ಅಲ್ಲಾ ರಖಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
೩೦ ನೇ ಸಾಲು:
೧೯೩೬ರಿಂದಲೇ [[ಆಕಾಶವಾಣಿ]] [[ದೆಹಲಿ]] ಕೇಂದ್ರದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡತೊಡಗಿದ ಅವರು ೪೦ರ ದಶಕದಲ್ಲಿ ಸಿನಿಮಾ ರಂಗದಲ್ಲಿ ಅರೆ ಪಾಪ್ ಶೈಲಿಯ ಹಿಂದಿ ಚಿತ್ರಗಳ ಹಾಡುಗಳ ಸಂಯೋಜನೆ ಮತ್ತು ನಿರ್ವಹಣೆಗಳನ್ನು ನೆರವೇರಿಸುತ್ತ ನಡೆದರು. ಕೆಲವೇ ವರ್ಷಗಳಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಹಿಂದಿರುಗಿದ ಅವರು ರವಿ ಶಂಕರ್, [[ವಿಲಾಯತ್ ಖಾನ್]] ಅವರಂತಹ ಪ್ರಸಿದ್ಧರನ್ನೊಳಗೊಂಡು ಅಂದಿನ ಎಲ್ಲ ಪ್ರಸಿದ್ಧ ಸಂಗೀತಕಾರರ ಸಹ ವಾದ್ಯಕಾರರಾಗಿ ಅಪಾರ ಜನಮನ್ನಣೆ ಗಳಿಸಿದರು. ನಿರಂತರ ಹೊಸತನದ ಅನ್ವೇಶಕರಾದ ಅಲ್ಲಾ ರಖಾ ಅವರು ಬಡಿ ರಿಚ್ ಅವರೊಡಗೂಡಿ ವರ್ಲ್ಡ್ ಪೆಸಿಫಿಕ್ ಸಂಸ್ಥೆಗಾಗಿ “ರಿಚ್ ಅಲಾ ರಖಾ” ಎಂಬ ಆಲ್ಬಂ ಹೊರ ತಂದರು.
==ತಂದೆಗೆ ತಕ್ಕ ಮಗ==
ಅಲ್ಲಾ ರಖಾ ಅವರ ಸ್ವಯಂ ಸಾಧನೆಗಳೊಂದಿಗೆ ಅವರ ಮಹತ್ವದ ಕೊಡುಗೆಗಳಲ್ಲಿ ಪ್ರಮುಖವಾದದ್ದು, ತಮ್ಮ ಪುತ್ರ [[ಜಾಕಿರ್ ಹುಸೇನ್ (ಸಂಗೀತಗಾರ)| ಜಕೀರ್ ಹುಸ್ಸೇನ್]] ಅವರನ್ನು ಶಾಸ್ತ್ರೀಯ ಮತ್ತು ಜನಪ್ರಿಯ ಸಂಗೀತಗಳೆರಡರಲ್ಲೂ ಮುಂದುವರೆಯುವುದಕ್ಕೆ ಪ್ರೇರಕರಾಗಿದ್ದು. ೧೯೯೯ರ ವರ್ಷದಲ್ಲಿ ಜಕೀರ್ ಹುಸ್ಸೇನ್ ತಮಗೆ ಸಂದ ರಾಷ್ಟ್ರೀಯ ಪರಂಪರೆಯ ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ಹೇಳಿದ ಮಾತು, “ನಮ್ಮ ತಂದೆಯವರು ನನಗಗೇನೇನನ್ನುನನಗೇನೇನನ್ನು ನೀಡಿದ್ದಾರೋ ಅವೆಲ್ಲಕ್ಕೂ ಹಿಂದಿರುಗಿ ನೀಡಿದಂತ ಭಾವ ಹುಟ್ಟಿಸಿದಂತಹ ಅವಿಸ್ಮರಣೀಯ ಸಂದರ್ಭ ಇದಾಗಿದೆ”. ಒಬ್ಬ ಶ್ರೇಷ್ಠ ಸಾಧಕನಿಗೆ ತಾನು ಬೆಳೆದ ಕಲೆಯಲ್ಲಿ ತನ್ನ ಮಗ ವಿಶ್ವವ್ಯಾಪಿಯಾಗುತ್ತಿದ್ದಾನೆ ಎಂಬುದಕ್ಕಿಂತ ಶ್ರೇಷ್ಠವಾದ ಉಡುಗರೆಯಾದರೂ ಬೇರೇನಿದೆಯಲ್ಲವೇ.... ಅಲ್ಲಾ ರಖಾ ಅವರ ಇನ್ನಿತರ ಶಿಷ್ಯರಲ್ಲಿ ಅವರ ಮತ್ತೊಬ್ಬ ಪುತ್ರ ಫಜಲ್ ಖುರೇಷಿ, ಪ್ರಸಿದ್ಧ ಡ್ರಮ್ಸ್ ಪಟು ಮಿಕ್ಕಿ ಹಾರ್ಟ್ ಮುಂತಾದವರು ಸೇರುತ್ತಾರೆ.
 
==ಅಮರ ಸಂಗೀತ ಚೇತನ==
ಅಲ್ಲಾ ರಖಾ ಅವರು ಫೆಬ್ರವರಿ ೩, ೨೦೦೦ ವರ್ಷದಲ್ಲಿ ಈ ಲೋಕವನ್ನಗಲಿದರು. ಅವರ ತಬಲಾ ನಿನಾದ ಮಾತ್ರ ಹಿತವಾದ ಮಳೆ ತುಂತುರಿನಂತೆ ನಮ್ಮ ಮನಗಳನ್ನು ಮೀಟುತ್ತಲೇ ಇವೆ.
"https://kn.wikipedia.org/wiki/ಅಲ್ಲಾ_ರಖಾ" ಇಂದ ಪಡೆಯಲ್ಪಟ್ಟಿದೆ