"ಬಿಲ್ವಪತ್ರೆ ಮರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕೊಂಡಿ ಸೇರಿಸಲಾಗಿದೆ
(ಕೊಂಡಿ ಸೇರಿಸಲಾಗಿದೆ)
}}
[[ಚಿತ್ರ:Bael (Aegle marmelos) tree at Narendrapur W IMG 4116.jpg|thumb|right|ಬಿಲ್ವಪತ್ರೆ ಮರ]]
ಬಿಲ್ವಪತ್ರೆ ಮರ ಮಧ್ಯಮ ಪ್ರಮಾಣದ ಮರ.ಇದು [[ಹಿಂದೂ ಧರ್ಮ]]ದಲ್ಲಿ ಪವಿತ್ರ ಮರ ಎಂದು ಪರಿಗಣಿತವಾಗಿದೆ.[[ಶಿವ]]ನಿಗೆ ಪ್ರೀತಿಪಾತ್ರ ಮರ ಎಂದು ಪುರಾಣಗಳು ಹೇಳುತ್ತವೆ.ದಕ್ಷಿಣ ಎಷ್ಯಾ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ. ದೇವಸ್ಥಾನಗಳ[[ದೇವಸ್ಥಾನ]]ಗಳ ಪಕ್ಕ, ಉದ್ಯಾನವನಗಳಲ್ಲಿ ನೆಟ್ಟು ಬೆಳೆಸುತ್ತಾರೆ. ಬಿಲ್ವವು ಭಾರತದ ಹಲವಾರು ಭಾಗಗಳಲ್ಲಿ ಕಂಡು ಬರುವ ಒಂದು ಸಾಮನ್ಯ ವೃಕ್ಷವಾಗಿದೆ. ಕಡಲ ಮಟ್ಟದಿಂದ ೩೬೦೦ ಅಡಿಗಳಷ್ಟು ಎತ್ತರದವರೆಗಿನ ಪ್ರದೇಶಗಳಿಂದ ಇದು ಬೆಳೆಯುತ್ತದೆ. ಪಶ್ಚಿಮ [[ಹಿಮಾಲಯ]] ಪರ್ವತ ಪ್ರದೇಶಗಳಲ್ಲೂ ಇದು ಬೆಳೆಯುತ್ತದೆ. ಅಂಡಮಾನ್ ದ್ವೀಪಗಳಲ್ಲೂ ಬಿಲ್ವ ಸಹಜವಾಗಿ ಬೆಳೆಯುತ್ತದೆ.
 
== ಸಸ್ಯಶಾಸ್ತ್ರೀಯ ವರ್ಗೀಕರಣ ==
 
== ಸಸ್ಯದ ಗುಣಲಕ್ಷಣಗಳು ==
ಇದು [[ಪರ್ಣಪಾತಿ]] ಮರ. ಕೊಂಬೆಗಳಲ್ಲಿ ಮುಳ್ಳುಗಳಿವೆ. ತೊಗಟೆ ಬೂದು ಬಣ್ಣದ್ದಾಗಿದ್ದು, ಬೆಂಡು ಬೆಂಡಾಗಿರುವುದು. ಎಲೆಗಳು ತ್ರಿಪರ್ಣಿ(Trifoliate) ಹಾಗೂ ಸುವಾಸಿತವಾಗಿರುವುವು. ಸರಳ ಅಥವ ಸಂಯುಕ್ತ ಎಲೆಗಳು. ಹೆಚ್ಚಾಗಿ ಪರ್ಯಾಯ ಜೋಡಣೆಯಲ್ಲಿತ್ತವೆ. ಎಲೆಗಳಲ್ಲಿ ಸುಗಂಧ ತೈಲಯುಕ್ತ ಪಾರದರ್ಶಕ ಗ್ರಂಥಿಗಳ ಚುಕ್ಕಿಗಳಿವೆ. ಈ ಕುಟುಂಬದ ಸಸ್ಯಗಳಲ್ಲಿ ದ್ವಿಲಿಂಗಿ ಅಥವ ಏಕಲಿಂಗಿ ಹೂಗಳು ಬಿಡುತ್ತವೆ. ಬಿಲ್ವದ ಹೂಗಳು ಹಸಿರು ಮಿಶ್ರ ಬಿಳಿ ಬಣ್ಣದಾಗಿರುತ್ತದೆ. ಸಣ್ಣ ಗೊಂಚಲಿನಲ್ಲಿ ಹೂ ಬಿಡುತ್ತದೆ. ಹೂವು ಪರಿಮಳದಿಂದ ಕೂಡಿರುತ್ತದೆ. ಸೇಬಿನ ಆಕಾರ ಹಾಗೂ ಗಾತ್ರದ ಕಾಯಿ ಬಿಡುವುದು. ಬಿಲ್ವದ ಹಣ್ಣಿನ ಒಂದು ವಿಶೇಷತೆ ಎಂದರೆ ಅದು ಎಳೆ ಕಾಯಿ , ಅಪಕ್ವ ಫಲ , ಮಾಗಿದ ಫಲ - ಈ ಯಾವುದೇ ಹಂತದಲ್ಲಿದ್ದರೂ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕ್ಕೆ ಬರುತ್ತದೆ. ಬಿಲ್ವದ ಮರದಲ್ಲಿ ಹಣ್ಣು ಪಕ್ವವಾಗಲು ದೀರ್ಘ ಕಾಲ ಆಗುತ್ತದೆ. ಹೂಗಳು ಪರಾಗಸ್ಪರ್ಶಕ್ಕೆ ಗುರಿಯಾಗಿ ಫಲಿತವಾಗಿ ಕಾಯಾಗಲು ಒಂದು ವರ್ಷವಾಗಲೂಬಹುದು. ಬಿಲ್ವದ ಹಣ್ಣು ದುಂಡಗಿರುತ್ತದೆ. ಮೊದಲು ಕಾಯಿಯು ಹಸಿರು ಬಣ್ಣದಾಗಿದ್ದು, ಬೂದು ಬಣ್ಣ ತಾಳುತ್ತದೆ. ಹಣ್ಣಿನ ಚಿಪ್ಪು ಗಟ್ಟಿಯಾಗಿರುತ್ತದೆ. ಒಳಗಿನ ತಿರುಳು [[ಕಿತ್ತಳೆ]] ಬಣ್ಣದ್ದಾಗಿರುತ್ತದೆ. ಬಿಲ್ವದ ಹಣ್ಣಿನಲ್ಲಿ ಎರಡು ವಿಧಗಳಿದ್ದು - ಗ್ರಾಮ್ಯ ವಿಧದಲ್ಲಿ ಹಣ್ಣುಗಳು ದೊಡ್ಡದಾಗಿದ್ದು ಮುಳ್ಳುಗಳ ಪ್ರಮಾಣ ಕಡಿಮೆ ಇರುತ್ತದೆ. ವನ್ಯವಿಧದಲ್ಲಿ ಗಾತ್ರ ಚಿಕ್ಕದಿದ್ದು ಮುಳ್ಳುಗಳು ಹೆಚ್ಚಿರುತ್ತವೆ. ಬಿಲ್ವದ ದಾರುವು ಗಡುಸಾಗಿದ್ದು,ಬಾಳಿಕೆಯುತವಾಗಿದೆ.
[[ಚಿತ್ರ:Bael (Aegle marmelos) fruit at Narendrapur W IMG 4099.jpg|thumb|right|ಬಿಲ್ವಪತ್ರೆ ಕಾಯಿ]]
 
 
===ರೋಗಗಳು===
ಬಿಲ್ವ ವೃಕ್ಷಕ್ಕೆ ಗಂಭೀರತರವಾದ ರೋಗಗಳು ಕಾಡುವುದಿಲ್ಲ. ಆದರೆ ಒಂದು [[ಬ್ಯಾಕ್ಟೀರಿಯ]] ಸೋಂಕು ಬಿಲ್ವದ ಹಣ್ಣಿಗೆ ತಗಲಬಹುದು. ಎಲೆಯ ಮೇಲೆ ಗೊಂಡಿನ ನೀರಿನಲ್ಲಿ ನೆಲೆಸಿಟ್ಟಂತಹ ಗುರುತು ಮೂಡುತ್ತದೆ. ಇದರ ಮೇಲೆ ಶಿಲೀಂಧ್ರದ ಬಾಧೆ ಉಂಟಾಗುವುದರಿಂದ ಅನೇಕ ಕಾಯಿಲೆಗಳು ಬರುತ್ತದೆ.
 
===ಕೀಟಬಾಧೆ===
'''ಚರ್ಮದ ಸಮಸ್ಯೆಗಳು''' :
ದೇಹದ ಚರ್ಮದ ದುರ್ಗಂಧವನ್ನು ನಿವಾರಿಸಲು ತಾಜಾ ಬಿಲ್ವಪತ್ರೆ ರಸವನ್ನು ಪ್ರತಿದಿನ ಮೈಗೆ ಚೆನ್ನಾಗಿ ಲೇಪಿಸಿಕೊಂಡು ಅರ್ಧಗಂಟೆಯ ನಂತರ ಸ್ನಾನ ಮಾಡಬೇಕು.
ದೇಹದ ಮೇಲೆ ಕುರುಗಳು ಇದ್ದಾಗ ಬಿಲ್ವ ವೃಕ್ಷದ[[ಮರ|ವೃಕ್ಷ]]ದ ಬೇರನ್ನು ನಿಂಬೆರಸದಲ್ಲಿ ತೇಯ್ದು ಲೇಪಿಸುತ್ತಿರಬೇಕು..
 
'''ತಲೆನೋವು''' :
ಬಂಗಾಳದಲ್ಲಿ ನಿದ್ದೆಯಲ್ಲಿ ಇರುವ ದುರ್ಗಾದೇವಿಯನ್ನು ದುರ್ಗಾಪೂಜೆಯ ಸಂದರ್ಭದಲ್ಲಿ ಬಿಲ್ವವೃಕ್ಷದ ರೆಂಬೆಯನ್ನು ಬಳಸಿ ಎಚ್ಚರಿಸುತ್ತಾರೆ. ಇದಾದಮೇಲೆ ಎಚ್ಚರಗೊಂಡ ದೇವಿ ಈ ಮರದಲ್ಲೆ ನೆಲೆ ಹೊಂದುತ್ತಾಳೆ ಎಂಬ ಪ್ರತೀತಿ ಇದೆ.
 
ಬಿಲ್ವದ ಮರದ ಎಲೆಗಳು ಮೂರರ ಗುಂಪಿನಲ್ಲಿರುತ್ತದೆ. ಇದು [[ಬ್ರಹ್ಮ]], [[ವಿಷ್ಣು]], ಮಹೇಶ್ವರರ[[ಮಹೇಶ್ವರ]]ರ ಸಂಕೇತವೆಂದು ಭಾವಿಸಲಾಗಿದೆ. ಈ ರೀತಿಯಲ್ಲಿ ವಿಶ್ವದ ಸೃಷ್ಟಿ , ಸ್ಥಿತಿ ಲಯದ ಸಂಕೇತಗಳಿಗೆ ಮಾಡಿದ ಪೂಜೆ ಎಂದು ನಂಬಲಾಗಿದೆ.
 
ತಂತ್ರ ಸಂಪ್ರದಾಯದ ಪ್ರಕಾರ ಲಕ್ಷ್ಮಿಯು[[ಲಕ್ಷ್ಮಿ]]ಯು ಒಂದು ಪವಿತ್ರ ಗೋವಿನ ರೀತಿಯಲ್ಲಿ ಜನಿಸಿದ್ದು, ಆಕೆಯ ಸಗಣಿಯಿಂದ ಬಿಲ್ವವು ಸೃಷ್ಟಿಯಾಯಿತು.
 
ಇದೆ ರೀತಿ ಬಿಲ್ವದ ಬಗ್ಗೆ ಇನ್ನು ಹಲವಾರು ಕಥೆಗಳು ಪ್ರಕಟವಾಗಿವೆ.
೨,೮೬೯

edits

"https://kn.wikipedia.org/wiki/ವಿಶೇಷ:MobileDiff/670022" ಇಂದ ಪಡೆಯಲ್ಪಟ್ಟಿದೆ