ಪ್ರಾಣ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೧ ನೇ ಸಾಲು:
೧೯೬೭ರ ಮನೋಜ್ ಕುಮಾರ್ ಅವರ ಪ್ರಸಿದ್ಧ ‘ಉಪಕಾರ್’ ಚಿತ್ರದಲ್ಲಿ ‘ಮಾಲಂಗ್ ಚಾಚಾ’ಪಾತ್ರಧಾರಿಯಾಗಿ ಪ್ರಾಣ್ ಅವರಿಗೆ ಸಕಾರಾತ್ಮಕ ಪಾತ್ರ ದೊರಕಿದುದರ ಜೊತೆ ಕಲ್ಯಾಣ್ ಜಿ ಆನಂದಜಿ ಅವರ ಪ್ರಸಿದ್ಧ ಗೀತೆ ‘ಕಸ್ಮೆ ವಾದೇ ಪ್ಯಾರ್ ವಫಾ’ದಂತಹ ಹಾಡಿನ ಅಭಿನಯ ಕೂಡಾ ಮೂಡಿಬಂತು. ಮನೋಜ್ ಕುಮಾರ್ ಅವರ ಇನ್ನಿತರ ಚಿತ್ರಗಳಾದ ಶಹೀದ್, ಪೂರಬ್ ಔರ್ ಪಶ್ಚಿಮ್, ಬೇ-ಇಮಾನ್, ಸನ್ಯಾಸಿ, ದಸ್ ನಂಬರಿ, ಪತ್ತರ್ ಕೆ ಸನಮ್ ಮುಂತಾದ ಚಿತ್ರಗಳಲ್ಲೂ ಪ್ರಾಣ್ ಅವರಿಗೆ ಪ್ರಮುಖ ಪಾತ್ರಗಳಿದ್ದವು. 1960ರ ದಶಕದಲ್ಲಿ ಪ್ರಾಣ್ ಅವರು ಕೆಲವೊಂದು ಬೆಂಗಾಲಿ ಚಿತ್ರಗಳಲ್ಲೂ ಅಭಿನಯಿಸಿದ್ದರು.
 
೧೯೬೭ರಿಂದ ೧೯೯೭ರ ಅವಧಿಯಲ್ಲಿ ಪ್ರಾಣ್ ಅವರು ‘ಹಂಜೋಲಿ’, ‘ಪರಿಚಯ್’, ‘ಅಂಕೋಂ ಅಂಕೋಂ ಮೇ’, ‘ಜೀಲ್ ಕೆ ಉಸ್ ಪಾರ್’, ‘ಜಿಂದಾ ದಿಲ್ ಜ್ಹೆಹ್ರಿಲಾ ಇನ್ಸಾನ್’, ‘ಹತ್ಯಾರಾ’, ‘ಚೋರ್ ಹೋ ತೋ ಐಸಾ’, ‘ದಾನ್ ದೌಲತ್’, ‘ಜಾನ್ವಾರ್’, ‘ರಾಜ್’, ‘ತಿಲಕ್’, ‘ಬೆವಫಾಯಿ’, ‘ಇಮಾನ್ದಾರ್’, ‘ಸನಮ್ ಬೇವಫಾ’, ‘1942-ಎ ಲವ್ ಸ್ಟೋರಿ’, ‘ತೇರೇ ಮೇರೇ ಸಪ್ನೆ’, ‘ಲವ್ ಕುಶ್’ ಮುಂತಾದ ಹಲವಾರು ಚಿತ್ರಗಳಲ್ಲಿನ[[ಚಿತ್ರ]]ಗಳಲ್ಲಿನ ಉತ್ತಮ ಪೋಷಕ ಪಾತ್ರಗಳಲ್ಲಿ ಪ್ರಸಿದ್ಧಿ ಪಡೆದಿದ್ದರು. ಶಶಿಕಫೂರ್ ಅವರೊಡನೆ ಏಳು ಜನಪ್ರಿಯ ಚಿತ್ರಗಳಾದ ‘ಬಿರದಾರಿ’, ‘ಚೋರಿ ಮೇರಾ ಕಾಮ್’, ‘ಪ್ಹಾನ್ಸಿ’, ‘ಶಂಕರ್ ದಾದ’. ‘ಚಕ್ಕರ್ ಪೆ ಚಕ್ಕರ್’, ‘ರಾಹು ಕೇತು’, ‘ಮಾನ ಗಯೇ ಉಸ್ತಾದ್’ ಮತ್ತು ಎರಡು ಸೋತ ಚಿತ್ರಗಳಾದ ‘ಅಪ್ನಾ ಖೂನ್’ ಮತ್ತು ‘ದೋ ಮುಸಾಫಿರ್’ ಚಿತ್ರಗಳಲ್ಲಿ ಪ್ರಾಣ್ ಅವರಿಗೆ ಪ್ರಮುಖ ಪಾತ್ರವಿತ್ತು.
 
೧೯೬೯ರ ನಂತರದಲ್ಲಿ ಪ್ರಾಣ್ ಅವರಿಗೆ ‘ನನ್ಹಾ ಫ್ಹರಿಶ್ತಾ’, ‘ಧರ್ಮ’, ‘ಏಕ್ ಕುನ್ವರಿ ಏಕ್ ಕುನ್ವರ’, ‘ಜಂಗಲ್ ಮೇ ಮಂಗಲ್’, ‘ರಾಹು ಕೇತು’ ಮುಂತಾದ ಚಿತ್ರಗಳಲ್ಲಿ ಪ್ರಧಾನ ಪಾತ್ರಗಳು ದೊರೆತವು. ೧೯೫೧ರ ವರ್ಷದ ‘ಆಫ್ಸಾನಾ’ದಿಂದ ಮೊದಲ್ಗೊಂಡು ೧೯೮೦ರ ದಶಕದವರೆಗೆ ಪ್ರಾಣ್ ಅವರು ಅಶೋಕ್ ಕುಮಾರ್ ಅವರೊಡಗೂಡಿ ಅಭಿನಯಿಸಿದ ಸಂದರ್ಭದಲ್ಲೆಲ್ಲಾ ಅವರ ಸ್ನೇಹಿತನಾಗಿಯೋ ಇಲ್ಲವೇ ಅವರ ಪ್ರಧಾನ ಪಾತ್ರಕ್ಕೆ ಪೂರಕವಾದಂತಹ ಪಾತ್ರಗಳಲ್ಲೇ ನಟಿಸಿದ್ದರೆಂಬುದು ಒಂದು ವಿಶೇಷ. ಈ ಈರ್ವರೂ ಜೀವನ ಮತ್ತು ವೃತ್ತಿಗಳೆರಡರಲ್ಲೂ ಆಪ್ತ ಸ್ನೇಹಿತರಾಗಿದ್ದು ಒಟ್ಟು ೨೭ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಅಂತದ್ದೇ ಸ್ನೇಹವನ್ನು ಕಿಶೋರ್ ಕುಮಾರರೊಂದಿಗೆ ಸಹಾ ಪ್ರಾಣ್ ಹೊಂದಿದ್ದರು. ಪ್ರಾಣ್ ಅವರ ಮೇಲೆ ಚಿತ್ರಣಗೊಂಡ ಕಿಶೋರ್ ಕುಮಾರ್ ಮತ್ತು ಮಹೇಂದ್ರ ಕುಮಾರ್ ಅವರು ಹಾಡಿದ ಚಿತ್ರಗಳೆಲ್ಲಾ ಜನಪ್ರಿಯಗೊಂಡವು.
"https://kn.wikipedia.org/wiki/ಪ್ರಾಣ್_(ನಟ)" ಇಂದ ಪಡೆಯಲ್ಪಟ್ಟಿದೆ