ಮೆಣಸಿನಕಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫ ನೇ ಸಾಲು:
ಮೆಣಸಿನಕಾಯಿ ಬೆಳೆಗೆ ಸುಮಾರು ೧೦ರಿಂದ ೩೦ ಸೆ.ಉಷ್ಣಾಂಶ ಅಗತ್ಯವಿದೆ. ಇದರ ಬೆಳವಣಿಗೆಗೆ ಸರಾಸರಿ ೬೦ರಿಂದ ೧೨೫ ಸೆ.ಮೀ ಮಳೆ ಸಾಕಾಗುತ್ತದೆ.ಈ ಬೆಳೆಗೆ ಅತಿ ಶುಷ್ಕ ಮತ್ತು ಅತಿ ತೇವ ಪರಿಸ್ಥಿಗಳೆರಡೂ ಮಾರಕ. ಕಪ್ಪು,ಮೆಕ್ಕಲು ಹಾಗೂ ಮರಳು ಮಿಶ್ರಿತ ಮೆಕ್ಕಲು ಮಣ್ಣು ಮೆಣಸಿನಕಾಯಿ ಬೆಳೆಗೆ ಹೆಚ್ಚು ಸೂಕ್ತ. ಇದು ಚಳಿಗಾಲದ ಬೆಳೆಯಾಗಿದ್ದು, ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಬಿತ್ತನೆ ಮಾಡಿ ಜೂನ್-ಜುಲೈನಲ್ಲಿ ಫಸಲು ಪಡೆಯಲಾಗುತ್ತದೆ. ಹಸಿರು ಮೆಣಸಿನಕಾಯಿಯನ್ನೇ ಬಳಸಲಾಗುತ್ತದಾದರೂ,ಬಲಿತ ಕೆಂಪು ಕಾಯಿಗಳನ್ನು ಒಣಗಿಸಲಾಗುತ್ತದೆ. ನಂತರ ಪುಡಿ ಮಾಡಿ ಬಳಸಲಾಗುತ್ತದೆ.
==ಹಂಚಿಕೆ ಮತ್ತು ಉತ್ಪಾದನೆ==
[[ಭಾರತ]] [[ಪ್ರಪಂಚದ|ಪ್ರಪಂಚ]] ಒಟ್ಟು ಉತ್ಪಾದನೆಯ ಶೇ.50ರಷ್ಟು ಮೆಣಸಿನಕಾಯಿ ಉತ್ಪಾದಿಸುತ್ತದೆ. [[ಆಂಧ್ರಪ್ರದೇಶ]],[[ಮಹಾರಾಷ್ಟ್ರ]],[[ಕರ್ನಾಟಕ]],[[ಮಧ್ಯಪ್ರದೇಶ]] ಮತ್ತು [[ತಮಿಳುನಾಡು]] ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಭಾರತದಲ್ಲಿ ವಾರ್ಷಿಕ 1325.3ಸಾವಿರ ಟನ್ ಮೆಣಸಿನಕಾಯಿ ಉತ್ಪಾದಿಸಲಾಗುತ್ತದೆ.
''[[ಆಂಧ್ರಪ್ರದೇಶ]]'':ದೇಶದಲ್ಲಿ ಅತಿ ಹೆಚ್ಚು ಮೆಣಸಿನಕಾಯಿ ಉತ್ಪಾದಿಸುವ ರಾಜ್ಯ.ಮೆಣಸಿನಕಾಯಿ ಬೆಳೆಯುವ ಒಟ್ಟು ಕ್ಷೇತ್ರದ ಶೇ.26.4ರಷ್ಟನ್ನು ಒಳಗೊಂಡಿದ್ದು,ದೇಶದ ಒಟ್ಟು ಉತ್ಪಾದನೆಯ ಶೇ.57.8ರಷ್ಟು ಪಾಲು ಹೊಂದಿದೆ.
[[ಕರ್ನಾಟಕ]]: ಭಾರತದ ಎರಡನೆಯ ಅತಿಮುಖ್ಯ ಮೆಣಸಿನಕಾಯಿ ಉತ್ಪಾದಕ ರಾಜ್ಯ.ಮೆಣಸಿನಕಾಯಿ ಬೆಳೆಯುವ ದೇಶದ ಒಟ್ಟು ಕ್ಷೇತ್ರ ಶೇ.೧೭ರಷ್ಟನ್ನು ಹೊಂದಿದ್ದು,ಒಟ್ಟು ಉತ್ಪಾದನೆಯ ಶೇ.೧೨.೪ರಷ್ಟು ಪಾಲು ಹೊಂದಿದೆ. ಉತ್ತರ ಹಾಗೂ ಅರೆಮಲೆನಾಡಿನ ಜಿಲ್ಲೆಗಳು ಇದರ ಉತ್ಪಾದನೆಗೆ ಹೆಸರಾಗಿವೆ.ಧಾರವಾಡ ಜಿಲ್ಲೆಯ ಬ್ಯಾಡಗಿ ತಾಲೂಕು ಮೆಣಸಿನಕಾಯಿ ಬೆಳೆಗೆ ಪ್ರಸಿದ್ದಿ ಪಡೆದಿದೆ.
ರಪ್ತು:ಭಾರತ ಪ್ರಪಂಚದಲ್ಲಿ ಅತಿಹೆಚ್ಚು ಮೆಣಸಿನಕಾಯಿ ಉತ್ಪಾದಿಸುವುದುಮಾತ್ರವಲ್ಲದೇ ಇದರ ರಫ್ತಿನಲ್ಲಿಯೂ ಮೊದಲ ಸ್ಥಾನದಲ್ಲಿದೆ.ವಿವಿಧ ಪ್ರಮಾಣದ ಖಾರ ಹೊಂದಿರುವ ಮೆಣಸಿನಕಾಯಿಯನ್ನು ಅಧಿಕ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ.ಮೆಣಸಿನಕಾಯಿ ಪುಡಿಯನ್ನೂ ರಫ್ತು ಮಾಡಲಾಗುತ್ತದೆ.ಶ್ರೀಲಂಕ[[ಶ್ರೀಲಂಕಾ]],[[ಬಾಂಗ್ಲಾದೇಶ]],[[ದ.ಕೊರಿಯ]],[[ಅಮೆರಿಕ]],[[ಜರ್ಮನ್]],[[ಜಪಾನ್]],[[ಮಧಏಷ್ಯಾ]] ಹಾಗೂ ಪೌರಾತ್ಯರಾಷ್ಟ್ರಗಳು ಭಾರತದ ಮೆಣಸಿನಕಾಯಿಯ ಮುಖ್ಯ ಮಾರುಕಟ್ಟೆಗಳಾಗಿವೆ[[ಮಾರುಕಟ್ಟೆ]]ಗಳಾಗಿವೆ.ಭಾರತ ಪ್ರತಿ ವರ್ಷ ಸುಮಾರು ೫೨ ಸಾ.ಟನ್ ಮೆಣಸಿನಕಾಯಿ [[ರಫ್ತು]] ಮಾಡುತ್ತದೆ.
[[ವರ್ಗ:ತರಕಾರಿಗಳು]]
"https://kn.wikipedia.org/wiki/ಮೆಣಸಿನಕಾಯಿ" ಇಂದ ಪಡೆಯಲ್ಪಟ್ಟಿದೆ