ಜೈನ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೭ ನೇ ಸಾಲು:
 
== ಶಬ್ದ ಉತ್ಪತ್ತಿ ==
ಜೈನ ಎಂದರೆ 'ಜಿನ'ಎಂಬ ಶಬ್ಧದಿಂದ ಉತ್ಪತ್ತಿಯಾದ ಶಬ್ದವಾಗಿದ್ದು ಜಿನ ಎಂದರೆ 'ಇಂದ್ರಿಯಗಳನ್ನು ಗೆದ್ದವನು' ಎಂದು ಹೇಳಬಹುದು.[[ಕರ್ಮ]]ದ ಕಟ್ಟನ್ನು ಮುರಿದು ಸಂಸಾರವನ್ನು ದಾಟಿ ಮುಕ್ತಿಯನ್ನು ಪಡೆದವ [[ಜೀವ]]ರಿಗೆ 'ಜಿನರು' ಎಂದು ಹೆಸರು. ಜಿನರಿಂದ ಉಪದೇಶಿ ಸಲ್ಪಟ್ಟ ಧರ್ಮವೇ[[ಧರ್ಮ]]ವೇ ಜೈನಧರ್ಮ.
 
== ಜೈನ ತತ್ವಗಳು ==
೧೭ ನೇ ಸಾಲು:
'''ಜೈನ ದರ್ಶನ''' <sup>೨</sup>
*೧. ಭಾರತದಲ್ಲಿ ಹುಟ್ಟಿದ ಜೈನ ದರ್ಶನವು ಅವೈದಿಕ ದರ್ಶನವಾಗಿದೆ -ವೇದಗಳನ್ನು ಒಪ್ಪುವುದಿಲ್ಲ. ಅದು ಶ್ರಮಣ ಪಂಥವನ್ನು ಅನುಸರಿಸುವುದು.( '''ಸಮಣ ವಾ, ಬ್ರಾಹ್ಮಣ ವಾ'''). ಶ್ರಮಣ ಪರಂಪರೆಗೆ ಕ್ಷತ್ರಿಯರು ನಾಯಕರು. ಉಪನಿಷತ್ತುಗಳಲ್ಲಿಯೂ ಕ್ಷತ್ರಿಯ ಉಪದೇಶ ಕರು (ರಾಜರು) ಪ್ರಾವೀಣ್ಯತೆ, ಪ್ರಾಶಸ್ತ್ಯ ಪಡೆದಿದ್ದರು.
*೨. ಬ್ರಾಹ್ಮಣರು ಪಶು ಯಜ್ಞ ತ್ಯಜಿಸಿದ್ದು, ಸಸ್ಯಾಹಾರಕ್ಕೆ ಪ್ರಾಶಸ್ತ್ಯ ಕೊಟ್ಟಿರುವುದು. ಮೊದಲಾದವು ಜೈನ [[ಬೌದ್ಧ]] ಧರ್ಮಗಳ ಪ್ರಭಾವದಿದ ಎಂದು ಹೇಳಬಹುದು. ಈ ಧರ್ಮದವರು ಅಹಿಂಸೆ ಮತ್ತು ಮನೋನಿಗ್ರಹವು ಮೋಕ್ಷಕ್ಕೆ ಸಾಧನವೆಂದು ನಂಬುತ್ತಾರೆ. ಇದರಲ್ಲಿ ಮುಖ್ಯವಾಗಿ ದಿಗಂಬರರು, ಶ್ವೇತಾಂಬರರು ಎಂದು ಎರಡು ಪಂಥಗಳಿವೆ.
 
== ಇತಿಹಾಸ ==
*ಜೈನಧರ್ಮವು ಅತ್ಯಂತ ಪ್ರಾಚೀನವಾದುದು. ಬೌದ್ಧ ಧರ್ಮಕ್ಕಿಂತ ಹಿಂದಿನದು. ಈ ಧರ್ಮದ ಆದಿ (ಮೊದಲನೆಯ) ತೀರ್ಥಂಕರ ಆದಿನಾಥ. ಇಪ್ಪತ್ನಾಲು ತೀರ್ಥಂಕರರಲ್ಲಿ [[ಮಹಾವೀರ]]ನು ಇಪ್ಪತ್ನಾಲ್ಕನೆಯ ತೀರ್ಥಂಕರ. ಇವನು ಗೌತಮ ಬುದ್ಧನ ಸಮಕಾಲೀನನಾಗಿದ್ದು ಜೈನ ಧರ್ಮವನ್ನು ಪ್ರಖ್ಯಾತಗೋಳಿಸಿದನು. ಒಂದು ಕಾಲದಲ್ಲಿ ಇದು [[ರಾಜ]] ಧರ್ಮವಾಗಿದ್ದು, ೮ ನೇ ಶತಮಾನದ ನಂತರ ಅವನತಿ ಹೊಂದಿತು.
*ಈಗ ಭಾರತದಲ್ಲಿ ಈ ಧರ್ಮದವರು ಅಲ್ಪ ಸಂಖ್ಯಾತರಾಗಿದ್ದು ಕೇವಲ ೪೨ ಲಕ್ಷ ಜನರಿದ್ದಾರೆಂದು (ಜನಗಣತಿ ೨೦೦೧) ಅಂದಾಜು ಮಾಡಿದೆ.ಈ ಧರ್ಮದ ಕೆಲವರು ಬೆಲ್ಜಿಯಮ್, ಕೆನಡ, ಹಾಂಗ್ ಕಾಂಗ್, ಜಪಾನ್, ಸಿಂಗಪುರ, ಯು.ಎಸ್.ಎ. ಗಳಿಗೆ ವಲಸೆ ಹೋಗಿದ್ದಾರೆ. ಇವರಲ್ಲಿ ಅಕ್ಷರಸ್ಥರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ ;
*ಅದು ೯೧.೪% (೨೦೦೧ ಜನಗಣತಿ) . ಈಧರ್ಮದವರ ಕೈ ಬರೆಹದ ಪ್ರತಿಗಳು ಭಾರತದಲ್ಲಿ ಅತ್ಯಂತ ಪ್ರಾಚೀನವಾದವುಗಳು. ತೀರ್ಥಂಕರರಾದ [[ಅರಿಷ್ಟನೇಮಿ]], [[ಪಾರ್ಶ್ವನಾಥ]] , ಮಹಾವೀರನಿಗಿಂತ ಹಿಂದಿನವರು. ಉತ್ತರಾದ್ಯಾಯ ಸೂತ್ರಗಳಲ್ಲಿ ಪಾರ್ಶ್ವನಾಥನ ಹೆಸರು ಕಂಡು ಬರುವುದಾಗಿ ತಿಳಿದು ಬಂದಿದೆ. (ಇಂಗ್ಲಿಷ್ ವಿಕಿಪೀಡಿಯಾ)
"https://kn.wikipedia.org/wiki/ಜೈನ_ಧರ್ಮ" ಇಂದ ಪಡೆಯಲ್ಪಟ್ಟಿದೆ