ಮಾನವನಲ್ಲಿ ವಿಸರ್ಜನಾಂಗ ವ್ಯೂಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೪ ನೇ ಸಾಲು:
೩)ನಳಿಕಾ ಸ್ರವಿಕೆ
ರಕ್ತವು ನೆಫ್ರಾನ್ಗಳಿಗೆ ಹಚ್ಚು ಒತ್ತಡದಿಂದ ಪ್ರವೇಶಿಸುವುದರಿಂದ ಗ್ಲಾಮರುಲಸ್ ನಲ್ಲಿ ರಕ್ತವು ಸೋಸಲ್ಪಡುತ್ತದೆ.ಇದನ್ನು ಗ್ಲಾಮರುಲಸ್ ಸೋಸುವಿಕೆ ಅಥವಾ ಸೂಕ್ಷ್ಮ ಸೋಸುವಿಕೆ ಎನ್ನುತ್ತಾರೆ.
ರಕ್ತಕಣಗಳು ಮತ್ತು ದೊಡ್ಡದಾಗಿರುವ ಪ್ರೋಟೀನ್ ಅಣುಗಳನ್ನು ಉಳಿದು ಎತರೆ ವಸ್ತುಗಳು ಬೌಮನ್ನನ ಕೋಶವನ್ನು ಪ್ರವೇಶಿಸುತ್ತದೆ.ಈ ಸೋಸಲ್ಪಟ್ಟ ದ್ರವದಲ್ಲಿ ಗ್ಲೂಕೋಸ್.ಆಮೈನೋ ಆಮ್ಲಗಳು,ಸೋಡಿಯಂ,ಪೋಟಾಸಿಯಂ.ಬೈ ಕಾಬೊ೵ನೆಟ್ಕಾರ್ಬೊನೆಟ್ ಗಳು,ಯೂರಿಯಾ ಮತ್ತು ನೀರು ಇರುತ್ತದೆ.ಈ ದ್ರವವು ನುಲಿಕೆ ನಾಳದ ಮೂಲಕ ಹೆನ್ಲೆಯ ಕುಣಿಕೆಗೆ ಬರುತ್ತದೆ.
ಶೋಧಿತದ್ರವದಲ್ಲಿರುವ ಉಪಯುಕ್ತ ವಸ್ತುಗಳಾದ ನೀರು,ಗ್ಲೂಕೋಸ್,ಅಮೈನೋ ಆಮ್ಲ,ಗ್ಲಿಸರಾಲ್,ಸೋಡಿಯಮ,ಪೋಟಾಸಿಯಂ,ಕ್ಯಾಲ್ಸಿಯಂ,ವಿಟಮಿನ್ಗಳುಮತ್ತು ಹಾರ್ಮೋನುಗಳು ಸುತ್ತಲಿನ ಲೋಮನಾಳಗಳಿಂದ ಹೀರಲ್ಪಡುತ್ತದೆ.ಈ ಕ್ರಿಯೆಗೆ ವ್ಯತ್ಯಸ್ಥ ಮರುಹೀರಿಕೆ ಎಂದು ಹೆಸರು.ಈ ಮರುಹೀರಿಕೆ ವಿಸರಣೆ,ಅಭಿಸರಣೆ ಮತ್ತು ಸಕ್ರಿಯ ಸಾಗಾಣಿಕೆ ಕ್ರಿಯೆಗಳ ಮೂಲಕ ನಡೆಯುತ್ತದೆ.ಈ ದ್ರವವು ನುಲಿಕೆನಾಳದ ಕೊನೆಯ ಹಂತವನನು ತಲುಪಿದಾಗ ನಾಳದ ಭಿತ್ತಿಯಲ್ಲಿರುವ ಕೋಶಗಳು ಸುತ್ತಲೂ ಇರುವ ಲೋಮನಾಲಗಳ ರಕ್ತದಿಂದ ಹೀರಿದ ಅನುಪಯುಕ್ತ ವಸ್ತಗಳಾದ ಅಮೋನಿಯಾ,ಹೈಡ್ರೋಜನ್,ಅಯಾನ್ ಗಳು ಮತ್ತು ಯೂರಿಕಾಮ್ಲಗಳನ್ನು ಸ್ರವಿಸುತ್ತದೆ.ಇದನ್ನು ನಳಿಕಾ ಸ್ರವಿಕೆ ಎನ್ನುವರು.
ಈ ಹಂತದ ನಂತರ ನಾಳದಲ್ಲಿರುವ ದ್ರವವನ್ನು ಮೂತ್ರ ವೆಂದು ಕರೆಯಬಹುದು.ಮೂತ್ರವು ಒಣ ಹುಲ್ಲಿನ ಬಣ್ಣವನ್ನು ಹೊಂದಿರುತ್ತದೆ.ಮೂತ್ರದಲ್ಲಿ ನೀರು,ಯೂರಿಯಾ,ಸೋಡಿಯಂ,ಪೊಟಾಸಿಯಂ ಕ್ಲೋರೈಡ್ ಗಳು,ಯೂರಿಕಾಮ್ಲ,ಅತಿ ಕಡಿಮೆ ಪ್ರಮಾಣದ ಅಮೋನಿಯಾ ಮತ್ತು ನೀರಿನಲ್ಲಿ ಕರಗುವ ಪೋಟೀನ್ ಗಳು ಇರುತ್ತದೆ.