ಕಂಪ್ಯೂಟರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೬ ನೇ ಸಾಲು:
{{main|ತಂತ್ರಾಂಶ}}
ಕಂಪ್ಯೂಟರ್ ಯಾವುದೇ ಕೆಲಸ ಮಾಡಬೇಕಾದರೂ ಆ ಕೆಲಸದ ಕುರಿತ ಎಲ್ಲ ವಿವರ ಹಾಗೂ ನಿರ್ದೇಶನಗಳನ್ನು ಅದಕ್ಕೆ ಮುಂಚಿತವಾಗಿಯೇ ಕೊಟ್ಟಿರಬೇಕಾಗುತ್ತದೆ. ಈ ವಿವರ ಹಾಗೂ ನಿರ್ದೇಶನಗಳನ್ನು ಕೊಡುವುದು ಸಾಫ್ಟ್‌ವೇರ್, ಅಂದರೆ ತಂತ್ರಾಂಶದ ಕೆಲಸ. ನಾವು ಕೊಟ್ಟ ಇನ್‌ಪುಟ್ ಬಳಸಿ ಏನೇನು ಲೆಕ್ಕಾಚಾರ ಮಾಡಬೇಕು, ಯಾವ ರೀತಿಯ ಔಟ್‌ಪುಟ್ ಕೊಡಬೇಕು ಎನ್ನುವುದನ್ನೆಲ್ಲ ಅವು ಕಂಪ್ಯೂಟರ್‌ಗೆ ವಿವರಿಸುತ್ತವೆ. ವಿವಿಧ ಉದ್ದೇಶ ಹಾಗೂ ಉಪಯೋಗಗಳಿಗಾಗಿ ಅನೇಕ ಬಗೆಯ ತಂತ್ರಾಂಶಗಳು ಬಳಕೆಯಾಗುತ್ತವೆ.
 
=== ಪ್ರೋಗ್ರಾಮಿಂಗ್ ===
ಕಂಪ್ಯೂಟರಿಗೆ ಬೇಕಾದ ತಂತ್ರಾಂಶಗಳನ್ನು ಸಿದ್ಧಪಡಿಸುವ, ಅಂದರೆ, ಅದರಲ್ಲಿ ಬಳಕೆಯಾಗುವ ಕ್ರಮವಿಧಿಗಳನ್ನು (ಪ್ರೋಗ್ರಾಮ್) ಬರೆಯುವ ಕೆಲಸಕ್ಕೆ ಪ್ರೋಗ್ರಾಮಿಂಗ್ ಎಂದು ಹೆಸರು. ಪ್ರೋಗ್ರಾಮ್ ಬರೆಯಲು ಬಳಕೆಯಾಗುವ ಭಾಷೆಗಳನ್ನು ಪ್ರೋಗ್ರಾಮಿಂಗ್ ಭಾಷೆಗಳೆಂದು ಕರೆಯುತ್ತಾರೆ.
 
== ಯಂತ್ರಾಂಶ ==
Line ೫೧ ⟶ ೫೪:
ಕಂಪ್ಯೂಟರಿಗೆ ಸಂಬಂಧಪಟ್ಟ ಎಲ್ಲ ಭೌತಿಕ ಭಾಗಗಳನ್ನೂ ಹಾರ್ಡ್‌ವೇರ್ (ಯಂತ್ರಾಂಶ) ಎಂದು ಕರೆಯುತ್ತಾರೆ. ಕಂಪ್ಯೂಟರಿನ ಮಾನಿಟರ್, ಕೀಬೋರ್ಡ್, ಮೌಸ್ ಇವೆಲ್ಲ ಯಂತ್ರಾಂಶಕ್ಕೆ ಉದಾಹರಣೆಗಳು.
 
ಇವುಗಳಲ್ಲಿ ಕಂಪ್ಯೂಟರಿಗೆ ಮಾಹಿತಿಯನ್ನು ನೀಡಲು (ಇನ್‌ಪುಟ್) ಬಳಕೆಯಾಗುವ ಮೌಸ್, ಕೀಬೋರ್ಡ್, ಟಚ್ ಸ್ಕ್ರೀನ್ ಮುಂತಾದ ಸಾಧನಗಳಿಗೆ ಇನ್‌ಪುಟ್ ಡಿವೈಸಸ್ ಎಂದು ಕರೆಯುತ್ತಾರೆ. ಕಂಪ್ಯೂಟರಿನಿಂದ ಮಾಹಿತಿಯನ್ನು ಪಡೆದುಕೊಳ್ಳಲು (ಔಟ್‌ಪುಟ್) ಬಳಕೆಯಾಗುವ ಮಾನಿಟರ್, ಸ್ಪೀಕರ್, ಪ್ರಿಂಟರ್ ಮುಂತಾದ ಸಾಧನಗಳಿಗೆ ಔಟ್‌ಪುಟ್ ಡಿವೈಸಸ್ ಎಂದು ಹೆಸರು.
 
== ಮೆಮೊರಿ ==
ಕಂಪ್ಯೂಟರ್ ಸಹಾಯದಿಂದ ರೂಪಿಸಿದ ಮಾಹಿತಿಯನ್ನು ಅದರ ಮೆಮೊರಿಯಲ್ಲಿ ಶೇಖರಿಸಿಡುವುದು ಸಾಧ್ಯ. ಇದನ್ನು ಕಂಪ್ಯೂಟರಿನ ಜ್ಞಾಪಕಶಕ್ತಿ ಎಂದೂ ಕರೆಯಬಹುದು. ಮಾಹಿತಿ ಹಾಗೂ ತಂತ್ರಾಂಶಗಳೆರಡೂ ಈ ಮೆಮೊರಿಯಲ್ಲೇ ಶೇಖರವಾಗಿರುತ್ತವೆ.
 
== ಉಲ್ಲೇಖಗಳು ==
Line ೫೭ ⟶ ೬೩:
 
== ಬಾಹ್ಯ ಕೊಂಡಿಗಳು ==
* [http://www.ejnana.com/2012/05/blog-post_15.html ಕಂಪ್ಯೂಟರ್ ಕುಟುಂಬ, ಇಜ್ಞಾನ ಡಾಟ್ ಕಾಮ್‌ನಲ್ಲಿ]
 
[[ವರ್ಗ:ಗಣಕ ವಿಜ್ಞಾನ]]
"https://kn.wikipedia.org/wiki/ಕಂಪ್ಯೂಟರ್" ಇಂದ ಪಡೆಯಲ್ಪಟ್ಟಿದೆ