ಆಫ್ರಿಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೭೪ ನೇ ಸಾಲು:
 
*1989ರಲ್ಲಿ ಪಿ.ಡಬ್ಲ್ಯೂ ಬೋಥಾರವರ ಸ್ಥಾನದಲ್ಲಿ ಎಫ್ ಡಬ್ಲ್ಯೂ ಡಿ ಕ್ಲಕರ್್ ಎಂಬುವನು ಅಧ್ಯಕ್ಷನಾದನು. ಒಂದೆಡೆ, ನೆಲ್ಸನ್ ಮಂಡೇಲಾ, ಆಲಿವರ್ ಟ್ಯಾಂಬೊ, ಮತ್ತು ವಾಲ್ಟರ್ ಸಿಸುಲು ರವರು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಸಂಘಟನೆಗೆ ನಾಯಕತ್ವ ನೀಡಿದ್ದರು. 1990ರಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಮತ್ತು ದಕ್ಷಿಣ ಆಫ್ರಿಕಾದ ಕಮ್ಯುನಿಸ್ಟ್ ಪಕ್ಷಗಳ ಮೇಲೆ ವಿಧಿಸಿದ್ದ ನಿರ್ಬಂಧವನ್ನು ರದ್ದುಗೊಳಿಸಲಾಯಿತು. ಇದರೊಂದಿಗೆ ಈ ಪಕ್ಷಗಳು ತಮ್ಮ ಹಿಂಸಾತ್ಮಕ ಹೋರಾಟವನ್ನು ಕೈಬಿಟ್ಟವು. ಮತ್ತೊಂದೆಡೆ, ಈ ಒತ್ತಡದ ಪರಿಣಾಮ 1990ರ ಹೊತ್ತಿಗೆ ವರ್ಣ ಭೇದ ನೀತಿಯ ವಿರುದ್ದ ಹೋರಾಡುತ್ತಿದ್ದ ನೇತಾರ ನೆಲ್ಸನ್ ಮಂಡೇಲಾರನ್ನು ಬಿಡುಗಡೆ ಮಾಡಿ ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. 1994ರಲ್ಲಿ ನಡೆದ ಚುನಾವಣೆಯಲ್ಲಿ ನೆಲ್ಸನ್ ಮಂಡೇಲಾ ನೇತೃತ್ವದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ನ್ಯಾಷನಲ್ ಪಕ್ಷ ಮತ್ತು ಇಂಕತ ಫ್ರೀಡಂ ಪಕ್ಷಗಳೊಂದಿಗೆ ಒಡಗೂಡಿ ಮೈತ್ರಿ ಸಕರ್ಾರವನ್ನು ರಚಿಸಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆದರೆ ಹೊಸ ಸಕರ್ಾರವು ಜುಲು ಎಂಬ ಅಲ್ಪಸಂಖ್ಯಾತ ಜನತೆಯ ಹಿತಕಾಯಲಾರದೆಂದು ಇಂಕತ ಫ್ರೀಡಂ ಪಕ್ಷವು 1996ರಲ್ಲಿ ತನ್ನ ಬೆಂಬಲವನ್ನು ವಾಪಸು ಪಡೆದುಕೊಂಡಿತು. ಈ ಪಕ್ಷದ ನಾಯಕ ಮಾಂಗೊಸುತು ಬುತೆಲೆಜಿಯ ನೇತೃತ್ವದಲ್ಲಿ ಜುಲು ಜನಾಂಗದ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಜನಾಂಗೀಯ ಘರ್ಷನೆಗಳು ನಡೆದವು. 1999ರಲ್ಲಿ ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ಜಯಭೇರಿ ಬಾರಿಸಿ ಶೇಕಡಾ 66ರಷ್ಟು ಮತ ಗಳಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ತಬೋ ಮುಬೆಕಿ ಯವರು ಆಫ್ರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು. ನಂತರ 2004ರಲ್ಲಿ ನಡೆದ ಚುನಾವಣೆಯಲ್ಲೂ ಕೂಡ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ಜಯಗಳಿಸಿದರೂ ಸಂವಿಧಾನಕ್ಕೆ ತಿದ್ದುಪಡಿ ತರಲು ಅವಶ್ಯವಿರುವ ಮೂರನೇ ಎರಡರಷ್ಟು ಸ್ಥಾನಗಳನ್ನು ಗಳಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಕಮ್ಯುನಿಸ್ಟ್ ಪಕ್ಷವು ಕಾಮರ್ಿಕ ಸಂಘಟನೆಗಳ ಚಳುವಳಿ ಮತ್ತು ಹೋರಾಟಗಳ ಮೂಲಕ ತನ್ನ ಪ್ರಭಾವವನ್ನು ವಿಸ್ತೃತಗೊಳಿಸುತ್ತಿದೆ.
 
*ವಸಾಹತು ರಾಷ್ಟ್ರಗಳು ರಾಜಕೀಯ ಸ್ವಾತಂತ್ರ್ಯ ಪಡೆದದ್ದೇನೂ ವಸಾಹತುಶಾಹಿಯು ಅಂತಿಮ ಸೋಲನುಭವಿಸಿತು ಎಂದೇನಲ್ಲ. ಆದರೆ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಹೊಸ ರೂಪದ ವಸಾಹತು ನೀತಿಯನ್ನು ಜನತೆಗಳ ಮೇಲೆ ಹರಿಯಬಿಟ್ಟಿತು. ಸಾಲ ನಿಧಿ ಮತ್ತು ಇನ್ನಿತರ ಹೆಸರಿನಲ್ಲಿ ಆಥರ್ಿಕ ಗುಲಾಮಗಿರಿಯನ್ನು ಆಧುನಿಕ ನಾಗರೀಕ ಚೌಕಟ್ಟಿಗೆ ಅಳವಡಿಸಿತು.
 
*ಆಫ್ರಿಕಾದ ಜನತೆಯಲ್ಲಿ ಬೇರೂರಿರುವ ಆಥರ್ಿಕ ಹಿಂದುಳಿಕೆ, ಅಸ್ಥಿರ ರಾಜಕೀಯ, ತಂತ್ರಜ್ಞರ ಕೊರತೆ, ಮತ್ತು ಮಿಲಿಯಗಟ್ಟಲೆ ಜನರ ಪ್ರಜ್ಞೆಯಲ್ಲಿ ಬುಡಕಟ್ಟು ಸಿದ್ದಾಂತದ ಪ್ರಭಾವ - ಈ ದೌರ್ಬಲ್ಯಗಳನ್ನು ಬಳಸಿಕೊಂಡು ಸಾಮ್ರಾಜ್ಯಶಾಹಿ ರಾಷ್ಟ್ರಗಳು ಹೆಚ್ಚೆಚ್ಚು ಶೋಷಿಸಿಲಾರಂಭಿಸಿದವು. ರಾಷ್ಟ್ರೀಯ ವಿಮೋಚನಾ ಚಳುವಳಿಗಳನ್ನು ವಿಭಜಿಸಲು ಯತ್ನಿಸಿದವು. ಇದಕ್ಕೆ ಉದಾಹರಣೆಯೆಂದರೆ ಪ್ರ್ಯಾಟ್ರಿಸ್ ಲುಮುಂಬಾ ನೇತೃತ್ವದ ಕಾಂಗೋ ಸಕರ್ಾರದ ಪ್ರಗತಿಪರ ನೀತಿಗಳ ವಿರುದ್ದ ವಿದೇಶಿ ಶಕ್ತಿಗಳು ಆಕ್ರಮಣ ಮಾಡಿದ್ದು. ಆಫ್ರಿಕಾ ಒಕ್ಕೂಟದ ರಾಷ್ಟ್ರಗಳ ಸಕರ್ಾರವನ್ನು ನಿರಂತರವಾಗಿ ಅಸ್ಥಿರಗೊಳಿಸುತ್ತಾ ಕೈಗೊಂಬೆ ಸಕರ್ಾರಗಳನ್ನು ಸ್ಥಾಪಿಸಲು ಯತ್ನಿಸಿದವು.
 
*ಆಂಗ್ಲೋ-ಫ್ರೆಂಚ್-ಇಸ್ತ್ರೇಲ್ ದಾಳಿ ವಿರುದ್ದ ಈಜಿಪ್ಟಿನ ಜನತೆಯು ಜಯಗಳಿಸುವಲ್ಲಿ ಸೋವಿಯತ್ ಒಕ್ಕೂಟದ ಬೆಂಬಲವು ನಿಣರ್ಾಯಕವಾಗಿತ್ತು. 1970ರ ಹೊತ್ತಿಗೆ ಸೋವಿಯತ್ ರಷ್ಯಾವು 34 ಆಫ್ರಿಕನ್ ರಾಷ್ಟ್ರಗಳೊಡನೆ ಸಂಬಂಧ ಬೆಳೆಸಿತ್ತು. ಆಥರ್ಿಕ, ತಾಂತ್ರಿಕ ಮತ್ತು ಇನ್ನಿತರ ನೆರವನ್ನು ಅದು ನೀಡಿತ್ತು. ಅದರ ನೆರವಿಂದಾಗಿ ಆಫ್ರಿಕಾದಲ್ಲಿ ಸ್ವತಂತ್ರಗೊಂಡ ರಾಷ್ಟ್ರಗಳ ಅಧಿಕಾರದಡಿಯಲ್ಲಿ ಪ್ರಥಮ ಬಾರಿಗೆ 125 ಕೈಗಾರಿಕಾ ಘಟಕಗಳು ಸೇರಿದಂತೆ 320 ವಾಣಿಜ್ಯ ಘಟಕಗಳನ್ನು ನಿಮರ್ಿಸಲಾಯಿತು. ಆ ಸಮಯದಲ್ಲಿ 5,000 ಕ್ಕೂ ಮೀರಿ ಆಫ್ರಿಕನ್ ವಿದ್ಯಾಥರ್ಿಗಳು ಸೋವಿಯತ್ ರಷ್ಯಾದಲ್ಲಿ ಅಭ್ಯಸಿಸುತ್ತಿದ್ದರು. 1970ರ ಹೊತ್ತಿಗೆ ಸ್ವತಂತ್ರ ಆಫ್ರಿಕನ್ ರಾಷ್ಟ್ರಗಳ ಸಂಖ್ಯೆಯು 41 ನ್ನು ಮುಟ್ಟಿತು.
 
==ಆಫ್ರಿಕಾದ ರಾಜಕೀಯ ಹಾದಿ ಮತ್ತು ಸ್ವಾತಂತ್ರ್ಯಾ ನಂತರದ ಆಫ್ರಿಕಾ==
*ಆಫ್ರಿಕಾದಲ್ಲಿ ದುಡಿಯುವ ವರ್ಗವು ಸಣ್ಣ ವಿಭಾಗವಾಗಿತ್ತು. ರಾಜಕೀಯ ಅಧಿಕಾರವು ಸಣ್ಣ ಪುಟ್ಟ ಬಂಡವಾಳಿಗರ ಕೈಯಲ್ಲಿತ್ತು. ಆಫ್ರಿಕಾದ ಹಲವು ದೇಶಗಳು ಪ್ರಮುಖವಾಗಿ ಮೂರು ಸೈದ್ದಾಂತಿಕ ರಾಜಕೀಯ ಕವಲು ಹಾದಿಯಲ್ಲಿ ಮುನ್ನಡೆದವು. ಮೊದಲ ಎರಡು ವಿಭಾಗದಲ್ಲಿ ಸಮಾನತೆಯುಳ್ಳ ಸಮಾಜ ನಿಮರ್ಾಣಕ್ಕಾಗಿ ದೂರದೃಷ್ಟಿ ಹೊಂದಿದ್ದ ನಾಯಕರನ್ನು ಕಾಣಬಹುದಾಗಿದೆ. ಈ ನಾಯಕರು ಸಮಾನತೆ ಮತ್ತು ಸ್ವಾವಲಂಬನೆಗೆ ಮಹತ್ವ ನೀಡಿದರು. ತಮ್ಮ ದೇಶದ ಆಥರ್ಿಕತೆಯನ್ನು ವಸಾಹತುಶಾಹಿಯ ಸರಪಳಿಯಿಂದ ಬಂಧಮುಕ್ತಗೊಳಿಸಲು ಆಸ್ಥೆ ವಹಿಸಿದರು.
"https://kn.wikipedia.org/wiki/ಆಫ್ರಿಕಾ" ಇಂದ ಪಡೆಯಲ್ಪಟ್ಟಿದೆ