೧೦೧
edits
[[File:IBM Blue Gene P supercomputer.jpg|200px|thumb|ಚಿತ್ರ: ಸೂಪರ್ಕಂಪ್ಯೂಟರ್]]
[[File:ABasicComputer.gif|thumb|right|200px|ಚಿತ್ರ: ಕಂಪ್ಯೂಟರ್ ಕಾರ್ಯಾಚರಣೆಯನ್ನು ವಿವರಿಸುವ ರೇಖಾನಕ್ಷೆ]]
[[File:Personal computer, exploded 5.svg|thumb|right|325px|ಚಿತ್ರ: ಕಂಪ್ಯೂಟರ್ ಭಾಗಗಳು - ೧. ಮಾನಿಟರ್ ೨. ಮದರ್ಬೋರ್ಡ್ ೩. ಪ್ರಾಸೆಸರ್ / ಸಿಪಿಯು ೪. ರ್ಯಾಮ್ ೫. ಪಿ.ಸಿ.ಐ. ಸ್ಲಾಟ್ಗಳು ೬. ವಿದ್ಯುತ್ ಪೂರೈಕೆ ಘಟಕ (ಎಸ್ಎಂಪಿಎಸ್) ೭. ಸಿ.ಡಿ./ಡಿವಿಡಿ ಡ್ರೈವ್ ೮. ಹಾರ್ಡ್ ಡಿಸ್ಕ್ ೯. ಕೀಲಿಮಣೆ ೧೦. ಮೌಸ್]]
ಕಂಪ್ಯೂಟರ್ (ಗಣಕ, ಗಣಕಯಂತ್ರ) ಎನ್ನುವುದು ದತ್ತಾಂಶದ (ಡೇಟಾ) ಸಂಸ್ಕರಣೆ ಹಾಗೂ ಸಂಗ್ರಹಣೆಯನ್ನು ಸುಲಭವಾಗಿಸುವ ವಿದ್ಯುನ್ಮಾನ ಸಾಧನ. ಗಣಿತದ ಲೆಕ್ಕಾಚಾರಗಳು ಹಾಗೂ ತಾರ್ಕಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ದತ್ತಾಂಶವನ್ನು ಸಂಸ್ಕರಿಸುವುದು ಹಾಗೂ ಆ ಮೂಲಕ ದೊರಕುವ ಮಾಹಿತಿಯನ್ನು ನಂತರದ ಬಳಕೆಗಾಗಿ ಉಳಿಸಿಡಲು ಸಾಧ್ಯವಾಗಿಸುವುದು ಕಂಪ್ಯೂಟರಿನ ವೈಶಿಷ್ಟ್ಯ.
ಇದರಲ್ಲಿ ಲೆಕ್ಕಾಚಾರ ಮಾಡುವುದಕ್ಕಾಗಿ ಅರ್ಥ್ಮೆಟಿಕ್ ಆಂಡ್ ಲಾಜಿಕ್ ಯೂನಿಟ್ (ಎಎಲ್ಯು) ಹಾಗೂ ಯಾವಾಗ ಏನು ಲೆಕ್ಕಾಚಾರ ಮಾಡಬೇಕು, ಆ ಲೆಕ್ಕಾಚಾರವನ್ನು ಹೇಗೆ ನಿಯಂತ್ರಿಸಬೇಕು ಮುಂತಾದವನ್ನು ತೀರ್ಮಾನಿಸುವ ಕಂಟ್ರೋಲ್ ಯೂನಿಟ್ (ಸಿಯು) ಎಂಬ ಎರಡು ಭಾಗಗಳಿರುತ್ತವೆ.
== ತಂತ್ರಾಂಶ ==
{{main|ತಂತ್ರಾಂಶ}}
ಕಂಪ್ಯೂಟರ್ ಯಾವುದೇ ಕೆಲಸ ಮಾಡಬೇಕಾದರೂ ಆ ಕೆಲಸದ ಕುರಿತ ಎಲ್ಲ ವಿವರ ಹಾಗೂ ನಿರ್ದೇಶನಗಳನ್ನು ಅದಕ್ಕೆ ಮುಂಚಿತವಾಗಿಯೇ ಕೊಟ್ಟಿರಬೇಕಾಗುತ್ತದೆ. ಈ ವಿವರ ಹಾಗೂ ನಿರ್ದೇಶನಗಳನ್ನು ಕೊಡುವುದು ಸಾಫ್ಟ್ವೇರ್, ಅಂದರೆ ತಂತ್ರಾಂಶದ ಕೆಲಸ. ನಾವು ಕೊಟ್ಟ ಇನ್ಪುಟ್ ಬಳಸಿ ಏನೇನು ಲೆಕ್ಕಾಚಾರ ಮಾಡಬೇಕು, ಯಾವ ರೀತಿಯ ಔಟ್ಪುಟ್ ಕೊಡಬೇಕು ಎನ್ನುವುದನ್ನೆಲ್ಲ ಅವು ಕಂಪ್ಯೂಟರ್ಗೆ ವಿವರಿಸುತ್ತವೆ. ವಿವಿಧ ಉದ್ದೇಶ ಹಾಗೂ ಉಪಯೋಗಗಳಿಗಾಗಿ ಅನೇಕ ಬಗೆಯ ತಂತ್ರಾಂಶಗಳು ಬಳಕೆಯಾಗುತ್ತವೆ.
== ಯಂತ್ರಾಂಶ ==
{{main|ಕಂಪ್ಯೂಟರ್ ಯಂತ್ರಾಂಶ}}
ಕಂಪ್ಯೂಟರಿಗೆ ಸಂಬಂಧಪಟ್ಟ ಎಲ್ಲ ಭೌತಿಕ ಭಾಗಗಳನ್ನೂ ಹಾರ್ಡ್ವೇರ್ (ಯಂತ್ರಾಂಶ) ಎಂದು ಕರೆಯುತ್ತಾರೆ. ಕಂಪ್ಯೂಟರಿನ ಮಾನಿಟರ್, ಕೀಬೋರ್ಡ್, ಮೌಸ್ ಇವೆಲ್ಲ ಯಂತ್ರಾಂಶಕ್ಕೆ ಉದಾಹರಣೆಗಳು.
ಇವುಗಳಲ್ಲಿ ಕಂಪ್ಯೂಟರಿಗೆ ಮಾಹಿತಿಯನ್ನು ನೀಡಲು (ಇನ್ಪುಟ್) ಬಳಕೆಯಾಗುವ ಮೌಸ್, ಕೀಬೋರ್ಡ್, ಟಚ್ ಸ್ಕ್ರೀನ್ ಮುಂತಾದ ಸಾಧನಗಳಿಗೆ ಇನ್ಪುಟ್ ಡಿವೈಸಸ್ ಎಂದು ಕರೆಯುತ್ತಾರೆ. ಕಂಪ್ಯೂಟರಿನಿಂದ ಮಾಹಿತಿಯನ್ನು ಪಡೆದುಕೊಳ್ಳಲು (ಔಟ್ಪುಟ್) ಬಳಕೆಯಾಗುವ ಮಾನಿಟರ್, ಸ್ಪೀಕರ್, ಪ್ರಿಂಟರ್ ಮುಂತಾದ ಸಾಧನಗಳಿಗೆ ಔಟ್ಪುಟ್ ಡಿವೈಸಸ್ ಎಂದು ಹೆಸರು.
== ಉಲ್ಲೇಖಗಳು ==
|
edits