ಪಾರಿಜಾತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೫ ನೇ ಸಾಲು:
ರಾತ್ರಿಯ ಹೊತ್ತೇ ಪಾರಿಜಾತದ ಹೂಗಳು ಅರಳಿ ಸುಗಂಧವನ್ನು ಹೊರಸೂಸುವುದರಿಂದ, [[ಟ್ರೀ ಆಫ್ ಸ್ಯಾಡ್ನೆಸ್]], ಎನ್ನುವವರೂ ಇದ್ದಾರೆ.
==ಪಾರಿಜಾತ ಹೂವಿನ ವೃತ್ತಾಂತ==
ಪಾರಿಜಾತವೆಂಬ ಹೆಸರು ಬರಲು ಕಾರಣವಿದೆ. ಇದರಬಗ್ಗೆ ಒಂದು ಸುಂದರ ಕಥೆಯ ಪ್ರಕಾರ, ಪಾರಿಜಾತವೆಂಬ ಹೆಸರಿನ ರಾಜಕುವರಿಯೊಬ್ಬಳು, ಸೂರ್ಯನನ್ನು ಪ್ರೀತಿಸಿದಳಂತೆ. ಸೂರ್ಯ ಸ್ವಲ್ಪಸಮಯದಲ್ಲೇ ಅವಳನ್ನು ತೊರೆದುಬಿಟ್ಟ. ಪ್ರಿಯಕರನ ವಿರಹವನ್ನು ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಳಂತೆ. ಅವಳ ದೇಹವನ್ನು ಸುಟ್ಟಬೂದಿಯಿಂದ ಪಾರಿಜಾತದ ಗಿಡವು ಹುಟ್ಟಿತಂತೆ. ಆದ್ದರಿಂದಲೇ ಸೂರ್ಯ ಭಗವಾನನ ಪ್ರಖರ ಕಿರಣಗಳನ್ನು ಇದು ತಡೆದುಕೊಳ್ಳಲಾರದು. ಪಾರಿಜಾತ ಅದಕ್ಕಾಗಿಯೇ ಸೂರ್ಯಕಿರಣಗಳು ಮೂಡುವಮೊದಲೇ ಹೂ ಉದುರಿಸಿತ್ತವೆ. ಇಂತಹ ನೋವಿನ ಕಥೆಯಿಂದಾಗಿ [[ಸೊರಗಿದ ಮರ]] ವೆಂಬ ಹೆಸರು ಬಂದಿದೆ. ರಾತ್ರಿಅರಳುವಹೂವಾದ್ದರಿಂದ [[ನೈಟ್ ಜ್ಯಾಸ್ಮಿನ್,]] ಎನ್ನುವ ಹೆಸರೂ ಇದಕ್ಕೆ ಅನ್ವಯಿಸುತ್ತದೆ. ಸಂಸ್ಕೃತ ಕನ್ನಡಭಾಷೆಗಳಲ್ಲಿ ಇದರ ಹೆಸರು, ಪಾರಿಜಾತವೇ. ಆದರೆ ಮರಾಠಿಭಾಷೆಯಲ್ಲಿ ಇದನ್ನು [[ಪಾರಿಜಾತಕ್]], ಎಂದು ಕರೆಯುವ ವಾಡಿಕೆಯಿದೆ.
 
==ಪಾರಿಜಾತದ ಮರದ ವರ್ಣನೆ==
ಇದು ಮಧ್ಯಮ ಗಾತ್ರದ ಹೊದರು. ಅಥವ ಚಿಕ್ಕಮರವೆಂದು ಹೇಳಹಹುದು. ಪಾರಿಜಾತದ ಹೂಗಳನ್ನು ಮಲ್ಲಿಗೆ ಹೂವಿಗೆ ಹೋಲಿಸಬಹುದು. ಆದರೆ ಸುವಸನೆಯಲ್ಲಿ ಇವು ಬಹಳ ನಾಜೂಕು. ಗೊಂಚಲಿನ ರೂಪದಲ್ಲಿ ಅರಳುತ್ತವೆ. ೫ ರಿಂದ ೮ ದಳಗಳ ಬಿಳಿಹೂವಿಗೆ, ಹವಳಗೆಂಪಿನನಾಳ ಆಕರ್ಷಕವಾಗಿ ಜೋಡಿಸಲಾಗಿದೆ. ಮನಕ್ಕೆ ಮುದಕೊಡುವ ಹಿತ-ಮಿತವಾದ ಸುಗಂಧ ಪಾರಿಜಾತದ ಕೆಲವುವಿಶೇಷಶತೆಗಳಲ್ಲೊಂದು. ಕೋಮಲವಾದ ಹೂಗಳನ್ನು ಮುಟ್ಟಿದರೆ ಗಿಡದಿಂದ ಕಳಚಿಕೊಳ್ಳುವ ಸಾಧ್ಯತೆಗಳಿವೆ. ಜುಲೈ ತಿಂಗಳಿನಿಂದ ನವೆಂಬರ್ ಮಾಸದವರೆಗೆ ದಂಡಿಯಾಗಿ ಹೂ ಸುರಿಸುತ್ತವೆ. ಸೂರ್ಯ ಮುಳುಗಿದಮೇಲೆ ಅರಳ್ದಿದ ಹೂವುಗಳು, ರಾಶ್ತ್ರಿಯೇ ಉದುರಿ, ಬೆಳಿಗ್ಯೆ ಗಿಡದ ಕೆಳಭಗದಲ್ಲಿ, ಹೂವಿನ ಹಾಸಿಗೆಯಂತೆ ಕಾಣಿಸುತ್ತವೆ. ಈ ಹೂವುಗಳನ್ನು ಆಯ್ದು ಮನೆಯಲ್ಲಿಟ್ಟರೆ, ಜೇನಿನಂತಹ ಪರಿಮಳದ ಅನುಭವವಾಗುತ್ತದೆ. ಇದು ಎಲೆ ಉದುರಿಸುವ ಮರ. ಪಾರಿಜಾತದ ಹೂವಿನ ಕಾಲಮುಗಿದಮೇಲೆ ಕೊಂಬೆಯನ್ನು ಕತ್ತರಿಸಬೇಕು.
"https://kn.wikipedia.org/wiki/ಪಾರಿಜಾತ" ಇಂದ ಪಡೆಯಲ್ಪಟ್ಟಿದೆ