ಗಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ==ಗಾಯ== ಅಂಗಾಂಶಗಳ ಅವಿಚ್ಛಿನ್ನತೆಗೆ ಉಂಟಾಗುವ ತಡೆ (ವೂಂಡ್). ಕೆಲವರು ಇದನ್ನು ಸ...
 
No edit summary
೧ ನೇ ಸಾಲು:
{{Wikify}}
 
==ಗಾಯ==
ಅಂಗಾಂಶಗಳ ಅವಿಚ್ಛಿನ್ನತೆಗೆ ಉಂಟಾಗುವ ತಡೆ (ವೂಂಡ್). ಕೆಲವರು ಇದನ್ನು ಸಮರಕ್ಕೆ ಮತ್ತು ಶಾಂತಿಗೆ ಸಂಬಂಧಿಸಿದ ಗಾಯ ಎಂಬ ಎರಡು ಬಗೆಗಳಾಗಿ ವಿಂಗಡಿಸಿ ಇವು ಪರಸ್ಪರ ವಿಭಿನ್ನವಾದವುಗಳೆಂದು ಪರಿಗಣಿಸುವುದುಂಟು. ಆದರೆ ಇವುಗಳ ರೋಗಲಕ್ಷಣಗಳಲ್ಲಿ ಮತ್ತು ಚಿಕಿತ್ಸೆಯಲ್ಲಿ ವ್ಯತ್ಯಾಸವೇನಿಲ್ಲ. ಹೀಗೆ ಇವನ್ನು ಬೇರ್ಪಡಿಸುವುದರಲ್ಲಿ ಯಾವ ಸ್ಪಷ್ಟ ಉದ್ದೇಶವನ್ನೂ ಸಾಧಿಸಿದಂತಾಗುವುದಿಲ್ಲ. ಈ ಕೆಳಗಿನ ವರ್ಗೀಕರಣ ಇವೆರಡನ್ನೂ ಒಳಗೊಳ್ಳುತ್ತದೆ- 1 ಮುಚ್ಚುಗಾಯಗಳು ಅಥವಾ ನಿರ್ಭೇದಕ ಗಾಯಗಳು: ಜಜ್ಜುಗಾಯ, ರಕ್ತಹೆಪ್ಪುಗಟ್ಟುವಿಕೆ, ಉಜ್ಜುಗಾಯ; 2 ಬಿಚ್ಚು ಅಥವಾ ತೆರೆಗಾಯಗಳು ಅಥವಾ ಭೇದಕ ಗಾಯಗಳು: ಕಚ್ಚು ಇರಿತ, ಚುಚ್ಚು, ಹರಿಯುವಿಕೆ, ಹೊರಗಾಣಿಸದ ಸರಳಭೇದಕ ಗಾಯ, ತೂತುಗೊರೆದು ಹೊರಹಾಯುವ ಭೇದಕ ಗಾಯ, ಚೂರು ಚೂರಾಗುವಿಕೆ ಅಥವಾ ಸಿಡಿಯುವಿಕೆ.
==ಮುಚ್ಚುಗಾಯಗಳು==
ಮುಚ್ಚುಗಾಯಗಳು ಚರ್ಮದ[[ಚರ್ಮ]]ದ ಪುರ್ಣ ಪದರವನ್ನು ಭೇದಿಸಿರುವುದಿಲ್ಲ. ಒರಟಾದ ಆಯುಧದಿಂದ ಬಲವಾಗಿ ಹೊಡೆದಾಗ ಜಜ್ಜು ಗಾಯ ಉಂಟಾಗುತ್ತದೆ. ಇದರಿಂದ ರಕ್ತನಾಳಗಳು ಒಡೆದು ಹೋಗುವುದಲ್ಲದೆ ಚರ್ಮದ ಕೆಳಭಾಗದಲ್ಲಿರುವ ಮೃದುವಾದ ಅಂಗಾಂಶಗಳಿಗೆ ಅನೇಕ ಬಗೆಯ ಹಾನಿ ಉಂಟಾಗುತ್ತದೆ. ರಕ್ತನಾಳಗಳಿಂದ ಹೊರಹರಿದ ರಕ್ತ ಚರ್ಮದೊಳಗೆ ಪ್ರವೇಶಿಸಿದಾಗ ಚರ್ಮ ವಿವರ್ಣವಾಗುತ್ತದೆ. ನೋವು, ಊತ, ವಿವರ್ಣತೆಗಳು ಜಜ್ಜುಗಾಯದ ಚಿಹ್ನೆಗಳು. ಹಾನಿಗೆ ಒಳಗಾದ ಅಂಗಾಂಶಕ್ಕೆ ಅನುಗುಣವಾಗಿ ನೋವು ಮತ್ತು ಊತಗಳು ವಿಪರ್ಯಯವಾಗುತ್ತವೆ. ಕಣ್ಣುರೆಪ್ಪೆ ಮತ್ತು ವೃಷಣಕೋಶಗಳಂತಹ ಸಡಿಲಚರ್ಮವುಳ್ಳ ಭಾಗಗಳಿಗೆ ಜಜ್ಜುಗಾಯ ಉಂಟಾದಾಗ ಊತ ಜಾಸ್ತಿಯಾಗಿದ್ದರೂ ನೋವು ಕಡಿಮೆ ಯಿರುತ್ತದೆ. ಇದಕ್ಕೆ ವಿರುದ್ಧವಾಗಿ ಬೆರಳುಗಳಿಗೆ ಅಥವಾ ನೆತ್ತಿಗೆ ಗಾಯವಾದಾಗ ಊತ ಕಡಿಮೆಯಾಗಿ ನೋವು ಹೆಚ್ಚಾಗಿರುತ್ತದೆ. ಕೆಂಪುರಕ್ತಕಣಗಳು ಒಡೆದು ಹೀಮೋಗ್ಲಾಬಿನ್ ಬಿಡುಗಡೆಯಾಗುವುದರಿಂದ ವಿವರ್ಣತೆಯುಂಟಾಗುತ್ತದೆ. ಇದು ಮೊದಲು ದಟ್ಟ ನೇರಳೆ ಬಣ್ಣದಾಗಿದ್ದು ಅನಂತರ ನೀಲಿ, ಕೆಂಪು, ಕಂದು, ಹಸಿರು ಬಣ್ಣಗಳಾಗಿ ಕೊನೆಯಲ್ಲಿ ಹಳದಿ ಕಲೆಯಾಗಿ 14-20 ದಿವಸಗಳೊಳಗೆ ಅದೃಶ್ಯವಾಗುತ್ತದೆ. ಹೀಮೋಗ್ಲಾಬಿನ್ ಹೀರಿಕೆಯ ಸಮಯದಲ್ಲಿ ನಡೆಯುವ ಕೆಲವು ರಾಸಾಯನಿಕ ಕ್ರಿಯೆಗಳೇ ಈ ವರ್ಣ ಬದಲಾವಣೆಗೆ ಕಾರಣ. ದೇಹದ ಒಳಪದರಗಳಲ್ಲಿ ಜಜ್ಜು ಗಾಯವಾದಾಗ ಊತ ಮತ್ತು ವಿವರ್ಣತೆಗಳು ಏಟುಬಿದ್ದ ಜಾಗದಿಂದ ದೂರದಲ್ಲಿಯೂ ಕಾಣಿಸಿಕೊಳ್ಳಬಹುದು.
 
ಹೆಚ್ಚು ರಕ್ತಸ್ರಾವವಾಗಿ ಅದು ತಂತುರೂಪದ ಅಂಗಾಂಶ ಕೋಶದ ಪದರಗಳ ಮತ್ತು ಮಾಂಸಖಂಡಗಳ ನಡುವೆ ಹೆಪ್ಪುಗಟ್ಟುತ್ತದೆ. ಮೊದಮೊದಲು ಇದು ಗುಂಡಾಗಿ, ಹುಣ್ಣಿನಂತೆ ಮೆತ್ತಗಿದ್ದು ಅನಂತರ ಗಟ್ಟಿಯಾಗುತ್ತದೆ. ಕ್ರಮೇಣ ಗಾಯ ವ್ಯವಸ್ಥಿತವಾಗಿ ಕರಗಿಹೋಗುತ್ತದೆ. ಆದರೆ ಎಲ್ಲ ಹೆಪ್ಪುಗಟ್ಟುಗಳೂ ಇಷ್ಟು ಸರಳವಾಗಿ ಮುಕ್ತಾಯವಾಗುವುದಿಲ್ಲ. ಕೆಲವು ಗಂಟುಗಳಾಗಿ ಮತ್ತೆ ಕೆಲವು ರಸಿಕೆಯ ಕೋಶಗಳಾಗಿ ಉಳಿಯಬಹುದು. ಸಾಮಾನ್ಯವಾಗಿ ಮಿದುಳಿನ ಮೇಲ್ಮೈಯಲ್ಲಿ, ನಡುವಿನ ಭಾಗದಲ್ಲಿ, ತೊಡೆಯ ಪಕ್ಕಗಳಲ್ಲಿ ರಸಿಕೆಯ ಕೋಶಗಳು ಉಂಟಾಗುತ್ತವೆ. ಇವುಗಳ ಸುತ್ತಲೂ ತಂತುದ್ರವ್ಯ (ಫೈಬ್ರಿನ್) ಶೇಖರಗೊಂಡು, ಹೀಮೋಗ್ಲಾಬಿನ್ ಕರಗಿಹೋಗಿ ಮೇಲೆ ನಸುಹಳದಿಬಣ್ಣದ ದ್ರವ ಉಳಿಯುತ್ತದೆ. ಸರಿಯಾದ ಚಿಕಿತ್ಸೆ ನಡೆಸದಿದ್ದಲ್ಲಿ ಈ ಕೋಶದಲ್ಲಿ ಒಳಪೊರೆಯೊಂದು ಬೆಳೆದು ಅನಂತರ ಅದನ್ನು ತೆಗೆಯುವುದು ಕಷ್ಟವಾಗುತ್ತದೆ. ಕ್ರಿಮಿಗಳ ಬೆಳೆವಣಿಗೆಗೆ ರಕ್ತ ಒಳ್ಳೆಯ ಮಾಧ್ಯಮ. ಆದ್ದರಿಂದ ದುರ್ಬಲಶರೀರಿಗಳಲ್ಲಿ ಕೆಲವು ಸಲ ಈ ಹೆಪ್ಪುಗಟ್ಟಿಗೆ ಸೋಂಕು ತಗಲಬಹುದು. ಮಾಂಸಖಂಡ ಮತ್ತು ಇತರ ಮೇಲ್ಮೈಯ ಅಂಗಾಂಶಗಳಂತೆಯೇ ಒಳಾಂಗಗಳಾದ ಮಿದುಳು, ಪಿತ್ತಕೋಶ, ಗುಲ್ಮ, ಮೂತ್ರಜನಕಾಂಗ, ಪುಪ್ಪುಸ ಮತ್ತು ಅನ್ನನಾಳ ಮುಂತಾದವುಗಳಿಗೂ ಜಜ್ಜು ಗಾಯವುಂಟಾಗಿ ರಕ್ತ ಹೆಪ್ಪುಗಟ್ಟಬಹುದು. ಇವುಗಳ ಚಿಕಿತ್ಸೆಗೆ ವಿಶ್ರಾಂತಿ ಆವಶ್ಯಕ. ಆವಿಯಾಗುವ ದ್ರವಗಳ ಲೇಪನ, ಶಾಖ ಕೊಡುವಿಕೆ ಮತ್ತು ಬಿಸಿನೀರಿನ ಸ್ನಾನ ನೋವನ್ನು ಕುಗ್ಗಿಸುತ್ತದೆ. ಬಿಗಿಯಾಗಿ ಒತ್ತುವುದರಿಂದ ರಕ್ತಹೊರಸೋರುವುದು ಕಡಿಮೆಯಾಗುತ್ತದೆ. ಉಜ್ಜುವಿಕೆಯಿಂದ ಹೊರ ಬಂದ ರಕ್ತ ಬೇಗನೆ ಕರಗಿಹೋಗುತ್ತದೆ. ರಕ್ತದ ಹೀರುವಿಕೆ ತಡವಾದಲ್ಲಿ ಅದನ್ನು ಹೊರತೆಗೆದು ಬಿಗಿಯಾದ ಕಟ್ಟುಪಟ್ಟಿಯನ್ನು ಕಟ್ಟುವುದರಿಂದ ರಸಿಕೆಯ ಕೋಶ ಉಂಟಾಗುವುದನ್ನು ತಡೆಯಬಹುದು.
"https://kn.wikipedia.org/wiki/ಗಾಯ" ಇಂದ ಪಡೆಯಲ್ಪಟ್ಟಿದೆ