ಎಲ್.ಆರ್.ಈಶ್ವರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
೨೭ ನೇ ಸಾಲು:
 
ಎಲ್. ಆರ್ ಈಶ್ವರಿ ಎಂದರೆ ತಕ್ಷಣ ನೆನಪಿಗೆ ಬರುವ ಹಾಡೆಂದರೆ ‘ಜೋಕೆ, ನಾನು ಬಳ್ಳಿಯ ಮಿಂಚು, ಕಣ್ಣು ಕತ್ತಿಯ ಅಂಚು’. ಎಲ್. ಆರ್. ಈಶ್ವರಿ ಅವರ ಉಚ್ಚಾರದಲ್ಲಿ ಈ ಗೀತೆ ನೀಡುವ ಸೊಬಗು ವಿಶಿಷ್ಟವಾದದ್ದು.
ಕೌಬಾಯ್ ಕುಳ್ಳ ಎಂಬ ಚಿತ್ರದಲ್ಲಿ ‘ಸಿಂಗಾಪುರಿಂದ ಬಂದೆ ಬಂಗಾರ ಹೊತ್ತು ತಂದೆ, ಸಂಗಾತಿ ನೀ ಇಲ್ಲಿ ಬಾ ಬಾ’ ಎಂಬಲ್ಲಿನ ತುಂಟಾಟದ ಹಾಡು ಆಲಿಸುವ ಕಿವಿಗಳಿಗೆ ಹುಟ್ಟಿಸುವ ಸಂತೋಷ ಅಪ್ರತಿಮವಾದದ್ದು. ‘ಸಿಟ್ಯಾಕೋ ಸಿಡುಕ್ಯಾಕೋ ನೆಲೆನನ ಜಾಣ’, ಇಟ್ಟಾಯ್ತೋ ನಿನಮೇಲೆನಿನ ಮೇಲೆ ನನ ಪ್ರಾಣ’, ‘ದೂರದಿಂದ ಬಂದಂತ ಸುಂದರಾಂಗ ಜಾಣ’, ‘ಬಾಜಿ ಕಟ್ಟಿ ನೋಡು ಬಾರೋ ಮೀಸೆ ಮಾವ’, ‘ನಮ್ಮೂರ್ ನಾಗ್‘ನಮ್ಮೂರನಾಗ ನಾನೊಬ್ನೆ ಜಾಣ’, ‘ಭಾಮ, ಭಾಮಾ ನೀನರಿಯೆ ಮನದ ಮರ್ಮ’, ‘ರಸಿಕ, ರಸಿಕ, ನೀ ಮೆಲ್ಲನೆ ಓಲಾಡು, ರಸದ ನಿಮಿಷ’, ‘ಸುಮ ಬಾಲೆಯ ಪ್ರೇಮದ ಸಿರಿಯೆ’, ‘ದೂರದಿಂದ ಬಂದವರೇ, ಬಾಗಿಲಲಿ ನಿಂದವರೆ, ಮಂದಿರವು ಚೆನ್ನಿದೆಯೇ ಆರಾಮವಾಗಿದೆಯೇ’, ‘ಅಯ್ಯಯ್ಯಯ್ಯೋ ಹಳ್ಳೀಮುಖ, ಯಾವಾಗ್ ಬಂದೆ ಬೆಂಗಳೂರ್ ಬಕ’, ‘ಆಶಾವಿಲಾಸಿ ಈ ರೂಪರಾಶಿ’, ‘ಮಾಡರ್ನ್ ಲೇಡಿಯ ನೋಡಿ ನೀವು ಕಣ್ ಕಣ್ ಬಿಡಬೇಡಿ’ ಹೀಗೆ ಅವರ ಹಾಡುಗಳು ಒಂದಕ್ಕಿಂತ ಒಂದು ಸಂಗೀತ ಪ್ರಿಯರನ್ನೂ ಬಹಳ ಹಲವು ದಶಕಗಳಿಂದ ಹಿಡಿದಿಟ್ಟಿದೆ. ಅಂತೆಯೇ ದಕ್ಷಿಣ ಭಾರತದ ಪ್ರೇಕ್ಷಕರಿಗೆಲ್ಲ ಮೋಡಿ ಮಾಡಿದ ಮರೋಚರಿತ್ರದ ‘ಭಲೆ ಭಲೇ ಮಗಾಡಿ ಓಯ್’, ತಮಿಳಿನ ಮನ್ಮಥ ಲೀಲೈ ಚಿತ್ರದ ‘ಹಲೋ ಮೈ ಡಿಯರ್ ರಾಂಗ್ ನಂಬರ್’ ಇವೆಲ್ಲ ಹುಟ್ಟಿಸಿದ ಜನಪ್ರೀತಿ ಅಸಾಧಾರಣವಾದದ್ದು. ಅವರ ದ್ವನಿಯಲ್ಲಿ ಮೂಡಿದ ‘ಆದಿ ದೇವ, ಆದಿ ಮೂಲ, ಆದಿ ಬ್ರಹ್ಮ ಜೋ ಜೋ, ಪರಮ ಪುರುಷ ಪರಬ್ರಹ್ಮ ಪುರುಷೋತ್ತಮ ಜೋ ಜೋ’ ಎಂಬ ಭಕ್ತಿಗೀತೆ ಕೂಡಾ ಜನಪ್ರಿಯವಾಗಿದೆ.
 
ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ದ್ವನಿ ಮೂಡಿಸಿದ ಎಲ್ ಆರ್ ಈಶ್ವರಿ ಹಾಡಿದ ಸಂಖ್ಯೆಗಳಿಗೆ ಲೆಖ್ಖವೇ ಇಲ್ಲ. ಅಷ್ಟೊಂದು ಹಾಡುಗಳು ಅವರ ದ್ವನಿಯಲ್ಲಿ ಮೂಡಿಬಂದಿವೆ. ಚಲನಚಿತ್ರಗಳಲ್ಲಿ ಮಾದಕ, ತುಂಟಾಟದ ಹಾಡುಗಳನ್ನು ಎಷ್ಟು ಹಾಡಿದ್ದಾರೋ ಅದಕ್ಕೆ ಸರಿಸಮವಾಗಿ ಭಕ್ತಿಗೀತೆಗಳನ್ನೂ ಹಾಡಿದ್ದಾರೆ. ಶೀಘ್ರಗತಿಯಲ್ಲಿ ಸಾಗುವ ಹಾಡುಗಳಿಗೆ ಅವರದ್ದು ಹೇಳಿ ಮಾಡಿಸಿದಂತಹ ಧ್ವನಿ ಎಂಬ ಅಭಿಪ್ರಾಯ ಚಿತ್ರರಂಗದಲ್ಲಿ ರೂಢಿಯಲ್ಲಿತ್ತು.
"https://kn.wikipedia.org/wiki/ಎಲ್.ಆರ್.ಈಶ್ವರಿ" ಇಂದ ಪಡೆಯಲ್ಪಟ್ಟಿದೆ