ಕ್ಲೋರಿನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೆಲವು ಉಲ್ಲೇಖ ಸರಿಪಡಿಸಿದ್ದು
ಚುNo edit summary
೨ ನೇ ಸಾಲು:
'''ಕ್ಲೋರಿನ್''' ಒಂದು [[ಮೂಲಧಾತು]] [[ಅನಿಲ]]. ಪ್ರಬಲ ವಾಸನೆಯುಳ್ಳ, ತೆಳುಹಸಿರಿನಿಂದ ಕೂಡಿದ ಹಳದಿ ಬಣ್ಣವಿದೆ. [[ಸೋಡಿಯಂ]]ನೊಂದಿಗೆ ಬೆರೆತಾಗ [[ಅಡುಗೆ ಉಪ್ಪು]] ಆಗುತ್ತದೆ. [[ಸ್ವೀಡನ್]] ದೇಶದ [[ಕಾರ್ಲ್ ವಿಲ್ಹೆಮ್ ಶೀಲೆ]] ಎಂಬವರಿಂದ ಈ ಮೂಲಧಾತು [[೧೭೭೪]]ರಲ್ಲಿ ಕಂಡು ಹಿಡಿಯಲ್ಪಟ್ಟಿತು.
 
[[ಆವರ್ತ ಕೋಷ್ಟಕ|ಆವರ್ತ ಕೋಷ್ಟಕದ]]<ref>http://periodic.lanl.gov/index.shtml</ref> ಏಳನೆಯ ಶ್ರೇಣಿಯ ಬಿ ಉಪಶ್ರೇಣಿಯಲ್ಲಿರುವ ಹ್ಯಾಲೋಜನ್ ವರ್ಗಕ್ಕೆ ಸೇರಿದ ಧಾತು<ref>http://www.britannica.com/science/halogen-element</ref>. ಇದರ ಸಂಕೇತ Cl, ಪರಮಾಣು ಸಂಖ್ಯೆ ೧೭, ಪರಮಾಣು ತೂಕ ೩೫.೪೫೭, ಸಾಂದ್ರತೆ: ಅನಿಲ ೩.೨೧೪ ಗ್ರಾಂ. / ಲೀಟರ್ (೦° ಸೆಂ., ೭೬೦ ಮಿಮೀ. ಒತ್ತಡದಲ್ಲಿ); ದ್ರವ ೧.೪೬೮ ಗ್ರಾಂ / ಲೀ. (೦° ಸೆಂ. ಸಂಧಿಸ್ಥ) ಸಾಂದ್ರತೆ ೫೭೩ ಗ್ರಾಂ. /ಲೀ. ಎಲೆಕ್ಟ್ರಾನ್ ವಿನ್ಯಾಸ- 1s<sup>2</sup> 2s<sup>2</sup> 2p<sup>6</sup> 3s<sup>2</sup> 3p<sup>5</sup>.
 
ಮಹಾಯುದ್ಢದ ಸಮಯದಲ್ಲಿ ಉಪಯೋಗಿಸಿದ ವಿಷಗಾಳಿಗಳಲ್ಲೊಂದು. ವಾಯುವಿಗಿಂತ ಭಾರವಾದ ಅನಿಲ ಕ್ಲೋರಿನ್. ಇದಕ್ಕೆ ಹಸಿರು ಛಾಯೆ ಇದೆ ಹಾಗು ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಬಹುದಾಗಿದೆ. ಭಾರವಾದ ಅನಿಲವಾದುದರಿಂದ ಪಾತ್ರೆಯಲ್ಲಿರುವ ಗಾಳಿಯನ್ನು ತಳ್ಳಿ ಕ್ಲೋರಿನ್ ತುಂಬಿಕೊಳ್ಳುತ್ತದೆ. ಇದರ ಸ್ವತಂತ್ರರೂಪವು ಸಾಮಾನ್ಯ ಹವೆಯಲ್ಲಿ ಅನಿಲವಾಗಿರುತ್ತದೆ. ಕ್ಲೋರಿನ್ ಸ್ವತಂತ್ರವಾಗಿ ಧಾತುರೂಪದಲ್ಲಿ ಸಿಗುವುದಿಲ್ಲ. ಹೆಚ್ಚಾಗಿ ಇತರ ಲೋಹಗಳಲ್ಲಿ ಬೆರೆತು ಲವಣಗಳ ರೂಪದಲ್ಲಿ ಸಿಗುವಂತಹದು.
"https://kn.wikipedia.org/wiki/ಕ್ಲೋರಿನ್" ಇಂದ ಪಡೆಯಲ್ಪಟ್ಟಿದೆ