಾಪ್ ಹಾಗೂ ಟ್ಯಾಬ್ಲೆಟ್ ಕಂಪ್ಯೂಟರುಗಳೆಲ್ಲ ಇದಕ್ಕೆ ಉದಾಹರಣೆಗಳು. ಇಂದಿನ ಸ್ಮಾರ್ಟ್‌ಫೋನುಗಳನ್ನೂ ಇದೇ ಗುಂಪಿಗೆ ಸೇರಿಸಬಹುದು. ಪರ್ಸನಲ್ ಕಂಪ್ಯೂಟರುಗಳನ್ನು ಮೈಕ್ರೋಕಂಪ್ಯೂಟರ್ ಎಂದು ಗುರುತಿಸುವ ಅಭ್ಯಾಸವೂ ಇತ್ತು.
 
ಹೆಚ್ಚು ಸಾಮರ್ಥ್ಯದ, ವಿಶೇಷ ಯಂತ್ರಾಂಶಗಳನ್ನು ಹೊಂದಿದ್ದ ಶಕ್ತಿಶಾಲಿ ಕಂಪ್ಯೂಟರುಗಳನ್ನು 'ವರ್ಕ್‍‌ಸ್ಟೇಶನ್'ಗಳೆಂದು ಗುರುತಿಸಲಾಗುತ್ತಿತ್ತು. ತಂತ್ರಜ್ಞಾನ ಬೆಳೆದಂತೆ ಪರ್ಸನಲ್ ಕಂಪ್ಯೂಟರುಗಳಲ್ಲೇ ಹೆಚ್ಚಿನ ಸೌಲಭ್ಯಗಳು ದೊರಕುವಂತಾಗಿ ಪಿಸಿಗಳಿಗೂ ವರ್ಕ್‌ಸ್ಟೇಶನ್‌ಗಳಿಗೂ ನಡುವಿನ ವ್ಯತ್ಯಾಸ ಮಸುಕಾಗಿದೆ.
 
=== ಮಧ್ಯಮ ಶ್ರೇಣಿಯ (ಮಿಡ್‌ರೇಂಜ್) ಕಂಪ್ಯೂಟರುಗಳು ===
'''ಮಧ್ಯಮ ಶ್ರೇಣಿಯ (ಮಿಡ್‌ರೇಂಜ್) ಕಂಪ್ಯೂಟರುಗಳು:''' ಕಂಪ್ಯೂಟರ್ ಕುಟುಂಬದಲ್ಲಿ ಪರ್ಸನಲ್ ಕಂಪ್ಯೂಟರುಗಳ ನಂತರದ ಸ್ಥಾನ ಮಧ್ಯಮ ಗಾತ್ರದ ('ಮಿಡ್‌ರೇಂಜ್') ಕಂಪ್ಯೂಟರುಗಳದು. ಇಂತಹ ಕಂಪ್ಯೂಟರುಗಳನ್ನು ಹೆಚ್ಚಿನ ಸಂಖ್ಯೆಯ ಬಳಕೆದಾರರು ಏಕಕಾಲದಲ್ಲೇ ಬಳಸುವುದು ಸಾಧ್ಯ. ಮಿಡ್‌ರೇಂಜ್ ಕಂಪ್ಯೂಟರುಗಳನ್ನು 'ಮಿನಿಕಂಪ್ಯೂಟರ್' ಎಂದೂ ಗುರುತಿಸಲಾಗುತ್ತಿತ್ತು.
 
=== ಮೈನ್‌ಫ್ರೇಮ್ ===
'''ಮೈನ್‌ಫ್ರೇಮ್:''' ಇವು ಅಪಾರ ಪ್ರಮಾಣದ ದತ್ತಾಂಶವನ್ನು ನಿಭಾಯಿಸಲು ಬೇಕಾದ ಸಂಸ್ಕರಣಾ ಸಾಮರ್ಥ್ಯ ಹಾಗೂ ವಿಶ್ವಾಸಾರ್ಹತೆಯನ್ನು ಹೊಂದಿರುವ ಕಂಪ್ಯೂಟರುಗಳು. ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಜೀವವಿಮಾ ಸಂಸ್ಥೆಗಳು ಮೊದಲಾದೆಡೆಗಳಲ್ಲಿ ಈ ಬಗೆಯ ಕಂಪ್ಯೂಟರುಗಳನ್ನು ಬಳಸಲಾಗುತ್ತದೆ.
 
=== ಸೂಪರ್‌ಕಂಪ್ಯೂಟರ್ ===
'''ಸೂಪರ್‌ಕಂಪ್ಯೂಟರ್:''' ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ ಹೊಂದಿರುವ ಹೆಗ್ಗಳಿಕೆ ಈ ಬಗೆಯ ಕಂಪ್ಯೂಟರುಗಳದು. ಇವು ಅತ್ಯಂತ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಪ್ರಮಾಣದ ಲೆಕ್ಕಾಚಾರಗಳನ್ನು ಕೈಗೊಳ್ಳಬಲ್ಲವು. ಅತ್ಯಂತ ಕ್ಲಿಷ್ಟ ಲೆಕ್ಕಾಚಾರಗಳನ್ನು ಬಳಸುವ ಹವಾಮಾನ ಮುನ್ಸೂಚನೆ, ವೈಜ್ಞಾನಿಕ ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಇವನ್ನು ಬಳಸಲಾಗುತ್ತದೆ.
 
== ಉಪಯೋಗಗಳು ==
೧೦೧

edits

"https://kn.wikipedia.org/wiki/ವಿಶೇಷ:MobileDiff/672157" ಇಂದ ಪಡೆಯಲ್ಪಟ್ಟಿದೆ