ಈರುಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೫೮ ನೇ ಸಾಲು:
'''ಈರುಳ್ಳಿ'''ಯು (''ಆಲಿಯಮ್ ಕೆಪಾ'' ಜಾತಿ [[ಆಲಿಯಮ್]]) ಒಂದು ತರಕಾರಿಯಾಗಿ ಬಳಸಲಾಗುವ ಬೆಳೆ. ಅದು ಸಸ್ಯದ ನೆಲದಡಿಯಲ್ಲಿ ಆಹಾರ ಸಂಗ್ರಹಕ್ಕಾಗಿ ಬಳಕೆಯಾಗುವ ಒಂದು ಲಂಬವಾದ ಕುಡಿಯಾಗಿ ಬೆಳೆಯುತ್ತದೆ, ಹಾಗಾಗಿ ಇದನ್ನು ಒಂದು [[ಗೆಡ್ಡೆ]]ಯೆಂದು ತಪ್ಪಾಗಿ ತಿಳಿಯಬಹುದು, ಆದರೆ ಇದು ಗೆಡ್ಡೆಯಲ್ಲ. ''ಆಲಿಯಮ್ ಕೆಪಾ'' ಸಾಗುವಳಿಯಲ್ಲಿ ಮಾತ್ರ ಪರಿಚಿತವಾಗಿದೆ ಆದರೆ ಸಂಬಂಧಿತ ಕಾಡು ಜಾತಿಗಳು ಮಧ್ಯ ಏಷ್ಯಾದಲ್ಲಿ ಕಾಣುತ್ತವೆ. ಅತ್ಯಂತ ಹಳೆಯ [[ತರಕಾರಿ]]ಗಳ ಪೈಕಿ ಒಂದಾದ ಈರುಳ್ಳಿಗಳು, ಬಹುತೇಕ ವಿಶ್ವದ ಎಲ್ಲ ಸಂಸ್ಕೃತಿಗಳಿಗೆ ವ್ಯಾಪಿಸುವ ಹೆಚ್ಚಿನ ಸಂಖ್ಯೆಯ ಪಾಕಗಳು ಮತ್ತು ಅಡುಗೆಗಳಲ್ಲಿ ಕಾಣುತ್ತವೆ.ಇದರಲ್ಲಿ ೩೦೦ ಪ್ರಭೇದಗಳಿವೆ.ಕೆಲವು ಕೆಲವೇ ತಿಂಗಳಲ್ಲಿ ಬೆಳೆದು ಮುದುಡಿ ಹೋಗುವ ಗಿಡಗಳಾದರೆ ಮತ್ತೆ ಕೆಲವು ಬಹುವಾಷಿಕ [[ಸಸ್ಯ]]ಗಳು. ಈರುಳ್ಳಿಯ ಗೆಡ್ಡೆಯಲ್ಲಿ ಅನೇಕ ಸಾವಯವ ಗಂಧಕ ಸಂಯುಕ್ತ ವಸ್ತುಗಲಿವೆ. ಇವು ಸಂಕೀರ್ಣ ರೂಪದಿಂದ ಸರಳ ರೂಪಕ್ಕೆ ಬದಲಾಗುವಾಗ ಈರುಳ್ಳಿಯ ಪರಿಮಳವು ಹೊರಹೊಮೂಮ್ಮುತ್ತದೆ. ಈರುಳ್ಳಿಯನ್ನು ಶೀತಲೀಕರಿಸಿದಾಗ ಅಥವಾ ಹುರಿದಾಗ ಅದರ ರಾಸಾಯನಿಕ ರಚನೆ ಬದಲಾಗುತ್ತದೆ. ಅದು ಹಸಿ ಇದ್ದಗ ಕಿಣ್ವಗಳ ಪ್ರಕ್ರಿಯೆಯನ್ನು ಮಾಡುತ್ತಿದ್ದು ನಿಂತು ಹೋಗುತ್ತದೆ. ಈ ಕಾರಣದಿಂದಲೇ ಹುರಿದಾಗ ಅಥವಾ ಬೇಯಿಸಿದಾಗ ಈರುಳ್ಳಿಯ ರುಚಿ ಬೇರೆಯಾಹಿರುತ್ತೆ. ಈರುಳ್ಳಿಯಲ್ಲಿರುವ ಕ್ವೆಸ್ರೆಟಿನ್ ಎನ್ನುವ ರಾಸಾಯ್ನಿಕವು ಒಂದು ಪ್ರಬಲ ಯ್ಯಂಟಿ ಆಕ್ಸಿಡೆಂಟ್ ಆಗಿದ್ದು, ನಮ್ಮ ಆರೋಗ್ಯ ರಕ್ಷಣೆಯನ್ನು ಮಡುತ್ತದೆ.
==ಲಕ್ಷಣಗಳು==
ಈರುಳ್ಳಿ ಗಿಡ ೨-೩ ಅಡಿಯಷ್ಟು ಎತ್ತರಕ್ಕೆ ಬೆಳೆಯುತ್ತದೆ.ಎಲೆಗಳು ಉದ್ದಕ್ಕಿರುತ್ತವೆ. ಒಳಗಡೆ ಟೊಳ್ಳಾಗಿರುತ್ತವೆ. ಕೊಳವೆಯಾಕಾರದಲ್ಲಿರುತ್ತವೆ. ಹಸಿರು ಬಣ್ಣದಲ್ಲಿ ಎಲೆಯ ಬಿಳಿ ಬಣ್ಣದ ಹೂವು ಇರುತ್ತದೆ.ಹೂವು ಫಲಿತವಾಗಿ ಹಣ್ಣಾದಗ ಒಳಗೆ ಮೂರು ಕೋಶಗಳಲ್ಲಿ ತಲಾ ಒಂದರಂತೆ ಬೀಜಗಳಿರುತ್ತವೆ.ಗೆಡ್ಡೆಗಳು ಬಲಿತಂತೆ ಉದ್ದನೆಯ ಹೂ ತೆನೆ ಮೂಡುತ್ತದೆ. ಹೂಚೆಂಡು ಮತ್ತು ಹೂಗಳ ಬಣ್ಣ ಬಿಳಿಹಸಿರು. ಬೀಜಗಳು ಒರಟಾಗಿದ್ದು ಕಪ್ಪು ಬಣ್ಣದಲಿರುತ್ತದೆ. ಎಲೆಗಳು ಬಲಿತಂತೆ ಹಳದಿ ಬಣ್ಣ ತಾಳುತ್ತವೆ. ನಂತರ ಮುರಿದು ಬೀಳುತ್ತವೆ. ಆದರೆ ಒಣಗಿದ ನಂತರವೂ ಅವು ಗಿಡಗಳಿಗೆ ಅಂಟಿಕೊಂಡಿರುತ್ತವೆ.ಸಾಮಾನ್ಯವಾಗಿ ಕೆಂಪು ಬಣ್ಣದ ಈರುಳ್ಳಿಗಳು ಎಲ್ಲ ಕಡೆ ಕಾಣಸಿಗುತ್ತವೆ. ಬಿಳಿ ಬಣ್ಣದ್ಬಣ್ಣದ ಈರುಳ್ಳಿಯೂ ಸಾಮಾನ್ಯವಾಗಿದೆ. ಸ್ವಲ್ಪ ಕಡಮೆ ಪ್ರಮಾಣದಲ್ಲಿ ಹಳದಿ ಬಣ್ಣದ ಈರುಳ್ಳಿಯೂ ಸಿಗುತ್ತದೆ.ಗೆಡ್ಡೆಗಳ ಗಾತ್ರದಲ್ಲೂ ವೈವಿಧ್ಯವಿದೆ. ಸಣ್ಣ ಗಾತ್ರದ, ಉದ್ದ ಗಾತ್ರದ,ಗುಂಡಗಿನ, ಗೋಲಾಕಾರದ, ದೊಡ್ಡಗಾತ್ರದ ಈರುಳ್ಳಿಗಳಿವೆ. ಗೊಂಚಲುಗೊಂಚಲಾಗಿ ಬಿಡುವ ಈರುಳ್ಳಿಗಳೂ ಇವೆ. ಬಿಡಿಬಿಡಿಯಾಗಿ ಬಿಡುವ ಈರುಳ್ಳಿಗಳು ಇವೆ. ಕೆಲವು ಈರುಳ್ಳಿ ರುಚಿಯಲ್ಲಿ ಬಹಳ ಖಾರವಾಗಿರುತ್ತವೆ. ಕೆಲವು ಈರುಳ್ಳಿಗಳ ರುಚಿ ಸಾಧಾರಣ ಮಟ್ಟದ ಖಾರ ಇರುತ್ತವೆ. ನಾವು ನೋಡುವ ಸಾಧಾರಣ ಬಗೆಯ ಈರುಳ್ಳಿಗಳಲ್ಲದೆ ಇನ್ನೂ ಅನೇಕ ಬಗೆಯ ಈರುಳ್ಳಿಗಳನ್ನು ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಕೃಷಿ ಮಾಡುತ್ತಿದ್ದಾರೆ.
ಈರುಳ್ಳಿಯ ಗೆಡ್ಡೆ, ಎಲೆ,ಹೂವು ಮತ್ತು ಬೀಜ -ಇವಿಷ್ಟನ್ನು ನಮ್ಮ ದೇಶದಲ್ಲಿ ಬೇರೆ ಬೇರೆ ಬಗೆಯ ಅಡುಗೆಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇವು ಕೇವಲ ಅಡುಗೆ ತಯಾರಿಕೆಯಲ್ಲಷ್ಟೆ ಅಲ್ಲದೇ ಹಲವು ಬಗೆಯ ದೈಹಿಕ ಸಮಸ್ಯೆಗಳ ಪರಿಹಾರಕ್ಕೂ ಬಳಕೆಯಾಗುತ್ತಿವೆ. ಈರುಳ್ಳಿಯ ಮೂಲಸ್ಥಳದ ಬಗ್ಗೆ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಹೆಚ್ಚಿನವರು ಇದು [[ಏಷ್ಯಾ]]ದ ಒಂದು ಮೂಲಸಸ್ಯವೆಂದು ಹೇಳುತ್ತಾರೆ. ಮತ್ತೆ ಕೆಲವು ವಿಜ್ಞಾನಿಗಳ ಪ್ರಕಾರ ಅಫಘಾನಿಸ್ತಾನ, ರಷ್ಯಾದ [[ತಾಜಕೀಸ್ಥಾನ]], [[ಉಜ್ಬೇಕಿಸ್ಥಾನ]] ಈರುಳ್ಳಿಯ ಮೂಲಸ್ಥಳಗಳಾಗಿವೆ.ಇದೊಂದು ಮೂಲಿಕಾ ಸಸ್ಯ. ಗೆಡ್ಡೆಗಳಿಗಾದರೆ ಏಕವಾರ್ಷಿಕ ಬೆಳೆ. ಬೀಜೋತ್ಪಾದನೆಗಾದರೆ ಎರಡು ವರ್ಷದ ಬೆಳೆ.
ಇವೆಲ್ಲವೂ ಈರುಳ್ಳಿ ಕುಟುಂಬದ ಸದಸ್ಯರೇ
"https://kn.wikipedia.org/wiki/ಈರುಳ್ಳಿ" ಇಂದ ಪಡೆಯಲ್ಪಟ್ಟಿದೆ