ಆಲಮಟ್ಟಿ ಆಣೆಕಟ್ಟು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೯ ನೇ ಸಾಲು:
* 12 ಪುನರ್ವಸತಿ ಕೇಂದ್ರ ನಿರ್ಮಾಣದ ಅಗತ್ಯ ಇರುವುದಿಲ್ಲ
* ಪುನರ್ವಸತಿ ಕೇಂದ್ರಕ್ಕೆ ಬೇಕಾದ 2900 ಎಕರೆ ಭೂಮಿ ಉಳಿಯಲಿದೆ
==೨೦೧೬ ರ ವರೆಗಿನ ಬೆಳವಣಿಗೆ+==
*ಆಲಮಟ್ಟಿ ಮತ್ತು ನಾರಾಯಣಪುರ ಅನೆಕಟ್ಟುಗಳಿಂದ ಕಲಬುರ್ಗಿ, ಯಾದಗಿರಿ, ರಾಯಚೂರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 6.22 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಹಂಚಿಕೆಯಾದ ಒಟ್ಟು 173 ಟಿಎಂಸಿ ಪೂರ್ಣ ಪ್ರಮಾಣದ ನೀರನ್ನು ಬಲಸಿಕೊಳ್ಳಲಾಗುತ್ತಿದೆ.
*ಕೃಷ್ಣ ಮೇಲ್ದಂಡೆ ಯೋಜನೆ ಹಂತ–1 ಮತ್ತು 2ರ ಅಡಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮುಳವಾಡ ಏತ ನೀರಾವರಿ ಯೋಜನೆ ಹಂತ–2, ಆಲಮಟ್ಟಿ ಎಡದಂಡೆ ಕಾಲುವೆ, ಆಲಮಟ್ಟಿ ಬಲದಂಡೆ ಕಾಲುವೆ, ಇಂಡಿ ಶಾಖಾ ಕಾಲುವೆ, ಇಂಡಿ ಏತನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು 1.95 ಲಕ್ಷ ಹೆಕ್ಟೇರ್ ಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.
*ಮುಳವಾಡ ಏತ ನೀರಾವರಿ ಯೋಜನೆಯಡಿ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ 4 ಹಂತಗಳಲ್ಲಿ ನೀರನ್ನು ಎತ್ತಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಮುದ್ದೇಬಿಹಾಳ, ವಿಜಯಪುರ, ಸಿಂಧಗಿ ಮತ್ತು ಇಂಡಿ ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಮುಳವಾಡ ಏತ ನೀರಾವರಿ ಯೋಜನೆಯ ಮೂರನೇ ಹಂತದ ಕಾಮಗಾರಿಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ. ಮೂರನೇ ಹಂತದ ಯೋಜನೆಯ ಅಂದಾಜು ವೆಚ್ಚ ₹ 4610.89 ಕೋಟಿಯಾಗಿದ್ದು ಈಗಾಗಲೇ ₹ 1031.50 ಕೋಟಿ ವೆಚ್ಚ ಮಾಡಲಾಗಿದೆ.
*ಆಲಮಟ್ಟಿ ಎಡದಂಡೆ ಕಾಲುವೆ ಜಾಲದ ಮೂಲಕ 4.60 ಟಿಎಂಸಿ ನೀರನ್ನು ಮುದ್ದೇಬಿಹಾಳ ಮತ್ತು ಬಸವನಬಾಗೇವಾಡಿ ತಾಲ್ಲೂಕಿನ 20,235 ಹೆಕ್ಟೇರ್‌ ಪ್ರದೇಶಕ್ಕೆ ಒದಗಿಸಲಾಗುತ್ತಿದೆ. ಇದಕ್ಕಾಗಿ ₹232.67 ಕೋಟಿ ಖರ್ಚು ಮಾಡಲಾಗಿದೆ. ಇದಲ್ಲದೆ ಚಿಮ್ಮಲಗಿ ಏತ ನೀರಾವರಿ ಯೋಜನೆ ಜಾರಿಗೂ ಕ್ರಮ ಕೈಗೊಳ್ಳಲಾಗಿದೆ.
*ಭೂಸ್ವಾಧೀನ ಪಡಿಸಿಕೊಳ್ಳಬೇಕಾದ 1,34,107 ಎಕರೆ ಪೈಕಿ 60 ಸಾವಿರ ಎಕರೆ ಪ್ರದೇಶದ ಭೂಸ್ವಾಧೀಣಕ್ಕೆ 11(1) ಅಧಿಸೂಚನೆ ಹೊರಡಿಸಲಾಗಿದೆ. ಭೂಸ್ವಾಧೀನ ಮತ್ತು ಪುನರ್‌ವಸತಿಗೆ ತಗಲುವ ವೆಚ್ಚ ₹ 31,894 ಕೋಟಿ ಎಂದೂ ಅಂದಾಜಿಸಲಾಗಿದೆ. ಭೂಸ್ವಾಧೀನ ಮತ್ತು ಪುನರ್‌ವಸತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ರಚಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕ್ರಿಯಾ ಯೋಜನೆ ಪರಿಶೀಲನಾ ಸಮಿತಿ ರಚಿಸಲಾಗಿದೆ. ಮುಳುಗಡೆ ಹೊಂದುವ 20 ಗ್ರಾಮಗಳ ಪೈಕಿ 11 ಗ್ರಾಮಗಳ ಮುಳುಗಡೆ ತಡೆಯಲು ವಿನೂತನ ತಾಂತ್ರಿಕ ಪರಿಹಾರ ಕಂಡುಕೊಳ್ಳಲೂ ಯತ್ನಿಸಲಾಗುತ್ತಿದೆ.<refsup>[[http://www.prajavani.net/article/%E0%B2%A8%E0%B3%80%E0%B2%B0%E0%B2%BE%E0%B2%B5%E0%B2%B0%E0%B2%BF-%E0%B2%95%E0%B2%A8%E0%B2%B8%E0%B2%BF%E0%B2%A6%E0%B3%86-%E0%B2%95%E0%B2%A8%E0%B2%B5%E0%B2%B0%E0%B2%BF%E0%B2%95%E0%B3%86%E0%B2%AF%E0%B3%82-%E0%B2%87%E0%B2%A6%E0%B3%86]]</refsup>
==ಆಲಮಟ್ಟಿ ಉದ್ಯಾನವನದ ಚಿತ್ರಗಳು==
------------------------------
"https://kn.wikipedia.org/wiki/ಆಲಮಟ್ಟಿ_ಆಣೆಕಟ್ಟು" ಇಂದ ಪಡೆಯಲ್ಪಟ್ಟಿದೆ