ಪಿ. ಸುಶೀಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೯ ನೇ ಸಾಲು:
==ನಲವತ್ತು ಸಾವಿರಕ್ಕೂ ಹೆಚ್ಚು ಗೀತೆಗಳು==
ಒಟ್ಟಾರೆ 40,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಪಿ. ಸುಶೀಲ ಅವರು ಲತಾ ಮಂಗೇಶ್ಕರ್ ಅವರ ಅಭಿಮಾನಿ ಮತ್ತು ಗೆಳತಿ. ಪ್ರಾರಂಭದಲ್ಲಿ ಹಲವು ಹಿಂದಿ ಚಿತ್ರಗಳಲ್ಲಿ ಹಾಡಿದರೂ ನಂತರದಲ್ಲಿ ಲತಾ ಅವರು ಇರುವಾಗ ಹಿಂದಿ ಚಿತ್ರರಂಗಕ್ಕೆ ನನ್ನ ಅವಶ್ಯಕತೆ ಇಲ್ಲ ಎಂಬ ಕಾರಣದಿಂದ ಅಲ್ಲಿನ ಅವಕಾಶಗಳ ಹಿಂದೆ ಹೋಗಲಿಲ್ಲ ಎನ್ನುತ್ತಾರೆ. ಇಂದಿನ ದಿನಗಳ ಬಿರುಸಿನ ಗತಿಯ ಹಾಡುಗಳ ಬಗ್ಗೆ ಕೂಡ, ಕಾಲದ ಬದಲಾವಣೆ ಜೊತೆ ಸಂಗೀತ ಬದಲಾಗುವುದರಲ್ಲಿ ತಪ್ಪೇನಿದೆ ಎಂಬ ವಿಶಾಲ ಮನೋಭಾವನೆ ಅವರಲ್ಲಿದೆ. ಅವರ ಸೊಸೆ ಸಂಧ್ಯಾ ಅವರು ಚಲನಚಿತ್ರರಂಗದ ಪ್ರಮುಖ ಗಾಯಕಿಯಾಗಿದ್ದಾರೆ.
===ಕುಟುಂಬ===
 
==ಕುಟುಂಬ
ಪಿ. ಸುಶೀಲ ಅವರ ಒಬ್ಬನೇ ಮಗನ ಹೆಸರು ಜಯಕೃಷ್ಣ, ಸೊಸೆ ಸಂಧ್ಯಾ ಸಂಗೀತ ಪ್ರೇಮಿ ಮತ್ತು ಸ್ವತಹ ಹಿನ್ನೆಲೆ ಗಾಯಕಿ.
==ಮಾಧುರ್ಯಕ್ಕೆ ಸುಶೀಲಾ-==
*ಭಾರತೀಯ ಚಿತ್ರರಂಗ ಹಲವು ಅಪ್ರತಿಮ ಗಾಯಕಿಯರನ್ನು ಕಂಡಿದೆ. ಆದರೆ, ಮಾಧುರ್ಯದ ವಿಷಯಕ್ಕೆ ಬಂದರೆ ಹೆಚ್ಚು ಆಪ್ತವಾಗುವ ಹೆಸರು ಸುಶೀಲಾ. ಅವರು ಹಾಡಲು ಶುರು ಮಾಡಿದ ಸಂದರ್ಭದಲ್ಲಿ ಚಿತ್ರರಂಗದಲ್ಲಿದ್ದ ಪೈಪೋಟಿ ಅಷ್ಟಿಷ್ಟಲ್ಲ. ಸೂಲಮಂಗಲಂ ರಾಜಲಕ್ಷ್ಮಿ, ಪಿ. ಲೀಲಾ, ಎಂ.ಎಲ್.ವಸಂತಕುಮಾರಿ, ಎ.ಪಿ.ಕೋಮಲ, ಆರ್.ಬಾಲಸರಸ್ವತಿ, ಜಿಕ್ಕಿ ಅವರಂಥ ಘಟಾನುಘಟಿಗಳ ನಡುವೆ ರಂಗಪ್ರವೇಶಿಸಿದ ಸುಶೀಲಾ, ಕೆಲವು ವರ್ಷಗಳಲ್ಲೇ ಎಲ್ಲರನ್ನೂ ಮೀರಿ ಬೆಳೆದರು.ವಿವಿಧ ಭಾಷೆಗಳಲ್ಲಿ ಹಾಡುವ ಮೂಲಕ ‘ದಕ್ಷಿಣ ಭಾರತದ ಕೋಗಿಲೆ’ ಎನ್ನಿಸಿಕೊಂಡ ಅಗ್ಗಳಿಕೆ ಅವರದು.
 
*ಪ್ರಸ್ತುತ, ಹನ್ನೆರಡು ಭಾಷೆಗಳಲ್ಲಿ ಪಿ.ಸುಶೀಲಾ ಅವರು ಹಾಡಿರುವ 17,695 ಗೀತೆಗಳ ಸಾಧನೆಯನ್ನು '''ಗಿನ್ನೆಸ್‌ ದಾಖಲೆ''' ಪುಸ್ತಕ ಗೌರವಿಸಿದೆ.ಗಿನ್ನೆಸ್‌ ದಾಖಲೆಯಲ್ಲಿ ಸುಶೀಲಾ ಅವರ 1960ರ ನಂತರದ ಹಾಡುಗಳನ್ನಷ್ಟೇ ಪರಿಗಣಿಸಲಾಗಿದೆ. ಕನ್ನಡದಲ್ಲಿ ಸುಮಾರು 5 ಸಾವಿರ ಗೀತೆಗಳನ್ನು ಸುಶೀಲಾ ಹಾಡಿದ್ದಾರೆ. ಚಲನಚಿತ್ರ ಸಂಗೀತದಲ್ಲಿ ಏನೆಲ್ಲ ಪ್ರಯೋಗಗಳು ನಡೆದೂ ಕೊನೆಗೆ ಮಾಧುರ್ಯವೇ ಮುನ್ನೆಲೆಗೆ ಸಲ್ಲುವುದು ಮತ್ತೆ ಮತ್ತೆ ಸಾಬೀತಾಗಿದೆ. ಈ ಸಂದರ್ಭದಲ್ಲಿ, ಸುಶೀಲಾ ಅವರ ಗೀತೆಗಳು '''‘ಮಾಧುರ್ಯದ ಮಾದರಿ’'''ಗಳಂತೆ ಕೇಳುಗರ ಮನಸ್ಸುಗಳನ್ನು ಪ್ರಸನ್ನಗೊಳಿಸುತ್ತ ಚಿರಸ್ಥಾಯಿಯಾಗಿದೆ. <ref>4/03/2016/ಪ್ರಜಾವಾಣಿ [[www.prajavani.net/article/ಚಿತ್ರರಸಿಕರ-ಎದೆಯ-ಕೋಗಿಲೆ-ಸುಶೀಲಾ]]</ref>
 
==ಪ್ರಶಸ್ತಿ ಗೌರವಗಳು==
"https://kn.wikipedia.org/wiki/ಪಿ._ಸುಶೀಲ" ಇಂದ ಪಡೆಯಲ್ಪಟ್ಟಿದೆ