ಆಫ್ರಿಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೩೧ ನೇ ಸಾಲು:
 
==ಆಫ್ರಿಕಾದಲ್ಲಿ ಜನಾಂಗೀಯ ಘರ್ಷಣೆ==
*20 ನೇ ಶತಮಾನದಲ್ಲಿ ಆಫ್ರಿಕಾದಲ್ಲಿ ನಡೆದಿರುವ ಜನಾಂಗೀಯ ಕಲಹಗಳು ಆಫ್ರಿಕಾದ ಇತಿಹಾಸದಲ್ಲೇ ಕಂಡಿರದ ಮಾರಣಹೋಮಗಳನ್ನು ಮತ್ತು ಕಗ್ಗೊಲೆಗಳನ್ನು ಉಂಟು ಮಾಡಿವೆ. ವಿಶ್ವದಲ್ಲೇ ಅತಿ ಹೆಚ್ಚು ನಿರಾಶ್ರಿತರನ್ನು ಆಫ್ರಿಕಾ ಹೊಂದಿತ್ತು. 1992ರಲ್ಲಿ ನಿರಾಶ್ರಿತರ ಸಂಖ್ಯೆ 50 ಲಕ್ಷ ಮೀರಿತ್ತು. 23ಲಕ್ಷ ಜನಸಂಖ್ಯೆಯಿರುವ ಲೈಬೀರಿಯಾದಂಥಹ ಚಿಕ್ಕ ದೇಶದಲ್ಲಿ ಬರೇ 4 ವರ್ಷಗಳಲ್ಲಿ ಸುಮಾರು 2.50 ಲಕ್ಷ ಜನರು ಅಂತಃಕಲಹದಿಂದ ಅಸು ನೀಗಿದ್ದಾರೆ. 1993ರಲ್ಲಿ ಘಾನಾದಲ್ಲಿ ನಡೆದ ರಕ್ತಪಾತದಲ್ಲಿ ಬುಡಕಟ್ಟು ಗುಂಪುಗಳ 6000 ಮಂದಿ ಹತ್ಯೆಯಾಗಿದ್ದು 200 ಹಳ್ಳಿಗಳು ನಾಶಗೊಂಡು 15000 ಮಂದಿ ನಿರಾಶ್ರಿತರಾಗಿದ್ದಾರೆ. ಸಿಯಾರ ಲಿಯೋನ್ ಪ್ರಾಂತ್ಯದಲ್ಲಿ ನಡೆದ ಸಶಸ್ತ್ರ ಕಾದಾಟದಿಂದ ಅಂದಾಜು 35,000 ನಿರಾಶ್ರಿತರು ಒಂದೇ ವಾರದಲ್ಲಿ ಪಕ್ಕದ ಜಿನಿಯಾ ಗಡಿಗೆ ನುಸುಳಿದ್ದಾರೆ.
 
*1980ರ ದಶಕದಲ್ಲಿ ಅಂಗೋಲಾ ಮತ್ತು ಮೊಜಾಂಬಿಕ್ಗಳಲ್ಲಿ ನಡೆದ ವಿಶ್ವದಲ್ಲೇ ದೀಘರ್ಾವಧಿ ಜನಾಂಗೀಯ ಕಲಹದಲ್ಲಿ 15 ಲಕ್ಷ ಜನ ಸಾವನ್ನಪ್ಪಿದ್ದಾರೆ. ಸೂಡಾನ್ನಲ್ಲಿ ಕಳೆದ 10 ವರ್ಷಗಳಲ್ಲಿ ಯುದ್ದ ಮತ್ತು ಕ್ಷಾಮಗಳಿಂದ 5ಲಕ್ಷ ಜನ ಸಾವನ್ನಪ್ಪಿದ್ದಾರೆ. 1988ರ ಒಂದೇ ವರ್ಷದಲ್ಲಿ 2.5ಲಕ್ಷ ಜನ ಸತ್ತರು. ಈ ಜನಾಂಗೀಯ ಕಲಹಗಳು ಆಫ್ರಿಕಾದ ಅಭಿವೃದ್ಧಿಗೆ ತೊಡಕಾಗಿದ್ದು ರಾಷ್ಟ್ರೀಯ ಐಕ್ಯತೆಗೆ ಪೆಟ್ಟು ನೀಡಿವೆ.
೫೪೧ ನೇ ಸಾಲು:
*1970ರಲ್ಲಿ ಸೋಮಾಲಿಯಾದಲ್ಲಿ ಮಿಲಿಟರಿ ಆಳ್ವಿಕೆ ಬಂದಿತು. ಹಾಗೆಯೇ ಇಥಿಯೋಪಿಯಾ 1974ರಲ್ಲಿ ಮತ್ತು ಸೂಡಾನ್ 1969ರಲ್ಲಿ ಮಿಲಿಟರಿ ಆಡಳಿತದ ತೆಕ್ಕೆಗೆ ಸರಿದವು. ಇಥಿಯೋಪಿಯಾದಲ್ಲಿ ಮಾಕ್ಸರ್್ವಾದಿ-ಲೆನಿನ್ವಾದಿ ಪಕ್ಷದ ನಾಯಕ ಮೆಂಗಿಸ್ಟು ಹ್ಯೆಲ್ ಮೆರಿಯಮ್ ಆಳ್ವಿಕೆಯನ್ನು ಕಿತ್ತೊಗೆದು ದೇಶ ವಿಭಜನೆ ಮಾಡಲು ಯತ್ನಿಸಲಾಯಿತು. ಅಂತಿಮವಾಗಿ 1991ರಲ್ಲಿ ಮೆಂಗಿಸ್ಟು ಆಳ್ವಿಕೆಯನ್ನು ಕೊನೆಗಾಣಿಸಲಾಯಿತು. ತನ್ನ ವಿವಾದಿತ ಗಡಿಪ್ರದೇಶಗಳನ್ನು ವಾಪಸು ಪಡೆಯಲು ಅದೀಗ ತಾನೆ ಸ್ವತಂತ್ರ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದಿದ್ದ ಎರಿಟ್ರಿಯಾ ದೇಶದ ಮೇಲೆ ಇಥಿಯೋಪಿಯಾವು 1998-99 ರಲ್ಲಿ ಯುದ್ದ ಮಾಡಿತು. 1999ರ ಹೊತ್ತಿಗೆ, ಕೇಂದ್ರೀಯ ಸೋಮಾಲಿ ಭೂಪ್ರದೇಶದಲ್ಲಿ ವಾಯುವ್ಯ ಭೂಭಾಗವು ಸೋಮಾಲಿಲ್ಯಾಂಡ್ ಆಗಿ ವಿಭಜನೆಗೊಂಡು, ದಕ್ಷಿಣ ಭೂಭಾಗವು ಯುದ್ದಕೋರರ ನಡುವೆ ಹರಿದು ಹಂಚಿಹೋಯಿತು.
*ದಕ್ಷಿಣ ಸೂಡಾನ್ನಲ್ಲಿ ಉತ್ತರದ ಇಸ್ಲಾಂಮಿಕ್ ಪಂಗಡ ಮತ್ತು ದಕ್ಷಿಣ ಜನತೆಯ ನಡುವಿನ ದೀಘರ್ಾವಧಿ ಯುದ್ದ ಇನ್ನೂ ನಡೆಯುತ್ತಲೇ ಇದೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ ಧಾಮರ್ಿಕ ಅನುಯಾಯಿಗಳ ನಡುವಿನ ಘರ್ಷಣೆಯು ಜನಾಂಗೀಯ ಯುದ್ದಕ್ಕೆ ಹೆಚ್ಚೆಚ್ಚು ಕಾರಣವಾಗಿದೆ. ಸೂಡಾನ್, ಇಥಿಯೋಪಿಯಾ ಮತ್ತು ಸೋಮಾಲಿಯಾಗಳಲ್ಲಿನ ಜನಾಂಗೀಯ ಘರ್ಷಣೆಗಳಿಂದಾಗಿ ಅಲ್ಲಿನ ಜನರೆಲ್ಲ ನಿರಾಶ್ರಿತ ಶಿಬಿರಗಳಲ್ಲೇ ಬಹುತೇಕ ತಮ್ಮೆಲ್ಲ ಜೀವನವನ್ನು ಕಳೆದಿದ್ದಾರೆ. 1994ರಲ್ಲಿ ರುವಾಂಡಾದಲ್ಲಿ ಘೋರವಾದ ಜನಾಂಗೀಯ ಘರ್ಷಣೆ ನಡೆದು ಬಹುಸಂಖ್ಯಾತ ಹುಟು ಜನಾಂಗವು ಅಲ್ಪಸಂಖ್ಯಾತ ಟುಟ್ಸಿ ಜನಾಂಗದ ಮೇಲೆ ಮಿಲಿಟರಿ ಕಗ್ಗೊಲೆ ನಡೆಸಿತು.
 
==ಆಫ್ರಿಕಾದ ಮಹಾಯುದ್ದಗಳು==
"https://kn.wikipedia.org/wiki/ಆಫ್ರಿಕಾ" ಇಂದ ಪಡೆಯಲ್ಪಟ್ಟಿದೆ