ಗಾತಿಕ್ ಕಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಪ್ರ.ಶ. 12ನೆಯ ಶತಮಾನದಿಂದ 15ನೆಯ ಶತಮಾನದವರೆಗೆ ಯುರೋಪಿನ ವಿವಿಧ ಭಾಗಗಳಲ್ಲಿ ಪ್...
 
No edit summary
 
೧ ನೇ ಸಾಲು:
{{Wikify}}
ಪ್ರ.ಶ. 12ನೆಯ ಶತಮಾನದಿಂದ 15ನೆಯ ಶತಮಾನದವರೆಗೆ ಯುರೋಪಿನ ವಿವಿಧ ಭಾಗಗಳಲ್ಲಿ ಪ್ರಸಿದ್ಧವಾಗಿದ್ದ ಕಲಾ ಸಂಪ್ರದಾಯ. ಜರ್ಮನಿಯ ಗಾತ್ ಎಂಬ ಬುಡಕಟ್ಟಿಗೆ ಸೇರಿದ ಜನ ರೋಮನ್ ಸಾಮ್ರಾಜ್ಯವನ್ನು ಗೆದ್ದು ರೋಮನರ ಅನೇಕ ಕಟ್ಟಡಗಳನ್ನೂ ಶಿಲ್ಪಗಳನ್ನೂ ನಾಶಮಾಡಿದರು. ಈ ಜನ ಅನಾಗರಿಕರೆಂದೂ ಅಭಿಜಾತ ರೋಮನ್ ಮತ್ತು ಗ್ರೀಕ್ ಸಂಪ್ರದಾಯಗಳನ್ನು ಅರಿಯದವ ರೆಂದೂ ಭಾವಿಸಿದ್ದ. ಕೆಲವರು ಈ ಕಾಲದಲ್ಲಿ ಬೆಳೆದುಬಂದ ಕಲೆಯನ್ನು ಗಾತಿಕ್ ಕಲೆ ಎಂದು ಕರೆದರು. ಒರಟರೂ ಅನಾಗರಿಕರೂ ಆದ ಜನಗಳ ಕಲೆಯೆಂಬ ತಾತ್ಸಾರ ಭಾವನೆಯಿಂದ ಈ ಪದ ಮೊದಲು ಬಳಕೆಗೆ ಬಂದಂತೆ ಕಾಣುತ್ತದೆ. ಕಾಲಕ್ರಮದಲ್ಲಿ ಈ ಕಲೆಯ ಅವಶೇಷಗಳ ಪುರ್ಣ ಅಧ್ಯಯನ ವಾದ ಮೇಲೆ ಈ ತಾತ್ಸಾರ ಮನೋಭಾವ ಮಾಯವಾಗಿ ಗಾತಿಕ್ ಕಲೆ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ ಯೆಂದೂ ಯುರೋಪಿನ ಕಲೆಗೆ ಇದರ ಕೊಡುಗೆ ಮಹತ್ತರವಾದು ದೆಂದೂ ಜನ ಅರಿತರು. ಗಾತಿಕ್ ಸಂಪ್ರದಾಯ ಮಧ್ಯ ಫ್ರಾನ್್ಸ ದೇಶದಲ್ಲಿ ಪ್ರ.ಶ. 12ನೆಯ ಶತಮಾನದಲ್ಲಿ ಪ್ರಾರಂಭವಾಗಿ 13, 14 ಮತ್ತು 15ನೆಯ ಶತಮಾನಗಳಲ್ಲಿ ಯುರೋಪಿನ ವಿವಿಧ ಭಾಗಗಳಿಗೆ ಹರಡಿತು. ಅನಂತರ ಪುನರುಜ್ಜೀವನ ಕಲೆ ಉಚ್ಛ್ರಾಯ ಸ್ಥಿತಿಗೆ ಬಂದ ಮೇಲೆ ಆ ಸಂಪ್ರದಾಯ ನಶಿಸಿ ಹೋಯಿತು.
 
ಪ್ರ.ಶ. 12ನೆಯ ಶತಮಾನದಿಂದ 15ನೆಯ ಶತಮಾನದವರೆಗೆ[[ಶತಮಾನ]]ದವರೆಗೆ ಯುರೋಪಿನ ವಿವಿಧ ಭಾಗಗಳಲ್ಲಿ ಪ್ರಸಿದ್ಧವಾಗಿದ್ದ ಕಲಾ ಸಂಪ್ರದಾಯ. ಜರ್ಮನಿಯ ಗಾತ್ ಎಂಬ ಬುಡಕಟ್ಟಿಗೆ ಸೇರಿದ ಜನ ರೋಮನ್ ಸಾಮ್ರಾಜ್ಯವನ್ನು ಗೆದ್ದು ರೋಮನರ ಅನೇಕ ಕಟ್ಟಡಗಳನ್ನೂ ಶಿಲ್ಪಗಳನ್ನೂ ನಾಶಮಾಡಿದರು. ಈ ಜನ ಅನಾಗರಿಕರೆಂದೂ ಅಭಿಜಾತ ರೋಮನ್ ಮತ್ತು ಗ್ರೀಕ್ ಸಂಪ್ರದಾಯಗಳನ್ನು ಅರಿಯದವ ರೆಂದೂ ಭಾವಿಸಿದ್ದ. ಕೆಲವರು ಈ ಕಾಲದಲ್ಲಿ ಬೆಳೆದುಬಂದ ಕಲೆಯನ್ನು ಗಾತಿಕ್ ಕಲೆ ಎಂದು ಕರೆದರು. ಒರಟರೂ ಅನಾಗರಿಕರೂ ಆದ ಜನಗಳ ಕಲೆಯೆಂಬ ತಾತ್ಸಾರ ಭಾವನೆಯಿಂದ ಈ ಪದ ಮೊದಲು ಬಳಕೆಗೆ ಬಂದಂತೆ ಕಾಣುತ್ತದೆ. ಕಾಲಕ್ರಮದಲ್ಲಿ ಈ ಕಲೆಯ ಅವಶೇಷಗಳ ಪುರ್ಣ ಅಧ್ಯಯನ ವಾದ ಮೇಲೆ ಈ ತಾತ್ಸಾರ ಮನೋಭಾವ ಮಾಯವಾಗಿ ಗಾತಿಕ್ ಕಲೆ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ ಯೆಂದೂ ಯುರೋಪಿನ ಕಲೆಗೆ ಇದರ ಕೊಡುಗೆ ಮಹತ್ತರವಾದು ದೆಂದೂ ಜನ ಅರಿತರು. ಗಾತಿಕ್ ಸಂಪ್ರದಾಯ ಮಧ್ಯ ಫ್ರಾನ್್ಸ ದೇಶದಲ್ಲಿ ಪ್ರ.ಶ. 12ನೆಯ ಶತಮಾನದಲ್ಲಿ ಪ್ರಾರಂಭವಾಗಿ 13, 14 ಮತ್ತು 15ನೆಯ ಶತಮಾನಗಳಲ್ಲಿ ಯುರೋಪಿನ ವಿವಿಧ ಭಾಗಗಳಿಗೆ ಹರಡಿತು. ಅನಂತರ ಪುನರುಜ್ಜೀವನ ಕಲೆ ಉಚ್ಛ್ರಾಯ ಸ್ಥಿತಿಗೆ ಬಂದ ಮೇಲೆ ಆ ಸಂಪ್ರದಾಯ ನಶಿಸಿ ಹೋಯಿತು.
 
ವಾಸ್ತು ವಿಭಾಗಕ್ಕೆ ಸೇರಿದಂತೆ ಈ ಕಲೆಯ ವೈಶಿಷ್ಟ್ಯಗಳು ಹೀಗಿವೆ. ಅಡ್ಡಡ್ಡಲಾಗಿದ್ದ ಕಟ್ಟಡಗಳು ಉದ್ದುದ್ದ ವಾಗಿಯೂ ಚೂಪಾಗಿಯೂ ಬೆಳೆದದ್ದು ಈ ಕಾಲದಲ್ಲಿ. ಉದ್ದನೆಯ ಮತ್ತು ತೆಳುವಾದ ಕಂಬಗಳ ಆಸರೆಯಿಂದ ಚೂಪಾದ ಕಮಾನುಗಳನ್ನು ತಯಾರಿಸಿ ರುವುದು ಇನ್ನೊಂದು ವೈಶಿಷ್ಟ್ಯ. ಮರದಿಂದ ಚಾವಣಿ ಗಳನ್ನು ಮಾಡುವ ತಂತ್ರಕ್ಕೆ ಬದಲಾಗಿ ಕಲ್ಲನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸಲು ಪ್ರಾರಂಭ ವಾದುದೂ ಈ ಕಾಲದಲ್ಲೇ. ಚೂಪಾದ ಗೋಪುರಗಳು ವಿಶೇಷವಾಗಿ ಬಳಕೆಗೆ ಬಂದುದ ರಿಂದ ಈ ಕಾಲದ ಕಟ್ಟಡಗಳಿಗೆ ಒಂದು ರೀತಿಯ ವಿಶಿಷ್ಟ ಸೌಂದರ್ಯ ಬಂತು. ಗಾತಿಕ್ ಕಲೆ ಅಭಿವೃದ್ಧಿಯಾದಂತೆ ಅಲಂಕರಣ ಕಾರ್ಯ ವಿಶೇಷವಾಗತೊಡಗಿತು. ರೋಮನೆಸ್ಕ ಕಲೆಗಿಂತ ಭಿನ್ನವಾದ ರೀತಿಯಲ್ಲಿ ಈ ಅಲಂಕರಣ ವಿನ್ಯಾಸ ವ್ಯಾಪಕವಾಗಿ ಬೆಳೆದು ಬಂತು. ಇದು ಎಷ್ಟೊಂದು ವಿಸ್ತಾರವಾಗಿ ಬೆಳೆಯಿತೆಂದರೆ, ಇದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವುದೇ ಕಷ್ಟವಾಯಿತು. ರೋಮನೆಸ್ಕ ಕಲೆಯ ವೃತ್ತಾಕಾರದ ಚಿಹ್ನೆಗಳ ಜೊತೆಗೆ ಜ್ಯಾಮಿತಿಯ ವಿವಿಧ ಚಿಹ್ನೆಗಳು ವಿಶೇಷವಾದುವು. ಇವುಗಳ ಜೊತೆಗೆ ಲತೆಗಳು, ಬಳ್ಳಿಗಳು, ಎಲೆಗಳು ಮತ್ತು ಹೂಗಳ ಅಲಂಕರಣ ವಿಶೇಷವಾದುವು. ಜೊತೆಯಲ್ಲಿಯೇ ವಿಚಿತ್ರವಾದ ಪ್ರಾಣಿಗಳ ಪಿಶಾಚಿಗಳ ಮತ್ತು ಪೌರಾಣಿಕ ಪ್ರಾಣಿಗಳ ಅಲಂಕಾರವೂ ಗೋಡೆಗಳ ಮೇಲೆ ಕಾಣಬಂದುವು. ಇವುಗಳಿಂದ ಗಾತಿಕ್ ಕಲೆಯ ಅಲಂಕಾರ ಒಂದು ವಿಚಿತ್ರ ರೀತಿಯದೆಂದು ಪ್ರಸಿದ್ಧವಾಯಿತು.
"https://kn.wikipedia.org/wiki/ಗಾತಿಕ್_ಕಲೆ" ಇಂದ ಪಡೆಯಲ್ಪಟ್ಟಿದೆ