"ಕೋಶ ವಿಭಜನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

==ಕೋಶಕೇಂದ್ರ ವಿಭಜನೆ==
ಕೋಶ ವಿಭಜನೆ ಪ್ರಾರಂಭವಾದೊಡನೆ ಕೋಶದಲ್ಲಿ ನಡೆಯುವ ಪ್ರಮುಖ ಬದಲಾವಣೆಗಳನ್ನು ಪ್ರೊಫೇಸ್ ,ಮೆಟಾಫೇಸ್ ,ಅನಾಫೇಸ್ ಮತ್ತು ಟೀಲೊಫೇಸ್ ಎಂಬ ನಾಲ್ಕು ಹಂತಗಳನ್ನು ಗುರುತಿಸಬಹುದು.
[[File:ಮೈಟಾಸಿಸ್ ಜೀವಕೋಶ ವಿಭಜನೆ.png|360px|thumb|ಮೈಟಾಸಿಸ್ ಜೀವಕೋಶ ವಿಭಜನೆ]]
 
===ಪ್ರೊಫೇಸ್===
ಕೋಶಕೇಂದ್ರ ವಿಭಜನೆಯಾವಧಿಯಲ್ಲಿ ಪ್ರೊಫೇಸ್ ಹಂತವು ಹೆಚ್ಚು ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ.ವರ್ಣಗ್ರಾಹಕ ಜಾಲ ಒಡೆದು ತಂತುಗಳಾಗಿ ಮಾರ್ಪಡುವುದರಿಂದ ವಿಭಜನೆ ಪ್ರಾರಂಭವಾಗುತ್ತದೆ.ನೀಳವಾಗಿದ್ದ ಡಿ.ಎನ್.ಎ ಅಣುವು ಸುರುಳಿಯಾಗಿ ಗಿಡ್ಡವಾದ ವರ್ಣತಂತುಗಳಾಗಿ ಗೋಚರಿಸುತ್ತದೆ.ಪ್ರೊಫೇಸ್ ಮುಂದುವರಿದಂತೆ ಪ್ರತಿಯೊಂದು ವರ್ಣ ತಂತುವು ನೀಳ ಅಕ್ಷದಲ್ಲಿ ಎರಡಾಗಿ ಸೀಳಿರುವಂತೆ ಕಾಣುತ್ತದೆ.ಈ ಸಮಾನಂತರ ತಂತುಗಳಿಗೆ ಕ್ರೋಮಾಟಿಡ್ಗಳು ಎಂದು ಹೆಸರು.ಎರಡು ಕ್ರೋಮಾಟಿಡ್ಗಳನ್ನು ಸೆಂಟ್ರೊಮಿಯರ್ ಎಂಬ ಬಿಂದು ಬಂಧಿಸಿರುತ್ತದೆ.
===ಅನಫೇಸ್===
ಈ ಹಂತದಲ್ಲಿ ಪ್ರತಿ ವರ್ಣತಂತುವಿನ ಕ್ರೊಮ್ಯಾಟಿಡ್ ಗಳನ್ನು ಹಿಡಿದಿಟ್ಟುಕೊಂಡಿದ್ದ ಸೆಂಟ್ರೊಮಿಯರ್ ಎರಡಾಗಿ ವಿಭಜನೆ ಹೊಂದುತ್ತದೆ.ವರ್ಣ ತಂತುವಿನಲ್ಲಿರುವ ಪ್ರತಿಯೊಂದು ಕ್ರೊಮ್ಯಾಟಿಡ್ ಗೂ ಒಂದು ಸೆಂಟ್ರೊಮಿಯರ್ ಲಭಿಸುತ್ತದೆ.ಈಗ ಆ ಎರಡು ತಂತುಗಳು ಬೇರ್ಪಟ್ಟು ವಿರುದ್ಧ ದಿಕ್ಕಿನಲ್ಲಿ ಚಲಿಸಲು ಪ್ರಾರಂಭವಾಗುತ್ತದೆ.ಕೆಲವು ಕದಿರೆಗಳು ಸೆಂಟ್ರೊಮಿಯರ್ ಗೆ ಅಂಟಿಕೊಂಡಿದ್ದು ಕ್ರೊಮ್ಯಾಟಿಡ್ ತಂತುಗಳನ್ನು ತಮ್ಮ ಧ್ರುವಗಳತ್ತ ಎಳೆದುಕೊಳ್ಳುತ್ತವೆ.ಹೀಗೆ ವಿರುದ್ಧ ದಿಕ್ಕಿಗೆ ತೆರಳುವ ವರ್ಣ ತಂತುಗಳ ಎರಡು ತಂಡಗಳ ಮಧ್ಯೆ ಹೊಸ ರೀತಿಯ ಕೋಶರಸದ ಎಳೆಗಳು ಕಾಣಿಸಿಕೊಳ್ಳುತ್ತವೆ.ಇವುಗಳಿಗೆ ಅಂತರ್ವಲಯಗಳು ಎಂದು ಹೆಸರು.
 
==ಟೀಲೋಫೇಸ್==
ಇದು ಕೋಶಕೇಂದ್ರ ವಿಭಜನೆಯ ಕೊನೆಯ ಹಂತ.ಈ ಹಂತದಲ್ಲಿ ಕೋಶದ ಪ್ರತಿ ಧ್ರುವ ಪ್ರದೇಶದಲ್ಲಿ ಒಂದು ಹೊಸ ಮರಿ ಕೋಶಕೇಂದ್ರ ರಚನೆಯಾಗುತ್ತದೆ.ವಿರುದ್ಧ ದಿಕ್ಕಿನ ಧ್ರುವಗಳತ್ತ ತೆರಳಿದ ವರ್ಣ ತಂತುಗಳು ಎಳೆಗಳು ಮತ್ತೆ ಪರಸ್ಪರ ಸುತ್ತಿಕೊಂಡು ವರ್ಣ ಗ್ರಾಹಕ ಜಾಲವಾಗುತ್ತದೆ.ಈ ಜಾಲದ ಸುತ್ತಲೂ ಹೊಸ ಕೋಶಕೇಂದ್ರ ಪೊರೆ ಹಾಗೂ ಜಾಲದಲ್ಲಿ ಹೊಸ ಕಿರು ಕೋಶಕೇಂದ್ರ ರಚನೆಯಾಗುತ್ತದೆ.ಹೀಗೆ ಎಲ್ಲಾ ವಿಧದಲ್ಲೂ ಪರಸ್ಪರ ಹೋಲುವ ಒಂದೇ ಸಂಖ್ಯೆಯ ವರ್ಣ ತಂತುಗಳಿರುವ ಎರಡು ಮರಿ ಕೋಶಕೇಂದ್ರಗಳು ಉಂಟಾಗುತ್ತವೆ.ಕೋಶರಸದಲ್ಲಿದ್ದ ಎಲ್ಲಾ ಎಳೆಗಳು ಅದ್ರಶ್ಯವಾಗುತ್ತವೆ.ಹೀಗೆ ಟೀಲೋಫೇಸ್ ಕೊನೆಗೊಂಡು ಕೋಶಕೇಂದ್ರ ವಿಭಜನೆ ಪೂರ್ಣಗೊಳ್ಳುತ್ತದೆ.ಈ ಕೋಶಕೇಂದ್ರ ವಿಭಜನೆಗೆ ಕ್ಯಾರಿಯೊಕೈನೆಸಿಸ್ ಎಂದು ಹೆಸರು.
೪೦,೭೯೮

edits

"https://kn.wikipedia.org/wiki/ವಿಶೇಷ:MobileDiff/661602" ಇಂದ ಪಡೆಯಲ್ಪಟ್ಟಿದೆ