ವೀಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಬಾಹ್ಯ ಸಂಪರ್ಕಗಳು: {{commons category|Veenas}}
No edit summary
೧ ನೇ ಸಾಲು:
{{Infobox Instrument
|name=
|image= Veena.png
|image_capt=Saraswati Veena
|background=string
|classification=
*[[String instruments]]
|related=
**[[Pandura]]
**[[Surbahar]]
**[[Rudra veena]]
**[[Saraswati veena]]
**[[Chitra veena]]
**[[Vichitra veena]]
**[[Sarod]]
**[[Sitar]]
**[[Sursingar]]
**[[Tambouras]]
**[[Tanpura|Tambura]]
**[[Kantele]]
}}
[[Image:Veena.jpg|thumb|ಸರಸ್ವತಿ ವೀಣೆ]]
[[ಕರ್ನಾಟಕ ಸಂಗೀತ]] ಪದ್ಧತಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವುದು [[ತಂತಿವಾದ್ಯ|ತಂತಿವಾದ್ಯವಾದ]] ವೀಣೆ. ಬಹಳ ಹಳೆಯ ವಾದ್ಯವಾದ ವೀಣೆಯ [[ವಿನ್ಯಾಸ]] ಅನೇಕ ಶತಮಾನಗಳಿಂದಲೂ ಬದಲಾಗುತ್ತಾ ಬಂದಿದೆ. ಸದ್ಯಕ್ಕೆ ಅತ್ಯಂತ ಜನಪ್ರಿಯ ವಿನ್ಯಾಸಕ್ಕೆ [[ಸರಸ್ವತಿ ವೀಣೆ]] ಎಂದು ಹೆಸರು. ಇದರಲ್ಲಿ ಮೂರು [[ತಂತಿ|ತಂತಿಗಳು]] [[ಹಿತ್ತಾಳೆ|ಹಿತ್ತಾಳೆಯವು]] ಮತ್ತು ಒಂದು ಮುಖ್ಯ ತಂತಿ. ಜೊತೆಗೆ ಮೂರು ಸಹಾಯಕ ತಂತಿಗಳು ಇವೆ. [[ಸಪ್ತ ಸ್ವರ|ಸಪ್ತ ಸ್ವರದ]] ಮನೆಗಳು ಮೇಣ ಕಟ್ಟುವುದರ ಮೂಲಕ ಆಯಾ ಸ್ಥಾನಗಳಲ್ಲಿ ಕೂಡಿಸುವುದರಿಂದ ವೀಣೆ ನುಡಿಸಲು ಕಷ್ಟವಿಲ್ಲ. ಆದರೆ ಇದನ್ನು ಕಲಿಯಲು ತಾಳ್ಮೆ ಹಾಗೂ ಆಸಕ್ತಿ ಬೇಕು. ನಿಧಾನವಾಗಿ ಒಲಿಸಿಕೊಂಡು, ಆನಂದದ ಅನುಭೂತಿ ಪಡೆಯಬಹುದಾದ ವಾದ್ಯ ವೀಣೆ. ಅನೇಕ ವರ್ಷಗಳ ಪರಿಶ್ರಮದಿಂದ ಪಾಂಡಿತ್ಯ ಗಳಿಸಬಹುದು. ಒಲಿಸಿಕೊಂಡಾಗ ವೀಣೆ ನಮ್ಮ ಆತ್ಮ ಸಂಗಾತಿಯಾಗಿ, ನಮ್ಮದೇ ಮನದ ಭಾವನೆಗಳನ್ನು ವ್ಯಕ್ತಪಡಿಸತೊಡಗುತ್ತದೆ. ವೀಣೆ ಎಂದೊಡನೆ ನಮಗೆ ನೆನಪಾಗುವುದೇ ದೇವಿ [[ಸರಸ್ವತಿ]]. ಸರಸ್ವತಿ ದೇವಿಯು ಸಂಗೀತದ ಅಧಿದೇವತೆ. ಅವಳು ವೀಣಾಪಾಣಿ. ಸರಸ್ವತಿ ದೇವಿಯು ವೇದಗಳ ಅಭಿಮಾನಿ. [[ಬ್ರಹ್ಮ]] ದೇವರ, ಚತುರವದನನ ರಾಣಿ ಎಂದರೆ ಚತುರ್ಮುಖ ಬ್ರಹ್ಮನ ನೀತಪತ್ನಿ ಹಾಗೂ ಪ್ರದ್ಯುಮ್ನ – ಕೃತೀ ದೇವಿಯವರ ಪುತ್ರಿ. ಇವಳು ಮರೆವೆಯೇ ಇಲ್ಲದ ಹಾಗೂ ಅನವರತವೂ ಪರಮಾತ್ಮನ ಸ್ತುತಿ ಮಾಡುವವಳು, ಬ್ರಹ್ಮಾಣಿ – ತತ್ವಜ್ಞಾನಿ ಹಾಗೂ ಗಾನಲೋಲಳೂ ಅಹುದು. ಇವಳ ಹಸ್ತದಲ್ಲಿ ಸದಾ ಕಚ್ಛಪಿ ಎಂಬ ವೀಣೆ ಇರುವುದರಿಂದ, ಇವಳು ವೀಣಾಪಾಣಿ ಮತ್ತು ಇವಳು ಚಿತ್ತಾಭಿಮಾನಿ, ಸರ್ವರಿಗೂ [[ಬುದ್ಧಿ|ಬುದ್ಧಿಯನ್ನು]] ಕೊಡುವ ಬುದ್ಧ್ಯಾಭಿಮಾನಿ ದೇವತೆಯೂ ಹೌದು.
Line ೮ ⟶ ೨೯:
# [[ಘನ (ಲೋಹ, ಮಣ್ಣು ಅಥವಾ ಮರದ ವಾದ್ಯಗಳು)]]
 
ವೀಣೆ ತತ ಅಂದರೆ ತಂತೀವಾದ್ಯಗಳ ಗುಂಪಿಗೆ ಸೇರುತ್ತದೆ. ತಂತಿಗಳ ಮೂಲಕ ನಾದೋತ್ಪತ್ತಿಯಾಗುವ ವಾದ್ಯಗಳೇ ತತವಾದ್ಯಗಳು. ತಂತೀ ವಾದ್ಯಗಳನ್ನು ಶ್ರುತಿ ವಾದ್ಯ ಮತ್ತು ಸಂಗೀತಾವಾದ್ಯಗಳೆಂದು ವಿಂಗಡಿಸಲಾಗಿದೆ. ಗಾಯನ ಅಥವಾ ವಾದನಗಳಲ್ಲಿವಾದನ ಗಳಲ್ಲಿ ಶ್ರುತಿಗಾಗಿ ಉಪಯೋಗಿಸಲ್ಪಡುವುದು "ತಂಬೂರಿ" ಮತ್ತು ಸಂಗೀತವನ್ನು ಗಾಯನಕ್ಕೆ ಬದಲಾಗಿ ವಾದ್ಯದಲ್ಲಿ ಹೊಮ್ಮಿಸಲು ಉಪಯೋಗಿಸಲ್ಪಡುವುದು "ವೀಣೆ". ವೀಣೆ ಋಗ್ವೇದದಲ್ಲಿ ಮತ್ತು ಯಜುರ್ವೇದದಲ್ಲಿ ಕೂಡ ಪ್ರಸ್ತಾಪಿಸಲ್ಪಟ್ಟಿದೆಯಂತೆ. ವೀಣೆಯ ಉತ್ಪತ್ತಿಗೆ ನಾದಪ್ರಿಯನಾದ ಶಂಕರನು ಕಾರಣವಿರಬಹುದು ಏಕೆಂದರೆ "ರುದ್ರವೀಣೆ" ಎಂದು ಕೂಡ ವಿಶಿಷ್ಟವಾದ ಒಂದು ವೀಣೆ ಇದೆ. ದೇವಿ ಸರಸ್ವತಿಯಲ್ಲದೆ ವಿಶ್ವಾವಸು, ತುಂಬುರು ಮತ್ತು ನಾರದರು ಕೂಡ ವೈಣಿಕರೇ ಮತ್ತು ತುಂಬುರರ ವೀಣೆಯ ಹೆಸರು "ಕಲಾವತೀ" ಎಂದೂ, ವಿಶ್ವಾವಸುವಿನ ವೀಣೆಯ ಹೆಸರು "ಬೃಹತೀ" ಎಂದೂ ಮತ್ತು ನಾರದರ ವೀಣೆಯ ಹೆಸರು "ಮಹತಿ" ಎಂದೂ ನಮಗೆ ಪುರಾಣಗಳಿಂದ ತಿಳಿದುಬರುತ್ತದೆ. ವೀಣೆ ಮೋಕ್ಷ ಸಾಧನೆಗೆ ಸುಲಭವಾದ ಹಾದಿ ಎಂದು ಯಾಜ್ಞವಲ್ಕ್ಯರು ತಮ್ಮ ಸ್ಮೃತಿಯಲ್ಲಿ ಹೇಳಿದ್ದಾರೆ. ನಾವು ರಾವಣನ ಕಥೆಯಲ್ಲಿ ಕೂಡ ಕೇಳಿದ್ದೇವೆ - ವೀಣೆಯ ತಂತಿಯೊಂದು ಕಿತ್ತು ಹೋದಾಗ ತನ್ನ ದೇಹದ ಒಂದು ನರವನ್ನೇ ಕಿತ್ತು ತಂತಿಯಾಗಿಸಿ, ವೀಣೆಯ ವಾದನವನ್ನು ಮುಂದುವರೆಸಿದನೆಂದು.
 
ವೀಣೆ ಈಗಿರುವ ಸ್ವರೂಪಕ್ಕೆ ಬರುವ ಮೊದಲು ಅನೇಕ ಬದಲಾವಣೆಗಳನ್ನು ಹೊಂದಿದ್ದಾಗಿರಬಹುದು. ಕಾಳಿದಾಸನ ’ಶ್ಯಾಮಲಾ ದಂಡಕ’ದಲ್ಲಿ "ಮಾಣಿಕ್ಯವೀಣಾಂ ಉಪಲಾಲಯಂತೀಂ " ಎನ್ನುತ್ತಾ ಶ್ಯಾಮಲೆಯಾದ ಶಾರದಾಂಬೆಯು ಮಾಣಿಕ್ಯ ಮಯವಾದ ವೀಣೆಯನ್ನು ನುಡಿಸುತ್ತಿದ್ದಳು ಎಂದಿದ್ದಾರೆ. ಹಾಗೇ ಪ್ರತಿಜ್ಞಾ ಯೌಗಂಧರಾಯಣ ನಾಟಕದಲ್ಲಿ ರಾಜಾ ಉದಯನು "ಘೋಷವತೀ" ಎಂಬ ವೀಣೆಯನ್ನು ನುಡಿಸಿದ್ದನೆಂದು ಕೂಡ ಉಲ್ಲೇಖವಿದೆ. ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ನಾದಜ್ಯೋತಿ ಶ್ರೀ ಮುತ್ತುಸ್ವಾಮಿ ದೀಕ್ಷಿತರಿಗೆ ಗುರು ಚಿದಂಬರನಾಥ ಯೋಗಿಯ ಅನುಗ್ರಹದಿಂದ ಕಾಶಿಕ್ಷೇತ್ರದಲ್ಲಿ ಗಂಗೆಯಲ್ಲಿ ದೊರೆತ ವೀಣೆಯ ಮೇಲೆ ದೇವನಾಗರಿಯಲ್ಲಿ "ರಾಮ" ಎಂದು ಕೆತ್ತಲ್ಪಟ್ಟಿದೆಯಂತೆ. ಹೀಗೆ ವೀಣೆಯ ಇತಿಹಾಸ ತುಂಬಾ ಹಿಂದಿನದೆಂಬ ಮಾತು ನಮಗೆ ಅರ್ಥವಾಗುತ್ತದೆ.
Line ೪೨ ⟶ ೬೩:
 
ನುಡಿಸುವ ಉದಯನನ ಹೃದಯದ ತರಂಗಿಣಿ, ರಾಗಿಣಿ, ಭಾಮಿನಿ, ಪ್ರೇಮೋನ್ಮಾದಿನಿ ಎಂದೆಲ್ಲಾ ವರ್ಣಿಸುತ್ತಾ ಚಿಗುರಿನ ಬೆರಳುಗಳು ತಂತಿಯ ಮೀಟಿದಾಗ ಷಡ್ಜದ ಸವಿದನಿಯಿಂದ ಪಂಚಮದ ಪ್ರೇಮನಾದವನ್ನು ಹೊರಡಿಸುತ್ತಾ, ಹೃದಯದಲ್ಲಿ ಸುಖದ ಕಲ್ಪನೆಯ ತರಂಗಗಳನ್ನು ಮೀಟಿ ಎಚ್ಚರಿಸುತ್ತಾ ಮಧುಕರ ಮಿಲನಕ್ಕೆ ನೆರವಾಗೇ ಎಂದು ನುಡಿದಿದ್ದಾರೆ.
 
 
 
 
 
[[File:Saraswati.jpg|thumb|Goddess Saraswati depicted playing the veena]]
ವೀಣೆಗೆ ಸಂಬಂಧಪಟ್ಟ ಇತರ ಕೆಲವು ವಾದ್ಯಗಳೆಂದರೆ;
"https://kn.wikipedia.org/wiki/ವೀಣೆ" ಇಂದ ಪಡೆಯಲ್ಪಟ್ಟಿದೆ